‘ಕಾಟೇರ’ ಸಕ್ಸಸ್ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದು ಹೀಗೆ!
ಕಾಟೇರ ಬಹುದೊಡ್ಡ ಸಕ್ಸಸ್ ಪಡೆದಿದ್ದು, ಕನ್ನಡಿಗರ ಈ ಸಿನಿಮಾಗೆ ಈಗ ಜಗತ್ತಿನಾದ್ಯಂತ ಡಿಮ್ಯಾಂಡ್ ಬಂದಿದೆ. ಹೀಗಾಗಿ ವಿದೇಶದಲ್ಲೂ ಅದ್ಧೂರಿಯಾಗಿ ವಿವಿಧ ದೇಶದಲ್ಲಿ ರಿಲೀಸ್ ಮಾಡಲು ಸಿದ್ಧತೆ ಸಾಗಿದೆ. ಹೀಗಿದ್ದಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೀಗ ತಮ್ಮ, ಸೆಲೆಬ್ರಿಟೀಸ್ ಅಂದ್ರೆ ಅಭಿಮಾನಿಗಳಿಗೆ ವಿಶೇಷವಾಗಿ ವಿಷ್ ಮಾಡಿದ್ದಾರೆ. ಹಾಗಾದರೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭಾಶಯ ಕೋರಿದ್ದು ಹೇಗೆ?
2023 ಮುಗಿದು 2024 ಬಂದಿದ್ದು, ನಾವು ಹೊಸ ವರ್ಷಕ್ಕೆ ಕಾಲಿಟ್ಟು ಆಗಿದೆ. ಇನ್ನೂ ವರ್ಷದ ಕೊನೆಗೆ ಕನ್ನಡ ಸಿನಿ ರಂಗಕ್ಕೆ ಅದ್ರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ಸಿಕ್ಕಿದೆ. 'ಕಾಟೇರ' ಮೂಲಕ ದರ್ಶನ್ ಅವರು ಅಬ್ಬರಿಸಿದ್ದಾರೆ ಎಲ್ಲೆಲ್ಲೂ ಈ ಸಿನಿಮಾದ ಗುಣಗಾನ ಮಾಡಲಾಗುತ್ತಿದೆ. ಇದೇ ಸಮಯದಲ್ಲಿ ನಟ ದರ್ಶನ್ ಅವರು, ಮನಸ್ಸು ತುಂಬಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಈ ಮೂಲಕ 2024ರ ಹೊಸ ವರ್ಷ ಸಂಭ್ರಮವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಹಾಗಾದ್ರೆ ನಟ ದರ್ಶನ್ ಅವರು ಹೇಳಿದ್ದೇನು?

ದೇವರ ಕೃಪೆಯಿಂದ ಹರ್ಷ ತುಂಬಿದ...
ಹೌದು, ಹೊಸ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ಶುಭಾಶಯ ಕೋರಿ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ದರ್ಶನ್ ಅವ್ರು, '2024 ದೇವರ ಕೃಪೆಯಿಂದ ಹರ್ಷ ತುಂಬಿದ ವರ್ಷವಾಗಲಿ ಎಂದು ಹಾರೈಸುತ್ತೇನೆ. ನಿಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು-ಆತ್ಮವಿಶ್ವಾಸ ಮೂಡಲಿ. ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು' ಎಂದು ಶುಭ ಹಾರೈಸಿದ್ದಾರೆ. ಈ ಮೂಲಕ ಈಗ ದರ್ಶನ್ ಅವರ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಂತಾಗಿದೆ. ಹಾಗೇ ಎಲ್ಲಲ್ಲೂ ಕಾಟೇರದ ಅಬ್ಬರ ಮುಂದುವರಿದಿದೆ.
ಟಿಕೆಟ್ ಪಡೆಯಲು ಡಿಮ್ಯಾಂಡ್!
ಫ್ಯಾನ್ಸ್ ಮುಂಗಡವಾಗಿ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಲು ಕಾಯುತ್ತಿದ್ದರು. ಆರಂಭದ ದಿನದಲ್ಲೇ ನೂರಾರು ಶೋಗಳ ಟಿಕೆಟ್ಸ್ ಸೋಲ್ಡ್ ಔಟ್ ಆಗಿದ್ದವು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಸೇರಿ ಹಳೇ ಮೈಸೂರು ಭಾಗದಲ್ಲಿ ಕಾಟೇರ, ಕ್ರೇಜ್ ಸಿಕ್ಕಾಪಟ್ಟೆ ಜೋರಾಗಿದೆ. ಹೀಗಾಗಿ ದಿನದಿಂದ ದಿನಕ್ಕೆ ತನ್ನ ಥಿಯೇಟರ್ ಸಂಖ್ಯೆಯನ್ನ ಈ ಸಿನಿಮಾವು, ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಅಲ್ಲದೆ ಬಾಕ್ಸ್ ಆಫಿಸ್‌ನಲ್ಲೂ ಮತ್ತಷ್ಟು ದಾಖಲೆ ನಿರ್ಮಿಸುವ ಮುನ್ಸೂಚನೆ ನೀಡುತ್ತಿದೆ.
100 ಕೋಟಿ ಕ್ಲಬ್ ಗ್ಯಾರಂಟಿ?
ಕನ್ನಡ ಚಿತ್ರರಂಗ ಮತ್ತೆ ಎಲ್ಲೆಲ್ಲೂ ಅಬ್ಬರಿಸುವಂತೆ ಮಾಡಿದೆ ಕಾಟೇರ ಸಿನಿಮಾ. ಇನ್ನ ಹಲವು ದಿನಗಳ ಕಾಲ ಇದೇ ರೀತಿ ಕಾಟೇರ ಸಿನಿಮಾ ಅಬ್ಬರಿಸಿ ತನ್ನ ಗಳಿಕೆ ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿರೀಕ್ಷೆ ದಟ್ಟವಾಗಿದೆ. ಹಾಗೇ ಈ ಸಿನಿಮಾ 100 ಕೋಟಿ ಕ್ಲಬ್ ದಾಟೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಸಿನಿಮಾ ಬಗ್ಗೆ ಕುತೂಹಲ ಕೂಡ ದುಪ್ಪಟ್ಟಾಗಿದೆ. ಇನ್ನು ನಟ ದರ್ಶನ್ ಅವರ ಫ್ಯಾನ್ಸ್‌ಗೆ ಇದು ದೊಡ್ಡ ಉಡುಗೊರೆಯಾಗಿದೆ.

ಒಟ್ನಲ್ಲಿ ಕನ್ನಡ ಸಿನಿಮಾಗಳು ಪ್ರೇಕ್ಷಕರ ಮನಸ್ಸು ಗೆಲ್ಲುವುದು ಮಾತ್ರವಲ್ಲ, ವಿರ್ಶಕರನ್ನೂ ಗೆಲ್ಲುತ್ತಿವೆ. ಅದರಲ್ಲೂ ಕಾಟೇರ ಸಿನಿಮಾ ಅನಿರೀಕ್ಷಿತವಾಗಿ ದೊಡ್ಡ ಗೆಲುವು ದಾಖಲಿಸಿದೆ. ಹೊಸ ವರ್ಷದ ಆರಂಭದಲ್ಲೇ ಈ ಮೂಲಕ ಚಂದನವನಕ್ಕೆ ಕಾಟೇರ ಸಿನಿಮಾ ಹೊಸ ಕಳೆ ತಂದಿದೆ. ಇದೇ ರೀತಿ ಕಾಟೇರ ಮತ್ತಷ್ಟು ದಿನ ಅಬ್ಬರಿಸುವ ಮುನ್ಸೂಚನೆ ಕೂಡ ಇದೆ. ಈ ಹಿನ್ನೆಲೆಯಲ್ಲಿ ಥಿಯೇಟರ್‌ಗಳು ಮತ್ತು ಸ್ಕ್ರೀನ್ ಸಂಖ್ಯೆ ಕೂಡ ಹೆಚ್ಚಿಸಲಾಗುತ್ತಿದೆ.
ಫ್ಯಾನ್ಸ್‌ಗೆ ಸಿನಿಮಾ ನೋಡಲು ಅಗತ್ಯ ಇರುವ ವ್ಯವಸ್ಥೆಗಳ ಮಾಡಲಾಗುತ್ತಿದೆ. ಮತ್ತೊಂದು ಕಡೆ ಸದ್ಯಕ್ಕೆ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗಲ್ಲ, ಹೀಗಾಗಿಯೆ ಕಾಟೇರ ಅಬ್ಬರಕ್ಕೆ ಯಾವುದೇ ಅಡ್ಡಿ ಇಲ್ಲ. ಬೇರೆ ಸಿನಿಮಾ ರಿಲೀಸ್ ಆದರೂ ಕಾಟೇರ ಅಬ್ಬರ ತಡೆಯೋದಕ್ಕೆ ಆಗಲ್ಲ ಬಿಡಿ ಅಂತಿದ್ದಾರೆ ಅಭಿಮಾನಿಗಳು!












Click it and Unblock the Notifications