Devil: ಡಿ-ಬಾಸ್ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾದ ಬಿಗ್‌ ಅಪ್ಡೇಟ್‌: ಬಿಡುಗಡೆ ದಿನಾಂಕ ಫಿಕ್ಸ್‌

ಕನ್ನಡ ಚಿತ್ರರಂಗದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಡೆವಿಲ್‌ ಚಿತ್ರದ ಬಗ್ಗೆ ಎಕ್ಸಕ್ಲೂಸಿವ್‌ ಅಪ್ಡೇಟ್‌ ಸಿಕ್ಕಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ 'ಡೆವಿಲ್‌' ಚಿತ್ರ ಇದೇ ವರ್ಷ 2024ರಲ್ಲಿ ತೆರೆಕಾಣಲಿದೆ ಎನ್ನುವುದು ಖಚಿತವಾಗಿದೆ.

ಸ್ವತಃ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಡೆವಿಲ್‌ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಡೆವಿಲ್‌ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದರ್ಶನ್‌, 'ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ' ಎಂದು ಬರೆದುಕೊಂಡಿದ್ದಾರೆ.

Challenging Star Darshan Shared Devil Movie Release Date In His Social Media

ಈ ಮೂಲಕ ಇದೇ ವರ್ಷ 2024ರ ಕ್ರಿಸ್‌ಮಸ್‌ ದಿನ ಅಂದರೆ ಡಿಸೆಂಬರ್‌ 25ರಂದು 'ಡೆವಿಲ್' ಚಿತ್ರ ತೆರೆಕಾಣಲಿದೆ ಎನ್ನುವ ಸಿಹಿ ಸುದ್ದಿಯನ್ನು ದರ್ಶನ್‌ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ದರ್ಶನ್​ ಅಭಿನಯದ 'ಕಾಟೇರ' ಸಿನಿಮಾ 200 ಕೋಟಿ ರೂಪಾಯಿ ಗಳಿಸುವ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಆಗಿತ್ತು. ಇದೀಗ ದರ್ಶನ್ ಅವರ ಮುಂದಿನ ಚಿತ್ರವು ಸಹ ಡಿಸೆಂಬರ್ ಅಂತ್ಯಕ್ಕೆ ತೆರೆಮೇಲೆ ಬರಲಿದ್ದು, ಅಭಿಮಾನಿಗಳು ಕಾತುರರಾಗಿದ್ದಾರೆ.

ಈ ಹಿಂದೆ ರೀಲಿಸ್‌ ಆದ 'ಡೆವಿಲ್' ಚಿತ್ರದ ಫಸ್ಟ್‌ಲುಕ್‌ ಕೂಡ ಸಖತ್‌ ವೈರಲ್ ಆಗಿತ್ತು. ಫಸ್ಟ್‌ಲುಕ್‌ ನೋಡಿದ ಸಿನಿ ಪ್ರಿಯರು ಕನ್ನಡ ಚಿತ್ರರಂಗದ ಮತ್ತೊಂದು ಭರವಸೆಯ ಚಿತ್ರ ಎಂದು ನಿರ್ಧರಿಸಿದ್ದರು. ಹೀಗಾಗಿ ಡೆವಿಲ್ ಚಿತ್ರದ ರಿಲೀಸ್‌ ಬಗ್ಗೆ ಕಾಯುತ್ತಿದ್ದವರಿಗೆ ಇಂದು ಗುಡ್‌ನ್ಯೂಸ್‌ ಸಿಕ್ಕಿದೆ. ಇನ್ನು ಚಿತ್ರದ ಹಾಡು ಹಾಗೂ ಟೀಸರ್‌, ಟ್ರೈಲರ್‌ಗಳು ಬೇಗ ಬರಲಿ ಎಂದು ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ.

'ಡೆವಿಲ್' ಚಿತ್ರವನ್ನು ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡುತ್ತಿದ್ದು, ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಸಿನಿಮಾದ ಮೇಕಿಂಗ್ ವಿಡಿಯೋನ ತಂಡ ರಿಲೀಸ್ ಮಾಡಿದ್ದರು. ಈ ಮೊದಲು ದರ್ಶನ್ ನಟನೆಯ 'ತಾರಕ್' ಚಿತ್ರವನ್ನು ಪ್ರಕಾಶ್ ವೀರ್ ನಿರ್ದೇಶಿಸಿದ್ದು ಚಿತ್ರ ಹಿಟ್‌ ಆಗಿತ್ತು. ಹೀಗಾಗಿ ಈಗ ಪ್ರಕಾಶ್ ವೀರ್ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ಡೆವಿಲ್' ಚಿತ್ರದ ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಚಿತ್ರ ಇನ್ನುಳಿದ ಮಾಹಿತಿಯನ್ನು ಸದ್ಯದಲ್ಲೇ ಚಿತ್ರತಂಡ ಬಹಿರಂಗ ಪಡಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+