‘ಕಾಟೇರ’ ಓಟಿಟಿ ರಿಲೀಸ್ ಯಾವಾಗ & ಯಾವ ಓಟಿಟಿ ಅಖಾಡದಲ್ಲಿ? ಅಮೆಜಾನ್ ಅಥವಾ ಜೀ5 ಅಥವಾ ನೆಟ್‌ಫ್ಲಿಕ್ಸ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳು ಅಂದ್ರೆ ದೊಡ್ಡ ಮಟ್ಟಿಗಿನ ಹೈಪ್ ಇರುತ್ತೆ & ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಕಾಯುತ್ತಾರೆ. ಅದೇ ರೀತಿ 'ಕಾಟೇರ' ಸಿನಿಮಾ ಕೂಡ, ತುಂಬಾ ಅಂದ್ರೆ ತುಂಬಾನೆ ನಿರೀಕ್ಷೆಗಳನ್ನು ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ಇದೀಗ ನೋಡಿದ್ರೆ ಆ ನಿರೀಕ್ಷೆಗಳನ್ನು ಮೀರಿಸಿ ಗುರಿ ಮುಟ್ಟಿದೆ. ಇನ್ನೇನು 100 ಕೋಟಿ ರೂಪಾಯಿ ಕ್ಲಬ್ ಕೂಡ ಸೇರಲು ಸನ್ನದ್ಧವಾಗಿದೆ. ಹೀಗಾಗಿ 'ಕಾಟೇರ' ಓಟಿಟಿ ರಿಲೀಸ್ ಬಗ್ಗೆ ಕುತೂಹಲ ಮೂಡಿದೆ.

ಇದು ಆನ್‌ಲೈನ್ ಜಮಾನ, ಜನರು ಇಲ್ಲಿ ಖುದ್ದು ಹೋಗಿ ಖರೀದಿ ಮಾಡುವುದು ಅಥವಾ ಸಿನಿಮಾ ನೋಡುವುದಕ್ಕಿಂತ ಆನ್‌ಲೈನ್ ಮೂಲಕವೇ ಕೆಲಸ ಮುಗಿಸಲು ಪ್ರಯತ್ನಿಸುತ್ತಾರೆ. ಆದರೆ ಅದನ್ನ ಮೀರಿಸಿ 'ಕಾಟೇರ' ಅಬ್ಬರಿಸಿದೆ. ಅದ್ರಲ್ಲೂ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು, ಕಾಟೇರ ಎಂಟ್ರಿ ನಂತರ ತುಂಬಿ ತುಳುಕಿವೆ.

Challenging Star Darshan Movie Kaatera OTT Release Update

ಜೊತೆಗೆ ನಿಟ್ಟುಸಿರು ಕೂಡ ಬಿಟ್ಟಿವೆ. ಒಂದು ಸಿನಿಮಾ ಇಷ್ಟೆಲ್ಲಾ ದಾಖಲೆ ನಿರ್ಮಾಣ ಮಾಡಿದೆ. ಹಾಗೇ ಬಾಕ್ಸ್ ಆಫಿಸ್‌ನಲ್ಲಿ ಕೂಡ ಕೋಟಿ ಕೋಟಿ ಗಳಿಸಿ ಹೊಸ ದಾಖಲೆ ಸೃಷ್ಟಿ ಮಾಡಿದೆ. ಇದೇ ಸಮಯದಲ್ಲಿ 'ಕಾಟೇರ' ಓಟಿಟಿ ರಿಲೀಸ್ ಯಾವಾಗ? ಎಂಬ ಪ್ರಶ್ನೆ ಮೂಡಿದೆ.

ಆನ್‌ಲೈನ್ ಮೂಲಕ ಕಾಟೇರ ಎಂಟ್ರಿ!

ಈಗಿನ ಮಾಹಿತಿಗಳ ಪ್ರಕಾರ ಥಿಯೇಟರ್‌ನಲ್ಲಿ ದಾಖಲೆ ಸೃಷ್ಟಿ ಮಾಡಿದ ನಂತರ 'ಕಾಟೇರ' ಓಟಿಟಿ ಅಖಾಡಕ್ಕೂ ಎಂಟ್ರಿ ಕೊಟ್ಟು ರಿಲೀಸ್ ಆಗಲಿದೆ. ಈಗಾಗಲೇ ಕಾಟೇರ ಕೋಟಿ ಕೋಟಿ ಗಳಿಸಿ ದಾಖಲೆ ಪುಡಿ ಪುಡಿ ಮಾಡಿದೆ. ಹೀಗಿದ್ದಾಗ ಅಭಿಮಾನಿಗಳು ಕಾಟೇರ ಸಿನಿಮಾವನ್ನು ಥಿಯೇಟರ್‌ನಲ್ಲೇ ಕಣ್ತುಂಬಿಕೊಂಡಿದ್ದಾರೆ.

ಇದೀಗ ಓಟಿಟಿ ಅಖಾಡದಲ್ಲಿ ನೋಡೋಕೆ ಕೆಲ ಫ್ಯಾನ್ಸ್ ಕಾಯುತ್ತಿದ್ದು, ಬಲ್ಲ ಮೂಲಗಳ ಪ್ರಕಾರ ಕಾಟೇರ ಸಿನಿಮಾ ಜೀ5 (ZEE5) ಓಟಿಟಿ ಮೂಲಕ ರಿಲೀಸ್ ಆಗಲಿದೆ ಎನ್ನಲಾಗಿದೆ. ಈ ಮೂಲಕ ಶೀಘ್ರದಲ್ಲೇ ಈ ಬಗ್ಗೆ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ದಟ್ಟವಾಗಿದೆ. ಅದ್ರಲ್ಲೂ ಇನ್ನೇನು ಮತ್ತೆ ಸಂಕ್ರಾಂತಿ ಹಬ್ಬಕ್ಕೆ ಸಾಲು ಸಾಲು ರಜೆ ಇರುವ ಹಿನ್ನೆಲೆ ಕಾಟೇರ ಹೊಸ, ಹೊಸ ದಾಖಲೆ ನಿರ್ಮಿಸುವ ಸೂಚನೆ ಸಿಗುತ್ತಿದೆ.

Challenging Star Darshan Movie Kaatera OTT Release Update

77 ಕೋಟಿ ರೂಪಾಯಿ ಧೂಳ್ ಧೂಳ್!

ಕನ್ನಡ ಚಿತ್ರರಂಗ ಮತ್ತೆ ಎಲ್ಲೆಲ್ಲೂ ಅಬ್ಬರಿಸುವಂತೆ ಮಾಡಿದೆ ಕಾಟೇರ ಸಿನಿಮಾ. ಇನ್ನ ಹಲವು ದಿನಗಳ ಕಾಲ ಇದೇ ರೀತಿ ಕಾಟೇರ ಸಿನಿಮಾ ಅಬ್ಬರಿಸಿ ತನ್ನ ಗಳಿಕೆ ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿರೀಕ್ಷೆ ದಟ್ಟವಾಗಿದೆ. ಹಾಗೇ ಈ ಸಿನಿಮಾ 100 ಕೋಟಿ ಕ್ಲಬ್ ದಾಟೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು.

ಹೀಗಾಗಿ ಸಿನಿಮಾ ಬಗ್ಗೆ ಕುತೂಹಲ ಕೂಡ ದುಪ್ಪಟ್ಟಾಗಿದೆ. ಇನ್ನು ನಟ ದರ್ಶನ್ ಅವರ ಫ್ಯಾನ್ಸ್‌ಗೆ ಇದು ದೊಡ್ಡ ಉಡುಗೊರೆಯಾಗಿದೆ. ಕಳೆದ 4 ದಿನದಲ್ಲಿ ಕಾಟೇರ ಸಿನಿಮಾ ಬರೋಬ್ಬರಿ 77 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದೆ ಎನ್ನಲಾಗಿದೆ. ಹೀಗೆ ಇನ್ನೇನು ಕೆಲವೇ ದಿನದಲ್ಲಿ ಕಾಟೇರ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+