ಬಂತು.. ಬಂತು.. ಬಂತು.. ಕಾಟೇರ ಸಿನಿಮಾ 100 ಕೋಟಿ ಹತ್ತಿರಕ್ಕೆ ಬಂತು!
ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೇಳಿಬರುತ್ತಿರುವ ಒಂದೇ ಒಂದು ಹೆಸರು 'ಕಾಟೇರ' ಮಾತ್ರ. ಇನ್ನೇನು 2023 ಮುಗಿಯುವ ಹೊತ್ತಿಗೆ ಕನ್ನಡ ನಾಡಿನ ಸಿನಿಮಾ ಮಂದಿರಗಳಲ್ಲಿ, ಅಬ್ಬರದಿಂದ ರಿಲೀಸ್ ಆಗಿದ್ದ ಕನ್ನಡಿಗರ ಸಿನಿಮಾ 'ಕಾಟೇರ' ಗೂಳಿಯಂತೆ ಮುನ್ನುಗ್ಗಿದೆ. ಹೀಗೆ ನೋಡ ನೋಡತ್ತಲೇ ಹಿಂದಿನ ಸಿನಿಮಾಗಳ ಹಲವು ದಾಖಲೆ ಧೂಳ್ ಧೂಳ್ ಮಾಡಿ ಮುನ್ನುಗ್ಗಿದ್ದ 'ಕಾಟೇರ' ಇನ್ನೇನು 100 ಕೋಟಿ ಸಮೀಪಕ್ಕೆ ಬಂದಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕ ಮಾತ್ರವಲ್ಲ ದೇಶದ ವಿವಿಧ ರಾಜ್ಯದಲ್ಲೂ ದೊಡ್ಡ ಪ್ರಮಾಣದ ಅಭಿಮಾನಿಗಳು ಇದ್ದಾರೆ. ಹೀಗಾಗಿ ದರ್ಶನ್ ಅವರ ಸಿನಿಮಾ ನೋಡಲು ಬೇರೆ ರಾಜ್ಯದಲ್ಲೂ ಫ್ಯಾನ್ಸ್ ಕಾಯುತ್ತಾರೆ. ಇದೇ ರೀತಿ ಇದೀಗ 'ಕಾಟೇರ' ಸಿನಿಮಾ ಭರ್ಜರಿ ಅಬ್ಬರ ತೋರಲು ಶುರು ಮಾಡಿದೆ. ಇದೀಗ ಕಾಟೇರ ಬಿಡುಗಡೆ ಆಗಿ ಒಟ್ಟಾರೆ 4 ದಿನಗಳೇ ಕಳೆದು, 5ನೇ ದಿನಕ್ಕೆ ಕಾಲಿಟ್ಟಿದೆ. ಹಾಗಾದರೆ ಕಾಟೇರ ಸಿನಿಮಾ ಕಳೆದ 4 ದಿನದಲ್ಲಿ ಗಳಿಕೆ ಮಾಡಿರುವ ಹಣ ಎಷ್ಟು ಕೋಟಿ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

100 ಕೋಟಿ ರೂಪಾಯಿ ಫಿಕ್ಸ್!
ಹೌದು ಕಾಟೇರ ಸಿನಿಮಾ ಬಿಡುಗಡೆ ಆದ ಮೊದಲನೇ ದಿನವೇ 19.79 ಕೋಟಿ ರೂಪಾಯಿ ಬಾಚಿತ್ತು. ನಂತರ ಅಂದ್ರೆ 2ನೇ ದಿನವೂ ಅಬ್ಬರಿಸಿ 17.35 ಕೋಟಿ ಕಲೆಕ್ಷನ್ ಮಾಡಿತ್ತು. ಈ ನಡುವೆ 3ನೇ ದಿನ 'ಕಾಟೇರ' ಸಿನಿಮಾ ಬರೋಬ್ಬರಿ 20.94 ರೂಪಾಯಿ ಗಳಿಸಿತ್ತು. ಇದೀಗ ಅಂದ್ರೆ 4ನೇ ದಿನ ಧಾಂ ಧೂಂ ಅಂತಾ 18.26 ಕೋಟಿ ರೂಪಾಯಿ ಗಳಿಸಿದೆಯಂತೆ. ಎಲ್ಲಾ ಸೇರಿ ಒಟ್ಟು ಈವರೆಗೂ 77.6 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಇನ್ನೇನು 100 ಕೋಟಿ ರೂಪಾಯಿ ಕ್ಲಬ್ ಸೇರೋದಕ್ಕೆ ಅತ್ಯಂತ ಸಮೀಪದಲ್ಲೇ ಇದೆ ಕಾಟೇರ ಸಿನಿಮಾ.
ಚಿತ್ರಮಂದಿರದಲ್ಲಿ ಹಬ್ಬದ ವಾತಾವರಣ
ಕನ್ನಡ ಚಿತ್ರರಂಗ ಮತ್ತೆ ಎಲ್ಲೆಲ್ಲೂ ಅಬ್ಬರಿಸುವಂತೆ ಮಾಡಿದೆ ಕಾಟೇರ ಸಿನಿಮಾ. ಇನ್ನ ಹಲವು ದಿನಗಳ ಕಾಲ ಇದೇ ರೀತಿ ಕಾಟೇರ ಸಿನಿಮಾ ಅಬ್ಬರಿಸಿ ತನ್ನ ಗಳಿಕೆ ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿರೀಕ್ಷೆ ದಟ್ಟವಾಗಿದೆ. ಹಾಗೇ ಈ ಸಿನಿಮಾ 100 ಕೋಟಿ ಕ್ಲಬ್ ದಾಟೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಸಿನಿಮಾ ಬಗ್ಗೆ ಕುತೂಹಲ ಕೂಡ ದುಪ್ಪಟ್ಟಾಗಿದೆ. ಇನ್ನು ನಟ ದರ್ಶನ್ ಅವರ ಫ್ಯಾನ್ಸ್‌ಗೆ ಇದು ದೊಡ್ಡ ಉಡುಗೊರೆಯಾಗಿದೆ. ಕಳೆದ 4 ದಿನದಲ್ಲಿ ಕಾಟೇರ ಸಿನಿಮಾ ಬರೋಬ್ಬರಿ 77 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದೆ ಎನ್ನಲಾಗಿದೆ. ಹೀಗೆ ಇನ್ನೇನು ಕೆಲವೇ ದಿನದಲ್ಲಿ ಕಾಟೇರ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ.
ಟಿಕೆಟ್ ಪಡೆಯಲು ಡಿಮ್ಯಾಂಡ್
ಫ್ಯಾನ್ಸ್ ಮುಂಗಡವಾಗಿ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಲು ಕಾಯುತ್ತಿದ್ದರು. ಆರಂಭದ ದಿನದಲ್ಲೇ ನೂರಾರು ಶೋಗಳ ಟಿಕೆಟ್ಸ್ ಸೋಲ್ಡ್ ಔಟ್ ಆಗಿದ್ದವು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ & ಮಧ್ಯ ಕರ್ನಾಟಕ ಸೇರಿ ಹಳೇ ಮೈಸೂರು ಭಾಗದಲ್ಲಿ ಕಾಟೇರ ಕ್ರೇಜ್ ಸಿಕ್ಕಾಪಟ್ಟೆ ಜೋರಾಗಿದೆ. ಹೀಗಾಗಿ ದಿನದಿಂದ ದಿನಕ್ಕೆ ತನ್ನ ಥಿಯೇಟರ್ ಸಂಖ್ಯೆಯನ್ನ ಈ ಸಿನಿಮಾವು, ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಅಲ್ಲದೆ ಬಾಕ್ಸ್ ಆಫಿಸ್‌ನಲ್ಲೂ ಮತ್ತಷ್ಟು ದಾಖಲೆ ನಿರ್ಮಿಸುವ ಮುನ್ಸೂಚನೆ ನೀಡುತ್ತಿದೆ.

ಒಟ್ನಲ್ಲಿ ಕನ್ನಡಿಗರ ಸಿನಿಮಾ ದೊಡ್ಡ ಮಟ್ಟದಲ್ಲಿ ಅಬ್ಬರಿಸುತ್ತಿದೆ. ಇದರ ಜೊತೆಗೆ ಬೇರೆ, ಬೇರೆ ದೇಶದಲ್ಲೂ ಕಾಟೇರ ತನ್ನ ಅಬ್ಬರ ಶುರು ಮಾಡಲು ಸಜ್ಜಾಗಿದೆ. ಇದೇ ಸಮಯದಲ್ಲಿ ಕನ್ನಡ ನಾಡಿನಲ್ಲೇ 100 ಕೋಟಿ ಕ್ಲಬ್ ಸೇರೋದಕ್ಕೆ ಕಾಟೇರ ಇನ್ನೇನು ಹತ್ತಿರದಲ್ಲೇ ಇದ್ದು ಮತ್ತು ವಿದೇಶದಲ್ಲಿ ಕೂಡ ಉತ್ತಮ ಗಳಿಕೆ ಮಾಡುವ ನಿರೀಕ್ಷೆ ಇದೆ.












Click it and Unblock the Notifications