‘ಕಾಟೇರ’ ಕಣ್ತುಂಬಿಕೊಂಡ ಕನ್ನಡಿಗರು, 3 ದಿನದಲ್ಲಿ ಗಳಿಸಿದ್ದು ಎಷ್ಟು ಕೋಟಿ?

2023 ಮುಗಿದು 2024 ಬಂದೇ ಬಿಟ್ಟಿದೆ, ನಾವು ಹೊಸ ವರ್ಷಕ್ಕೆ ಕಾಲಿಟ್ಟು ಆಗಿದೆ. ಇನ್ನೂ ವರ್ಷದ ಕೊನೆಯಲ್ಲಿ ಕನ್ನಡ ಸಿನಿಮಾ ರಂಗಕ್ಕೆ, ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ಸಿಕ್ಕಿದೆ. 'ಕಾಟೇರ' ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಖದರ್ ತೋರಿಸಿದ್ದಾರೆ. ಹಾಗಾದ್ರೆ ಈ ಸಿನಿಮಾ ಈವರೆಗೂ ಗಳಿಸಿರುವ ಹಣ ಎಷ್ಟು ಕೋಟಿ ರೂಪಾಯಿ ಗೊತ್ತಾ? ಬನ್ನಿ ತಿಳಿಯೋಣ.

ಯೆಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ 'ಕಾಟೇರ' ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯದಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಹಾಗೇ 'ಕಾಟೇರ' ರಿಲೀಸ್ ಆಗಿದ್ದ ಕೇವಲ 2 ದಿನಕ್ಕೆ 37.14 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನೂ 3ನೇ ದಿನ ಕೂಡ ದರ್ಶನ್‌ರ 'ಕಾಟೇರ' ಅಬ್ಬರಿಸಿರುವುದು ಪಕ್ಕಾ ಎನ್ನಲಾಗಿದೆ. ಹಾಗಾದ್ರೆ ನಿನ್ನೆ ಕೂಡ ರಜೆ ಇದ್ದ ಕಾರಣ ಕಾಟೇರ ಸಿನಿಮಾ ಎಷ್ಟು ಗಳಿಸಿರಬಹುದು.? ಕನ್ನಡಿಗರ ಈ ಸಿನಿಮಾ ಖದರ್ ಹೇಗಿದೆ ಗೊತ್ತಾ.? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

Challenging Star Darshan Movie Kaatera Box Office Collection Report Till 3rd day

'ಕಾಟೇರ' ಗಳಿಸಿದ್ದು ಎಷ್ಟು ಕೋಟಿ?

ಎಲ್ಲೆಲ್ಲೂ ಕಾಟೇರ ಸದ್ದು ಬಲು ಜೋರಾಗಿದ್ದು, ಟಿಕೆಟ್ ಬುಕಿಂಗ್ ಬಗ್ಗೆಯೂ ಸಾಕಷ್ಟು ಹೈಪ್ ಕ್ರಿಯೇಟ್ ಆಗಿತ್ತು. ಅಭಿಮಾನಿಗಳು ಮುಂಗಡವಾಗಿ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಲು ಕಾಯುತ್ತಿದ್ದರು. ಆರಂಭದ ದಿನದಲ್ಲೇ ನೂರಾರು ಶೋಗಳ ಟಿಕೆಟ್ಸ್‌ ಸೋಲ್ಡ್ ಔಟ್ ಆಗಿದ್ದವು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಸೇರಿ ಹಳೇ ಮೈಸೂರು ಭಾಗದಲ್ಲಿ 'ಕಾಟೇರ' ಕ್ರೇಜ್ ಸಿಕ್ಕಾಪಟ್ಟೆ ಜೋರಾಗಿದೆ. ಹೀಗಿದ್ದಾಗ ನಿನ್ನೆ ಕೂಡ ಭಾನುವಾರ ಅದ್ರಲ್ಲೂ ಹೊಸ ವರ್ಷದ ಹಿಂದಿನ ದಿನ. ಹೀಗಾಗಿ ಶುಕ್ರವಾರ ಮತ್ತು ಶನಿವಾರದ ಬಾಕ್ಸ್ ಆಫಿಸ್‌ನ ದಾಖಲೆಗಿಂತ ಹೆಚ್ಚಾಗಿಯೇ 'ಕಾಟೇರ' ಕಲೆಕ್ಷನ್ ಮಾಡಿಬರಹುದು ಎನ್ನಲಾಗಿದೆ. ಹಾಗಾದ್ರೆ ಎಷ್ಟು ಗಳಿಸಿರಬಹುದು ಕಾಟೇರ?

60 ಕೋಟಿ ರೂಪಾಯಿ ಮೀರಿದ ಕಲೆಕ್ಷನ್?

ಹೌದು, 'ಕಾಟೇರ' ಸಿನಿಮಾ 3ನೇ ದಿನ ಎಷ್ಟು ಗಳಿಸಿದೆ ಎಂಬುದರ ಬಗ್ಗೆ ಸಿನಿಮಾ ಟೀಂನ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದರೆ ಮೊದಲ 2 ದಿನಕ್ಕಿಂತಲೂ 3ನೇ ದಿನವು ಕಾಟೇರ ಕ್ರೇಜ್ ಹೆಚ್ಚಾಗಿದ್ದ ಕಾರಣ, ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ 'ಕಾಟೇರ' ಕಲೆಕ್ಷನ್ 60 ಕೋಟಿ ರೂಪಾಯಿ ಮೀರಿಸಿದೆ ಎನ್ನಲಾಗಿದೆ. ಇನ್ನೇನು ಕೆಲವೇ ಹೊತ್ತಲ್ಲಿ ಈ ಕುರಿತಾಗಿ ಸಿನಿಮಾ ತಂಡ ಅಧಿಕೃತ ಮಾಹಿತಿ ನೀಡುವ ನಿರೀಕ್ಷೆ ಇದೆ. ಹೀಗಾಗಿ ಅಭಿಮಾನಿಗಳಿಗೆ ಹೊಸ ವರ್ಷದ ಸಂದರ್ಭದಲ್ಲಿ ಸಿಹಿಸುದ್ದಿ ಸಿಗುವ ಸಾಧ್ಯತೆ ಬೆಟ್ಟದಂತೆ ಬೆಳೆದಿದೆ.

Challenging Star Darshan Movie Kaatera Box Office Collection Report Till 3rd day

ಹೊಸ ವರ್ಷಕ್ಕೆ ಹೊಸ ಗಿಫ್ಟ್

2023 ದರ್ಶನ್ ಅವರ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದ್ದು. ಇದೇ ವರ್ಷವೆ ಎರಡೆರಡು ಸಿನಿಮಾಗಳು ರಿಲೀಸ್ ಆಗಿವೆ. ಕೆಲ ತಿಂಗಳ ಹಿಂದಷ್ಟೇ ಕ್ರಾಂತಿ ರಿಲೀಸ್ ಆಗಿ, ದಾಖಲೆನ ಧೂಳ್ ಮಾಡಿತ್ತು. ಇದೀಗ ಫ್ಯಾನ್ಸ್ ಪಾಲಿನ ಡಿ-ಬಾಸ್ ದರ್ಶನ್ ಅವರು ಕಾಟೇರ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲ ಇದ್ದು. ಸಿನಿಮಾ ಬಿಡುಗಡೆ ಹಿನ್ನೆಲೆ ಅಭಿಮಾನಿಗಳು ಎಲ್ಲೆಲ್ಲೂ ಸಂಭ್ರಮಿಸಿದ್ದಾರೆ. ಶನಿವಾರ ಹಾಗು ಭಾನುವಾರ ಭರ್ಜರಿ ಕಲೆಕ್ಷನ್ ಮಾಡಿದ್ದ ಕಾಟೇರ ಇಂದು ಸೋಮವಾರ ಹೊಸವರ್ಷ ಬಂದಿರುವ ಹಿನ್ನೆಲೆ ಇದೀಗ ಮತ್ತಷ್ಟು ಸಂಭ್ರಮ ಹೆಚ್ಚಾಗಿದೆ. ಗಲ್ಲಾಪೆಟ್ಟಿಗೆ ಶೇಕ್ ಆಗುವುದು ಪಕ್ಕಾ ಆಗಿದೆ.

ಒಟ್ನಲ್ಲಿ ಕಾಟೇರ ಸಿನಿಮಾ ವರ್ಷದ ಕೊನೆಯಲ್ಲಿ ಬಂದ್ರೂ ಹೊಸ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಅದರಲ್ಲೂ ಹೊಸ ವರ್ಷದ ಸಮಯದಲ್ಲಿ ಈ ಸಿನಿಮಾವು ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅವರ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿದೆ. ಹೀಗೆ ಕೇಂದ್ರ ಸಚಿವರಿಂದ ಹಿಡಿದು ಚಿತ್ರರಂಗದ ದೊಡ್ಡ ದೊಡ್ಡ ಗಣ್ಯರ ತನಕ ಎಲ್ಲರೂ ಸಿನಿಮಾ ನೋಡಿ ಮೆಚ್ಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+