‘ಭೂಮಿ ಪುತ್ರ’ ಡಿ-ಬಾಸ್ ದರ್ಶನ್: ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ಖುಷ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ಕಾಟೇರ' ಸಿನಿಮಾ ಮೂಲಕ ಜಗತ್ತಿನಾದ್ಯಂತ ಮತ್ತೆ ತಮ್ಮ ಖದರ್ ತೋರಿಸಿದ್ದಾರೆ. ಕಾಟೇರ ಸಿನಿಮಾ ಹಲವು ದಾಖಲೆ ಬರೆದಿದ್ದು ಗಲ್ಲಾಪೆಟ್ಟಿಗೆ ತುಂಬಾ ಕಾಸು ಬಾಚಿದೆ. ಇದೇ ಸಮಯದಲ್ಲಿ ನಟ ದರ್ಶನ್ ಅವರಿಗೆ 'ಭೂಮಿ ಪುತ್ರ' ಎಂಬ ಬಿರುದು ನೀಡಿ ಗೌರವಿಸಲಾಗಿದೆ. ಇದು ನಟ ದರ್ಶನ್ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.

ಕಾಟೇರ ಸಿನಿಮಾ ಅಬ್ಬರಿಸಿದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವುದೇ ಸಿನಿಮಾ ಈ ತನಕ ಮಾಡದ ಸಾಧನೆ ಮಾಡಿದೆ. ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿದ್ದ 'ಕಾಟೇರ' ಭರ್ಜರಿ, 200 ಕೋಟಿ ಕ್ಲಬ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಈ ಮೂಲಕ ಕನ್ನಡ ಸಿನಿಮಾ ಜಗತ್ತಿನ ತಾಕತ್ತು ಈಗ ಇಡೀ ಜಗತ್ತಿಗೆ ಗೊತ್ತಾಗಿದೆ. ಇದೇ ಸಮಯದಲ್ಲಿ 25 ದಿನವನ್ನು ಕೂಡ 'ಕಾಟೇರ' ಈಗ ಅದ್ಧೂರಿಯಾಗಿ ಪೂರೈಸಿದೆ. ಇದೇ ಸಮಯದಲ್ಲಿ, ನಟ ದರ್ಶನ್ ಅವರಿಗೆ 'ಭೂಮಿ ಪುತ್ರ' ಬಿರುದು ನೀಡಿದ್ದಾರೆ ರಾಜ್ಯದ ಅನ್ನದಾತ ರೈತರು!

Challenging Star Darshan Fans Got Another Surprise

ಭೂಮಿ ಪುತ್ರ ನಟ ದರ್ಶನ್!

ದಾಸ ದರ್ಶನ್ ಅವರಿಗೆ ಈಗಾಗಲೇ ಹಲವು ಬಿರುದು ಇವೆ. ಅವುಗಳಲ್ಲಿ ಹೆಚ್ಚು ಪ್ರಚಲಿತದಲ್ಲಿ ಇರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಎಂಬ ಬಿರುದು. ಇತ್ತೀಚಗೆ ದುಬೈನಲ್ಲೂ ದರ್ಶನ್ ಅವರಿಗೆ ಅಧಿಪತಿ ಅಂತ ಬಿರುದು ಕೊಟ್ಟಿದ್ರು ಕನ್ನಡಿಗರು. ಬಳಿಕ ಕಾಟೇರ ಅದ್ಧೂರಿಯಾಗಿ, ಎಲ್ಲೆಲ್ಲೂ ಅಬ್ಬರ ತೋರಿಸಿ ಗೆದ್ದಿದೆ. ರೈತರ ಸಂಕಷ್ಟವನ್ನು ಈ ಸಿನಿಮಾದಲ್ಲಿ ತೋರಿಸಿದ್ದ ನಟ ದರ್ಶನ್ ಅವರಿಗೆ ಇದೀಗ ಭೂಮಿ ಪುತ್ರ ಎಂಬ ಬಿರುದು ನೀಡಲಾಗಿದೆ. ಈ ಮೂಲಕ, ನಟ ದರ್ಶನ್ ಅವರ ಫ್ಯಾನ್ಸ್‌ಗೆ ಡಬಲ್ ಖುಷಿ ಸಿಕ್ಕಿದೆ.

ಬಿರುದು ಕೊಟ್ಟಿದ್ದು ಯಾರು?

ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಈ ಒಂದು ಬಿರುದು ಕೊಡಲಾಗಿದೆ. ಕಾಟೇರ ಅಭಿನಂದನಾ ಸಮಾರಂಭದಲ್ಲಿಯೇ ದರ್ಶನ್‌ ಅವರಿಗೆ 'ಭೂಮಿ ಪುತ್ರ' ಬಿರುದು ಕೊಡಲಾಗಿದೆ. ರಾಜ್ಯ ರೈತ ಸಂಘ ಈ ಅಭಿನಂದನಾ ಸಮಾರಂಭ ಆಯೋಜಿಸಿತ್ತು. ಇದೇ ವೇದಿಕೆ ಮೇಲೆ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ನಟ ದರ್ಶನ್ ಅವರಿಗೆ 'ಭೂಮಿ ಪುತ್ರ' ಬಿರುದು ನೀಡಿದ್ದರು. ಹೀಗೆ ಕಾಟೇರ ಸಿನಿಮಾ ಯಶಸ್ಸಿನ ಬೆನ್ನಲ್ಲೇ ದರ್ಶನ್ ಅವರ ಅಭಿಮಾನಿಗಳಿಗೆ ಡಬಲ್ ಖುಷಿಯು ಸಿಕ್ಕಂತಾಗಿದೆ.

ಎಷ್ಟು ಗಳಿಸಿದೆ ಕಾಟೇರ ಸಿನಿಮಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಂದ್ರೆ ದೊಡ್ಡ ಮಟ್ಟಿಗೆ ಹೈಪ್ ಇರುತ್ತೆ ಫ್ಯಾನ್ಸ್ ಕೂಡ ಕಾಯ್ತಾರೆ. ಅದೇ ರೀತಿ ಕಾಟೇರ ಕೂಡ ತುಂಬಾ ಅಂದ್ರೆ ತುಂಬಾನೆ ನಿರೀಕ್ಷೆ ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. 200 ಕೋಟಿ ರೂ. ಕ್ಲಬ್‌ಗೂ ಸೇರಿದೆ. 'ಕಾಟೇರ' ಸಿನಿಮಾ ಮೊದಲ ದಿನ 20 ಕೋಟಿ ರೂಪಾಯಿ ಬಾಚಿತ್ತು. 2ನೇ ದಿನ ಅಬ್ಬರಿಸಿ 17 ಕೋಟಿ ಕಲೆಕ್ಷನ್ ಮಾಡಿತ್ತು. 3ನೇ ದಿನ ಕಾಟೇರ ಸಿನಿಮಾ ಬರೋಬ್ಬರಿ 20.94 ರೂಪಾಯಿ ಗಳಿಸಿತ್ತು. 4ನೇ ದಿನ 18.26 ಕೋಟಿ, 5ನೇ ದಿನ 9 ಕೋಟಿ ಕಲೆಕ್ಷನ್ ಮಾಡಿತ್ತು.

Challenging Star Darshan Fans Got Another Surprise

6ನೇ ದಿನ 9.78 ಕೋಟಿ ಗಳಿಸುವ ಮೂಲಕ 95.36 ಕೋಟಿ ರೂಪಾಯಿ ಗಳಿಸಿದ್ದ ಕಾಟೇರನಿಗೆ, 7ನೇ ದಿನಕ್ಕೆಲ್ಲ 100 ಕೋಟಿ ರೂಪಾಯಿ ಕ್ಲಬ್ ಗರಿ ಸಿಕ್ಕಿತ್ತು. ಬಿಡುಗಡೆಯಾದ 2 ವಾರಕ್ಕೆ ನಟ ದರ್ಶನ್ ಅವರ ಸಿನಿಮಾ 150 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಇದೇ ವೇಳೆ ದರ್ಶನ್ ಅವರ ಅಭಿಮಾನಿಗಳು ಕೂಡ ಕಾಟೇರ ನೋಡಿ ಸಂಭ್ರಮವನ್ನ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದ್ಕಡೆ, ದರ್ಶನ್ ಅವರಿಗೆ ಹೊಸ ಬಿರುದು ಕೂಡ ನೀಡಲಾಗಿದೆ. ಈ ಮೂಲಕ 2024ರ ಆರಂಭದಲ್ಲಿ ದರ್ಶನ್ ಅವರ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಸಿಕ್ಕಂತಾಗಿದೆ.

ಜಗತ್ತಿನಾದ್ಯಂತ ಕನ್ನಡ ಸಿನಿಮಾ ಅಬ್ಬರ

ಕರ್ನಾಟಕ ಸೇರಿ ಭಾರತದ ವಿವಿಧ ರಾಜ್ಯದಲ್ಲಿ ಡಿ. 29ಕ್ಕೆ ರಿಲೀಸ್ ಆಗಿದ್ದ ಕನ್ನಡಿಗರ ಕಾಟೇರ ವಿದೇಶದಲ್ಲೂ ಅಬ್ಬರಿಸುತ್ತಿದೆ. ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ಅರಬ್ ದೇಶದಲ್ಲೂ ಅಬ್ಬರಿಸುತ್ತಿದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಆಸ್ಟ್ರೇಲಿಯಾ ಮತ್ತಿತರ ಕಡೆ ಕಾಟೇರ ಸಿನಿಮಾ ಇದೇ ರೀತಿ ಅಬ್ಬರದ ಪ್ರದರ್ಶನ ನೀಡ್ತಿದೆ. ಇದರ ಜೊತೆ ಇದೀಗ 200 ಕೋಟಿ ರೂ. ಕ್ಲಬ್ ಬೇರೆ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+