Bigg Boss Kannada: 'ಮೆಟ್ನಲ್ಲಿ ಹೊಡೀತಿನಿ': ಏನಮ್ಮಾ ಚೈತ್ರಾ ಕುಂದಾಪುರ ನಿಮ್ಮ ಭಾಷೆ.?

Bigg Boss Kannada: ಅವಾಚ್ಯ ಶಬ್ಧಗಳ ಬಳಕೆ ಹಿನ್ನೆಲೆ ಲಾಯರ್‌ ಜದೀಶ್‌ ಅವರು ಬಿಗ್‌ ಬಾಸ್‌ ಕನ್ನಡ 11 ಸೀಸನ್‌ನಿಂದ ಹೊರಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ಜಗದೀಶ್‌ಗೆ ತಳ್ಳಿದ್ದಾರೆ ಎಂಬ ಆರೋಪದ ಮೇಲೆ ರಂಜಿತ್‌ನನ್ನು ಸಹ ಹೊರಹಾಕಿದ್ದಾರೆ. ಮತ್ತೊಂದೆಡೆ ತಮ್ಮ ಮಾತುಗಳಿಂದಲೇ ಪ್ರಖ್ಯಾತಿ ಪಡೆದಿದ್ದ ಚೈತ್ರಾ ಕುಂದಾಪುರ್‌ಗೆ ಇದೀಗ ದೊಡ್ಮನೆಯಲ್ಲಿ ಅದೇ ಮಾತುಗಳೇ ಮುಳುವಾಗಿವೆ.

ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ವೇಳೆ ಕಿಚ್ಚ ಸುದೀಪ್‌ ಅವರು ಬಿಗ್ ಬಾಸ್ ಮನೆಯಲ್ಲಾದ ಮಾತುಕತೆಗಳ ಬಗ್ಗೆ ಮಾತನಾಡಿದ್ದರು. ಈ ವೇಳೆ ಚೈತ್ರಾ ಕುಂದಾಪುರ್ ಅವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಜಗದೀಶ್‌ ಅವರು ಅವಾಚ್ಯ ಪದಗಳಿಂದ ಮಾತನಾಡಿದ್ದರು ಎಂದು ಚೈತ್ರಾ ಕುಂದಾಪುರ್‌ ಅವರು ಆರೋಪ ಮಾಡಿದ್ದರು. ಆಗ ಚೈತ್ರಾ ಅವರು ಮಾತಾನಾಡಿದ ಮಾತುಗಳನ್ನೆಲ್ಲ ಅವರಿಗೆ ನೆನಪಿಸುವ ಮೂಲಕ ಕ್ಲಾಸ್‌ ತೆಗೆದುಕೊಂಡಿದ್ದರು.

Chaithra Kundapura Uses Again Abusive words in Bigg Boss kannada

ಆಗ ಕಿಚ್ಚ ಸುದೀಪ್‌ ಅವರು "ಚೈತ್ರಾ ಅವರೇ.. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದು ಹೇಳುವುದು ನೀವೆ. ಆದರೆ, ಒಬ್ಬ ಅಪ್ಪನಿಗೆ ಹುಟ್ಟಿದ್ರಿ ಅಂದ್ರೆ, ಯಾವ ನನ್‌ ಮಗನೂ ಅಪ್ಪನಿಗೆ ಬಯ್ಯುತ್ತಿರೋದಲ್ಲ ಮೇಡಂ.. ನೀವು ತಾಯಿಗೆ ಬಯುತ್ತಿರೋದು," ಎಂದು ಚೈತ್ರಾ ಕುಂದಾಪುರ್ ಅವರಿಗೆ ಖಡಕ್‌ ಆಗಿ ಕ್ಲಾಸ್‌ ತೆಗೆದುಕೊಂಡಿದ್ದರು. ಒಬ್ಬ ಅಪ್ಪನಿಗೆ ಹುಟ್ಟಿದ್ರೆ ನನ್ನ ಮುಂದೆ ಬಂದ್‌ ಮಾತನಾಡಲಿ ಎಂದು ಚೈತ್ರಾ ಕುಂದಾಪುರ್ ಜಗದೀಶ್‌ ಅವರಿಗೆ ಹೇಳಿದ ಮಾತಿಗೆ ಕಿಚ್ಚನ ಖಡಕ್‌ ತಿರುಗೇಟು ಇದು.

ಅಷ್ಟೇ ಸಾಲದೆಂಬಂತೆ ಮತ್ತೆ ಚೈತ್ರಾ ಕುಂದಾಪುರ್‌ ಅವರು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಗೋಲ್ಡ್‌ ಸುರೇಶ್‌ ಅವರು ಹಂಸ ಅವರ ಲವ್‌ ಸ್ಟೋರಿ ನಡೆಯುತ್ತಿದೆ ಎಂದು ಹೇಳಿದ್ದರು. ಈ ವಿಚಾರವನ್ನು ಹಂಸ ಚೈತ್ರಾ ಕುಂದಾಪುರ್‌ ಬಳಿ ಹೇಳಿಕೊಂಡು ಸಾಕಷ್ಟು ಬೇಸರಗೊಂಡಿದ್ದರು. ಬಳಿಕ ಚೈತ್ರಾ ಅವರು ಪ್ರತಿಕ್ರಿಯಿಸಿ, ಹೀಗೆ "ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತನಾಡಿದರೆ, ಅವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ. ನನಗೆ ಈಗಾಗಲೇ ಮದುವೆ ಫಿಕ್ಸ್‌ ಆಗಿದೆ. ನನ್ನ ಸುದ್ದಿಗೆ ಯಾರು ಬರಬೇಡಿ," ಅಂತಲೂ ಹೇಳಿದ್ದರು.

ಇನ್ನೂ ಚೈತ್ರಾ ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೆ ಮತ್ತೆ ನಾಲಿಗೆ ಹರಿಬಿಡುತ್ತಿದ್ದಾರೆ. ಒಳ್ಳೆ ಮಾತುಗಳನ್ನು ಮಾತನಾಡಬೇಕು ಎಂದು ವೇದಿಕೆಗಳ ಮೇಲೆ ಪುಂಗುತ್ತಿದ್ದವರೇ ಇದೀಗ ಬಿಗ್ ಬಾಸ್‌ ಮೆನಯಲ್ಲಿ ಅವಾಚ್ಯ ಪದಗಳನ್ನು ಬಳಸುತ್ತಿದ್ದಾರೆ. ಅವರ ಬಾಯಿಂದ ಇಂತಹ ಕೊಳಕು ಮಾತುಗಳು ಬರುತ್ತವೆ ಅಂತಲೂ ನಾವು ಊಹಿಸಿಯೂ ಇರಲಿಲ್ಲ. ಇನ್ನಾದರೂ ತಿದ್ದಿಕೊಂಡು ಉತ್ತಮವಾಗಿ ಬಿಗ್‌ ಬಾಸ್‌ ಮನೆಯಲ್ಲಿ ಆಟ ಆಡಿದರೆ ಉತ್ತಮ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

ಅಲ್ಲದೆ, ಉಗ್ರಂ ಮಂಜು ಅವರು ಚಪ್ಪಲಿ ಬೀಸಿದ್ದರ ಬಗ್ಗೆಯೂ ಕಿಚ್ಚ ಸುದೀಪ್‌ ಅವರು ಹಿಂದಿನ ಸಂಚಿಕೆಯಲ್ಲಿ ಬೇಸರ ಹೊರಹಾಕಿದ್ದರು. ಹೀಗೆ ಒಬ್ಬ ವ್ಯಕ್ತಿ ಮೇಲೆ ಚಪ್ಪಲಿ ಬೀಸುವುದು ಸರಿಯೇ ಎಂದಾಗ ಮಂಜು ಅವರು ನನ್ನಿಂದ ತಪ್ಪಾಗಿದೆಮ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರು.

ಅವಾಚ್ಯ ಶಬ್ಧಗಳನ್ನು ಬಳಸಿದ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಹೊರಗೆ ಕಳುಹಿಸಲಾಗಿದೆ. ಹಾಗಾದರೆ ನೀವು ಮಾತನಾಡಿದ ಮಾತುಗಳೆಲ್ಲ ಸರಿಯಾಗಿವೆಯೇ?, ನೀವು ಆಡಿದ ಕೆಟ್ಟ ಮಾತುಗಳನ್ನಿಟ್ಟುಕೊಂಡು ನಿಮ್ಮನ್ನು ಕೂಡ ಹೊರಹಾಕಬಹುದಲ್ಲ ಎಂದು ತುಕಾಲಿ ಸಂತೋಷನ ಪತ್ನಿ ಮಾನಸ ಅವರಿಗೆ ಪ್ರಶ್ನಿಸುವ ಮೂಲಕ ಕಿಚ್ಚ ಸುದೀಪ್‌ ಅವರು ಕ್ಲಾಸ್‌ ತೆಗೆದುಕೊಂಡಿದ್ದರು.

ಲಾಯರ್ ಜಗದೀಶ್‌ ಅವರು ಆ ಮಟ್ಟಿಗೆ ಕೋಪಗೊಂಡು ಚೀರಾಡಿ ಕೆಟ್ಟ ಪದಗಳನ್ನು ಬಯ್ಯಲು ಪ್ರಮುಖ ಕಾರಣ ಇಲ್ಲಿನ ಕೆಲ ಸ್ಪರ್ಧಿಗಳೇ ಅಂತಲೂ ಗೋಲ್ಡ್‌ ಸುರೇಶ್‌ ಅವರು ಹೇಳಿದ್ದರು. ಅಲ್ಲದೆ, ಇಡೀ ಮನೆ ಅವರ ವಿರುದ್ಧ ನಿಂತಿತ್ತು ಅಂತೂ ಹೇಳಿದ್ದರು. ಆಗ ಪ್ರತಿಯೊಬ್ಬರ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಅವರನ್ನು ತಿದ್ದುವಂತಹ ಕೆಲಸವನ್ನು ಕಿಚ್ಚ ಸುದೀಪ್‌ ಅವರು ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+