Bigg Boss: ಮಾನಸಿಕವಾಗಿ ಕುಗ್ಗುವ ಮಗಳೇ ಅಲ್ಲ ನಾನು ಎಂದ ಐಶ್ವರ್ಯ ಸಿಂಧೋಗಿ - ಐಶ್ ಹೀಗಂದಿದ್ದು ಯಾರಿಗೆ?
ಬಿಗ್‌ಬಾಸ್ ಮನೆಯಲ್ಲಿ ಕಳೆದ ದಿನ ಖಾರ ಖಾರವಾಗಿದ್ದ ಸ್ಪರ್ಧಿಗಳು ಈಗ ಬೆನ್ನಿಗೆ ಚೂರಿ ಹಾಕಲು ನಿಂತಿದ್ದಾರೆ. ಪ್ರಸ್ತುತ ದೊಡ್ಮನೆಯ ಸದಸ್ಯರಿಗೆ ನಾಮಿನೇಷನ್ ಪ್ರಕ್ರಿಯೆ ನೀಡಲಾಗಿದೆ. ಇದರಲ್ಲಿ ಮನೆಯ ಎಲ್ಲಾ ಸದಸ್ಯರು ಬೆನ್ನಿಗೆ ಸ್ಪಾಂಜ್ ಅನ್ನು ಕಟ್ಟಿಕೊಳ್ಳಬೇಕು. ಯಾವ ಸದಸ್ಯರು ಯಾರನ್ನು ನಾಮಿನೇಷನ್ ಮಾಡಲು ಬಯಸುತ್ತಾರೋ ಅವರ ಬೆನ್ನಿನ ಸ್ಪಾಂಜ್‌ಗೆ ಚೂರಿಯನ್ನು ಸೂಕ್ತ ಕಾರಣಗಳಿಂದ ಚುಚ್ಚಬೇಕು. ಈ ಪ್ರೋಮೋದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಕಳೆದ ವಾರ ರಾಜನ ಪಾತ್ರ ನಿನ್ನನ್ನು ಬಿಟ್ಟರೆ ಬೇರೆ ಯಾರಿಂದಲೂ ಮಾಡಲು ಆಗಲ್ಲ ಎಂದು ಸುದೀಪ್ ಅವರಿಂದ ಪ್ರಶಂಸೆ ಪಡೆದಿದ್ದ ಮಂಜಣ್ಣನಿಗೆ ಒಂಬತ್ತು ಚೂರು ಬಿದ್ದಿರುವುದು ವೀಡಿಯೋದಲ್ಲಿ ಕಂಡು ಬಂದಿದೆ. ಇನ್ನೂ ನಾಮಿನೇಟ್ ಮಾಡುವ ವಿಷಯದಲ್ಲಿ ಮಂಜು ಹಾಗೂ ಐಶ್ವರ್ಯ ನಡುವೆ ಜಗಳ ನಡೆದಿದೆ. ನಾಮಿನೇಷನ್ ವಿಚಾರದಲ್ಲಿ ದೊಡ್ಡ ಗಲಾಟೆಯೇ ನಡೆದಿದ್ದು ಐಶ್ ಮಂಜು ವಿರುದ್ಧ ಗರಂ ಆಗಿ ಕೂಗಾಡಿದ್ದಾರೆ.
ಐಶ್ವರ್ಯ ಮಂಜು ಜಗಳ ಎಂಜಾಯ್ ಮಾಡಿದ ಮೋಕ್ಷಿತಾ
ಬಿಗ್‌ಬಾಸ್ ಮನೆಯಲ್ಲಿ ಒಂದು ಗ್ರೂಪ್ ಕ್ರಿಯೇಟ್ ಆಗಿರುವುದು ಗೊತ್ತೇ ಇದೆ. ಈ ಗ್ರೂಪ್ ಅನ್ನು ಲೀಡ್ ಮಾಡುತ್ತಿರುವುದು ಮೋಕ್ಷಿತಾ. ಐಶ್ವರ್ಯ ಮಂಜು ಅವರಿಗೆ ಟಾಂಗ್ ಕೊಡ್ತಾಯಿದ್ದರೆ ಅದನ್ನು ಮೋಕ್ಷಿತಾ ಎಂಜಾಯ್ ಮಾಡ್ತಾಯಿರೋದು ಕಂಡು ಬಂದಿದೆ. ಇತ್ತ ಐಶ್ವರ್ಯ ಅವರು ಮಂಜು ಅವರಿಗೆ, 'ನೀವು ಮಾನಸಿಕವಾಗಿ ಕುಗ್ಗಿಸಲು ನೋಡಿದರೆ ಕುಗ್ಗೋ ಮಗಳೇ ಅಲ್ಲ ನಾನು, ನಾಚಿಕೆ ಆಗಬೇಕು ನಿನ್ನ ಮಾತುಗಳಿಗೆ' ಅಂತ ಖಡಕ್ ಆಗಿ ಹೇಳುತ್ತಾರೆ. ಈ ಮಾತುಗಳನ್ನು ಕೇಳುತ್ತಾ ಮೋಕ್ಷಿತಾ ಮುಗುಳು ನಗೆ ಬೀರುತ್ತಾ ಎಂಜಾಯ್ ಮಾಡಿದ್ದು ವೀಡಿಯೋದಲ್ಲಿ ಕಾಣಬಹುದು.
ಈ ಮನೆಯಲ್ಲಿ ಗ್ರೂಪ್ ರೆಡಿ ಮಾಡಿ ಅದನ್ನು ತುಂಬಾ ಈಜಿಯಾಗಿ ಬಳಸಿಕೊಂಡು ಆಡ್ತಾಯಿರೋ ಮೋಕ್ಷಿತಾ ನಿಜವಾಗಲೂ ಟಾಲೆಂಟ್. ಕೇವಲ ಕಿರುಚಾಡೋದು ಹೊಡೆದಾಡೋದು ಮುಖ್ಯ ಅಲ್ಲ ಮೈಂಡ್ ಗೇಮ್ ಹೇಗ್ ಆಡಬಹುದು ಅನ್ನೋದನ್ನು ಮೋಕ್ಷಿತಾ ತೋರಿಸುತ್ತಿದ್ದಾರೆ.
ಬೆನ್ನಿಗೆ ಚೂರಿ ಹಾಕುವ ವೀಡಿಯೋದಲ್ಲಿ ಕಾಣದ ಚೈತ್ರಾ
ಮತ್ತೊಂದು ವಿಚಾರ ಅಂದರೆ ಈ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಎಲ್ಲೂ ಕೂಡ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಏನಿರಬಹುದು ಎಂದು ಬಿಗ್‌ಬಾಸ್ ವೀಕ್ಷಕರು ಯೋಚನೆ ಮಾಡುತ್ತಿದ್ದಾರೆ. ಬಹುಶ: ಇದು ಕಳೆದ ದಿನ ನಡೆದ ನಾಮಿನೇಷನ್ ಆಗಿರಬಹುದು ಎಂದು ಹಲವಾರು ಜನ ಅಭಿಪ್ರಾಯಪಟ್ಟಿದ್ದಾರೆ.
ಯಾಕೆಂದರೆ ಕಳೆದ ದಿನ ಚೈತ್ರಾ ಕುಂದಾಪುರ ಅವರು ಕೋರ್ಟ್ ವಿಚಾರಕ್ಕೆ ಬಿಗ್‌ಬಾಸ್ ಮನೆಯಿಂದ ಕೆಲ ಹೊತ್ತು ಹೊರ ಬಂದಿದ್ದರು. ಈ ವೇಳೆ ಉಳಿದ ಸ್ಪರ್ಧಿಗಳಿಗೆ ಮಾತ್ರ ನಾಮಿನೇಷನ್ ಪ್ರಕ್ರಿಯೆ ನೀಡಲಾಗಿದೆ. ಹೀಗಾಗಿ ಚೈತ್ರಾ ಈ ವೀಡಿಯೋದಲ್ಲಿ ಕಂಡು ಬಂದಿಲ್ಲ ಎಂದು ಹೇಳಲಾಗುತ್ತಿದೆ. ಇನ್ನ್ಯಾವುದೋ ವಿಚಾರದಲ್ಲಿ ಚೈತ್ರಾ ಬಿಗ್‌ಬಾಸ್ ಮನೆಯಿಂದ ಹೊರಬಂದರೂ ಬಂದಿರಬಹುದು ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಜೋರಾಗಿ ನಡೆದಿದ್ದು, ಯಾರಿಗೆ ಎಷ್ಟು ಚೂರಿ ಯಾರು ಹಾಕಿದ್ರು, ಯಾರು ಎಷ್ಟು ಅದನ್ನು ಎಂಜಾಯ್ ಮಾಡಿದರು ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.












Click it and Unblock the Notifications