Trivikram: ನೇಮ್ ಫೇಮ್ ಇದೆ ಅಂದ ಮಾತ್ರಕ್ಕೆ ಸಿನಿಮಾ ಹೀರೋ ಆಗಲು ಆಗಲ್ಲ- ಬಿಗ್‌ಬಾಸ್ ತ್ರಿವಿಕ್ರಮ್
ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿದು ಕೆಲ ತಿಂಗಳು ಕಳೆದಿವೆ. ದೊಡ್ಮನೆಯಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದ ಕೆಲ ಜನ ಮನೆಯಿಂದ ಹೊರಬಂದ್ಮೇಲೆ ಜೈಲಿಗೆ ಹೋಗಿ ಬಂದರು. ಇನ್ನೂ ಕೆಲ ಜನ ರೀಲ್ಸ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಸಕ್ರಿಯರಾಗಿದ್ದಾರೆ. ಆದರೆ ಈವರೆಗೂ ಕೂಡ ಯಾರೂ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿಲ್ಲ. ಯಾಕೆ ಅನ್ನೋ ಪ್ರಶ್ನೆಗೆ ಬಿಗ್‌ಬಾಸ್ ರನ್ನರ್ ಅಪ್ ತ್ರಿವಿಕ್ರಮ್ ಅದ್ಭುತವಾಗಿ ಉತ್ತರಿಸಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನದವೊಂದರಲ್ಲಿ ಮಾತನಾಡಿದ ತ್ರಿವಿಕ್ರಮ್ ಬಿಗ್‌ಬಾಸ್ ಮನೆಯಿಂದ ಹೊರಬಂದ್ಮೇಲೆ ಏನೆಲ್ಲಾ ಆಯ್ತು ಅನ್ನೋದನ್ನು ವಿವರಿಸಿದ್ದಾರೆ. ಜೊತೆಗೆ ತಾವು ಯಾಕೆ ಸಿನಿಮಾ ಮಾಡಿಲ್ಲ ಅನ್ನೋದನ್ನ ಬಹಿರಂಗಪಡಿಸಿದ್ದಾರೆ. ಹಾಗಾದರೆ ತ್ರಿವಿಕ್ರಮ್ ಹೇಳಿದ್ದೇನು?

ಬಿಗ್‌ಬಾಸ್ ಮನೆಯಲ್ಲಿ ತ್ರಿವಿಕ್ರಮ ಗಳಿಸಿದ ಜನಪ್ರಿಯತೆ ಕಡಿಮೆ ಏನಲ್ಲ. ಅವರ ಫ್ಯಾನ್ಸ್ ಫಾಲೋವರ್ಸ್ ಬಿಗ್‌ಬಾಸ್ ಮನೆಯಲ್ಲಿ ಎಷ್ಟಿತ್ತು ಅಂದರೆ ಅವರು ಹೊರ ಬಂದ್ಮೆಲೆ ಸಿನಿಮಾ ಮಾಡಿದರೆ 100 ದಿನ ಸಿನಿಮಾ ಓಡೋದು ಖಚಿತ ಎನ್ನುವಂತಿತ್ತು. ಹೀಗಾಗಿ ತ್ರಿವಿಕ್ರಮ್ ಯಾಕೆ ಸಿನಿಮಾ ಮಾಡಿಲ್ಲ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇದಕ್ಕೆ ಉತ್ತರಿಸಿದ ತ್ರಿವಿಕ್ರಮ್ ಸಿನಿಮಾ ಮಾಡೋದಕ್ಕೆ ನೇಮ್ ಫೇಮ್ ಇದ್ದರೆ ಸಾಕಾಗುವುದಿಲ್ಲ ಎಂದಿದ್ದಾರೆ.
'ನಾನು ಬಿಗ್‌ಬಾಸ್ ಮನೆಯಿಂದ ಹೊರ ಬದ್ಮೇಲೆ ಯಾವುದೇ ಸಿನಿಮಾ ಆಫರ್ ಬಂದಿಲ್ಲ. ನಾನು ಎಷ್ಟೇ ಹೆಸರು ಮಾಡಿದ್ದರೂ ಕೂಡ ನಾನೊಬ್ಬ ಸಾಮಾನ್ಯ ವ್ಯಕ್ತಿ. ನಾಣು ನನ್ನ ಕುಟುಂಬ ನಡೆಯಬೇಕು. ನನ್ನ ಜೀವನ ಸಾಗಿಸಲು ನನ್ನ ಮುಂದೆ ಯಾವ ದಾರಿ ಇದೆ ಆ ದಾರಿಯಲ್ಲಿ ನಾನು ನಡೆಯಬೇಕು. ಹೀಗಾಗಿ ನಾನು ನನ್ನ ಪಾಲಿಗೆ ಏನು ಬಂದಿದೆ ಅದನ್ನು ಶ್ರದ್ಧೆಯಿಂದ ಮಾಡುತ್ತಿದ್ದೇನೆ' ಎಂದಿದ್ದಾರೆ.

'ನನಗೆ ನೇಮ್ ಫೇಮ್ ಇದೆ ಅಂದ ಪಾತ್ರಕ್ಕೆ ನಾನು ಸಿನಿಮಾ ಹೀರೋ ಆಗಲು ಆಗಲ್ಲ. ಸಿನಿಮಾ ಮಾಡಬೇಕು ಅಂದರೆ ಕಥೆ ಚೆನ್ನಾಗಿ ಇರಬೇಕು. ಅದು ಜನರಿಗೆ ಇಷ್ಟ ಆಗಬೇಕು. ನಿರ್ದೇಶಕರು ಯಾರಾದರು ಸಿನಿಮಾ ಮಾಡ್ತಾಯಿದಿನಿ ನೀವು ಪಾತ್ರ ಮಾಡ್ತೀರಾ ಅಂತ ನನ್ನ ಮುಂದೆ ಬಂದಾಗ ನಾನು ಅದನ್ನು ಮಾಡಬಹುದು. ಅಂಥಹ ಸಿನಿಮಾದಲ್ಲಿ ನನಗೆ ಅವಕಾಶ ಸಿಗಬೇಕು. ಇದೆಲ್ಲವನ್ನು ಕಾಯುತ್ತಾ ಕುಳಿತರೆ ನನ್ನ ಜೀವನ ನಡೆಯುವುದಿಲ್ಲ. ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ನನಗೆ ಧಾರವಾಹಿ ಆಫರ್ ಬಂತು. ಕತೆ ಚೆನ್ನಾಗಿತ್ತು. ನಾನು ಅದಕ್ಕೆ ಖುಷಿಯಿಂದ ಒಪ್ಪಿಕೊಂಡೆ' ಎಂದಿದ್ದಾರೆ ತ್ರಿವಿಕ್ರಮ್.
ನಾನು ಪ್ರಸ್ತುತ 'ಮುದ್ದು ಸೊಸೆ' ಧಾರವಾಹಿಯನ್ನು ಮಾಡುತ್ತಿದ್ದೇನೆ. ಕಥೆ ಚೆನ್ನಾಗಿ ಇದೆ. ಧಾರವಾಹಿಯನ್ನು ಅದ್ಭುತವಾಗಿ ನಿರ್ಮಾಣ ಮಾಡಲಾಗಿದೆ. ಮುದ್ದು ಸೊಸೆ ಧಾರವಾಹಿಯಲ್ಲಿ ಪ್ರೇಮ ಕಥೆ ಇದೆ ಎಂದು ಎಲ್ಲರು ಭಾವಿಸಿದ್ದಾರೆ. ಆದರೆ ಇದು ಅಪ್ಪ ಮಗನ ಕಥೆ. ಈ ಕಥೆ ನನಗೆ ತುಂಬಾ ಇಷ್ಟ ಆಯ್ತು. ನಾನು ನಿಜ ಜೀವನದಲ್ಲಿ ತಂದೆಯನ್ನು ಕಳೆದುಕೊಂಡಿದ್ದೇನೆ. ಈ ಧಾರವಾಹಿಯಲ್ಲಿ ಕೆಲ ವಿಷಯಗಳು ನಿಜ ಜೀವನಕ್ಕೆ ಕನೆಕ್ಟ ಆಗಿವೆ' ಎಂದಿದ್ದಾರೆ.
'ನನಗೆ ಮಂಡ್ಯ ಭಾಷೆ ಸ್ವಲ್ಪ ಕಷ್ಟ. ಆದರೂ ನಾನು ಶ್ರಮ ವಹಿಸಿ ನಟನೆ ಮಾಡುತ್ತಿದ್ದೇನೆ. ನನಗೆ ಮಂಡ್ಯ ಜನರೆಂದರೆ ತುಂಬಾ ಇಷ್ಟ. ನನಗೆ ಮಂಡ್ಯದಲ್ಲಿ ತುಂಬಾ ಜನ ಸ್ನೇಹಿತರಿದ್ದಾರೆ. ಅವರು ತುಂಬಾ ಆತ್ಮೀಯರು ಅಲ್ಲದೆ ಅವರಲ್ಲಿ ನಾನು ತುಂಬಾ ಒಳ್ಳೆತನವನ್ನು ಕಂಡಿದ್ದೇನೆ. ಸೋಮವಾರದಿಂದ ಧಾರವಾಹಿ ಶುರುವಾಗಲಿದೆ. ಎಲ್ಲರೂ ಕೂಡ ನನಗೆ ಆಶೀರ್ವಾದ ಮಾಡಿ. ಮಾಡ್ತೀರಾ ಅನ್ನೋ ನಂಬಿಕೆ ನನಗಿದೆ' ಎಂದು ತ್ರಿವಿಕ್ರಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ತ್ರಿವಿಕ್ರಮ್ ಒಂದು ವಿಭಿನ್ನ ಕಥೆ ಹಾಗೂ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಜನ ಯಾವ ರೀತಿ ಅದನ್ನು ಸ್ವೀಕರಿಸುತ್ತಾರೆ ಅನ್ನೋದನ್ನು ಕಾದು ನೊಡಬೇಕಿದೆ.












Click it and Unblock the Notifications