ನನ್ನ ಗಂಡನ ಜೊತೆ ಆ ಬಿಗ್‌ಬಾಸ್‌ ಸ್ಪರ್ಧಿ ಅಕ್ರಮ ಸಂಬಂಧ: ವಿಡಿಯೋ ರಿಲೀಸ್‌ ಮಾಡಿದ ನಟನ ಪತ್ನಿ

ಬಿಗ್‌ಬಾಸ್‌ ಕಾರ್ಯಕ್ರಮವು ಕಾಂಟ್ರವರ್ಸಿಗಳಲ್ಲಿ ಕಾಣಿಸಿಕೊಂಡವರ ಅಡ್ಡಾ ಎಂದು ಕರೆಯಲಾಗುತ್ತದೆ. ಕೆಲವರು ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೂ ವಿವಾದಗಳಲ್ಲಿ ಸಿಲುಕಿಕೊಳ್ತಾರೆ. ಆದರೆ ಈ ಬಾರಿ ಬಿಗ್‌ಬಾಸ್‌ ಮನೆ ಸೇರಿರುವ ಮಹಿಳಾ ಸ್ಪರ್ಧಿಯೊಬ್ಬರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಖ್ಯಾತ ನಟನಾದ ನನ್ನ ಪತಿಗೂ ಆ ಸ್ಪರ್ಧಿಗೂ ಅಕ್ರಮ ಸಂಬಂಧ ಇದೆ ಎಂದು ಆತನ ಪತ್ನಿಯೇ ಆರೋಪ ಮಾಡಿದ್ದು ಮಾತ್ರವಲ್ಲದೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ರಿಲೀಸ್‌ ಮಾಡಿದ್ದಾರೆ. ಇದು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ.

ಹೌದು, ಬಿಗ್ ಬಾಸ್ ತೆಲುಗು ಸೀಸನ್ 9ರಲ್ಲಿ ನಟಿ ಸಂಜನಾ ಗಲ್ರಾನಿ ಸೇರಿ ಕನ್ನಡದವರೂ ಇದ್ದಾರೆ. ಇದೇ ಸೀಸನ್‌ನಲ್ಲಿ ಸ್ಪರ್ಧಿಯಾಗಿರುವ ರಿತು ಚೌಧರಿ ಅವರು ಖ್ಯಾತ ಟಾಲಿವುಡ್ ನಟ ಧರ್ಮ ಮಹೇಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅವರ ಪತ್ನಿ ಗೌತಮಿ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗೌತಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳು ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿದ ನಂತರ ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ.

Bigg Boss Telugu 9 Ritu Chaudhary In Controversy Realationship With Actor Dharma Mahesh

ರಿತು ಚೌಧರಿ ಅವರ ಗೌಪ್ಯ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡಿವೆ. ಆ ವಿಡಿಯೋಗಳಲ್ಲಿ ರಿತು ಚೌಧರಿ ಮತ್ತು ಧರ್ಮ ಮಹೇಶ್ ಒಟ್ಟಿಗೆ ಓಡಾಡುವುದು, ಡ್ರಗ್ಸ್ ತೆಗೆದು ಹೊರಬರುವ ದೃಶ್ಯಗಳು ಕೂಡ ಇವೆ ಎಂದು ಹೇಳಲಾಗುತ್ತಿದೆ. ಗೌತಮಿ ಈ ಹಿಂದೆ ತನ್ನ ಗಂಡ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ ಹಾಗೂ ಮತ್ತೊಂದು ಮಹಿಳೆಯ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆ ಯುವತಿಯ ಹೆಸರು ರಿವೀಲ್‌ ಮಾಡಿರಲಿಲ್ಲ.

ವಿಡಿಯೋದಲ್ಲೇನಿದೆ?

ಈಗ ಬಿಗ್‌ಬಾಸ್‌ನಲ್ಲಿ ರಿತು ಚೌಧರಿ ಸ್ಪರ್ಧಿಯಾಗಿ ಕಾಣಿಸಿಕೊಂಡ ನಂತರ ಈ ಆರೋಪ ಮಾಡಲಾಗಿದೆ. ಈಗ ಗೌತಮಿ ರಿತು ಚೌಧರಿಯೇ ಆ ಯುವತಿಯೆಂದು ಆರೋಪಿಸಿ ಫೋಟೋಗಳು, ಚಾಟ್ಸ್, ವಿಡಿಯೋಗಳನ್ನು ರಿಲೀಸ್‌ ಮಾಡಿದ್ದಾರೆ. ಇತ್ತೀಚೆಗೆ ರಿತು ಮತ್ತು ಧರ್ಮ ಮಹೇಶ್ ಒಂದು ಫ್ಲಾಟ್‌ಗೆ ಹೋಗುವ ವಿಡಿಯೋಗಳನ್ನು ಗೌತಮಿ ಶೇರ್‌ ಮಾಡಿಕೊಂಡಿದ್ದಾರೆ.

ವೈರಲ್ ವಿಡಿಯೋಗಳ ವಿಷಯವನ್ನು ಗೌತಮಿ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ರಿತು ಚೌಧರಿ ಹೆಸರು ಮತ್ತೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಗೌತಮಿ ಅವರು ಆರೋಪ ಮಾಡಿರುವಂತೆ ಇವರಿಬ್ಬರೂ ಅಕ್ರಮ ಸಂಬಂಧದಲ್ಲಿದ್ದಾರಾ? ಅಥವಾ ಕೇವಲ ಡ್ರಗ್ಸ್ ಬಳಸಲು ಸಂಪರ್ಕ ಹೊಂದಿದ್ದಾರಾ? ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.

ಗೌತಮಿ ಅವರು ನಟ ಧರ್ಮ ಮಹೇಶ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಅದೇ ಸಮಯದಲ್ಲಿ ತನ್ನ ಪತಿಗೆ ರಿತು ಚೌಧರಿ ಜೊತೆ ಸಂಬಂಧವಿತ್ತು ಎಂದು ಆರೋಪಿಸಿದ್ದಾರೆ. ಆಕೆಯ ಕಾರಣದಿಂದ ಪತ್ನಿ ನನ್ನೊಂದಿಗೆ ಜಗಳವಾಡಿದ್ದ ಎಂದು ಗೌತಮಿ ಅವರು ಕೆಲವು ಸಾಕ್ಷಿಗಳನ್ನು ಸಹ ನೀಡಿದ್ದಾರೆ. ಇದರಲ್ಲಿ ಇಬ್ಬರ ನಡುವೆ ನಡೆದಿರುವ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಕೂಡ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+