'ಬೆಕ್ಕು-ಹುಲಿ ನೋಡಲು ಒಂದೇ ರೀತಿ': ಗೋಲ್ಡ್ ಸುರೇಶ್‌ಗೆ ವರ್ತೂರು ಸಂತೋಷ್ ಸವಾಲು
ಬಿಗ್ ಬಾಸ್ ಕನ್ನಡ ಸೀಜನ್ 11 ಆರಂಭವಾಗಿ ಒಂದು ತಿಂಗಳು ಕಳೆದಿದೆ. ಈ ಬಾರಿ ಸ್ಪರ್ಧಿಗಳ ಪೈಕಿ ಸೆಲೆಬ್ರೆಟಿಗಳನ್ನು ಹೊರತುಪಡಿಸಿ ಗೋಲ್ಡ್ ಸುರೇಶ್ ಅವರನ್ನು ವಿಶೇಷ ಕ್ಷೇತ್ರದಿಂದ ಆಯ್ದು ತರಲಾಗಿದೆ. ಕಳೆದ ಸೀಜನ್‌ನ ವರ್ತೂರು ಸಂತೋಷ್ ಅವರ ಸ್ಥಾನದಲ್ಲಿ ಈ ಬಾರಿ ಗೋಲ್ಡ್ ಸುರೇಶ್ ಅವರನ್ನು ತರಲಾಗಿದೆ ಎನ್ನುವು ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ವರ್ತೂರು ಸಂತೋಷ್ ಮಾತನಾಡಿದ್ದು, ಬೆಕ್ಕು-ಹುಲಿಯ ಉದಾಹರಣೆ ಕೊಟ್ಟು ಗೋಲ್ಡ್ ಸುರೇಶ್ಗೆ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವರ್ತೂರು ಸಂತೋಷ್, ನನಗೆ ಗೋಲ್ಡ್ ಸುರೇಶ್ ಯಾರೂ ಎನ್ನುವುದೇ ಗೊತ್ತಿಲ್ಲ. ಅವರು ಬಿಗ್‌ಬಾಸ್ ಬಂದ ಮೇಲೆಯೇ ಗೊತ್ತಾಗಿದ್ದು ಎಂದ ವರ್ತೂರು ಸಂತೋಷ್ ತಮ್ಮ ಸ್ಥಾನದಲ್ಲಿ ಗೋಲ್ಡ್ ಸುರೇಶ್ ಅವರನ್ನ ತರಲಾಗಿದೆ ಎನ್ನುವ ಮಾತಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

ನಾನು ಒಂದು ವಿಚಾರ ಹೇಳುತ್ತೇನೆ. ನಾನು ಈಗ ಕೊಡುವ ಉದಾಹರಣೆ ತಪ್ಪಾಗಬಹುದು ಯಾಕೆಂದರೆ ಅವರು ಒಳಗಡೆ ಇದ್ದಾರೆ. ಬೆಕ್ಕು-ಹುಲಿಯೂ ನೋಡಲು ಒಂದೇ ರೀತಿ ಕಾಣಿಸುತ್ತದೆ. ಹಾಗಂತ ನಾನೇನು ಹುಲಿ ಅಂತಾ ನಾನು ಹೇಳುತ್ತಿಲ್ಲ. ಅಲ್ಲ ಆತ ಬೆಕ್ಕು ಅಂತಾ ನಾನು ಹೇಳುತ್ತಿಲ್ಲ. ಈಗಿನ ಕಾಲದಲ್ಲಿ ಗೋಲ್ಡ್ ಎನ್ನುವುದು ಹೇಗೆ ಆಗಿದೆ ಅಂದರೆ 3 ಸಾವಿರ ರೂಪಾಯಿ ಗೋಲ್ಡ್ ಹಾಕಿಕೊಂಡವ ಎಳನೀರು ಹಿಡಿದುಕೊಂಡು ವಿಡಿಯೋ ಮಾಡುತ್ತಾನೆ ಎಂದು ತಮಾಷೆ ಮಾಡಿದರು.
ಹೀಗಿದ್ದಾಗ ಒರಿಜಿನಲ್ ಆಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಗೋಲ್ಡ್ ಹಾಕಿರೋರ ಮರ್ಯಾದೆ ಏನಾಯ್ತು. ನಾನು ಹೇಳುತ್ತಿರುವ ಈ ವಿಚಾರ ತುಂಬಾ ಸಿಂಪಲ್. ಆ ಕಾರಣಕ್ಕೆ ನಮಗೆ ಗೊತ್ತಿಲ್ಲದೇ ಇರುವವರ ಬಗ್ಗೆ ನಾನು ಮಾತನಾಡಲು ಹೋಗುವುದೇ ಇಲ್ಲ. ನನಗೆ ಆ ವ್ಯಕ್ತಿ ಗೊತ್ತಿಲ್ಲ. ಹೀಗಾಗಿ ಅವರ ವಿಚಾರ ಮಾತನಾಡುವುದಿಲ್ಲ ಎಂದರು.

ಇನ್ನು ಮಾತು ಮುಂದುವರಿಸಿದ ವರ್ತೂರು ಸಂತೋಷ್, ಗೋಲ್ಡ್ ಸುರೇಶ್ ಅವರು ನನ್ನ ಬಗ್ಗೆ ಒಂದು ಮಾತು ಮಾತನಾಡಿದ್ದಾರೆ. ಅವರು ಹೊರಗಡೆ ಬಂದಮೇಲೆ ಅದಕ್ಕೆ ನೇರವಾಗಿಯೇ ಉತ್ತರ ಕೊಡುತ್ತೇನೆ. ಯಾಕೆಂದರೆ ಮುಂದೆ ಇದ್ದು ಮಾತನಾಡುವುದು ಕಿಲಾಡಿತನ. ಅವರಿಲ್ಲದೇ ಇದ್ದಾಗ ಮಾತನಾಡುವುದು ಹೇಡಿತನ ಎಂದರು.
ನನಗಂತೂ ಈ ಮೊದಲು ಗೋಲ್ಡ್ ಸುರೇಶ್ ಬಗ್ಗೆ ಏನೂ ಗೊತ್ತಿಲ್ಲ. ಅವರ ಸಂದರ್ಶನ ಆಗಿರಬಹುದು ಅವರು ನಡೆದು ಬಂದ ಹಾದಿ ನನಗೆ ಗೊತ್ತಿಲ್ಲ. ಆದರೆ ಅವರು ಮನೆಯೊಳಗೆ ಹೋದ ತಕ್ಷಣ ಅವರ 50 ಇಂಟರ್ವ್ಯೂವ್ಗಳು ಹೊರಗೆ ಬರುತ್ತದೆ. ನಾವು ಪ್ರೀ ಪ್ಲ್ಯಾನ್ ಆಗಿ ಒಬ್ಬರನ್ನು ಬೆಳೆಸಿಯೇ ಬೆಳೆಸುತ್ತೇವೆ ಎಂದರೆ ಬೆಳೆಸುತ್ತೇವೆ. ಹೀಗಾಗಿದೆ ಇವಾಗ ಅಲ್ವಾ ಎಂದು ವರ್ತೂರು ಸಂತೋಷ್ ನಕ್ಕಿದ್ದಾರೆ.
ನಮಗೆ ಗೊತ್ತಿಲ್ಲದೇ ಇರುವವರ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ. ಹೀಗಾಗಿ ಅವರು ಹೊರಗಡೆ ಬಂದ ಮೇಲೆ. ಅವರು ಯಾವಾಗ ಬರುತ್ತಾರೋ ಗೊತ್ತಿಲ್ಲ. ಅವತ್ತೇ ಸುದ್ದಿಗೋಷ್ಟಿ ಮಾಡಿ ನಾನು ಅವತ್ತು ಒಂದು ಮುಖ್ಯವಾದ ವಿಚಾರದ ಬಗ್ಗೆ ಮಾತನಾಡುತ್ತೇನೆ. ಸುಮ್ಮನೆ ಕೆಲಸಕ್ಕೆ ಬಾರದ ವಿಚಾರಗಳನ್ನು ಮಾತನಾಡುವುದಿಲ್ಲ. ಅವರು ನನ್ನ ಬಗ್ಗೆ ಮಾತನಾಡಿದ್ದಾರೆ ಹೀಗಾಗಿ ಅವರು ಹೊರಗಡೆ ಬಂದಾಗ ನೇರವಾಗಿ ಉತ್ತರ ಕೊಡುತ್ತೇನೆ ಎಂದು ಹೇಳಿದರು.












Click it and Unblock the Notifications