Bigg Boss: ಶೋಭಾ ಶೆಟ್ಟಿಗೆ ಟಾಸ್ಕ್ ವೇಳೆ ಪೆಟ್ಟು- ಮಂಜು, ರಜತ್ ನಡುವೆ ಬಿಗ್ ಫೈಟ್!
ಬಿಗ್‌ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ರಜತ್ ಹಾಗೂ ಶೋಭಾ ಶೆಟ್ಟಿ ಉಳಿದ ಸ್ಪರ್ಧಿಗಳೊಂದಿಗೆ ಭಾರೀ ಪೈಪೋಟಿಗಿಳಿದಿದ್ದಾರೆ. ದೊಡ್ಮನೆಗೆ ಎಂಟ್ರಿಕೊಡುತ್ತಿದ್ದಂತೆ ಇತರ ಸ್ಪರ್ಧಿಗಳ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಂಡ ರಜತ್ ಹಾಗೂ ಶೋಭಾ ತಮ್ಮದೇ ಆದ ಗೇಮ್ ಶುರು ಮಾಡಿದ್ದಾರೆ. ಈ ನಡುವೆ ಟಾಸ್ಕ್ ಆಡುವ ಭರದಲ್ಲಿ ಶೋಭಾ ಶೆಟ್ಟಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೌದು.. ಕಳೆದ ದಿನ ಬಿಗ್‌ಬಾಸ್ ಮನೆಯಲ್ಲಿ ಎರಡು ತಂಡಗಳಿಗೆ ಟಾಸ್ಕ್‌ವೊಂದನ್ನು ನೀಡಲಾಗಿತ್ತು. ಆದರೆ ಟಾಸ್ಕ್ ಆಡುವ ಭರದಲ್ಲಿ ಶೋಭಾ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಇದರಿಂದಾಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಗ್‌ಬಾಸ್ ಅರಂಭವಾಗಿ 50 ದಿನಗಳು ಕಳೆದಿವೆ. ಈಗ ಬಿಗ್‌ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಈಗಾಗಲೇ 50 ದಿನ ಪೂರೈಸಿದ ಸ್ಪರ್ಧಿಗಳಿಗೆ ಆತ್ಮವಿಶ್ವಾಸ ಹೆಚ್ಚಾಗಿದೆ. ಗೆದ್ದೇ ಗೆಲ್ಬೇಕು ಅನ್ನೋ ಹಠ ಅಧಿಕವಾಗಿದೆ. ಹೀಗಿರುವಾಗ ಈಗಷ್ಟೇ ಬಂದ ಸ್ಪರ್ಧಿಗಳು ಅವರಿಗೆ ಠಕ್ಕರ್ ಕೊಡಬೇಕು ಅಂದ್ರೆ ಕೊಚ್ಚ ಹೆಚ್ಚಾಗಿಯೇ ಎಫರ್ಟ್ ಹಾಕಬೇಕು. ಹೀಗಾಗಿ ದೊಡ್ಮನೆಯಲ್ಲಿ ರಜತ್ ಹಾಗೂ ಶೋಭಾ ಅವರ ಮಾತಿನೊಂದಿಗೆ ಆಟ ಕೂಡ ಜೋರಾಗಿದೆ.
ಇತರ ಸ್ಪರ್ಧಿಗಳಿಗೆ ಹೋಲಿಸಿದರೆ ತಾವೇನು ಕಮ್ಮಿ ಇಲ್ಲ ಅನ್ನೋದನ್ನು ತೋರಿಸಲು ಶೋಭಾ ಹಾಗೂ ರಜತ್ ಅವರಿಗೆ ಹೆಚ್ಚು ಸಮಯವಿಲ್ಲ. ಹೀಗಾಗಿ ಇರುವಷ್ಟು ದಿನ ಇಬ್ಬರು ಸುದ್ದಿಯಲ್ಲೇ ಇರಲು ಸಾಕಷ್ಟು ಪ್ರಯತ್ನ ಪಡುತ್ತಿರುವಂತೆ ಕಾಣಿಸುತ್ತಿದೆ. ಈ ಪ್ರಯತ್ನದಲ್ಲಿ ಸಾಕಷ್ಟು ಕೆಟ್ಟ ಪದಗಳು ಕೂಡ ರಜತ್ ಅವರಿಂದ ಕೇಳಿ ಬಂದಿವೆ. ಇದರಿಂದಾಗಿ ಬಿಗ್‌ಬಾಸ್ ಮನೆ ರಣರಂಗವಾಗಿ ಹೋಗಿದೆ.

ಇಂದಿನ ಸಂಚಿಕೆಯಲ್ಲಿನ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಅದರಲ್ಲಿ ಶೋಭಾ ಮತ್ತು ಭವ್ಯಾ ಗೌಡ ನೇತೃತ್ವದಲ್ಲಿ ಎರಡು ತಂಡಗಳನ್ನು ಮಾಡಲಾಗಿದೆ. ಎದುರಾಳಿ ಭವ್ಯಾ ತಂಡಗಿಂತ ಹೆಚ್ಚು ವೇಗವಾಗಿ ಟಾಸ್ಕ್ ಮುಗಿಸುವ ಭರದಲ್ಲಿ ಶೋಭಾ ಪೆಟ್ಟು ಮಾಡಿಕೊಂಡಿದ್ದಾರೆ. ಇದನ್ನು ಕಂಡು ಸಹಸ್ಪರ್ಧಿಗಳು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಅಷ್ಟಕ್ಕೂ ಶೋಭಾ ಅವರಿಗೆ ಯಾವ ಪ್ರಮಾಣದಲ್ಲಿ ಪೆಟ್ಟಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಇಂದಿನ ಪ್ರೋಮೋದಲ್ಲಿ ಶೋಭಾ ಅವರಿಗೆ ಪೆಟ್ಟಾಗಿರುವುದು ಮಾತ್ರ ಗೊತ್ತಾಗಿದೆ.
ಶೋಭಾ ಎಂಟ್ರಿಯಾದ ಕೆಲವೇ ದಿನಗಳಲ್ಲೇ ಉಗ್ರಂ ಮಂಜುಗೆ ತಿರುಗೇಟು ಕೊಟ್ಟು ತಾವೆಂಥಹ ಸ್ಪರ್ಧಿ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಈವರೆಗಿನ ಆಟ ಒಂದು ರೀತಿ ಆದರೆ ಇನ್ಮುಂದಿನ ಆಟ ಬೇರೆ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಹೆಚ್ಚಾಗಿದೆ. ಇದಕ್ಕಾಗಿ ಬಿಗ್‌ಬಾಸ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ. ಇಂದಿನ ಸಂಚಿಕೆಯಲ್ಲಿ ಇದೆಲ್ಲದರ ಬಗ್ಗೆ ಇನ್ನಷ್ಟು ಗೊತ್ತಾಗಲಿದೆ.
ಇನ್ನೂ ರಜತ್ ಹಾಗೂ ಮಂಜು ನಡುವೆ ಯಾರು ವೀಕ್ ಯಾರು ಸ್ಟ್ರಾಂಗ್ ಅನ್ನೋ ಕಿತ್ತಾಟ ನಡೆದಿದೆ. ಇದಕ್ಕೂ ಮುಂಚೆ ಗೋಲ್ಡ್ ಸುರೇಶ್ ಜೊತೆಗೆ ಕಿರಿಕ್ ಮಾಡಿಕೊಂಡ ರಜತ್ ಮಂಜು ಜೊತೆಗೂ ಜಗಳವಾಡಿದ್ದಾರೆ. ಟಾಸ್ಕ್ ಮಧ್ಯೆ ರಜತ್ ಅವರು ನಾನು ತ್ರಿವಿಕ್ರಮ್ ಒಂದೇ ತಂಡದಲ್ಲಿ ಇದ್ದಿದ್ದರೆ ಎದುರಾಳಿ ತಂಡ ಸ್ವಲ್ಪ ವೀಕ್ ಆಗುತ್ತೆ ಎಂದಿದ್ದಾರೆ. ಇದು ಮಂಜು ಅವರ ಕೋಪವನ್ನು ನೆತ್ತಿಗೇರಿಸಿದೆ. ಇದರಿಂದಾಗಿ ನಾವೇನ್ ವೀಕಾ? ಅಂತ ಮಂಜು ರಜತ್ ಜೊತೆ ಜೋರು ಜಗಳ ಮಾಡಿಕೊಂಡಿದ್ದಾರೆ. ಒಟ್ಟನಲ್ಲಿ ದೊಡ್ಮನೆಯಲ್ಲಿ ಯಾರು ಸ್ಟ್ರಾಂಗ್ ಯಾರು ವೀಕ್ ಅನ್ನೋ ಗಲಾಟೆ ಜೋರಾಗಿದ್ದು ಶನಿವಾರ ಇಲ್ಲ ಭಾನುವಾರ ಇದಕ್ಕೆ ಉತ್ತರ ಸಿಗಲಿದೆ.












Click it and Unblock the Notifications