Bigg Boss: ಬಿಗ್‌ಬಾಸ್ ಸೀಸನ್ 13: ಸೆಲೆಬ್ರಿಟಿ ಲಿಸ್ಟ್‌ನಲ್ಲಿದ್ದಾರಂತೆ ಈ ಬಹುಭಾಷಾ ನಟಿ
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್' ಹೊಸ ಸೀಸನ್‌ನ ಸದ್ದು ಈಗಿನಿಂದಲೇ ಶುರುವಾಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ 13ರ ಅಪ್‌ಡೇಟ್‌ಗಳಿಗಾಗಿ ಕಾದು ಕುಳಿತಿರುವ ಅಭಿಮಾನಿಗಳಿಗೆ ಈ ಬಾರಿ ಬ್ಯಾಕ್ ಟು ಬ್ಯಾಕ್ ಸರ್ಪ್ರೈಸ್‌ಗಳು ಸಿಗುತ್ತಿವೆ. ಈ ಹೊಸ ಸೀಸನ್‌ನಲ್ಲಿ ಎಂದಿಗಿಂತಲೂ ವಿಭಿನ್ನವಾದ ಪ್ರಯೋಗಗಳು ನಡೆಯುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ಯ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. ಇನ್ನು ಸೆಲೆಬ್ರಿಟಿಗಳ ಪೈಕಿ ಕನ್ನಡದ ಈ ನಟಿ ಇರೋದು ಪಕ್ಕಾ ಎನ್ನಲಾಗುತ್ತಿದೆ.
ಈ ಬಾರಿ 'ಕಾಮನ್ ಮ್ಯಾನ್' ಆಡಿಷನ್
ಬಿಗ್‌ಬಾಸ್ ಹೊಸ ಸೀಸನ್‌ನ ಅತ್ಯಂತ ದೊಡ್ಡ ಆಕರ್ಷಣೆ ಎಂದರೆ ಈ ಬಾರಿ ಮನೆಯೊಳಗೆ ಸಾಮಾನ್ಯ ಜನರಿಗೂ ಮುಕ್ತ ಅವಕಾಶ ನೀಡುತ್ತಿರುವುದು. ಇದಕ್ಕಾಗಿ ವಾಹಿನಿಯು ಈಗಾಗಲೇ ಅದ್ಧೂರಿ ಆಡಿಷನ್ ಪ್ರಕ್ರಿಯೆಯನ್ನು ಆರಂಭಿಸಿದೆ. ಸಾರ್ವಜನಿಕರಿಂದ ಭಾರಿ ಸ್ಪಂದನೆ ಸಿಗುತ್ತಿದ್ದು, ಆಡಿಷನ್ ಜೋರಾಗಿಯೇ ಸಾಗುತ್ತಿದೆ. ಆರಂಭಿಕ ಹಂತದಲ್ಲಿ ಸ್ಪರ್ಧಿಗಳು ಕಳುಹಿಸುವ ವಿಡಿಯೋಗಳ ಮೂಲಕ ಅವರಲ್ಲಿರುವ ಪ್ರತಿಭೆ ಮತ್ತು ವಿಶಿಷ್ಟತೆಯನ್ನು ಪತ್ತೆ ಹಚ್ಚಲಾಗುತ್ತಿದೆ. ಆ ವಿಡಿಯೋಗಳನ್ನು ಪರಿಶೀಲಿಸಿದ ನಂತರ ಅರ್ಹರನ್ನು ಶಾರ್ಟ್‌ಲಿಸ್ಟ್ ಮಾಡಿ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತಿದೆ. ಈ ವಿಭಿನ್ನ ಆಯ್ಕೆ ಪ್ರಕ್ರಿಯೆಯು ಈಗಾಗಲೇ ಚುರುಕಿನಿಂದ ಸಾಗುತ್ತಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಮೂಡಿಸಿದೆ.

ಬಿಗ್‌ಬಾಸ್ ಮನೆ ಸೇರಲಿದ್ದಾರಾ ರಾಜಾಹುಲಿ ಬೆಡಗಿ?
ಒಂದೆಡೆ ಸಾಮಾನ್ಯ ಜನರ ಆಡಿಷನ್ ಪ್ರಕ್ರಿಯೆ ನಡೆಯುತ್ತಿದ್ದರೆ, ಇನ್ನೊಂದೆಡೆ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗುವ ಸೆಲೆಬ್ರಿಟಿಗಳು ಯಾರು ಎಂಬ ಚರ್ಚೆ ಗಾಂಧಿನಗರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಈ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಮೇಘನಾ ರಾಜ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಈ ಬಾರಿ ಸೀಸನ್ 13ರಲ್ಲಿ ಮೇಘನಾ ರಾಜ್ ಭಾಗವಹಿಸುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.
ಮೇಘನಾ ಏನಂದ್ರು?
ನಿಜ ಹೇಳಬೇಕೆಂದರೆ, ಕಳೆದ ಸೀಸನ್ ವೇಳೆಯೂ ಮೇಘನಾ ರಾಜ್ ಬಿಗ್‌ಬಾಸ್ ಮನೆಗೆ ಬರಲಿದ್ದಾರೆ ಎಂಬ ಭಾರಿ ವದಂತಿಗಳು ಹರಡಿದ್ದವು. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಮಾತ್ರ ಅವರು ರಿಯಾಲಿಟಿ ಶೋಗೆ ಬರುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಬಿಗ್‌ಬಾಸ್ ವಲಯದಿಂದಲೂ ಈ ನಿಟ್ಟಿನಲ್ಲಿ ಮಾತುಕತೆಗಳು ನಡೆದಿವೆ ಎಂಬ ಗುಸುಗುಸು ಕೇಳಿಬರುತ್ತಿದೆ. ಆದರೆ ಈ ಎಲ್ಲ ಚರ್ಚೆ ಹಾಗೂ ಸುದ್ದಿಗಳ ಕುರಿತು ನಟಿ ಮೇಘನಾ ರಾಜ್ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ವಾಹಿನಿಯ ಅಧಿಕೃತ ಪ್ರಕಟಣೆ ಹೊರಬೀಳುವವರೆಗೂ ಅಭಿಮಾನಿಗಳು ಕಾಯಲೇಬೇಕಿದೆ.
ನಟಿ ಮೇಘನಾ ರಾಜ್ ಅವರ ವೈಯಕ್ತಿಕ ಜೀವನದ ಏಳುಬೀಳುಗಳು ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಚೆನ್ನಾಗಿಯೇ ಗೊತ್ತು. ಪತಿ, ನಟ ಚಿರಂಜೀವಿ ಸರ್ಜಾ ಅವರ ಹಠಾತ್ ನಿಧನದ ಬಳಿಕ ಮೇಘನಾ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಆ ನಂತರದ ದಿನಗಳಲ್ಲಿ ತಮ್ಮ ಸಂಪೂರ್ಣ ಗಮನವನ್ನು ಮಗ ರಾಯನ್ ಸರ್ಜಾ ಆರೈಕೆಯಲ್ಲೇ ತೊಡಗಿಸಿಕೊಂಡಿದ್ದರು. ಮಗನ ಜವಾಬ್ದಾರಿಯ ಕಾರಣದಿಂದಾಗಿ ಅವರು ಸಿನಿಮಾ ರಂಗ ಹಾಗೂ ಬಣ್ಣದ ಪ್ರಪಂಚದಿಂದ ಸಾಕಷ್ಟು ವರ್ಷಗಳ ಕಾಲ ತುಸು ದೂರವೇ ಉಳಿಯಬೇಕಾಗಿ ಬಂದಿತ್ತು.
ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಮೇಘನಾ ರಾಜ್, ಇತ್ತೀಚೆಗಷ್ಟೇ 'ಕ್ವಾಟ್ಲೆ ಕಿಚನ್' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಈ ಶೋ ಮೂಲಕ ಅವರು ಮತ್ತೆ ಸಕ್ರಿಯರಾಗುತ್ತಿರುವುದು ಅಭಿಮಾನಿಗಳಲ್ಲಿ ಸಖತ್ ಖುಷಿ ತಂದಿದೆ. ಆದರೆ, ಈ ಕಿಚನ್ ಶೋ ಬೆನ್ನಲ್ಲೇ ಈಗ ಅವರು ಮತ್ತೊಂದು ದೊಡ್ಡ ರಿಯಾಲಿಟಿ ಶೋ ಆದ ಬಿಗ್‌ಬಾಸ್ ಮನೆಗೆ ಹೆಜ್ಜೆ ಇಡಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದ್ದು, ಕಿರುತೆರೆಗೆ ಮರಳಿರುವುದರಿಂದ ಈ ಬಾರಿ ಅವರು ಬಿಗ್‌ಬಾಸ್ ಆಫರ್ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.













Click it and Unblock the Notifications