Rajath: ರಜತ್‌ಗೆ ಕಿಚ್ಚ ಸುದೀಪ್‌ ಕೊಟ್ಟ ಜಾಕೆಟ್‌ನ ಬೆಲೆ ಎಷ್ಟು?

ಕಿರುತೆರೆ ಪ್ರೇಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಗ್ರ್ಯಾಂಡ್‌ ಫಿನಾಲೆ ಕಾರ್ಯಕ್ರಮ ಆರಂಭವಾಗಿದೆ. ರಜತ್‌, ತ್ರಿವಿಕ್ರಮ್‌, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಫಿನಾಲೆ ವಾರದಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ರಜತ್‌ ಲುಕ್‌ ಎಲ್ಲರ ಕಣ್ಣು ಕುಕ್ಕುತ್ತಿದ್ದು, ರಜತ್‌ ಧರಿಸಿರುವ ಜಾಕೆಟ್‌ಗೆ ನೋಡುಗರು ಫಿದಾ ಆಗಿದ್ದಾರೆ.

ರಜತ್‌ ಧರಿಸಿರುವ ಈ ಜಾಕೆಟ್‌ ಹಿಂದೆ ಒಂದು ಕಥೆ ಇದೆ. ಬಿಗ್‌ ಬಾಸ್‌ ಫಿನಾಲೆ ವಾರದಲ್ಲಿ ಅಂತಿಮ ಸ್ಪರ್ಧಿಗಳಾದ ರಜತ್‌, ತ್ರಿವಿಕ್ರಮ್‌, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಅವರಿಗೆ ಬಿಗ್‌ ಬಾಸ್‌ ಒಂದು ಅವಕಾಶವನ್ನು ನೀಡುತ್ತಾರೆ. ಈ ಬಿಗ್‌ ಬಾಸ್‌ ಮನೆಯಲ್ಲಿ ಈಡೇರಿಸಬಹುದಾದ ಕೋರಿಯನ್ನು ಪತ್ರದಲ್ಲಿ ಬರೆದು ಕೊಡುವಂತೆ ಹೇಳುತ್ತಾರೆ. ಈ ವೇಳೆ ಸ್ಪರ್ಧಿಗಳು ತಮ್ಮ ವಿವಿಧ ಬೇಡಿಕೆಯನ್ನು ಬಿಗ್‌ ಬಾಸ್‌ ಮುಂದಿಟ್ಟಿದ್ದು, ಸ್ಪರ್ಧಿಗಳ ಬಹುತೇಕ ಬೇಡಿಕೆಯನ್ನು ಬಿಗ್‌ ಬಾಸ್‌ ಪೂರೈಸಿದ್ದಾರೆ.

Bigg Boss Kannada Season 11 What Is The Price Of The Jacket Given By Kichcha Sudeep To Rajath

ಈ ಪೈಕಿ ರಜತ್‌ ಈ ಹಿಂದೆ ವಾರಾಂತ್ಯ ಸಂಚಿಕೆಯಲ್ಲಿ ಕಿಚ್ಚ ಸುದೀಪ್‌ ಅವರು ಧರಿಸಿದ್ದ ಜಾಕೆಟ್‌ವೊಂದನ್ನು ಉಡುಗೊರೆಯಾಗಿ ನೀಡುವಂತೆ ಕೇಳಿದ್ದರು. ಅಲ್ಲಿ ಕೋರಿಕೆ ಪತ್ರ ಬರೆಯುತ್ತಿದ್ದಂತೆ ತ್ರಿವಿಕ್ರಮ್‌ ಬಳಿ ಬಂದು ನೀನು ಕೇಳಬೇಡ ಪ್ಲೀಸ್‌ ಇಬ್ಬರಿಗೂ ಸಿಗಲ್ಲ ಎಂದು ಪ್ರಾಮಾಣಿಕವಾಗಿ ಮನವಿ ಮಾಡಿಕೊಂಡಿದ್ದರು. ರಜತ್‌ ಈ ಕೋರಿಕೆಗೆ ಬಿಗ್‌ ಬಾಸ್‌ ಅಸ್ತು ಎಂದಿದ್ದು, ರಜತ್‌ ಬಯಸಿದ್ದಕ್ಕಿಂತಲೇ ಹೆಚ್ಚಾಗಿಯೇ ನೀಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಮನೆಯೊಳಗೆ ಅತಿಥಿಯಾಗಿ ಹೋದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಹಾಗೂ ನಟ ರಾಜೀವ್‌, ಏನೇ ಕೇಳಿದರೂ ಕೇಳಿದ್ದಕ್ಕಿಂತ ಹೆಚ್ಚಿನದನ್ನು ಕೊಡುವರು ಕಿಚ್ಚ ಸುದೀಪ್‌ ಎಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಮೊದಲ ದಿನ ಧರಿಸಿದ್ದ ಗೋಲ್ಸ್‌ ಬಣ್ಣದ ಜಾಕೆಟ್‌ಅನ್ನು ರಜತ್‌ಗೆ ಗಿಫ್ಟ್‌ ಆಗಿ ನೀಡಿದ್ದಾರೆ. ಇದೇ ಜಾಕೆಟ್‌ಅನ್ನು ರಜತ್‌ ಇಂದಿನ ಕಾರ್ಯಕ್ರಮದಲ್ಲಿ ಧರಿಸಿದ್ದಾರೆ.

ಕಿಚ್ಚ ಸುದೀಪ್ ರಜತ್‌ಗೆ ನೀಡಿರುವ ಜಾಕೆಟ್‌ನ ಬೆಲೆ ಎಷ್ಟಿರಬಹುದು ಎಂದು ಅನೇಕರಿಗೆ ಕುತೂಹಲ ಇರಬಹುದು. ಈ ಕುತೂಹಲಕ್ಕೆ ಉತ್ತರ ಇಲ್ಲಿದೆ. ಕಿಚ್ಚ ಸುದೀಪ್‌ ಧರಿಸಿದ್ದ ಆ ಜಾಕೆಟ್‌ನ ಬೆಲೆ ಒಂದೂವರೆಯಿಂದ ಎರಡು ಲಕ್ಷ ರೂಪಾಯಿ. ಈ ಬಗ್ಗೆ ಸ್ವತಃ ರಜತ್‌ಗೆ ಜಾಕೆಟ್‌ ನೀಡಿದ ನಟ ರಾಜೀವ್‌ ಅವರೇ ತಿಳಿಸಿದ್ದು, ಆ ಜಾಕೆಟ್​ನ ಬೆಲೆ ಏನಿಲ್ಲ ಎಂದರೂ ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+