Bigg Boss: ಈ ವಾರ ಇವರೇ ಬಿಗ್‌ಬಾಸ್‌ ಮನೆಯಿಂದ ಹೊರಹೋಗುವ ಸ್ಪರ್ಧಿ

ಬಿಗ್‌ಬಾಸ್ ಫಿನಾಲೆಗೆ ಕೆಲವೇ ವಾರ ಬಾಕಿ ಇದೆ. ಈ ವಾರ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಧನ್‌ರಾಜ್ ಆಚಾರ್, ಮೋಕ್ಷಿತಾ ಪೈ ಹಾಗೂ ತ್ರಿವಿಕ್ರಮ್ ಒಟ್ಟು ಐದು ಜನ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಹೊರಬರುವುದು ಗ್ಯಾರಂಟಿ ಅನ್ನೋ ಲೆಕ್ಕಾಚಾರದಲ್ಲಿ ಬಿಗ್‌ಬಾಸ್‌ ವೀಕ್ಷಕರು ಇದ್ದಾರೆ. ಆದರೆ ಈ ವಾರ ಡಬಲ್ ಎಲಿಮಿನೇಷನ್ ಮಾಡ್ತಾರಾ ಅಥವಾ ಸಿಂಗಲ್ ಎಲಿಮಿನೇಷನ್ ಮಾಡ್ತಾರಾ ಅನ್ನೋದನ್ನು ಮಾತ್ರ ಇನ್ನೂ ಕೂಡ ಪಕ್ಕಾ ಆಗಿಲ್ಲ.

ಯಾಕೆಂದರೆ ಈಗಾಗಲೇ ನಾಮಿನೇಷನ್ ಪ್ರಕ್ರಿಯೆ ಮುಗಿದಿದೆ. ಐದು ಜನ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ ಅವರಿಗೆ ಯಾರೂ ಕೂಡ ಓಟ್ ಮಾಡ್ತಾಯಿಲ್ಲ. ಅವರಿಗೆ ಓಟ್ ಮಾಡದೇ ಅವರು ಮನೆಯಲ್ಲಿ ಉಳಿದುಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಹಾಗಾದರೆ ಚೈತ್ರಾ ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಂಡಿರುವುದು ಹೇಗೆ? ಅವರು ಈ ವಾರ ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಎನ್ನಲು ಕಾರಣ ಏನು?

bigg boss kannada season 11 these contestant will be out from the bigg boss house in this week

ಈ ವಾರ ಚೈತ್ರಾ ಹೊರಗಡೆ ಹೋಗ್ತಾರಾ ಅಥವಾ ಇವರ ಬದಲಾಗಿ ತುಂಬಾ ಸ್ಟ್ರಾಂಗ್ ಸ್ಪರ್ಧಿ ಹೊರಗಡೆ ಹೋಗ್ತಾರಾ ಅನ್ನೋ ಲೆಕ್ಕಾಚಾರಗಳು ಈಗ ಶುರುವಾಗಿದೆ. ನಾಮಿನೇಟ್ ಆದವರಲ್ಲಿ ಟಾಪ್ 5 ಸ್ಪರ್ಧಿಗಳೆಂದರೆ ತ್ರಿವಿಕ್ರಮ್ ಹಾಗೂ ಧನ್‌ರಾಜ್‌ ಎಂದು ಹೇಳಲಾಗುತ್ತಿದೆ. ಆದರೆ ಈ ವಾರ ಶಾಕಿಂಗ್ ಎಲಿಮಿನೇಷನ್ ಆಗೋದರಲ್ಲಿ ಅನುಮಾನವೇ ಇಲ್ಲ.

ಬಿಗ್‌ಬಾಸ್‌ ಮನೆಯಿಂದ ಚೈತ್ರಾ ಔಟ್?

ನಾಮಿನೇಟ್ ಆಗಿರುವ ಐದು ಜನರಲ್ಲಿ ಮೊದಲಿಗೆ ಯಾರು ಸೇಫ್ ಆಗಲಿದ್ದಾರೆ ಎಂದು ಹೇಳುವುದಾದರೆ- ಮೊದಲನೇ ಹೆಸರು ತ್ರಿವಿಕ್ರಮ್. ತ್ರಿವಿಕ್ರಮ್ ಅವರು ಈ ವಾರ ಖಂಡಿತವಾಗಿಯೂ ಎಲಿಮಿನೇಟ್ ಆಗೋದಿಲ್ಲ. ಯಾಕೆಂದರೆ ಬಿಗ್‌ಬಾಸ್‌ ಆರಂಭದಿಂದಲೂ ತ್ರಿವಿಕ್ರಮ್ ಚೆನ್ನಾಗಿ ಆಟ ಆಡಿಕೊಂಡು ಬಂದಿದ್ದಾರೆ.

ಹೀಗಾಗಿ ತ್ರಿವಿಕ್ರಮ್ ಟಾಪ್ 5 ಸ್ಪರ್ಧಿ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಇನ್ನೂ ಉಳಿದಿರುವ ನಾಲ್ಕು ಜನರಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್‌ಬಾಸ್‌ ಮನೆಯಲ್ಲಿ ಮನರಂಜನೆ ನೀಡುತ್ತಿಲ್ಲ ಅಂತ ಎಲ್ಲರು ಹೇಳುತ್ತಿದ್ದಾರೆ. ಆದರೆ ಅವರು ಮಾತನಾಡುವ ಮಾತು, ಜಗಳ ಎಲ್ಲವೂ ಕೂಡ ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿವೆ. ಹೀಗಾಗಿ ಚೈತ್ರಾ ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಉಳಿಯಬಹುದು ಎನ್ನಲಾಗುತ್ತಿದೆ. ಆದರೆ ಇದನ್ನು ಖಚಿತವಾಗಿ ಹೇಳಲು ಆಗುವುದಿಲ್ಲ. ಚೈತ್ರಾ ಕುಂದಾಪುರ ಅವರು ಈ ವಾರ ಬಿಗ್‌ಬಾಸ್‌ ಮನೆಯಿಂದ ಹೊರಗಡೆ ಹೋಗಬಹುದು, ಹೋಗದೇ ಕೂಡ ಇರಬಹುದು. ಹಾಗಾದರೆ ಈ ವಾರ ಚೈತ್ರಾ ಔಟ್ ಆಗಿಲ್ಲ ಅಂತಾದರೆ ಇನ್ಯಾರು ಮನೆಯಿಂದ ಹೊರಬರುತ್ತಾರೆ.

ಭವ್ಯಾ ಫಿಸಿಕಲ್ ಟಾಸ್ಕ್‌ನಲ್ಲಿ ಅವರು ಸಖತ್ತಾಗಿ ಆಟ ಆಡ್ತಾರೆ. ಇನ್ನೂ ಕಲರ್ಸ್ ಕನ್ನಡದಲ್ಲೇ ಅವರು ಹೆಚ್ಚಾಗಿ ತೊಡಗಿಸಿಕೊಂಡಿರುವುದರಿಂದ ಭವ್ಯಾಗೆ ಟಾಪ್ 5ಗೆ ಹೋಗಲು ಚಾನ್ಸ್ ಸಿಕ್ಕೇ ಸಿಗುತ್ತದೆ ಎನ್ನಲಾಗುತ್ತಿದೆ. ಇನ್ನೂ ಉಳಿದವರಲ್ಲಿ ಧನ್‌ರಾಜ್ ಹಾಗೂ ಮೋಕ್ಷಿತಾ ಅವರಲ್ಲಿ ಒಬ್ಬರು ಮನೆಯಿಂದ ಹೊರ ಬರಲೇಬೇಕು.

ಮೋಕ್ಷಿತಾ ನಾಟ್ ಸೇಫ್

ಇವರಿಬ್ಬರಲ್ಲಿ ಮೋಕ್ಷಿತಾ ಅವರಿಗೆ ಹೊರಗಡೆ ತುಂಬಾ ಚೆನ್ನಾಗಿ ಸಪೋರ್ಟ್ ಇದೆ. ಆದರೆ ಕಳೆದ ಎರಡು ಮೂರು ದಿನದಿಂದ ಮೋಕ್ಷಿತಾ ಅವರು ತುಂಬಾ ಡಲ್ ಆಗಿ ಕಾಣಿಸುತ್ತಿದ್ದಾರೆ. ಹಾಗಂತ ಅವರು ಆಟ ಆಡ್ತಾಯಿಲ್ಲ ಅಂತಲ್ಲ. ಅವರು ಎಲ್ಲರೊಂದಿಗೆ ಬೆರೆಯುತ್ತಿಲ್ಲ. ಓಟಿಂಗ್ ಪ್ರಕಾರ ನೋಡಿದರೆ ಮೋಕ್ಷಿತಾ ಎಲಿಮಿನೇಟ್ ಆಗುವುದಿಲ್ಲ. ಓಟಿಂಗ್ ಜೊತೆಗೆ ಬೇರೆ ಎಲ್ಲಾ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಮೋಕ್ಷಿತಾ ಅವರು ಸೇಫ್ ಆಗುವುದು ಡೌಟ್ ಇದೆ. ಹೀಗಾಗಿ ಮೋಕ್ಷಿತಾ ಅಥವಾ ಧನ್‌ರಾಜ್ ಆಚಾರ್ಯ ಈ ವಾರ ಎಲಿಮಿನೇಟ್ ಆದರೂ ಆಗಬಹುದು ಎನ್ನಲಾಗುತ್ತಿದೆ.

ಈ ಐದು ಜನರಲ್ಲಿ ಬಿಗ್‌ಬಾಸ್‌ ಯಾರನ್ನು ಸೇವ್ ಮಾಡ್ತಾರೆ ಯಾರನ್ನು ಮನೆಯಿಂದ ಹೊರಗಡೆ ಕಳುಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮಾತ್ರ ಸಾಕಷ್ಟು ಕುತೂಹಲ ಮೂಡಿಸಿರುವುದು ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+