Bigg Boss Kannada: ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಪ್ರೇಮ ಕಥೆ: ಐಶ್ವರ್ಯ ರಂಜಿತ್ ನಡುವೆ ಕಣ್ ಕಣ್ ಸಲಿಗೆ
ಬಿಗ್‌ಬಾಸ್ ಆರಂಭವಾಗಿ ಎರಡೇ ಎರಡು ದಿನಗಳು ಕಳೆದಿವೆ. ಅದಾಗಲೇ ದೊಡ್ಮನೆಯಲ್ಲಿ ಪ್ರೇಮ ಗೀತೆ ಶುರುವಾಗಿದೆ. ಪ್ರತಿ ವರ್ಷವೂ ಬಿಗ್‌ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ಪ್ರೇಮ ಪಕ್ಷಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಅವುಗಳಲ್ಲಿ ಕೆಲವು ಗಂಭೀರವಾಗಿರುತ್ತವೆ. ಇನ್ನೂ ಕೆಲವು ಮನೆಯಿಂದ ಹೊರ ಬಂದ ಬಳಿಕ ಮುರಿದು ಬೀಳುತ್ತವೆ. ಆದರೆ ಈ ಬಾರಿ ವಿಶೇಷ ಅಂದರೆ ಬಿಗ್‌ಬಾಸ್ ಆರಂಭವಾಗಿ ಕೆಲವೇ ದಿನಗಳಲ್ಲಿ ಐಶ್ವರ್ಯ ಹಾಗೂ ರಂಜಿತ್ ನಡುವೆ ಕಣ್ ಕಣ್ ಸಲಿಗೆ ಶುರುವಾಗಿದೆ.
ಹೌದು.. ರಂಜಿತ್ ಐಶ್ವರ್ಯಗೆ ಕಾಳ ಹಾಕಲು ಶುರುಮಾಡಿದ್ದಾರೆ. ಐಶ್ವರ್ಯ ಕೇಳಿದ ಪ್ರಶ್ನೆಗಳಿಗೆ ಉಲ್ಟಾ ಉತ್ತರ ನೀಡುತ್ತಿರುವ ರಂಜಿತ್ ಗಾಳಕ್ಕೆ ಐಶ್ವರ್ಯ ಬೀಳುವ ಲಕ್ಷಣಗಳೂ ಕಾಣಿಸುತ್ತಿವೆ. ಸ್ವರ್ಗ ಬೇಕಾ? ನರಕಾ ಬೇಕಾ? ಅಂತಾ ಐಶ್ವರ್ಯ ಕೇಳದರೆ ನೀನೇ ಬೇಕು ಅಂತ ರಂಜಿತ್ ಪ್ರೇಮ ಪ್ರಸ್ತಾಪ ಮಾಡುತ್ತಿದ್ದಾರೆ.

ಐಶ್ವರ್ಯರನ್ನು ನೋಡಿ ರಂಜಿತ್ ಸಖತ್ ಫಿದಾ ಆಗಿರುವಂತೆ ಕಾಣಿಸುತ್ತಿದೆ. ಅವರ ಸೌಂದರ್ಯಕ್ಕೆ ರಂಜಿತ ಮಾರು ಹೋಗಿದ್ದಾರೆ. ಐಶ್ವರ್ಯ ನೋಡಿ ರಂಜಿತ್ ಆಡುವ ರೀತಿ ಕಂಡು ಮನೆ ಮಂದಿಯೆಲ್ಲಾ ಏನೋ ಏನೋ ಆಗಿದೆ ಅಂತ ಹೇಳಲು ಶುರು ಮಾಡಿದ್ದಾರೆ. ಅಣ್ಣನ್ಗೆ ಲವ್ ಶುರುವಾಗಿದೆ ಅಂತ ಹಾಡಲು ಆರಂಭಿಸಿದ್ದಾರೆ.
ಏನಂದ್ರೆ ಕಳೆದ ದಿನ ಐಶ್ವರ್ಯ ಬಿಳಿ ಸೀರೆ ತೊಟ್ಟಿದ್ದರು. ಈ ಸೀರೆಯಲ್ಲಿ ಐಶ್ವರ್ಯ ತುಂಬಾ ಚೆನ್ನಾಗಿ ಕಾಣ್ತಾಯಿದ್ರು. ಐಶ್ವರ್ಯ ನೋಟಕ್ಕೆ ರಂಜಿತ್ ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ತಿಂಡಿ ಬೇಕಾ ಅಂತ ಐಶ್ವರ್ಯ ಕೇಳಿದರೆ ಏನೂ ಬೇಡ ನೀನೇ ಬೇಕು ಅಂತ ರಂಜಿತ್ ಹೇಳುತ್ತಿದ್ದಾರೆ. ಸ್ವರ್ಗ ಬೇಕಾ? ನರಕ ಬೇಕಾ? ಅಂತ ಕೇಳಿದಾಗಲೂ ರಂಜಿತ್ ಐಶ್ವರ್ಯಗೆ ನೀನು ಬೇಕು ಅಂತ ಹೇಳುತ್ತಿದ್ದಾರೆ. ಇದರಿಂದಾಗಿ ಬಿಗ್‌ಬಾಸ್ ಮನೆಯಲ್ಲಿ ಇತರ ಸ್ಪರ್ಧಿಗಳು ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಬಿಗ್‌ಬಾಸ್ ಮನೆಯಲ್ಲಿ ಹುಟ್ಟಿಕೊಳ್ಳುವ ಪ್ರೇಮ ಶಾಶ್ವತವಾಗಿ ಉಳಿಯುತ್ತದೆ ಅಂತ ಹೇಳಲು ಆಗುವುದಿಲ್ಲ. ಬಿಗ್‌ಬಾಸ್ ಮನೆಯಲ್ಲಿ ಹುಟ್ಟಿಕೊಂಡ ಪ್ರೀತಿ ಮನೆಯಿಂದ ಹೊರ ಬಂದ ಬಳಿಕ ಇರದೇ ಇರಬಹುದು. ಈ ಹಿಂದೆ ಚಂದನ್ ಹಾಗೂ ನಿವೇದಿತ ನಡುವೆ ಇದೇ ಬಿಗ್‌ಬಾಸ್ ಮನೆಯಲ್ಲಿ ಪ್ರೀತಿ ಶುರುವಾಗಿತ್ತು. ಮನೆಯಿಂದ ಹೊರ ಬಂದ ಬಳಿಕ ಇಬ್ಬರೂ ಒಬ್ಬರಿಗೊಬ್ಬರು ಒಪ್ಪಿ ಮದುವೆ ಆದರು. ಆದರೆ ಇತ್ತೀಚೆಗೆ ಇಬ್ಬರೂ ವಿಚ್ಚೇದನ ಪಡೆದುಕೊಂಡಿದ್ದಾರೆ.
ಅರವಿಂದ್ ಹಾಗೂ ದಿವ್ಯಾ ಉರುಡುಗ ನಡುವೆಯೂ ಬಿಗ್‌ಬಾಸ್ ಮನೆಯಲ್ಲಿ ಪ್ರೀತಿ ಹುಟ್ಟಿತ್ತು. ಮನೆಯಿಂದ ಹೊರ ಬಂದ ಬಳಿಕವೂ ಈ ಜೋಡಿ ಪರಸ್ಪರ ಅಷ್ಟೇ ಪ್ರೀತಿಸುತ್ತಿದೆ. ಇವರಿಬ್ಬರಂತೆ ಐಶ್ವರ್ಯ ಹಾಗೂ ರಂಜನ್ ಆಗ್ತಾರಾ ಅಥವಾ ಚಂದನ್ ಹಾಗೂ ನಿವೇದಿತಾರಂತೆ ಆಗ್ತಾರಾ ಕಾದು ನೋಡಬೇಕಿದೆ.
ಐಶ್ವರ್ಯ ಸಿಂಧೋಗಿ ಯಾರು?
ಇನ್ನೂ ಐಶ್ವರ್ಯ ಬಗ್ಗೆ ಹೇಳುವುದಾದರೆ, ಐಶ್ವರ್ಯ ಸಿಂಧೋಗಿ ಬೆಳ್ಳಿ ತೆರೆ ಮತ್ತು ಕಿರುತೆರೆ ಮೂಲಕ ಗುರುತಿಸಿಕೊಂಡ ನಟಿ. ನಟಿಯಾಗಬೇಕೆಂಬ ಕನಸು ಕಾಣದ ಐಶ್ವರ್ಯ ಅವರನ್ನು ಅದೃಷ್ಟ ಅದು ಹೇಗೋ ಚಿತ್ರರಂಗಕ್ಕೆ ಕರೆದುಕೊಂಡು ಬಂತು. ಐಶ್ವರ್ಯ ಅವರಿಗೆ ತಂದೆ-ತಾಯಿ ಇಬ್ಬರೂ ಇಲ್ಲ. ಬಿಗ್‌ಬಾಸ್ ಮನೆಗೆ ಬಂದ ಬಳಿಕ ಐಶ್ವರ್ಯ ತನ್ನ ವೈಯಕ್ತಿ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ತಂದೆ ಹೃದಯಾಘಾತದಿಂದ 2018ರಲ್ಲಿ ತೀರಿಕೊಂಡರೆ, ತಾಯಿ ಅನಾರೋಗ್ಯದಿಂದ 2020ರಲ್ಲಿ ನಿಧನರಾದರು ಎಂದು ಐಶ್ವರ್ಯ ಭಾವಿಕರಾಗಿ ಕೇಳಿಕೊಂಡಿದ್ದಾರೆ. 13ನೇ ಸ್ಪರ್ಧಿಯಾಗಿ ನಟಿ ಐಶ್ವರ್ಯ ಸಿಂಧೋಗಿ ಬಿಗ್‌ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ.
ರಂಜಿತ್ ಯಾರು?
ಇನ್ನೂ ರಂಜಿತ್ ಬಗ್ಗೆ ಹೇಳುವುದಾದರೆ, ರಂಜಿತ್ 'ಶನಿ' ಧಾರಾವಾಹಿಯ ನಟ. ಇದರಲ್ಲಿ ಸೂರ್ಯ ದೇವನ ಪಾತ್ರದಲ್ಲಿ ರಂಜಿತ್ ನಟಿಸಿದ್ದಾರೆ. ಈ ಧಾರವಾಹಿ ಪ್ರಸಾರ ಆಗುವಾಗ ಸಾಕಷ್ಟು ಜನ ಮನ್ನಣೆಯನ್ನು ಪಡೆದಿತ್ತು. ಅಲ್ಲದೆ, ಸೂರ್ಯ ದೇವನಾಗಿ ನಟಿದುತ್ತಿದ್ದ ರಂಜಿತ್ ಕೂಡ ಮಿಂಚಿದ್ದರು. ಆ ಧಾರವಾಹಿ ಬಳಿಕ ರಂಜಿತ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ನಿಖಿಲ್ ಕುಮಾರ್ ಸ್ವಾಮಿ ನಟಿಸಿದ್ದ 'ಸೀತಾ ರಾಮ ಕಲ್ಯಾಣ' ಸಿನಿಮಾದಲ್ಲಿ ರಂಜಿತ್ ನಟಿಸಿದ್ದಾರೆ. ಹಾಗೆ 'ಭರಾಟೆ', 'ಶಿವಾರ್ಜುನಾ' 'ಜೇಮ್ಸ್' ಅಂತಹ ಸಿನಿಮಾಗಳಲ್ಲಿ ರಂಜಿತ್ ನಟಿಸಿದ್ದಾರೆ. 17ನೇ ಸ್ಪರ್ಧಿಯಾಗಿ ರಂಜಿತ್ ಕುಮಾರ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.












Click it and Unblock the Notifications