Bigg Boss Kannada: ಹೊರ ಹೋದ್ಮೆಲೆ ಬಿಗ್‌ಬಾಸ್ ಕಾರ್ಯಕ್ರಮವನ್ನೇ ನಿಲ್ಲಿಸುತ್ತೇನೆ- ವಕೀಲ ಜಗದೀಶ್ ಸವಾಲ್
ಹೊರ ಹೋದ್ಮೆಲೆ ಬಿಗ್‌ಬಾಸ್ ಬಣ್ಣ ಬಯಲು ಮಾಡ್ತೇನೆ ಎಂದು ಬಿಗ್‌ಬಾಸ್‌ಗೆ ವಕೀಲ ಜಗದೀಶ್ ಬೆದರಿಕೆ ಹಾಕಿದ್ದಾರೆ. ಕ್ಯಾಮರಾ ಮುಂದೆ ನಿಂತುಕೊಂಡು ಬಿಗ್‌ಬಾಸ್‌ಗೆ ಬೆದರಿಕೆ ಹಾಕಿದ್ದಾರೆ ವಕೀಲ ಜಗದೀಶ್. ನಾನು ಮನೆಯಿಂದ ಹೊರ ಹೋದ್ಮೇಲೆ ಬಿಗ್‌ಬಾಸ್ ಕಾರ್ಯಕ್ರಮವನ್ನೇ ನಿಲ್ಲಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಹೌದು.. ಬಿಗ್‌ಬಾಸ್ ಆರಂಭವಾಗಿ ಇಂದಿಗೆ ಮೂರನೇ ದಿನ. ಅದಾಗಲೇ ಬಿಗ್‌ಬಾಸ್ ಮನೆಯಲ್ಲಿ ಆಟ ಶುರುವಾಗಿದೆ. ಆಟದಲ್ಲಿ ಕೋಪಗೊಂಡ ಜಗದೀಶ್ ತಮ್ಮ ಕೋಪವನ್ನು ಮನೆ ಮಂದಿಯ ಮೇಲೆಲ್ಲ ತೋರಿಸಿದ್ದಾರೆ. ಮಾನಸಾ ಅವರಿಗೆ 'ಯಾವ ಸೀಮೆ ಹೆಂಗಸು, ಹೋಗಲೇ..' ಎಂದ ವಕೀಲ ಜಗದೀಶ್ ಮಾತಿಗೆ ಬ್ರೇಕ್ ಹಾಕಲು ಮುಂದಾದ ಎಲ್ಲಾರಿಗೂ ಏಕವಚನದಲ್ಲಿ ಮಾತನಾಡಿದ್ದಾರೆ.

ಮಾತು ಮಾತಿಗೆ ಬೆಳೆದು ವಕೀಲ ಜಗದೀಶ್ ಎಲ್ಲರಿಗೂ ಗೌರವ ಕೊಡದೆ ಮಾತನಾಡಿದ್ದಾರೆ. ಬಳಿಕ ಬಿಗ್‌ಬಾಸ್‌ಗೆ ಸವಾಲ್ ಹಾಕಿದ್ದಾರೆ. ಅಷ್ಟಕ್ಕೂ ಜಗದೀಶ್ ಬಿಗ್‌ಬಾಸ್ ಕಾರ್ಯಕ್ರಮವನ್ನು ನಿಲ್ಲಿಸುತ್ತೇನೆ ಅಂತ ಹೇಳಿದ್ದು ಯಾಕೆ ಅನ್ನೋದು ಮಾತ್ರ ತಿಳಿದು ಬಂದಿಲ್ಲ. ಇದನ್ನು ನಾಳಿನ ಸಂಚಿಕೆಗೆ ಮುಂದೂಡಲಾಗಿದೆ.
ಎರಡನೇ ದಿನವೂ ಜಗದೀಶ್ ಕಿರಿಕ್
ಬಿಗ್‌ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಅವರು ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದಾರೆ. ಎರಡನೇ ದಿನವೂ ಜಗದೀಶ್ ಬಿಗ್‌ಬಾಸ್ ಮನೆಯ ನಿಯಮ ಉಲ್ಲಂಘನೆ ಮಾಡಿದರು. ಜಗದೀಶ್ ಬಿಗ್‌ಬಾಸ್ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಇತರೆ ಸ್ಪರ್ಧಿಗಳು ಪದೇ ಪದೇ ಆರೋಪಗಳನ್ನು ಮಾಡುತ್ತಿದ್ದಾರೆ. ಟಾಸ್ಕ್ ಪ್ರಕಾರ ನರಕದ ಮನೆಯಲ್ಲಿರುವ ಚೈತ್ರಾ ಕುಂದಾಪುರ ಸ್ವರ್ಗದ ಮನೆಯನ್ನು ಸ್ವಚ್ಚಗೊಳಿಸಬೇಕು. ಆದರೆ ಚೈತ್ರಾ ಟಾಯ್ಲೆಟ್ ಅನ್ನು ಸರಿಯಾಗಿ ಕ್ಲೀನ್ ಮಾಡಿಲ್ಲ ಎಂದು ಲಾಯರ್ ಜಗದೀಶ್ ಕಿಡಿಕಾರಿದರು. ಅಲ್ಲದೇ ತಾವೇ ಟಾಯ್ಲೆಟ್ ಹೇಗೆ ಕ್ಲೀನ್ ಮಾಡುವುದು ಎಂದು ತೋರಿಸಿಕೊಡಲು ತಾವೇ ಟಾಯ್ಲೆಟ್ ಸ್ವಚ್ಚಗೊಳಿಸುವ ಕೆಲಸ ತೆಗೆದುಕೊಂಡಿದ್ದಾರೆ.
ಆದರೆ ಬಿಗ್‌ಬಾಸ್ ನಿಯಮದ ಪ್ರಕಾರ ನರಕದ ಸ್ಪರ್ಧಿಗಳು ಮಾತ್ರ ನರಕದ ಮನೆಯನ್ನು ಸ್ವಚ್ಚಗೊಳಿಸಬೇಕು. ಅಲ್ಲದೆ ತಮ್ಮ ಪಾತ್ರೆಯನ್ನು ತಾವೇ ಸ್ವಚ್ಚಗೊಳಿಸುವ ಮೂಲಕ ಲಾಯರ್ ಜಗದೀಶ್ ಮನೆಯ ನಿಯಮವನ್ನು ಉಲ್ಲಂಘಿಸಿದ್ದಾರೆ. ಚೈತ್ರಾ ಅವರ ಕೆಲಸ ಇವರು ಮಾಡಿದ್ದಕ್ಕೆ ಮನೆಯ ಇತರ ಸ್ಪರ್ಧಿಗಳ ಕೋಪಕ್ಕೂ ಜಗದೀಶ್ ಗುರಿಯಾದರು. ನಾನು ನನ್ನ ಆಟ ಶುರು ಮಾಡಿಲ್ಲ. ಮಾಡಿದರೆ ನಿಮ್ಮೆಲ್ಲರಿಗೂ ಚೆಕ್‌ಮೇಟ್ ಇಡುತ್ತೇನೆ. ನಿಮಗೆ ಬೇಕಾದುದನ್ನು ಮಾಡಿ ಆಟ ಈಗ ಶುರುವಾಗಿದೆ.
ನಾನು ಸಿಂಹ ಸಿಂಹ.. ಸಿಂಹ ಯಾವಾಗಲೂ ಒಂದೇ ಇರುತ್ತೆ. ತೋಳಗಳು ಗುಂಪು ಗುಂಪಾಗಿ ಇರುತ್ತವೆ. ನಾನು ಮನಸ್ಸು ಮಾಡಿದರೆ ಗೇಮ್ ಚೇಂಜ್ ಮಾಡಬಹುದು. ಬಿಗ್‌ಬಾಸ್ ಅನ್ನೇ ನಿಲ್ಲಿಸಬಹುದು. ನಾನು ಯಾರು ಅಂತ ತೋರಿಸುತ್ತೇನೆ. ಮನೆಯಿಂದ ಹೊರ ಬಂದ ಬಳಿಕ ಬಿಗ್‌ಬಾಸ್ ಕಾರ್ಯಕ್ರಮವನ್ನೇ ನಿಲ್ಲಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications