Bhavya Gowda: ಬಿಗ್‌ ಬಾಸ್‌ ಮನೆಯಲ್ಲಿ ಭವ್ಯಾ ಗೌಡಗೆ ಒಲಿದ ಅದೃಷ್ಟ

ಬಿಗ್​ ಬಾಸ್​ ಕನ್ನಡ ಸೀಸನ್​ 11 ಅಂತಿಮ ದಿನಗಳತ್ತ ಸಾಗುತ್ತಿದೆ. ಈಗಾಗಲೇ ಗ್ರ್ಯಾಂಡ್‌ ಫಿನಾಲೆ ದಿನಾಂಕ ಕೂಡ ನಿಗದಿಯಾಗಿದ್ದು, ಜನವರಿ 26 ಭಾನುವಾರ ಗಣರಾಜೋತ್ಸವದ ದಿನ ನಡೆಯಲಿದೆ. ಈಗಾಗಲೇ ಬಿಗ್​ ಬಾಸ್ ಮನೆಯೊಳಗೆ ಈ ಸೀಜನ್‌ನಲ್ಲಿ ಕಾಲಿಟ್ಟ 20 ಜನರ ಪೈಕಿ ಇದೀಗ ಕೇವಲ ಎಂಟು ಜನ ಉಳಿದುಕೊಂಡಿದ್ದು, ವಿನ್ನರ್‌ ಯಾರಾಗಬಹುದು ಎನ್ನುವ ಲೆಕ್ಕಾಚಾರ ಜೋರಾಗಿದೆ.

ಬಿಗ್​ ಬಾಸ್​ ಕನ್ನಡ ರೋಚಕ ಘಟ್ಟವನ್ನು ತಲುಪಿದ್ದು, ಕಳೆ ವಾರ ಟಿಕೆಟ್‌ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ಬಿಗ್‌ ಬಾಸ್‌ ಮನೆಯಲ್ಲಿ ಜೋರಾಗಿತ್ತು. ಕೊನೆಗೂ ಹನುಮಂತ ಟಿಕೆಟ್‌ ಟು ಫಿನಾಲೆ ಗೆದ್ದು ಫಿನಾಲೆಗೆ ಪ್ರವೇಶ ಪಡೆದಿದ್ದಲ್ಲದೇ ಬಿಗ್​ ಬಾಸ್​ ಕನ್ನಡ ಸೀಸನ್​ 11ರ ಅಲ್ಟಿಮೇಟ್ ಕ್ಯಾಪ್ಟನ್‌ ಆದರು.

Bigg Boss Kannada Season 11 Bhavya Gowda Got Lucky In Bigg Boss House

ಈ ವಾರ ಕೂಡ ಗ್ರ್ಯಾಂಡ್​ ಫಿನಾಲೆಗೆ ಎಂಟ್ರಿ ಕೊಡಲು ಸ್ಪರ್ಧಿಗಳು ಹೋರಾಡುತ್ತಿದ್ದು, ಬಿಗ್‌ ಬಾಸ್ ಮನೆಯೊಳಗೆ ಟಾಸ್ಕ್‌ ಕಾವು ಹೆಚ್ಚಾಗಿದೆ. ಇದರ ಜೊತೆ ನಾಮಿನೇಷನ್‌ ಕಾವು ಕೂಡ ಹೆಚ್ಚಾಗಿದೆ. ಈ ವಾರ ಕ್ಯಾಪ್ಟನ್‌ ಹನುಮಂತನನ್ನು ಬಿಟ್ಟು ಉಳಿದ ಎಲ್ಲಾ ಸ್ಪರ್ಧಿಗಳು ಅಂದರೆ ಗೌತಮಿ, ಉಗ್ರಂ ಮಂಜು, ತ್ರಿವಿಕ್ರಮ್‌, ಮೋಕ್ಷಿತಾ, ಭವ್ಯ ಗೌಡ, ಧನರಾಜ್‌ ಹಾಗೂ ರಜತ್‌ ನಾಮಿನೇಟ್‌ ಆಗಿದ್ದಾರೆ. ಹೀಗಾಗಿ ಈ ಬಾರಿ ಉಳಿದುಕೊಳ್ಳಲು ಸ್ಪರ್ಧಿಗಳು ಅಖಾಡಕ್ಕಿಳಿದು ಹೋರಾಡಲೇ ಬೇಕಾಗಿದೆ.

ಇನ್ನು ನಾಮಿನೇಷನ್​ನಿಂದ ಪಾರಾಗಲು ಬಿಗ್​ ಬಾಸ್, ಸ್ಪರ್ಧಿಗಳಿಗೆ ಅವಕಾಶ ನೀಡಿದ್ದು, ಕಾಲ ಕಾಲಕ್ಕೆ ಟಾಸ್ಕ್ ನೀಡಿ ಅತಿ ಹೆಚ್ಚು ಅಂಕವನ್ನು ಗಳಿಸಿದವರು ನಾಮಿನೇಷನ್​ನಿಂದ ಪಾರಾಗಲಿದ್ದಾರೆ ಎಂದು ಈಗಾಗಲೇ ತಿಳಿಸಿದ್ದಾರೆ. ಇದಕ್ಕೂ ಮೊದಲು ಬಿಗ್​ಬಾಸ್​ ಅಲ್ಟಿಮೇಟ್ ಕ್ಯಾಪ್ಟನ್ ಹನುಮಂತಗೆ ವಿಶೇಷ ಅವಕಾಶ ಸಿಕ್ಕಿದ್ದು, ಹನುಮಂತ ಆಯ್ಕೆ ಮಾಡಿದ ಸ್ಪರ್ಧಿ ಇಡೀ ವಾರ ತಮ್ಮ ಪ್ರತಿ ಸ್ಪರ್ಧಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಎಲ್ಲಾ ಸ್ಪರ್ಧಿಗಳ ಮನವೊಲಿಕೆಯ ನಂತರ ಹನುಮಂತ ಈ ಅಧಿಕಾರವನ್ನು ಭವ್ಯಾ ಗೌಡಗೆ ಕೊಟ್ಟಿದ್ದಾರೆ. ಇದರಿಂದ ಭವ್ಯಾ ಫುಲ್‌ ಖುಷಿಯಾಗಿದ್ದಾರೆ.

ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿಕೊಂಡ ಭವ್ಯ ಗೌಡ

ಇನ್ನು ಸಿಕ್ಕ ವಿಶೇಷ ಅವಕಾಶವನ್ನೇ ಬಳಸಿಕೊಂಡ ಭವ್ಯ ಗೌಡ ನಿನ್ನೆ ಸಂಚಿಕೆಯ ಎಲ್ಲಾ ಆಟಗಳನ್ನು ಉತ್ತಮವಾಗಿಯೇ ಆಡಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಎರಡು ಆಟಗಳಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ನೂರು ಅಂಕಗಳನ್ನು ಗಳಿಸಿರುವ ಭವ್ಯ, ಒಂದು ಆಟದಲ್ಲಿ ಗೆದ್ದು ನೂರು ಅಂಕ ಪಡೆದುಕೊಂಡಿದ್ದಾರೆ. ಫಿನಾಲೆಗೆ ಹೋಗಲೇಬೇಕು ಎನ್ನುವ ಜಿದ್ದಿಗೆ ಬಿದ್ದಿರುವ ಭವ್ಯ ಆಟದ ವೇಳೆ ಅನೇಕ ನೋವುಗಳು ಆದರೂ ಸಹ ಎದ್ದು-ಬಿದ್ದು ಆಟವಾಡಿ ಗೆಲ್ಲುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+