Bigg Boss: ಗೋಲ್ಡ್ ಸುರೇಶ್‌ಗೆ ಹೊಡೆದ ರಜತ್: ಸುರೇಶ್‌ ಸ್ಥಿತಿ ಗಂಭೀರ?

ಬಿಗ್‌ಬಾಸ್‌ ಕನ್ನಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ವಿಶೇಷವಾಗಿ ವೈಲ್ಡ್‌ ಕಾರ್ಡ್‌ ಎಂಟ್ರಿಯಾದ ಬಳಿಕವಂತೂ ಬಿಗ್‌ಬಾಸ್‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸ್ಪರ್ಧಿಗಳು ಟಾಸ್ಕ್ ಆಡುವಾಗಾ ಅಪ್ಪ-ಅಮ್ಮ ಅಂತ ಬೈದಾಡಿಕೊಂಡಿದ್ದಾರೆ. ಮತ್ತೊಂದು ಕಡೆ 'ಸೆ..' ಎನ್ನುವ ಪದವನ್ನು ಬಳಕೆ ಮಾಡಿದ್ದಾರೆ. ಹಾಗೇ ಕೈ ಕೈ ಮಿಲಾಯಿಸುವಂತಹ ಕೆಲಸವನ್ನೂ ಮಾಡಿದ್ದಾರೆ.

ಇದರಿಂದಾಗಿ ಗೋಲ್ಡ್‌ ಸುರೇಶ್ ಅವರಿಗೆ ಗಂಭೀರ ಗಾಯ ಕೂಡ ಆಗಿದ್ದು ಅವರು ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೋಗ್ತೀನಿ ಅಂತನೂ ಹೇಳ್ತಾಯಿದ್ದಾರೆ. ಹಾಗಿದ್ದರೆ ಇಂದಿನ ಟಾಸ್ಕ್‌ನಲ್ಲಿ ಆಗಿದ್ದೇನು? ಯಾರು ಗೆದ್ದರು? ಯಾರು ಸೋತರು? ಯಾರದು ಸರಿ? ಯಾರದು ತಪ್ಪು? ಇದೆಲ್ಲದರ ಬಗ್ಗೆ ಈಗ ತಿಳಿಯೋಣ.

bigg boss kannada rajat hits gold suresh suresh s condition serious

ಈ ವಾರ ಟಾಸ್ಕ್ ಆಡಲು ಬಿಗ್‌ಬಾಸ್‌ ಎರಡು ತಂಡಗಳನ್ನು ಮಾಡಿದ್ದಾರೆ. ಎರಡು ತಂಡಗಳಿಗೆ ತಲಾ ಎರಡು ಕ್ಯಾಪ್ಟನ್‌ಗಳನ್ನು ಮಾಡಲಾಗಿದೆ. ಒಂದು ಕಡೆ ಭವ್ಯ ಆದರೆ ಮತ್ತೊಂದು ಕಡೆ ಶೋಬಾ ಶೆಟ್ಟಿ ತಂಡದ ಕ್ಯಾಪ್ಟನ್ ಆಗಿದ್ದಾರೆ. ಭವ್ಯ ಅವರ ತಂಡದಲ್ಲಿ ರಜತ್, ಮಂಜು ಅವರು ಸೆಲೆಕ್ಟ ಆಗಿದ್ದಾರೆ. ಹಾಗೇ ಉಳಿದ ಕೆಲ ಸ್ಪರ್ಧಿಗಳು ಭವ್ಯ ಅವರ ತಂಡದಲ್ಲಿ ಇದ್ದಾರೆ.

ಇನ್ನೂ ಶೋಭಾ ಶೆಟ್ಟಿ ತಂಡದಲ್ಲಿ ಸುರೇಶ್ ಹಾಗೂ ತ್ರಿವಿಕ್ರಮ್ ಅವರು ಸೇರಿದಂತೆ ಇನ್ನೂ ಹಲವರು ಇದ್ದಾರೆ. ಸದ್ಯ ಈ ನಾಲ್ಕು ಜನ ತುಂಬಾ ಹೈಲೆಟ್ ಆಗಿದ್ದಾರೆ. ಅದ್ರಲ್ಲೂ ಇವತ್ತಿನ ಟಾಸ್ಕ್‌ನಲ್ಲಿ ಕೊಳವೆ ಒಳಗಡೆ ಬರುವ ಚಂಡನ್ನು ಹಿಡಿದು ಹೊರಗಡೆ ಹಾಕುವ ಟಾಸ್ಕ್‌ನಲ್ಲಿ ದೊಡ್ಡ ಜಗಳವೇ ನಡೆದುಹೋಗಿದೆ.

ಈ ಟಾಸ್ಕ್‌ನಲ್ಲಿ ಯಾರು ಅತೀ ಹೆಚ್ಚಾಗಿ ಚಂಡನ್ನು ಹಿಡಿದು ಹೊರಗಡೆ ಹಾಕುತ್ತಾರೋ ಅವರು ಈ ಟಾಸ್ಕ್‌ನಲ್ಲಿ ಗೆಲುವು ಸಾಧಿಸುತ್ತಾರೆ. ಒಂದು ಕಡೆ ಘಟಾನುಘಟಿಯಾಗಿರುವ ರಜತ್ ಅವರು. ಮತ್ತೊಂದು ಕಡೆ ಬುದ್ದಿಶಾಲಿ ಹಾಗೂ ಘಟಾನುಘಟಿಯಾಗಿರುವ ತ್ರಿವಿಕ್ರಮ್ ಅವರು. ಇವರಿಬ್ಬರ ನಡುವೆ ಟಾಸ್ಕ್‌ನಲ್ಲಿ ಪೈಪೋಟಿ ನಡೆಯುತ್ತದೆ. ಭವ್ಯ ಅವರ ತಂಡದಲ್ಲಿ ರಜತ್ ಹಾಗೂ ಮಂಜು ಇರುವುದರಿಂದ ಟಾಸ್ಕ್‌ ಅಲ್ಲಿ ದಾಳಿ ಮಾಡಲು ಈಜಿ ಆಗುತ್ತೆ. ಸ್ವಲ್ಪ ಫಿಸಿಕಲಿ ಸ್ಟ್ರಾಂಗ್ ಆಗಿರುವ ರಜತ್ ಅವರೂ ಕೂಡ ಭವ್ಯ ಅವರ ತಂಡದಲ್ಲಿ ಇರುವುದರಿಂದ ಭವ್ಯ ಅವರ ತಂಡ ಕೊಂಡ ಸ್ಟ್ರಾಂಗ್ ಆಗೇ ಇತ್ತು.

ಸುರೇಶ್‌ಗೆ 'ಸ..' ಎಂದ ರಜತ್

ಇನ್ನೂ ರಜತ್ ಯಾರಾದ್ರೂ ಏನಾದ್ರು ಹೇಳಿದರೆ ಥಟ್ ಅಂತ ಮಾಡಿ ಬಿಡ್ತಾರೆ. ಒಬ್ಬರನ್ನು ಹೋಲ್ಡ್‌ ಮಾಡಿ ಅವರನ್ನು ಬರಲಿಕ್ಕೆ ಬಿಡಬೇಡಿ ಅಂದರೆ ಅವರನ್ನು ರಜತ್ ಅವರು ಹೋಲ್ಡ್‌ ಮಾಡಿ ಬಿಡ್ತಾರೆ. ಹಾಗೆ ಮೇಲಿಂದ ಬೀಳುವ ಬಾಲ್‌ಗಳನ್ನು ತೆಗೆದುಕೊಂಡು ಹೋಗಿ ಹೊರಗಡೆ ಇಡಬೇಕಾದರೆ, ಎಲ್ಲವೂ ಒಂದು ಚೌಕಟ್ಟಿನಲ್ಲಿ ಆಗುತ್ತದೆ. ಆಗ ರಜತ್ ಅವರು ಸುರೇಶ್ ಅವರಿಗೆ 'ಸಡೇ..' ಅನ್ನೋ ಪದವನ್ನು ಬಳಕೆ ಮಾಡ್ತಾರೆ.

ಹಾಗೇ ಸುರೇಶ್ ಅವರ ತಂದೆಗೂ ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಸುರೇಶ್ ಅವರು ಆರೋಪಿಸಿ ಬಿಗ್‌ಬಾಸ್‌ ಮನೆಯಿಂದ ಹೊರಗಡೆ ಹೋಗಲು ನಿರ್ಧಾರ ಮಾಡ್ತಾರೆ. ಹೀಗಾಗಿ ಮೇನ್ ಡೋರ್‌ ಅನ್ನು ಓಪನ್ ಮಾಡಿ ಬಿಗ್‌ಬಾಸ್‌ ನಾನು ಹೊರಗಡೆ ಬರಬೇಕು ಅಂತ ಸುರೇಶ್ ಮನವಿ ಮಾಡಿಕೊಳ್ಳುತ್ತಾರೆ. ರಜತ್ ಅವರು ಟಾಸ್ಕ್ ಆಡುವಾಗ ಟಾಸ್ಕ್ ಆಡಬೇಕೇ ಹೊರತು ಬೇರೆ ಮಾತನಾಡಬಾರದಿತ್ತು. ಆದರೆ ರಜತ್ ಹಾಗೇ ಮಾಡಿಲ್ಲ ಎಂದು ಸುರೇಶ್ ಆರೋಪಿಸಿದ್ದಾರೆ.

ಸುರೇಶ್‌ಗೆ ಗಾಯ!

ಇನ್ನೊಂದು ಕಡೆ ಈ ಟಾಸ್ಕ್‌ನಲ್ಲಿ ಅತಿ ಹೆಚ್ಚು ಚಂಡುಗಳನ್ನು ಇಟ್ಟು ಭವ್ಯ ಅವರ ಟೀಮ್ ಅಂದರೆ ಮಂಜು ಹಾಗೂ ರಜತ್ ಅವರ ತಂಡ ಗೆಲುವು ಸಾಧಿಸಿತು. ಶೋಭಾ ಶೆಟ್ಟಿ ಅವರ ಟೀಮ್ ಸೋತಿದೆ. ಈ ಟಾಸ್ಕ್‌ನಲ್ಲಿ ರಜತ್ ಅವರು ಸುರೇಶ್ ಅವರನ್ನು ತಳ್ಳಿದ್ದು, ಟಾಸ್ಕ್‌ ಭರದಲ್ಲಿ ಸುರೇಶ್ ಅವರಿಗೆ ಗಾಯಗಳು ಆಗಿವೆ ಎನ್ನಲಾಗುತ್ತಿದೆ. ಈಗಾಗಲೇ ಸುರೇಶ್ ಅವರಿಗೆ ಕಾಲಿಗೆ ಏಟಾಗಿರುವುದರಿಂದ ಈ ಟಾಸ್ಕ್‌ ನಲ್ಲಿ ಆಡುತ್ತಿರುವಾಗಲೂ ಸುರೇಶ್ ಅವರಿಗೆ ಸಿಕ್ಕಾಪಟ್ಟೆ ಏಟು ಆಗಿದೆ.

ಈ ಫಿಸಿಕಲ್ ಟಾಸ್ಕ್‌ ಅಲ್ಲಿ ರಜತ್ ಸ್ವಲ್ಪ ಅಗ್ರೆಸ್ಸಿವ್ ಆಗಿ ಆಡಿದ್ದು ಸುರೇಶ್ ಅವರಿಗೆ ತುಂಬಾ ಗಾಯಗಳಾಗಿವೆ. ಈ ಕಾರಣಕ್ಕೆ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇನ್ನು ತೀವ್ರ ಒಳಪೆಟ್ಟು ಆಗಿದ್ದರಿಂದ ಸುರೇಶ್ ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೋಗ್ತೀನಿ ಅಂತ ಹೇಳ್ತಾಯಿದ್ದಾರೆ. ಹೀಗಾಗಿ ಬಿಗ್‌ಬಾಸ್‌ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.

ಸುರೇಶ್‌ ಕಾಲಿಗೆ ಪೆಟ್ಟು- ಆಪ್ತರಿಗೆ ಬೇಸರ

ಗೋಲ್ಡ್‌ ಸುರೇಶ್‌ಗೆ ಚಿನ್ನಾ ಅಂದರೆ ಅಚ್ಚುಮೆಚ್ಚು. ಹೀಗಾಗಿ ಸದಾ ಮೈಮೇಲೆ ಚಿನ್ನದ ಸರಗಳು, ಕೈಯಲ್ಲಿ ಚಿನ್ನದ ಬ್ರೇಸ್‌ಲೈಟ್, ಉಂಗುರಗಳನ್ನು ಹಾಕಿಕೊಂಡಿರುತ್ತಾರೆ. ಇತ್ತೀಚೆಗೆ ಟಾಸ್ಕ್‌ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಸುರೇಶ್ ಬಗ್ಗೆ ಕುಟುಂಬಸ್ಥರಲ್ಲಿ ಕಳವಳ ವ್ಯಕ್ತವಾಗಿದೆ. ಅಲ್ಲದೆ ರಜತ್‌ ಅವರ ಮಾತುಗಳು ಸುರೇಶ್ ಕುಟುಂಬಸ್ಥರಿಗೆ ಬೇಸರ ತಂದಿವೆ. ಹೀಗಾಗಿ ಗೋಲ್ಡ್‌ ಸುರೇಶ್ ಚೆನ್ನಾಗಿ ಆಟವಾಡುತ್ತಿದ್ದರೂ ಇತರರು ಕೆಟ್ಟ ಮಾತುಗಳಿಂದ ಸುರೇಶ್ ಅವರನ್ನು ಕುಗ್ಗಿಸಲು ನೋಡುತ್ತಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಸುರೇಶ್ ಚೆನ್ನಾಗಿ ಆಟವಾಡುತ್ತಿರುವುದು ತುಂಬಾ ಜನರಿಗೆ ಸಹಿಸಲು ಆಗುತ್ತಿಲ್ಲ. ಇದು ಸುರೇಶ್ ಅವರಿಗೆ ಮತ್ತಷ್ಟು ಗೆಲ್ಲುವ ಛಲ ತುಂಬಲಿದೆ. ಅವರು ಗೆದ್ದು ಬರ್ತಾರೆ ಅನ್ನೋ ವಿಶ್ವಾಸ ನಮಗಿದೆ ಎಂದು ಆಪ್ತರು ಹೇಳಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಅಸಲಿ ಯಾವುದು ನಕಲಿ ಯಾವುದು ಎನ್ನುವುದು ಗೊತ್ತಾಗಲಿದೆ ಎಂದು ಕುಟುಂಬಸ್ಥರು ಸುರೇಶ್ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತರಕಾರಿ ಕಟ್ ಮಾಡಲು 2 ಗಂಟೆ ಸಮಯ ಕೇಳಿದ ರಜತ್!

ರಜತ್ ಅವಾಚ್ಯಾ ಪದ ಬಳಕೆಗೆ ಬೇಸರಗೊಂಡ ಬಿಗ್‌ಬಾಸ್‌ ಮನೆಯ ಇತರ ಸ್ಪರ್ಧಿಗಳು ರಜತ್‌ ಅವರಿಗೆ ಕಳಪೆ ನೀಡಿ ಬಿಗ್‌ಬಾಸ್‌ ಮನೆಯ ಜೈಲಿಗೆ ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ರಜತ್ ರಿವೆಂಜ್‌ ತೀರಿಸಿಕೊಳ್ಳಲು ಶುರು ಮಾಡಿದ್ದಾರೆ. ಬಿಗ್‌ಬಾಸ್‌ ನಿಯಮದ ಪ್ರಕಾರ ಜೈಲಿನಲ್ಲಿರುವ ಸ್ಪರ್ಧಿ ತರಕಾರಿ ಕಟ್ ಮಾಡಿಕೊಡಬೇಕು. ಆದರೆ ರಜತ್‌ ಬೆಳಿಗ್ಗೆ ತಿಂಡಿ ತಯಾರಿಸಲು ತರಕಾರಿ ಕಟ್ ಮಾಡಲು 2 ಗಂಟೆ ಸಮಯ ಕೇಳಿದ್ದಾರೆ. ಜೊತೆಗೆ ನಾನೇನ್ ಬೇಗ್ ಕಟ್ ಮಾಡಿಕೊಟ್ಟರೆ ಈ ನನ್ ಮಳ್ಕೇನ್ ಉತ್ತಮ ಕೊಡ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದಾಗಿ ಬಿಗ್‌ಬಾಸ್‌ ಮನೆಯಲ್ಲಿ ಮತ್ತೊಮ್ಮೆ ರಜತ್ ಬೇಸರವಾಗುವಂತೆ ನಡೆದುಕೊಂಡಿದ್ದಾರೆ.

ಇದು ಹೀಗೆ ಮುಂದುವರೆದರೆ ಬಿಗ್‌ಬಾಸ್‌ ಮನೆಯಲ್ಲಿ ಇತರ ಸ್ಪರ್ಧಿಗಳಿಗೆ ಊಟ ತಿಂಡಿಗೆ ತೊಂದರೆಯಾಗುವುದು ಗ್ಯಾರಂಟಿ. ಇದರಿಂದ ಮನೆಯಲ್ಲಿ ಮತ್ತೆ ಜಗಳವಾಗುವ ಸಾಧ್ಯತೆ ಕೂಡ ಇದೆ. ಅಲ್ಲದೇ ಇನ್ಮುಂದೆ ಅಸಲಿ ಆಟ ಶುರು ಎಂದಿರುವ ರಜತ್ ಮುಂದಿನ ದಿನಗಳಲ್ಲಿ ಯಾರನ್ನು ಗುರಿಯಾಗಿಸಿಕೊಳ್ತಾರೋ ಎನ್ನುವ ಆತಂಕ ಶುರುವಾಗಿದೆ. ಒಟ್ಟಿನಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ರಜತ್ ದೊಡ್ಮನೆಯಲ್ಲಿ ತಮ್ಮ ಕೆಟ್ಟ ಮಾತಿನಿಂದಲೇ ಸಖತ್ ಸುದ್ದಿಯಾಗುತ್ತಿದ್ದು ಮುಂದೆ ಇದು ಯಾವ ಹಂತಕ್ಕೆ ಹೋಗುತ್ತದೆ ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+