Bigg Boss: ಬಿಗ್‌ಬಾಸ್‌ನಲ್ಲಿ ಬಾಡೂಟ ಜಗಳ, ಉಗ್ರಂ ಮಂಜು ಮೇಲೆ ಸ್ಪರ್ಧಿಗಳ ಗರಂ ಕಾರಣವೇನು
ಇಂದಿನಿಂದ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಈ ಬಾರಿ ಸಾಹಿತ್ಯ ಸಮ್ಮೇಳನಕ್ಕೂ ಮುಂಚೆಯೇ ಸಿಕ್ಕಾಪಟ್ಟೆ ಚರ್ಚೆಯಾಗಿದ್ದು, ಬಾಡೂಟ. ಇದೀಗ ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲೂ ಬಾಡೂಟದ ಚರ್ಚೆ ಜೋರಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಇದೀಗ ಲಕ್ಷುರಿ ಬಜೆಟ್ ಕೈತಪ್ಪಿದಂತಿದೆ. ಮಂಜಣ್ಣ ಅವರ ಮಟನ್ ಪ್ರೀತಿಗೆ ಬಿಗ್‌ಬಾಸ್ ಸ್ಪರ್ಧಿಗಳು ಕಿಡಿಕಾರಿದ್ದಾರೆ. ನೀವು ಮಟನ್ ಹಾಕಿಕೊಂಡು ತಿಂತಾ ಇದ್ದರೆ ನಾವೆಲ್ಲ ನೋಡಬೇಕಾ ಅಂತ ತ್ರಿವಿಕ್ರಮ್ ಅವರು ಕೇಳಿರುವುದು ಇಂದಿನ ಎಪಿಸೋಡ್‌ನಲ್ಲಿ ಇದೆ.
ಬಿಗ್‌ಬಾಸ್‌ನಲ್ಲಿ ಈಗ ಸಿಕ್ಕಾಪಟ್ಟೆ ವಿಷಯಗಳು ಚರ್ಚೆಯಾಗ್ತಿವೆ. ಮಂಜಣ್ಣ ಹಾಗೂ ರಜತ್ ನಡುವೆ ಈಚೆಗೆ ಸಿಕ್ಕಾಪಟ್ಟೆ ಫೈಟ್ ಆಗಿತ್ತು. ಟಾಕ್‌ಫೈಟ್ ನೋಡಿ ಮನೆಯ ಇತರ ಸ್ಪರ್ಧಿಗಳು ಶಾಕ್ ಆಗಿದ್ದರು. ಈಗ ನೀವೆಲ್ಲ ಮಟನ್ ಹಾಕಿಕೊಂಡು ತಿನ್ನುತ್ತಿದ್ದರೆ ನಾವೆಲ್ಲ ಸುಮ್ನೆ ನೋಡಬೇಕಾ ಅಂತ ತ್ರಿವಿಕ್ರಮ್ ಅವರು ಕೇಳಿದ್ದು, ಇದಕ್ಕೆ ಬಿಗ್‌ಬಾಸ್‌ನ ಉಳಿದ ಸ್ಪರ್ಧಿಗಳು ಸಹ ಇದರ ಜೊತೆ ದನಿಗೂಡಿಸಿದ್ದಾರೆ. ಉಪ್ಪಿನ ಕಾಯಿ ಬಿಟ್ಟು ಮಟನ್ ಯಾಕೆ ಸೆಲೆಕ್ಟ್ ಮಾಡಿದ್ರಿ ಅಂತ ಬೇರೆ ಅವರು ಕೇಳಿದ್ದು, ಇದಕ್ಕೆ ಯಾರ್ರಿ ಅಲ್ಲಿ ಉಪ್ಪಿನ ಕಾಯಿ ಇತ್ತು ಅಂತ ಹೇಳಿದ್ದು ಅಂತ ಮಂಜಣ್ಣ ಅವರು ದಬಾಯಿಸಿದ್ದಾರೆ.

ಈ ವಿಷಯದಲ್ಲಿ ಗೌತಮಿ, ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ, ಚೈತ್ರಾ ಕುಂದಾಪುರ ಅವರು ಮಂಜು ಅವರ ಮೇಲೆ ಮುಗಿಬಿದ್ದಿರುವುದು ಇದೆ. ನೀವು ಮಟನ್ ತಿಂತಾ ಇದ್ದರೆ ನಾವು ತುಪ್ಪಾ ಹಾಕಿಕೊಂಡು ನೆಕ್ಕಬೇಕಾ ಅಂತ ತ್ರಿವಿಕ್ರಮ್ ಅವರು ಪದೇ ಪದೇ ಪ್ರಶ್ನಿಸಿದ್ದಾರೆ. ಅಲ್ಲಿ ಮಟನ್ ಅಂತ ಬರಿಯೋಕಿಂತ ಮುಂಚೆ ಉಪ್ಪಿನಕಾಯಿ ಅಂತ ಬರಿಬೇಕಿತ್ತು ಅಂತ ಸ್ಪರ್ಧಿಗಳು ಮಂಜು ಅವರೊಂದಿಗೆ ವಾದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಂಜು ಅವರು ಯಾರು ಹೇಳಿದ್ದು ಅಲ್ಲಿ ಬೇರೆ ಐಟಂ ಇತ್ತು ಅಂತ ಅಲ್ಲಿ ಇದ್ದಿದ್ದೇ ನಾಲ್ಕು ಐಟಂಗಳು ಮಾತ್ರ ಎಂದಿದ್ದಾರೆ. ಉಪ್ಪಿನಕಾಯಿ ಹೇಳಿದ್ದೇನೆ ಅಂತ ಭವ್ಯ ಅವರು ಸಹ ವಾದ ಮಾಡಿದ್ದಾರೆ. ಬೇಕು ಅಂತಲೇ ಮಟನ್ ಎಂದು ಬರೆಯಲಾಗಿದೆ ಎಂದು ಉಳಿದ ಸ್ಪರ್ಧಿಗಳು ವಾದಿಸಿದ್ದಾರೆ.
ಆರು ಸಾವಿರ ಹೆಂಗೆ ಬಂತು ಅಂತ ನೋಡಿದರೆ ಆ ಮೇಲೆ ಮಂಜು ಅವರು ಮಟನ್ ಅಂತ ಬರೆದಿರೋದು ಗೊತ್ತಾಯ್ತು. ಐದು ಐಟಂ ಬರಿಯೋಕೆ ಆಗಲ್ವಾ ಎಂದಾಗ ಐದಲ್ಲ ಆರು ಬರಿತೀನಿ ಆದರೆ ಮೊದಲು ಹೇಳಿದ್ದು ನಾಲ್ಕು ಐಟಂ ಮಾತ್ರ ಅಂತ ಮಂಜು ಅವರು ಹೇಳಿದ್ರೆ. ಉಳಿದ ಸ್ಪರ್ಧಿಗಳು ಇಲ್ಲ ಅಂತ ವಾದಿಸಿದ್ದಾರೆ.
ಮಟನ್ ಪ್ರೀತಿಗೆ ಗರಂ: ಐದು ಐಟಂಗಳನ್ನು ಬರೆಯಲು ಕೊಟ್ಟ ಟಾಸ್ಕ್‌ನಲ್ಲಿ ಮಂಜು ಅವರು ಮಟನ್ ಸಹ ಬರೆದಿರುವುದು ಹಾಗೂ ಅದಕ್ಕೆ ಜಾಸ್ತಿ ದುಡ್ಡು ಖರ್ಚಾಗಿರುವುದು ಉಳಿದ ಸ್ಪರ್ಧಿಗಳಲ್ಲಿ ನಿರಾಸೆ ಮೂಡಿಸಿದೆ. ಮಂಜು ಅವರು ಮಟನ್‌ಗೆ ಬದಲಾಗಿ ಬೇರೆ ಏನಾದರೂ ಐಟಂ ಬರಿಬೇಕಿತ್ತು ಎಂದು ಹಲವರು ವಾದಿಸಿದ್ದಾರೆ.












Click it and Unblock the Notifications