Bigg Boss Kannada :'ತುಕಾಲಿ ಸಂತೋಷ್ ಹೆಂಡತಿಗೆ ಯಾರಾದ್ರೂ ಹೊಡಿತಾರೆ'
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಲ್ಲಿ ವಕೀಲ ಜಗದೀಶ್ ಹಾಗೂ ರಂಜಿತ್ ಅವರನ್ನು ವಾರದ ಮಧ್ಯವೇ ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. ಮನೆಯಲ್ಲಿ ಮಹಿಳೆಯರಿಗೆ ಆದ ಅಪಮಾನವನ್ನು ಹಾಗೂ ನಿಂದನೆಯನ್ನು ಬಿಗ್ ಬಾಸ್ ಸಹಿಸುವುದಿಲ್ಲ ಎಂದು ವಕೀಲ ಜಗದೀಶ್ ಅವರನ್ನು ಬಿಗ್ ಬಾಸ್ ಮನೆಯಿಂದ ಆಚೆ ಕಳುಹಿಸಲಾಗಿತ್ತು.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಉಳಿದ ಸ್ಪರ್ಧಿಗಳ ಬಗ್ಗೆ ವಕೀಲ ಜಗದೀಶ್ ಮಾತನಾಡಿದ್ದು, ಈ ವೇಳೆ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ತುಕಾಲಿ ಸಂತೋಷ್ ಪತ್ನಿ ಮಾನಸ ಬಗ್ಗೆ ಕೂಡ ಮಾತನಾಡಿದ್ದಾರೆ.

ನ್ಯಾಷನಲ್ ಟಿವಿ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, ನಾನು ಮಾನಸಗೆ ಏನೂ ಸಂದೇಶ ಕೊಡಲ್ಲ. ಯಾಕೆಂದರೆ ಮಾನಸಿಕವಾಗಿ ಅವರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ತುಕಾಲಿ ಸಂತೋಷ್ ಅವರೇ ನಿಜವಾಗಿಯೂ ನೀವು ಅವರನ್ನು ಸ್ವಲ್ಪ ಕೌನ್ಸಲಿಂಗ್‌ಗೆ ಕರೆದುಕೊಂಡು ಹೋಗಿ. ಮಾನಸಿಕ ತಜ್ನರ ಬಳಿ ಕರೆದುಕೊಂಡು ಹೋಗಿ ಕೌನ್ಸಲಿಂಗ್ ಮಾಡಿಸಿ ಎಂದರು.
ನನಗೆ ಅದು ಇದು ಮಾತನಾಡಿದರು ಪರವಾಗಿಲ್ಲ. ಎಲ್ಲರೂ ನಮ್ಮ ತರನೇ ಇರಲ್ಲ. ನಮ್ಮ ತರನೇ ಸಹಿಸಿಕೊಳ್ಳುತ್ತಾರೆ ಎಂದು ಹೇಳಲು ಆಗುವುದಿಲ್ಲ. ಅದು ಆಕೆಗೆ ತೊಂದರೆ. ಯಾರಾದರೂ ಹೊಡೆದರೆ, ಈಕೆಗೆ ಏನಾದರೂ ಹೆಚ್ಚು ಕಮ್ಮಿ ಆದರೆ, ಆ ಕೋಪದಲ್ಲಿ ಕೊಂದೇ ಬಿಟ್ಟರೆ. ಸಾಧ್ಯತೆಗಳಿದೆ ಅಲ್ಲವಾ? ಎಂದು ಜಗದೀಶ್ ಪ್ರಶ್ನಿಸಿದರು.
ನಮ್ಮ ರೀತಿಯೇ ಸಮಾಧಾನ ಮಾಡಿಕೊಳ್ಳುವವರು ಸಿಕ್ಕರೆ ಪರವಾಗಿಲ್ಲ. ಯಾರಾದರೂ ಇವರಷ್ಟೇ ಕೋಪಿಷ್ಟರಾಗಿ ಕೈ ಎತ್ತಿದರೆ, ಏನಾದರೂ ಹೆಚ್ಚು ಕಮ್ಮಿ ಆದರೆ ಕೊನೆಯಲ್ಲಿ ಜೀವ ಹೋಗಬಾರದು ಆ ಘಟನೆಗೆ ಮಾನಸ ಕಾರಣಿಕರ್ತಳಾಗಬಾರದು. ತುಕಾಲಿ ಇದನ್ನೆಲ್ಲಾ ನೋಡಿಕೊಂಡು ಇರಬಾರದು. ಒಂದು ಒಳ್ಳೆ ಕೌಂನ್ಸ್‌ಲರ್ ಬಳಿ ಕರೆದುಕೊಂಡು ಹೋಗಿ ಕೌನ್ಸಲಿಂಗ್ ಮಾಡಿಸಿ. ಆಕೆಗೆ ಸ್ವಲ್ಪ ತಿಳಿಸಿ ಎಂದು ಹೇಳಿದರು.

ಬಹುಶಃ ಆಕೆ ಹುಟ್ಟಿರೋದೇ ಕೆಟ್ಟ ಮಾತು ಮಾತನಾಡಲು, ಗಂಡು ಮಕ್ಕಳನ್ನು ಬೈಯಲು. ಗಂಡು ಮಕ್ಕಳನ್ನು ಏಕವಚನದಲ್ಲಿ ಮಾತನಾಡಲು. ಕಿರುಚಲು ಎಂದುಕೊಂಡು ಇರಬೇಕು. ತುಕಾಲಿ ಸಂತೋಷ್ ಅವರನ್ನು ಕೌನ್ಸಲಿಂಗ್ ಮಾಡಿಸಿದರೆ ಒಳ್ಳೆಯದು ಅಂತಾ ಒಂದು ಸಣ್ಣ ಸಲಹೆ ಕೊಡಬಲ್ಲೆ. ತಪ್ಪಿದ್ದರೆ ಕ್ಷಮಿಸಿ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.












Click it and Unblock the Notifications