BBK 12: ಗಿಲ್ಲಿ ಅಂದ್ರೇನೆ ನಮಗೆ ತುಂಬಾ ಇಷ್ಟ: ಧನುಷ್, ಸೂರಜ್ ಕುಟುಂಬ
ಬಿಗ್‌ಬಾಸ್ ಕನ್ನಡ ಸೀಸನ್-12ರಲ್ಲಿ ಸದ್ಯ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಸ್ಪರ್ಧಿಗಳ ಕುಟುಂಬ ಒಂದೊಂದಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುತ್ತಾ ಸರ್‌ಪ್ರೈಸ್ ಮಾಡುತ್ತಿವೆ. ಈ ಸೀಸನ್‌ನಲ್ಲಿ ಹೆಚ್ಚು ಕ್ರೇಜ್ ಹುಟ್ಟಿಸಿರುವ ಸ್ಪರ್ಧಿ ಅಂದ್ರೆ ಅದು ಗಿಲ್ಲಿ. ಸಾಮಾಜಿಕ ಮಾಧ್ಯಮಗಳಲ್ಲಿ ಗಿಲ್ಲಿಗೆ ಒಂದು ದೊಡ್ಡ ಬಳಗವೇ ಇದೆ. ಈಗ ಉಳಿದ ಸ್ಪರ್ಧಿಗಳ ಕುಟುಂಬದವರಿಗೂ ಗಿಲ್ಲಿ ಆಟ ಇಷ್ಟವಾಗಿದೆ. 'ಗಿಲ್ಲಿ ಅಂದ್ರೆನೇ ನಮಗೆ ಇಷ್ಟ, ಅವನಿಗೇ ನಾವು ವೋಟ್ ಹಾಕಬೇಕಿತ್ತು' ಎಂದಿದ್ದಾರೆ ಸ್ಪರ್ಧಿಗಳಾದ ಸೂರಜ್ ಹಾಗೂ ಧನುಷ್ ಗೌಡ ಕುಟುಂಬ.
ಹೌದು, ಕರ್ನಾಟಕವೇ ಮೆಚ್ಚಿಕೊಂಡಿರುವ ಗಿಲ್ಲಿ ನಟನ ಹವಾ ಅಷ್ಟಿಷ್ಟಲ್ಲ. ತಮ್ಮ ಕಾಮಿಡಿ, ಇತರರ ಕಾಲೆಳೆಯುವ ಕಲೆಯಿಂದಲೇ ಎಲ್ಲರ ಅಚ್ಚುಮೆಚ್ಚಾಗಿದ್ದಾರೆ. ಆದರೆ ಸಾಮಾನ್ಯವಾಗಿ ಪ್ರತಿ ಸ್ಪರ್ಧಿಯ ಕುಟುಂಬದವರು ನಮ್ಮ ಮನೆಯವರೇ ಬಿಗ್‌ಬಾಸ್ ಗೆಲ್ಲಬೇಕು ಎಂದೇ ಆಸೆಪಡುತ್ತಾರೆ. ಹೀಗಾಗಿ ಬೇರೆ ಸ್ಪರ್ಧಿಗಳ ತಂಟೆಗೂ ಹೋಗುವುದಿಲ್ಲ. ಆದರೆ ಗಿಲ್ಲಿ ವಿಚಾರದಲ್ಲಿ ಇದು ಸುಳ್ಳಾಗಿದೆ. ಬಿಗ್‌ಬಾಸ್ ಟ್ರೋಫಿ ಗೆಲ್ಲುವ ರೇಸ್‌ನಲ್ಲಿರುವ ಸೂರಜ್ ಹಾಗೂ ಧನುಷ್ ಗೌಡ ಅವರ ಪೋಷಕರಿಗೂ ಗಿಲ್ಲಿಯೇ ಫೇವರೇಟ್ ಆಗಿದ್ದಾರೆ.

ಫ್ಯಾಮಿಲಿ ರೌಂಡ್‌ನಲ್ಲಿ ಬಿಗ್‌ಬಾಸ್ ಮನೆಗೆ ಕಾಲಿಟ್ಟಿರುವ ಸೂರಜ್ ಅವರ ತಾಯಿ, 'ಗಿಲ್ಲಿ ನೀನಂದ್ರೆ ನಮಗೆಲ್ಲ ತುಂಬಾ ಇಷ್ಟ' ಎನ್ನುವ ಮೂಲಕ ಶಾಕ್ ಕೊಟ್ಟಿದ್ದಾರೆ. 'ಗಿಲ್ಲಿ ಎಲ್ಲ ರೀತಿಯಲ್ಲೂ ಇಷ್ಟ. ಅವನು ಜೋಕ್ ಮಾಡೋದೂ ಇಷ್ಟ, ಕಾಲೆಳೆಯುವುದೂ ಇಷ್ಟ, ಸುಮ್ಮನೆ ಕೂರಲ್ಲ. ಗಿಲ್ಲಿನೇ ಇಲ್ಲದೆ ಇದ್ದಿದ್ರೆ ನಿಮಗೆಲ್ಲ ಬೇಜಾರಾಗುತ್ತಿತ್ತು' ಎಂದು ಇತರ ಸ್ಪರ್ಧಿಗಳಿಗೆ ಹೇಳಿದ್ದಾರೆ ಸೂರಜ್ ತಾಯಿ.
'ಗಿಲ್ಲಿಗೇ ವೋಟ್ ಹಾಕ್ತಿದ್ದೆ'
ಇನ್ನು ಧನುಷ್ ಗೌಡ ಅವರ ತಾಯಿ ಕೂಡ ಗಿಲ್ಲಿ ಬಗ್ಗೆ ಕೊಂಡಾಡಿದ್ದಾರೆ. 'ಸದ್ಯ ಬಿಗ್‌ಬಾಸ್ ಮನೆಯಲ್ಲಿ ಧನು ಬಿಟ್ಟರೆ ಗಿಲ್ಲಿ ಅಂದ್ರೇನೆ ನನಗೆ ಇಷ್ಟ, ಗಿಲ್ಲಿ ಮಾಡುವ ಕಾಮಿಡಿ ನನಗೆ ತುಂಬಾ ಇಷ್ಟ. ಒಂದು ವೇಳೆ ನನ್ನ ಮಗ ಧನುಷ್ ಈ ಶೋನಲ್ಲಿ ಇಲ್ಲದೆ ಇದ್ದಿದ್ರೆ, ಎಲ್ಲ ವೋಟ್ ನಾನು ಗಿಲ್ಲಿಗೇ ಹಾಕ್ತಿದ್ದೆ' ಎಂದಿದ್ದಾರೆ. ಈ ಮಾತು ಕೇಳಿ ಉಳಿದೆಲ್ಲ ಸ್ಪರ್ಧಿಗಳು ಓ....ಎಂದು ಗಿಲ್ಲಿಗೆ ರೇಗಿಸಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಗಿಲ್ಲಿ ಫ್ಯಾನ್ ಪೇಜ್‌ಗಳಲ್ಲೂ ಇದೇ ವಿಡಿಯೋಗಳನ್ನು ಹಂಚಿಕೊಂಡಿದ್ದು, ಗಿಲ್ಲಿ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ?, ಅವರನ್ನು ಇಡೀ ಕರ್ನಾಟಕವೇ ಒಪ್ಪಿಕೊಂಡಿದೆ ಎಂದು ಬರೆದುಕೊಂಡಿದ್ದಾರೆ. ಗಿಲ್ಲಿ ತಾನು ಏನೆಂದು ಮತ್ತೆ ನಿರೂಪಿಸಿಕೊಂಡಿದ್ದಾರೆ ಎಂದಿದ್ದಾರೆ.
ಜಗಳಗಂಟಿ ಎಂದ ರಕ್ಷಿತಾ ಅಮ್ಮ
ಫ್ಯಾಮಿಲಿ ರೌಂಡ್‌ನಲ್ಲಿ ರಕ್ಷಿತಾ ಶೆಟ್ಟಿ ತಾಯಿ ಕೂಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಮ್ಮನನ್ನು ನೋಡಿ ರಕ್ಷಿತಾ ಕಣ್ಣೀರಿಟ್ಟಿದ್ದಾರೆ. 'ನೀನು ಯಾರಿಗೂ ಏನೂ ಹೇಳಬೇಡ, ಜಗಳ ಮಾಡಬೇಡ..ಜಗಳಗಂಟಿ ಎಂದು ಮುದ್ದಾಗಿ ಬುದ್ಧಿವಾದ ಹೇಳಿದ್ದಾರೆ. ಆಗ ಯಾಕೆ ಬೆತ್ತ ತರಲಿಲ್ವಾ ನೀವು ಎಂದು? ರಕ್ಷಿತಾ ತಾಯಿಗೆ ಸ್ಪರ್ಧಿಗಳು ಕೇಳಿದ್ದಾರೆ. ಬೆತ್ತ ತಂದಿದ್ರೆ ಮೊದಲು ನಿನಗೆ ಏಟು ಬೀಳ್ತಿತ್ತು' ಎಂದು ಗಿಲ್ಲಿ ಧ್ರುವಂತ್‌ಗೆ ರೇಗಿಸಿದ್ದಾರೆ. ಬಳಿಕ ಧ್ರುವಂತ್ ಇತ್ತೀಚೆಗೆ ರಕ್ಷಿತಾ ಜೊತೆ ನಡೆದುಕೊಂಡ ವರ್ತನೆಗಾಗಿ ಅವರ ತಾಯಿಗೆ ಕ್ಷಮೆಯಾಚಿಸಿದ್ದಾರೆ.












Click it and Unblock the Notifications