Bigg Boss: ಬಿಗ್‌ಬಾಸ್‌ನಲ್ಲಿ ಶೋ ಆರಂಭಕ್ಕೂ ಮೊದಲೇ 5 ಸ್ಪರ್ಧಿಗಳ ಹೆಸರು ರಿವೀಲ್

ಬಿಗ್‌ ಬಾಸ್‌ ಕನ್ನಡ ಸೀಸನ್ 10 ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ಶೋ ಮುಗಿದು ವರ್ಷ ಕಳೆಯುತ್ತಾ ಬಂದರೂ ಸಹ ಈ ಸೀಜನ್‌ನ ಸ್ಪರ್ಧಿಗಳು ಮಾತ್ರ ಸದಾ ಸುದ್ದಿಯಲ್ಲೇ ಇದ್ದಾರೆ. ಈ ಬಿಗ್‌ ಹಿಟ್‌ ಬಳಿಕ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರನ್ನು ಕೂಡ ದೊಡ್ಡ ಮಟ್ಟದಲ್ಲಿ ಉತ್ತಮವಾಗಿ ಜನರ ಮುಂದೆ ತರಲು ತಂಡ ಪ್ಲ್ಯಾನ್‌ ಮಾಡುತ್ತಿದೆ. ಇದೀಗ ಹೊಸ ಸೀಸನ್‌ ಆಗಮನಕ್ಕೆ ದಿನಗಣನೆ ಆರಂಭವಾಗಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಮೇಲೆ‌ ಪ್ರೇಕ್ಷಕರಿಗೂ ಕೂಡ ಅತಿಯಾದ ನಿರೀಕ್ಷೆ ಶುರುವಾಗಿದ್ದು, ಈಗಾಗಲೇ ಪ್ರೋಮೋಗಳ ಮೂಲಕವೇ ವೀಕ್ಷಕರ ಗಮನ ಸೆಳೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಆಗಿರುವ ಸ್ವರ್ಗ ನರಕ ಪರಿಕಲ್ಪನೆಯ ಪ್ರೋಮೋ ನೋಡುಗರ ಕುತೂಹಲ ಹೆಚ್ಚಿಸಿದೆ. ಸೆಪ್ಟೆಂಬರ್‌ 29ರ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ.

Bigg Boss Kannada First Five Contestants Name Revealed In Before Starting The Show

ಮುಖ್ಯವಾಗಿ ನಿರೂಪಕರು ಬದಲಾವಣೆ ಎನ್ನುವ ಗಾಸಿಪ್‌ಗೆ ಈಗಾಗಲೇ ಬ್ರೇಕ್‌ ಬಿದ್ದಿದ್ದು, ಈ ಬಾರಿಯೂ ನಟ ಕಿಚ್ಚ ಸುದೀಪ್‌ ಕಾರ್ಯಕ್ರಮದ ಸಾರಥಿಯಾಗಿದ್ದಾರೆ. ಈಗಾಗಲೇ ಸುದೀಪ್‌ ಎಂಟ್ರಿಯ ಪ್ರೋಮೋ ಎಲ್ಲಡೆ ವೈರಲ್‌ ಆಗುತ್ತಿದೆ. ಕಿಚ್ಚ ಸುದೀಪ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ನಡುವೆ ಈ ಸಲ ಯಾರೆಲ್ಲ ಬಿಗ್‌ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಕೌತುಕ ಹೆಚ್ಚಾಗಿದೆ. ಹೀಗಾಗಿ ಬೆಸ್ಟ್‌ ಸ್ಪರ್ಧಿಗಳ ಹುಡುಕಾಟ ನಡೆಯುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಕೂಡ ಹರಿದಾಡುತ್ತಿದೆ.

Bigg Boss Kannada First Five Contestants Name Revealed In Before Starting The Show

ಬಿಗ್‌ ಬಾಸ್ ಕನ್ನಡ ಸೀಸನ್ 11ಕ್ಕೆ ಭರ್ಜರಿ ತಯಾರಿ ನಡೆಸಿರುವ ಬಿಗ್‌ಬಾಸ್ ತಂಡ ಈ ಬಾರಿ ನೋಡುಗರಿಗೆ ದೊಡ್ಡ ಸರ್‌ಪ್ರೈಸ್ ನೀಡಲು ಸಜ್ಜಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕಾರ್ಯಕ್ರಮ ಆರಂಭಕ್ಕೂ ಮೊದಲೇ 5 ಜನ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ.

ಇದೇ ಶನಿವಾರ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ರಾಜಾ ರಾಣಿ ರೀಲೋಡೆಡ್‌ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಅದ್ಧೂರಿಯಾಗಿ ನಡೆಯುವ ಈ ಶೋನಲ್ಲಿ ಬಿಗ್‌ ಬಾಸ್ ಕನ್ನಡ ಸೀಸನ್ 11ರ ಐದು ಸ್ಪರ್ಧಿಗಳ ಹೆಸರು ಕೂಡ ರಿವೀಲ್ ಆಗಲಿದೆ. ವಿಶೇಷವೆಂದರೆ ಬಿಗ್‌ ಬಾಸ್‌ ತಂಡದ ಜೊತೆಗೆ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗಿಯಾಗುವವರಿಂದಲೇ ಸ್ಪರ್ಧಿಗಳನ್ನು ಆಯ್ಕೆ ಮಾಡಿಸಲಾಗುತ್ತದೆ.

Bigg Boss Kannada First Five Contestants Name Revealed In Before Starting The Show

ರಾಜಾ ರಾಣಿ ರೀಲೋಡೆಡ್‌ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಬಿಗ್‌ ಬಾಸ್ ಕನ್ನಡ ಸೀಸನ್ 11ಕ್ಕೆ ಆಯ್ಕೆಯಾದ ಕೆಲವು ಸ್ಪರ್ಧಿಗಳ ಹೆಸರು ಬಹಿರಂಗವಾಗಲಿದೆ. ಇವರು ಬಿಗ್‌ ಬಾಸ್‌ ಮನೆ ಪ್ರವೇಶಿಸಬೇಕೋ? ಬೇಡವೋ? ಎಂಬ ಆಯ್ಕೆಯೂ ಬಹಿರಂಗವಾಗಿ ನಡೆಯಲಿದೆ.

ನೆರೆದಿರುವ ಜನರ ಮೂಲಕ ಯಾರಿಗೆ ಹೆಚ್ಚು ವೋಟ್‌ಗಳು ಬೀಳುತ್ತವೋ ಅವರು ಬಿಗ್‌ ಬಾಸ್‌ ಮನೆ ಪ್ರವೇಶಿಸಲಿದ್ದಾರೆ. ಕಡಿಮೆ ವೋಟ್‌ ಪಡೆದವರು ಸ್ಪರ್ಧೆಯಿಂದ ಹಿಂದೆ ಸರಿಯಲಿದ್ದಾರೆ. ಅಂದು ಐದು ಸ್ಪರ್ಧಿಗಳ ಹೆಸರು ಘೋಷಣೆ ಆಗಲಿದ್ದು, ಉಳಿದ ಸ್ಪರ್ಧಿಗಳ ಹೆಸರು ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಗ್ರ್ಯಾಂಡ್‌ ಓಪನಿಂಗ್‌ ದಿನ ತಿಳಿದು ಬರಲಿದೆ ಎಂದು ಬಿಗ್‌ಬಾಸ್ ತಂಡ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+