ರಾಜಕಾರಣಿಗಳ ಜೊತೆ ಡೇಟಿಂಗ್ ಮಾಡು, ಹಣ ಕೊಡ್ತೀನಿ: ನಟಿ ನಮ್ರತಾ ಗೌಡಗೆ ಆಫರ್
ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಗೂ ಖ್ಯಾತ ಕಿರುತೆರೆ ನಟಿ ನಮ್ರತಾ ಗೌಡ ಅವರಿಗೆ ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಿರುಕುಳ ನೀಡಿದ್ದಾನೆ. ನಮ್ರತಾ ಅವರನ್ನು ಡೇಟಿಂಗ್‌ಗೆ ಆಹ್ವಾನಿಸಿರುವ ಕಿರಾತಕ, ಇದಕ್ಕೆ ಭಾರಿ ಹಣ ಕೊಡ್ತೀವಿ ಎಂದು ಆಫರ್ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ನಟಿ ನಮ್ರತಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ನಟಿಗೆ ಪದೇ ಪದೇ ಮೆಸೇಜ್ ಮಾಡಿ ರಾಜಕಾರಣಿಗಳೊಂದಿಗೆ ಡೇಟಿಂಗ್ ಮಾಡುವಂತೆ ಒತ್ತಾಯಿಸಿದ್ದಾನೆ. ಈ ವಿಚಾರವಾಗಿ ನಮ್ರತಾ ಆ ವ್ಯಕ್ತಿಯ ಸ್ಕ್ರೀನ್‌ಶಾಟ್ ಶೇರ್ ಮಾಡಿ ವಿವರಿಸಿದ್ದಾರೆ.
ಸೀರಿಯಲ್‌ಗಳ ಬಳಿಕ ಬಿಗ್‌ಬಾಸ್‌ನಲ್ಲಿ ಮಿಂಚಿದ್ದ ನಮ್ರತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಇದ್ದು, ಇದೇ ವೇಳೆ ವ್ಯಕ್ತಿಯೊಬ್ಬ ರೋಷನ್ ಎಂಬ ವ್ಯಕ್ತಿ ನೇರವಾಗಿ ನಮ್ರತಾ ಅವರಿಗೆ ಮೆಸೇಜ್ ಮಾಡಿದ್ದಾನೆ. ಈ ಹಿಂದೆಯೂ ಆತ ನಮ್ರತಾಗೆ ಮೆಸೇಜ್ ಮಾಡಿದ್ದು, ಕಾರ್ಯಕ್ರಮವೊಂದಕ್ಕೆ ಚೀಫ್ ಗೆಸ್ಟ್ ಆಗಿ ಆಹ್ವಾನಿಸಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ನಿಮ್ಮ ಸಂಭಾವನೆ ಹಾಗೂ ಲಭ್ಯತೆ ಬಗ್ಗೆ ತಿಳಿಸಿ ಎಂದು ಮೆಸೇಜ್ ಮಾಡಿದ್ದಾನೆ. ಇದಕ್ಕೆ ನಮ್ರತಾ ಅವರು ಏನೂ ರಿಪ್ಲೈ ಮಾಡಿಲ್ಲ.

ಇತ್ತೀಚೆಗೆ ಮತ್ತೆ ಮೆಸೇಜ್ ಮಾಡಿರುವ ಆ ವ್ಯಕ್ತಿ, ಹಾಯ್, ನಾನು ಹಲವು ರಾಜಕಾರಣಿಗಳು ಹಾಗೂ ವಿಐಪಿಗಳ ಜೊತೆ ಕೆಲಸ ಮಾಡುತ್ತೇನೆ ಎಂದು ಪರಿಚಯಿಸಿಕೊಂಡಿದ್ದಾನೆ. ರಾಜಕಾರಣಿಗಳು ಹಾಗೂ ವಿಐಪಿಗಳಿಗೆ ನಾನು ಪೇಯ್ಡ್ ಡೇಟಿಂಗ್ ಅರೇಂಜ್ ಮಾಡ್ತೀನಿ. ಈ ವಿಚಾರವನ್ನು ನಾನು ಗೌಪ್ಯವಾಗಿಯೇ ಇಡುತ್ತೇನೆ. ನೀವು ಯಾವುದೇ ನಿಮ್ಮ ಪರ್ಸನಲ್ ನಂಬರ್, ಫೋಟೋ ಶೇರ್ ಮಾಡುವ ಅಗತ್ಯವಿಲ್ಲ. ಇದಕ್ಕೆ ನಾವು ಭಾರಿ ಪ್ರಮಾಣದ ಹಣ ಕೊಡ್ತೀವಿ ಎಂದು ಆಫರ್ ಕೊಟ್ಟಿದ್ದಾನೆ. ಇದು 200 ಪರ್ಸೆಂಟ್ ಸೀಕ್ರೇಟ್ ಆಗಿರುತ್ತದೆ. ನಿಮಗೆ ಇಷ್ಟ ಇದ್ರೆ ಟೆಕ್ಸ್ಟ್ ಮಾಡಿ, ಹೆಚ್ಚಿನ ಮಾಹಿತಿ ಕೊಡ್ತೀನಿ ಎಂದು ಕೇಳಿದ್ದಾನೆ. ಇದೇ ಮೆಸೇಜ್ ಅನ್ನು ಎರಡು ಬಾರಿ ನಮ್ರತಾಗೆ ಕಳಿಸಿ ಪೀಡಿಸಿದ್ದಾನೆ.
ಮೊದಲಿಗೆ ಸುಮ್ಮನಾಗಿದ್ದ ನಮ್ರತಾ ಗೌಡ, ಪದೇ ಪದೇ ಮೆಸೇಜ್ ಬಂದಿದ್ದರಿಂದ ಬೇಸತ್ತು ಆ ವ್ಯಕ್ತಿ ಮಾಡಿದ್ದ ಮೆಸೇಜ್ ಸ್ಕ್ರೀನ್‌ಶಾಟ್ ತೆಗೆದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಮಿಸ್ಟರ್ ರೋಷನ್, ಮರ್ಯಾದೆಯಿಂದ ಹೇಳುತ್ತಿದ್ದೇನೆ. ಇದನ್ನು ಇಲ್ಲಿಗೇ ನಿಲ್ಲಿಸಿ ಎಂದು ನಮ್ರತಾ ಗರಂ ಆಗಿ ಪೋಸ್ಟ್ ಶೇರ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಿರುಕುಳ ನೀಡುತ್ತಿದ್ದ ಆ ವ್ಯಕ್ತಿ ಮೆಸೇಜ್‌ಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮೂಲಕ ತಕ್ಕ ತಿರುಗೇಟು ನೀಡಿದ್ದಾರೆ. ನಟಿಗೆ ಕೆಟ್ಟದಾಗಿ ಆಮಿಷವೊಡ್ಡಿದ ಆತನಿಗೆ ನಮ್ರತಾ ತಕ್ಕಶಾಸ್ತಿ ಮಾಡಿದ್ದಾರೆ.
ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ನಮ್ರತಾ ಅವರು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಬಳಿಕ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿದ್ದರು. ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರದಿಂದ ಹೆಚ್ಚು ಜನಪ್ರಿಯರಾದರು. ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿದ್ದರು. ಈಗ ಮತ್ತೆ ಅವರು ಸೀರಿಯಲ್‌ಗಳಲ್ಲಿ ಬ್ಯುಸಿಯಾಗಿದ್ದು, ಇದೀಗ ಕರ್ಣ ಸೀರಿಯಲ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.












Click it and Unblock the Notifications