Bigg Boss Kannada: ಬಿಗ್‌ಬಾಸ್ ಸ್ಪರ್ಧಿಗಳ ವಾರದ ಸಂಭಾವನೆ ಎಷ್ಟು? ಕೈಗೆ ಸಿಗೋದೆಷ್ಟು? ವಿನ್ನರ್ ಶಶಿ ರಿವೀಲ್
ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡ ಬಿಗ್‌ಬಾಸ್ ಸೀಸನ್-12 (Bigg Boss Kannada) ಶುರುವಾಗಲಿದೆ. ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಬೇಕು ಎನ್ನುವುದು ಇಂದಿನ ಯುವಜನರ ಬಿಗ್ ಡ್ರೀಮ್. ಇದರ ಜೊತೆಗೆ ಬಿಗ್‌ಬಾಸ್‌ಗೆ ಹೋದ ಸ್ಪರ್ಧಿಗಳಿಗೆ ಲಕ್ಷ ಲಕ್ಷಗಟ್ಟಲೆ ಸಂಭಾವನೆ ಸಿಗುತ್ತೆ ಎನ್ನುವ ಮಾತೂ ಇದೆ. ಇದು ನಿಜ ಕೂಡ ಹೌದು. ಆದರೆ ಯಾವ ಸ್ಪರ್ಧಿಗೆ ಎಷ್ಟು ಸಂಭಾವನೆ ಸಿಗುತ್ತೆ? ಯಾವ ಆಧಾರದ ಮೇಲೆ ಸಂಭಾವನೆ ಫಿಕ್ಸ್ ಆಗುತ್ತೆ ಎನ್ನುವ ವಿಚಾರ ಕಾರ್ಯಕ್ರಮದ ಆಯೋಜಕರು ಹಾಗೂ ಸ್ಪರ್ಧಿಗಳ ನಡುವೆಯೇ ಇರುತ್ತೆ. ಇನ್ನು ಬಿಗ್‌ಬಾಸ್ ಸೀಸನ್-6ರ ವಿನ್ನರ್ ಶಶಿ ಕುಮಾರ್ ಅವರು ಸಂಭಾವನೆ ಕುರಿತು ಅಚ್ಚರಿ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.
ಕೋಲಾರ ಭಾಗದ ಕಾಮನ್ ಮ್ಯಾನ್ ಹಾಗೂ ಯುವ ರೈತರಾಗಿರುವ ಶಶಿ ಕುಮಾರ್ ಅವರು ಆರನೇ ಸೀಸನ್‌ನ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆ ಸೀಸನ್‌ನ ವಿನ್ನರ್ ಆಗಿಯೂ ಗೆದ್ದು ಬೀಗಿದ್ದರು. ಬರೋಬ್ಬರಿ ಐದು ಸೀಸನ್‌ಗಳು ಮುಗಿದ ನಂತರ ಅವರು ಬಿಗ್‌ಬಾಸ್ ಸಂಭಾವನೆಯ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಶಶಿ ಅಚ್ಚರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

'ಬಿಗ್‌ಬಾಸ್‌ನಲ್ಲಿ ನಾನು ಮೂರು ತಿಂಗಳು ಇದ್ದೆ. 50 ಲಕ್ಷ ರೂ. ಕೊಟ್ಟರು, ಅದರಲ್ಲಿ 16 ಲಕ್ಷ ರೂ. ಸರ್ಕಾರದವರು ಇಟ್ಟುಕೊಂಡರು. ತೆರಿಗೆ ಎಲ್ಲ ಹೋಗಿ 34 ಲಕ್ಷ ರೂ. ಬಂತು. ಆದರೆ ನಾನು ಆ ಹಣ ವಾಪಸ್ ಪಡೆಯುವುದೇ ಮರೆತು ಹೋಗಿದ್ದೆ. ಬಿಗ್‌ಬಾಸ್ ಗೆದ್ದ ಖುಷಿಯಲ್ಲಿದ್ದೆ. ಅದೇ ಸಮಯದಲ್ಲಿ ಹೆಚ್ಚು ಭಯ ಕೂಡ ಆಗಿತ್ತು. ಆಗ ನನಗೆ ಅದು ಹೊಸ ಜಗತ್ತಾಗಿತ್ತು' ಎಂದು ಶಶಿ ನೆನೆದಿದ್ದಾರೆ.
'ಆರು ತಿಂಗಳಾದ್ಮೇಲೆ ಸಂಭಾವನೆ ಕೇಳಿದೆ'
'ಈ ಗೊಂದಲಗಳ ನಡುವೆ ನಾನು ಗೆದ್ದ ಹಣವನ್ನು ಪಡೆಯಬೇಕು ಅನ್ನೋದನ್ನೇ ಮರೆತುಬಿಟ್ಟಿದ್ದೆ. ಸುಮಾರು ಆರು ತಿಂಗಳು ಆದ ಮೇಲೆ ನನಗೆ ಪೇಮೆಂಟ್ ಬರಲಿಲ್ಲ ಎಂದು ಸಂಬಂಧಪಟ್ಟವರನ್ನ ಕೇಳಿದೆ. ಆದರೆ ಆಗ ನನಗೆ ಗೊತ್ತಾಗಿದ್ದು, ಈ ಹಣ ಪಡೆಯಲು ಕೆಲ ನಿಯಮಗಳಿದ್ದು, ಅದನ್ನು ಸ್ಪರ್ಧಿಗಳು ಮಾಡಬೇಕಿತ್ತು ಎನ್ನುವ ವಿಚಾರ ಹೇಳಿದ್ರು. ಬಿಗ್‌ಬಾಸ್ ಮನೆಗೆ ಹೋಗುವ ಮುನ್ನವೇ ಈ ಪ್ರಕ್ರಿಯೆ ಮುಗಿಸಬೇಕಿತ್ತು. ನಿಮ್ಮ ಕುಟುಂಬದವರು ಯಾರೂ ಇದಕ್ಕೆ ಸ್ಪಂದಿಸಲಿಲ್ಲ ಅಂದ್ರು'

'ನಮಗೆ ಇದ್ದಿದ್ದೇ ಕಡಿಮೆ ಸಂಭಾವನೆ, ನಾನು ಆಗ ವಾರಕ್ಕೆ 10,000 ರೂ. ಸಂಭಾವನೆ ಪಡೆಯುತ್ತಿದ್ದೆ. ಆ ಸೀಸನ್‌ನಲ್ಲಿ ನಾನೇ ಕಡಿಮೆ ಹಣ ಕೇಳಿದ್ದು, ಬೇರೆಯವರು ಒಂದು, ಎರಡು ಲಕ್ಷ ಪಡೆದವರೂ ಇದ್ದಾರೆ. ನಮ್ಮ ಡಿಮ್ಯಾಂಡ್ ಮೇಲೆ ಆ ಸಂಭಾವನೆ ನಿಗದಿ ಮಾಡುತ್ತಾರೆ. ಆಗ ನಾನು ಕೂಡ ಕೇಳಿದ್ರೆ ವಾರಕ್ಕೆ 40,000 ರೂ. ಕೊಡುತ್ತಿದ್ದರು ಅನಿಸುತ್ತೆ. ಆದರೆ ನಾನು ಅವಕಾಶ ಕೊಡುತ್ತಿದ್ದೀರಲ್ಲ? ದುಡ್ಡೇ ಬೇಡ ಅಂದಿದ್ದೆ. ಅವರು ಇಲ್ಲ ಹಾಗೆ ಮಾಡೋಕೆ ಆಗಲ್ಲ ಎಂದಿದ್ದರು'.
'ಆ ಹಣದಿಂದ ಏನೂ ಆಗಲ್ಲ'
'ನಾನು ಆ ದುಡ್ಡಿನ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಎಷ್ಟು ಕೊಡಬಹುದು? ಅಬ್ಬಬ್ಬಾ ಅಂದ್ರೆ ಒಂದು 30,000 ರೂ.ಕೊಡಬಹುದು. ಅದರಿಂದ ದೊಡ್ಡ ಬದಲಾವಣೆ ಏನೂ ಆಗಲ್ಲ. ನನ್ನ ಆಸೆ 100 ಕೋಟಿ ರೂ. ಆಗಿತ್ತು. ನನಗೆ ನೀನು ಕೊಡುವ ಆ ಹಣ ಏನಕ್ಕೆ ಆಗುತ್ತೆ? ಹಾಗಾಗಿ ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳಲಿಲ್ಲ. ಇನ್ನು ಬಿಗ್‌ಬಾಸ್‌ನವರು ನಿಯತ್ತಾಗಿ ಹಣ ಕೊಡ್ತಾರೆ. ಸಂಭಾವನೆ ತಡವಾಗಿ ಕೊಟ್ಟಿದ್ದು ಅವರ ತಪ್ಪಲ್ಲ, ಅದು ನನ್ನ ಎಡವಟ್ಟು' ಎಂದೂ ಶಶಿಕುಮಾರ್ ಒಪ್ಪಿಕೊಂಡಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications