ದೆಹಲಿಗೆ ಹೋಗಿ ದೊಡ್ಡ ಸಾಹಸಕ್ಕೆ ಕೈಹಾಕಿದ ಬಿಗ್‌ಬಾಸ್‌ ಜಗದೀಶ್‌, ಏನದು?

ಕನ್ನಡ ಬಿಗ್‌ಬಾಸ್‌ ಸ್ಪರ್ಧಿ ವಕೀಲ್‌ ಸಾಬ್‌ ಖ್ಯಾತಿಯ ಜಗದೀಶ್‌ ಸದ್ಯ ರಾಷ್ಟ್ರ ರಾಜಧಾನಿ ದೆಹಲಿಗೆ ಕಾಲಿಟ್ಟಿದ್ದಾರೆ. ಅಲ್ಲಿಯೂ ಅವರು ತಮ್ಮದೇ ಸ್ಟೈಲ್‌ ಮುಂದುವರಿಸಿದ್ದಾರೆ. ದೆಹಲಿಯಲ್ಲಿ ತಲೆದೂರಿರುವ ದೊಡ್ಡ ಸಮಸ್ಯೆಯೊಂದರ ಬಗ್ಗೆ ಜಗದೀಶ್‌ ಅವರು ಕಳಕಳಿ ತೋರಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಇತ್ತೀಚೆಗೆ ದೆಹಲಿಗೆ ಹೋಗಿರುವ ಜಗದೀಶ್‌ ಅವರು ಅಲ್ಲಿನ ಪ್ರಮುಖ ಪ್ರದೇಶವೊಂದಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಅವರು ವಿಡಿಯೋ ಮಾಡಿ ಹೇಳಿಕೊಂಡಿದ್ದಾರೆ. ದೆಹಲಿಯಲ್ಲೇ ಇಂತಹ ಸ್ಥಿತಿ ಇದೆ ಎಂದು ಜಗದೀಶ್‌ ಬೇಸರ ಹಂಚಿಕೊಂಡಿದ್ದಾರೆ.

Bigg Boss Kannada Contestant Lawyer Jagadeesh Voices Concern Over Child Begging In Delhi

ದೆಹಲಿ ವಿಮಾನ ನಿಲ್ದಾಣದ ಸಮೀಪದಲ್ಲೇ ಇರುವ ಏರಿಯಾಗೆ ಜಗದೀಶ್‌ ಭೇಟಿ ನೀಡಿದ್ದಾರೆ. ಈ ವೇಳೆ ನೂರಾರು ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂದು ಜಗದೀಶ್‌ ವಿಡಿಯೋದಲ್ಲಿ ತಿಳಿಸಿದ್ದಾರೆ. ಏರ್‌ಪೋರ್ಟ್‌ನಿಂದ ಕೇವಲ ಎರಡೇ ಕಿಲೋಮೀಟರ್‌ ದೂರದಲ್ಲಿರುವ ಏರೋಸಿಟಿ ಬಳಿ ನೂರಾರು ಮಕ್ಕಳು ಭಿಕ್ಷೆ ಬೇಡುತ್ತಿದ್ದಾರೆ ಎಂದು ಜಗದೀಶ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಕಡಿಮೆ ಎಂದರೂ ಐನೂರು ಮಕ್ಕಳು ಭಿಕ್ಷೆ ಬೇಡುತ್ತಿದ್ದಾರೆ. ಈ ಬಗ್ಗೆ ಇಲ್ಲಿನ ಸ್ಥಳೀಯ ಮಕ್ಕಳ ಆಯೋಗದ ಗಮನಕ್ಕೆ ತಂದಿದ್ದೇವೆ. ದೆಹಲಿ ಹೇಳುವುದಕ್ಕೆ ಮಾತ್ರ ರಾಷ್ಟ್ರದ ರಾಜಧಾನಿ. ಇಲ್ಲಿ ನೋಡಿದರೆ ನೂರಾರು ಮಕ್ಕಳು ಭಿಕ್ಷೆ ಬೇಡುತ್ತಿದ್ದಾರೆ. ಇಲ್ಲಿ ಆಮ್‌ ಆದ್ಮಿ ಸರ್ಕಾರವಿದೆ. ಕೇಂದ್ರ ಬಿಜೆಪಿ ಸರ್ಕಾರ ಕೂಡ ಇಲ್ಲೇ ಇದೆ. ಎರಡು ಸರ್ಕಾರಗಳಿದ್ರೂ ಇಲ್ಲಿ ಬೀದಿ ಬೀದಿಗಳಲ್ಲಿ ಮಕ್ಕಳು ಭಿಕ್ಷೆ ಬೇಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Bigg Boss Kannada Contestant Lawyer Jagadeesh Voices Concern Over Child Begging In Delhi

ನೂರಾರು ಮಕ್ಕಳು ದೆಹಲಿಯಲ್ಲೇ ಭಿಕ್ಷೆ ಬೇಡುತ್ತಿದ್ದಾರೆ ಎಂದರೆ ಎಲ್ಲಿಗೆ ಬಂತು, ಯಾರಿಗೆ ಬಂತು 47ರ ಸ್ವಾತಂತ್ರ್ಯ? ಎಂದು ಮಾರ್ಮಿಕವಾಗಿ ವ್ಯವಸ್ಥೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ದೇಶ ಹೀಗೆ ಇದೆಯಾ ಎಂಬುದನ್ನು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕು. ಸ್ವಾತಂತ್ರ್ಯ ಬಂದು ಎಷ್ಟೋ ದಶಕಗಳು ಕಳೆದಿವೆ. ಹಾಗಿದ್ದರೂ ರಾಷ್ಟ್ರ ರಾಜಧಾನಿಯಲ್ಲೇ ಮಕ್ಕಳ ಸ್ಥಿತಿ ಹೀಗಿದೆ. ಇದೇನಾ ನಾವು ಕಟ್ಟುತ್ತಿರುವ ದೇಶ? ಎಂದು ಸಾಮಾಜಿಕ ಕಳಕಳಿ ತೋರಿದ್ದಾರೆ.

ಮಕ್ಕಳು ಇನ್ನೂ ಬೀದಿಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ ದೇಶ ಏನು ಬದಲಾಗಿದೆ? ಇವರೆಲ್ಲ ನಮ್ಮ ಭವಿಷ್ಯ ಅಲ್ಲವಾ? ಎಂದು ಜಗದೀಶ್‌ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿಗೆ ಕರೆ ಮಾಡಿರುವ ಜಗದೀಶ್‌ ಅವರ ತಂಡ ದೆಹಲಿಯಲ್ಲಿ ಮಿತಿಮೀರಿರುವ ಮಕ್ಕಳ ಭಿಕ್ಷಾಟನೆ ಕುರಿತು ಮನವರಿಕೆ ಮಾಡಿದ್ದಾರಂತೆ. ಕೂಡಲೇ ಈ ಮಕ್ಕಳನ್ನು ಭಿಕ್ಷಾಟನೆಯಿಂದ ಮುಕ್ತಗೊಳಿಸಿ ಎಂದೂ ಅವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸೋಶಿಯಲ್‌ ಮೀಡಿಯಾ ಮೂಲಕವೇ ಮನೆಮಾತಾಗಿದ್ದ ಲಾಯರ್‌ ಜಗದೀಶ್‌ ಅವರು ಸರ್ಕಾರಗಳ ವಿರುದ್ಧ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಸಿಡಿಯುತ್ತಿದ್ದರು. ಈ ಕಾರಣದಿಂದ ಇವರು ಸೋಶಿಯಲ್‌ ಮೀಡಿಯಾ ಸ್ಟಾರ್‌ ಆಗಿ ಮಿಂಚಿದ್ದರು. ಬಳಿಕ ಅವರು ಸದ್ಯ ನಡೆಯುತ್ತಿರುವ ಕನ್ನಡ ಬಿಗ್‌ಬಾಸ್‌ ರಿಯಾಲಿಟಿ ಶೋಗೂ ಹೋಗಿ ಸದ್ದು ಮಾಡಿದ್ದರು.

ಆದರೆ, ಬಿಗ್‌ಬಾಸ್‌ ಮನೆಯಲ್ಲಿ ಕೆಲವು ಆಕ್ಷೇಪಾರ್ಹ ಮಾತುಗಳನ್ನಾಡಿದ ಕಾರಣಕ್ಕೆ ಜಗದೀಶ್‌ ಅವರನ್ನು ಹೊರಗೆ ಕಳಿಸಲಾಗಿತ್ತು. ಇನ್ನು ರಸ್ತೆಗಳಲ್ಲಿ ಯಾವುದೇ ಸಮಸ್ಯೆ ಕಂಡರೂ ಜಗದೀಶ್‌ ಅವರು ವಿಡಿಯೋ ಮಾಡಿ, ಅದರ ವಿರುದ್ಧ ಮಾತನಾಡುತ್ತಿದ್ದರು. ಟೋಲ್‌ ಸಂಗ್ರಹದ ಬಗ್ಗೆಯೂ ಜಗದೀಶ್‌ ಬೆಳಕು ಚೆಲ್ಲಿದ್ದರು. ಆಗಾಗ ಈ ರೀತಿ ಸೋಶಿಯಲ್‌ ಮೀಡಿಯಾಗಳಲ್ಲಿ ಜಗದೀಶ್‌ ಅವರು ಸದ್ದು ಮಾಡುತ್ತಲೇ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+