ನಟ ದರ್ಶನ್‌ ಜೊತೆ ಸಿನಿಮಾ ಮಾಡ್ತೀನಿ: ಬಿಗ್‌ ಬಾಸ್‌ ಜಗದೀಶ್‌

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಲಾಯರ್‌ ಜಗದೀಶ್ ಆರಂಭದಲ್ಲೇ ಸಖತ್ ಸದ್ದು ಮಾಡಿ ಕ್ರಶ್ ಆಫ್ ಕರ್ನಾಟಕ ಎನ್ನುವ ಬಿರುದು ಪಡೆದು ಮನೆಯಿಂದ ಆಚೆ ಬಂದರು. ಬಿಗ್‌ ಬಾಸ್‌ ಮನೆಗೆ ಹೋಗುವ ಮುನ್ನವೂ ನಟ ದರ್ಶನ್‌ ಪ್ರಕರಣದ ಬಗ್ಗೆ ಮಾತನಾಡಿ ಜಗದೀಶ್ ಸುದ್ದಿಯಲ್ಲಿದ್ದರು. ಇದೀಗ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಬಳಿಕವೂ ಜಗದೀಶ್, ದರ್ಶನ್‌ ಬಗ್ಗೆ ಮಾತನಾಡಿದ್ದು, ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ಹದಿನೈದು ದಿನದಲ್ಲಿ ಒಂದು ಸ್ಟಾರ್‌ ಕ್ರಿಯೆಟ್‌ ಮಾಡಬಹುದು ಅಂತಾ ಬಿಗ್‌ ಬಾಸ್‌ ಸಾಬೀತು ಪಡಿಸಿತು. ಅಲ್ಲಿ ಹೋಗಿ ಎಷ್ಟೋ ಜನ ಜೀವನ ಹಾಳು ಮಾಡಿಕೊಂಡಿದ್ದಾರೆ. ಆದರೆ ಒಂದು ಸ್ಟಾರ್‌ ಅನ್ನು ಕ್ರಿಯೆಟ್‌ ಮಾಡಬಹುದು ಅಂತಾ ತೋರಿಸಿದ್ದೇ ಬಿಗ್‌ ಬಾಸ್‌. ಅದಕ್ಕೆ ನನ್ನದೇ ಆದಂತಹ ಕೊಡುಗೆ ಕೂಡ ಇದೆ. ಒಂದು ಸ್ಟಾರ್‌ ಅನ್ನು ಕ್ರಿಯೆಟ್‌ ಮಾಡಿದಕ್ಕೆ ಬಿಗ್‌ ಬಾಸ್‌ಗೆ ಥ್ಯಾಂಕ್ಯೂ' ಎಂದರು.

Bigg Boss Kannada Contestant Jagadish Said That He Will Do A Movie With Actor Darshan Thoogudeepa

ಕ್ರಷ್‌ ಆಫ್‌ ಕರ್ನಾಟಕ ಬಿರುದಿನ ಬಗ್ಗೆ ಮಾತನಾಡಿದ ಅವರು, ದೇಶದ ಪ್ರಧಾನ ಮಂತ್ರಿ ಆಗಾದ ಎಷ್ಟು ಖುಷಿ ಇರುತ್ತೋ, ಕ್ರಷ್‌ ಆಫ್‌ ಕರ್ನಾಟಕ ಅಷ್ಟೇ ಖುಷಿ ತಂದಿದೆ. ನನಗೆ ಅದು ತುಂಬಾ ಇಷ್ಟ ಆಯ್ತು. ನಮ್ಮ ದಾದ ಸುದೀಪ್‌ ಅವರ ಕಾರ್ಯಕ್ರಮದಲ್ಲಿ ಕೊಟ್ಟಿರುವುದು ಇನ್ನೂ ತುಂಬಾ ಖುಷಿಯಾಗಿದೆ ಎಂದು ಹೇಳಿದರು.

ಇನ್ನು ದರ್ಶನ್‌ ಹೆಸರು ಬಳಕೆ ಬಗ್ಗೆ ಮಾತನಾಡಿದ ಅವರು, ದರ್ಶನ್‌ನನ್ನು ಟ್ರಂಪ್‌ ಕಾರ್ಡ್ ಆಗಿ ಬಳಸುವ ದಡ್ಡ ಅಂತೂ ನಾನಲ್ಲ. ನಾನು ದರ್ಶನ್‌ ಪರ ಹೋಗಿದ್ದು ಯಾಕೆ ಅಂದಾಗ, ವಿಜಯಲಕ್ಷಿಯನ್ನು ನೋಡಿದಾಗ, ಆ ಮಗುವನ್ನು ನೋಡಿದಾಗ ಅವರಿಬ್ಬರು ಒಟ್ಟಾಗಿ ಜೀವನ ಮಾಡಬೇಕು. ಆಗಿರುವ ಅನಾಹುತ ಆಗಿ ಹೋಗಿದೆ. ಅದರಂತೆ ಇನ್ನೊಂದು ಕುಟುಂಬವನ್ನು ನಾವು ಅನಾಥ ಮಾಡಲು ಆಗುವುದಿಲ್ಲ.

ನನಗೆ ವಿಜಯಲಕ್ಷಿ ಮೊದಲಿನಿಂದಲೂ ಗೊತ್ತು. ದರ್ಶನ್‌ ಮೊದಲ ಬಾರಿಗೆ ಜೈಲಿಗೆ ಹೋದ ಸಮಯದಿಂದ ಫಾಲೋ ಮಾಡುತ್ತಿದ್ದೇನೆ. ತುಂಬಾ ಒಳ್ಳೆ ಹೆಣ್ಣು ಮಗಳು. ಆಕಸ್ಮಾತ್‌ ಆ ಹೆಣ್ಣು ಮಗಳ ಕಣ್ಣಲ್ಲಿ ನೀರು ಬಂದಿದ್ದರೆ ಅದನ್ನು ವರಿಸುವಂತಹ ಪ್ರಯತ್ನ ಮಾಡುತ್ತೇನೆ. ದರ್ಶನ್‌ನನ್ನು ಹೊರಗೆ ಕರೆದುಕೊಂಡು ಬಂದು ಅವರ ಕುಟುಂಬದ ಜೊತೆ ಇರಬೇಕು ಎಂದು ಬಯಸುವವರಲ್ಲಿ ನಾನು ಒಬ್ಬ ಎಂದರು.

Bigg Boss Kannada Contestant Jagadish Said That He Will Do A Movie With Actor Darshan Thoogudeepa

ದರ್ಶನ್‌ ಕುಟುಂಬ ಚೆನ್ನಾಗಿ ಇರಬೇಕು. ದರ್ಶನ್‌ ಸಹ ಬದಲಾವಣೆ ಆಗಬೇಕು. ವಿಜಯಲಕ್ಷಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮತ್ತೆ ಕನ್ನಡ ಚಿತ್ರರಂಗದಲ್ಲಿ ದರ್ಶನ್‌ ಮಿಂಚಬೇಕು. ಪಕ್ಕದಲ್ಲಿ ನನಗೆ ಸೆಂಕೆಂಡ್‌ ಕ್ಯಾರೆಕ್ಟರ್‌ ಸಿಕ್ಕರೆ ದರ್ಶನ್‌ ಜೊತೆ ಸಿನಿಮಾ ಮಾಡುತ್ತೇನೆ. ದರ್ಶನ್‌ ನನ್ನನ್ನು ನೆಪಿನಲ್ಲಿಟ್ಟುಕೊಳ್ಳಪ್ಪ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+