Bigg Boss Kannada: ನನ್ನ ಚಡ್ಡಿ ಕಳೆದು ಹೋಗಿದೆ ಹುಡುಕಿ ಕೊಡ್ರಿಪಾ: ಬಿಗ್‌ಬಾಸ್ ಮುಂದೆ ಬೇಡಿಕೆ ಇಟ್ಟ ಹನುಮಂತ!

ಬಿಗ್‌ಬಾಸ್ ಹನುಮಂತ ತನ್ನ ಮುಗ್ಧತೆ & ಸರಳತೆ ಮೂಲಕ ಎಲ್ಲರ ಗಮನ ಸೆಳೆದು ಕನ್ನಡಗರ ಮನಸ್ಸಿನಲ್ಲಿ ಮನೆ ಮಾಡಿದ್ದಾನೆ. ಅದರಲ್ಲೂ ಹನುಮಂತನ ಮಾತುಗಳಿಗೆ ಕನ್ನಡ ನಾಡು ಫಿದಾ ಆಗಿದೆ. ಹೀಗಿದ್ದರೂ ಬಿಗ್ ಬಾಸ್ ಮನೆಯಲ್ಲಿ ಹನುಮಂತನಿಗೆ ಶತ್ರುಗಳ ಕಾಟ ತಪ್ಪಿಲ್ಲ. ಎಲ್ಲಿ ಹನುಮಂತ ಬಿಗ್‌ಬಾಸ್ ಸೀಸನ್ ವಿನ್ನರ್ ಆಗಿಬಿಡ್ತಾನೋ ಅಂತಾ ರೊಚ್ಚಿಗೆದ್ದು ಸಹ ಸ್ಪರ್ಧಿಗಳು ಕುತಂತ್ರ ಮಾಡುತ್ತಲೇ ಇರುತ್ತಾರೆ. ಇಷ್ಟೆಲ್ಲದರ ನಡುವೆಯೂ ಈಗ ಹನುಮಂತ ದುಬಾರಿ ಬೆಲೆಯ ಚಡ್ಡಿಗಾಗಿ ಪರದಾಡುತ್ತಿದ್ದಾನೆ!

ಹನುಮಂತ ಎಲ್ಲವನ್ನೂ ನೇರವಾಗಿ ಹೇಳುವ ಮೂಲಕ ಗಮನ ಸೆಳೆಯುವ ವ್ಯಕ್ತಿ. ಹೀಗಾಗಿ ಬಿಗ್‌ಬಾಸ್ ಮನೆಯಲ್ಲಿ ಹನುಮಂತ ಮಾತನಾಡುತ್ತಿದ್ದರೆ ಎಲ್ಲರೂ ನಗುತ್ತಾರೆ, ಎಂಜಾಯ್ ಕೂಡ ಮಾಡುತ್ತಾರೆ. ಅದರಲ್ಲೂ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ನೋಡುವ ಕೋಟ್ಯಂತರ ಜನರಿಗೆ ಹನುಮಂತನ ಡೈಲಾಗ್‌ಗಳು ಸಖತ್ ಮಜಾ ಕೊಡುತ್ತವೆ. ಇದೇ ರೀತಿ ಈಗ ಮತ್ತೆ, ಹನುಮಂತ 3,000 ರೂಪಾಯಿ ಬೆಲೆ ಬಾಳುವ ಚಡ್ಡಿ ಕುರಿತು ಮಾತನಾಡಿ ಫುಲ್ ಸೌಂಡ್ ಮಾಡಿದ್ದಾನೆ!

Bigg Boss Kannada Contestant Hanumantha Demanded This In Front Of The Bigg Boss

3,000 ರೂಪಾಯಿ ಬೆಲೆಯ ಚಡ್ಡಿ!

ಹೌದು, ಗೋಲ್ಡ್ ಸುರೇಶ್ ಕೂಡ ಬಿಗ್‌ಬಾಸ್ ಕನ್ನಡ ಸ್ಪರ್ಧಿಯಾಗಿದ್ದು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ಸ್ಪರ್ಧಿ. ಅದರಲ್ಲೂ ಗೋಲ್ಡ್ ಸುರೇಶ್ ಮತ್ತು ಹನುಮಂತ ನಡುವೆ ಭಾರಿ ಚಂದದ ಮಾತುಕತೆ ನಡೆಯುತ್ತೆ. ಹನುಮಂತ ಪ್ರತಿಬಾರಿ ಕೂಡ ಗೋಲ್ಡ್ ಸುರೇಶ್‌ಗೆ ಮಾವ ಮಾವ... ಅಂತಾ ಕರೆಯುತ್ತಾರೆ. ಹೀಗೆ ಬಿಗ್‌ಬಾಸ್ ಮನೆಯಲ್ಲಿ ಗೋಲ್ಡ್ ಸುರೇಶ್‌ಗೆ ಸೇರಿದ ಚಡ್ಡಿ ಕಳೆದು ಹೋಗಿದೆ ಅಂತಾ ಮಾತುಕತೆ ಆರಂಭ ಆಗಿತ್ತು.

ಮೊದಲು ಮಾತು ಆರಂಭಿಸಿದ್ದ ಹನುಮಂತ, ನಮ್ಮ ಮಾವಂದು 3,000 ರೂಪಾಯಿ ಬೆಲೆ ಬಾಳುವ ಚಡ್ಡಿ ಕಳೆದು ಹೋಗಿದೆ ಅಂತಾ ಹೇಳುತ್ತಾರೆ. ಈ ಮಾತಿನಿಂದ ಶಾಕ್ ಆದ ಇತರ ಸ್ಪರ್ಧಿಗಳು ಯಾವುದು ಅದು 3,000 ರೂಪಾಯಿ ಬೆಲೆಯ ಚಡ್ಡಿ? ನಮಗೂ ಸ್ವಲ್ಪ ಚಡ್ಡಿ ತೋರಿಸಿ! ಅಂತೆಲ್ಲಾ ಹೇಳುತ್ತಾರೆ. ಆಗ ಗೋಲ್ಡ್ ಸುರೇಶ್ ನಾಚಿಕೊಂಡಿದ್ದಾರೆ. ಅಂತಿಮವಾಗಿ ಹನುಮಂತ ನೇರವಾಗಿ ಬಿಗ್‌ಬಾಸ್ ಎದುರು ಒಂದು ಮನವಿ ಇಡುತ್ತಾನೆ, ಅದು ಏನಂದ್ರೆ ನನ್ನ ಚಡ್ಡಿ ಕಳೆದು ಹೊಗಿದೆ ಬಿಗ್‌ಬಾಸ್ ಅದನ್ನ ಹುಡುಕಿಕೊಡಿ ಅಂತಾ!

ಬಿಗ್‌ಬಾಸ್ ಚಡ್ಡಿ ಹುಡುಕುವುದು ಯಾವಾಗ?

ಒಟ್ನಲ್ಲಿ ಬಿಗ್‌ಬಾಸ್‌ಗೆ ಚಡ್ಡಿ ಹುಡುಕಿ ಅಂತಾ ಹನುಮಂತ ಹೇಳಿದ್ದು ಒಂದು ಕಡೆ ಮುಗ್ಧ ಮನಸ್ಸಿನ ಮಾತು ಅಂತಾ ಕನ್ನಡಿಗರು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಬಿಗ್‌ಬಾಸ್ ಚಡ್ಡಿ ಹುಡುಕುವುದು ಯಾವಾಗ? ಅಂತಾ ಕೂಡ ಚರ್ಚೆ ಜೋರಾಗಿದೆ. ಈ ಮೂಲಕ ಬಿಗ್‌ಬಾಸ್ ಕನ್ನಡ ಫುಲ್ ಸೌಂಡ್ ಮಾಡುತ್ತಾ ಹವಾ ಎಬ್ಬಿಸಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+