Bigg Boss Kannada: ಧನರಾಜ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟ ಗೋಲ್ಡ್ ಸುರೇಶ್
ಕನ್ನಡ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಗೋಲ್ಡ್ ಸುರೇಶ್ ಅವರು ಕಾರಣಾಂತರಗಳಿಂದ ದಿಢೀರ್ ಹೊರಬರಬೇಕಾಯಿತು. ಇನ್ನು ಗೋಲ್ಡ್ ಸುರೇಶ್ ಅವರು ಬಿಗ್‌ಬಾಸ್ ಮನೆಯಲ್ಲಿ ಎಲ್ಲರೊಂದಿಗೆ ಬಹಳ ಸ್ನೇಹ ಬೆಳೆಸಿದ್ದರು. ಅದರಲ್ಲೂ ಧನರಾಜ್ ಅವರೊಂದಿಗೆ ಆಪ್ತತೆ ಹೆಚ್ಚಾಗಿಯೇ ಇತ್ತು. ಇದೀಗ ಮನೆಯಿಂದ ಹೊರಗಿದ್ದರೂ ಗೋಲ್ಡ್ ಸುರೇಶ್ ಅವರು ಧನರಾಜ್ ಅವರಿಗೆ ಮರೆಯಲಾರದ ಸರ್‌ಪ್ರೈಸ್‌ವೊಂದನ್ನು ನೀಡಿದ್ದಾರೆ.
ಧನರಾಜ್-ಪ್ರಜ್ಞಾ ದಂಪತಿಗೆ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗು ಜನಿಸಿತ್ತು. ಇದಾದ ಬಳಿಕ ಧನರಾಜ್ ಬಿಗ್‌ಬಾಸ್ ಮನೆ ಸೇರಿಕೊಂಡಿದ್ದರು. ಆಗಾಗ ತನ್ನ ಪಾಪುವನ್ನು ಧನರಾಜ್ ನೆನೆಯುತ್ತಲೇ ಇದ್ದರು. ಈ ವೇಳೆ ಸ್ನೇಹಿತ ಗೋಲ್ಡ್ ಸುರೇಶ್ ಅವರು ಧನರಾಜ್ ಮಗಳಿಗೆ ಗಿಫ್ಟ್ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಇದೀಗ ತಮ್ಮ ಸ್ನೇಹಕ್ಕೆ ಸಾಕ್ಷಿ ಎನ್ನುವ ಕೆಲಸವನ್ನು ಗೋಲ್ಡ್ ಸುರೇಶ್ ಮಾಡಿದ್ದಾರೆ.

ಅದರಂತೆ ಗೋಲ್ಡ್ ಸುರೇಶ್ ಅವರು ಧನರಾಜ್ ಅವರ ನಿವಾಸಕ್ಕೆ ಭೇಟಿ ನೀಡಿ, ಪಾಪುವನ್ನು ಮುದ್ದಾಡಿದ್ದಾರೆ. ಕೊಟ್ಟ ಮಾತಿನಂತೆ ಧನರಾಜ್ ಮಗಳಿಗೆ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ತೊಟ್ಟಿಲನ್ನು ಖರೀದಿಸಿ ನೇರವಾಗಿ ಧನರಾಜ್ ಮನೆಗೆ ಹೋಗಿರುವ ಗೋಲ್ಡ್ ಸುರೇಶ್ ಅವರು ಕುಟುಂಬವನ್ನು ಭೇಟಿಯಾಗಿದ್ದಾರೆ. ಇದು ಮಾವನ ಕಡೆಯಿಂದ ಧನರಾಜ್ ಮಗಳಿಗೆ ಪುಟ್ಟ ಉಡುಗೊರೆ ಎಂದು ತೊಟ್ಟಿಲು ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಇತ್ತೀಚೆಗೆ ಬಿಗ್‌ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡೆಯಿತು. ಈ ವೇಳೆ ಧನರಾಜ್ ಅವರ ಫ್ಯಾಮಿಲಿ ಕೂಡ ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿತ್ತು. ಆಗ ಧನರಾಜ್ ಮುದ್ದಿನ ಮಗಳು ಕೂಡ ಬಂದಿದ್ದಳು. ಆದರೆ ಧನರಾಜ್‌ಗೆ ಮೊದಲಿಗೆ ಮಗು ತೊಟ್ಟಿಲಿನಲ್ಲಿರುವ ವಿಡಿಯೋ ಅನ್ನು ತೋರಿಸಲಾಯಿತು. ಇದನ್ನು ಕಂಡು ಭಾವುಕರಾದ ಧನರಾಜ್ ಮಗುವನ್ನು ಒಮ್ಮೆ ಎತ್ತಿಕೊಳ್ಳಲು ಅವಕಾಶ ನೀಡುವಂತೆ ಬೇಡಿಕೊಂಡರು.
ಕೊನೆಗೆ ಇದಕ್ಕೆ ಒಪ್ಪಿದ ಬಿಗ್‌ಬಾಸ್ ಧನರಾಜ್‌ಗೆ ಮಗುನ ಎತ್ತಿಕೊಳ್ಳಲು ಅನುವು ಮಾಡಿದರು. ಬಳಿಕ ಓಡಿ ಹೋಗಿ ಧನರಾಜ್ ತಮ್ಮ ಮಗುವನ್ನು ಎತ್ತಿಕೊಂಡು ಭಾವುಕರಾದರು. ಮಗುವಿನ ಪಕ್ಕದಲ್ಲೇ ಮಲಗಿ ಸ್ವಲ್ಪ ಹೊತ್ತು ಕಾಲ ಕಳೆದರು. ಇದರಿಂದ ಧನರಾಜ್ ಫುಲ್ ಖುಷ್ ಆಗಿದ್ದರು.

ಬಳಿಕ ಧನರಾಜ್‌ಗೆ ಪತ್ನಿ ಪ್ರಜ್ಞಾ ಕೂಡ ಕ್ಲಾಸ್ ತೆಗೆದುಕೊಂಡರು. ನಾನಿಲ್ಲದೆ ನೀವು ಬಹಳ ಖುಷಿಯಾಗಿದ್ದೀರಿ. ನೀವು ಐಶೂಗೆ ಲೈನ್ ಹೊಡೀತಿದೀರ ಅನ್ನೋ ಅನುಮಾನ ನನಗೆ, ಎಲ್ಲದಕ್ಕೂ ಯಾಕೆ ಐಶ್ವರ್ಯಾ ಹೆಸರನ್ನು ತೆಗೆದುಕೊಳ್ತೀರಿ ಎಂದು ಧನರಾಜ್‌ಗೆ ಚೂರು ಬಿಸಿಮುಟ್ಟಿಸಿದ್ದರು.
ಬಳಿಕ ಪತ್ನಿ ಜೊತೆಗೆ ಆಪ್ತವಾಗಿ ಮಾತನಾಡಿದ ಧನರಾಜ್, ನನಗೆ ಎರಡನೇ ಮಗು ಬೇಕು ಎಂದು ಪತ್ನಿಗೆ ಕೇಳಿದ್ದಾರೆ. ಇದಕ್ಕೆ ನಾಚಿಕೊಂಡ ಪತ್ನಿ ಎಂತ ಮಾರಾಯ ನೀನು ಎಂದು ನಕ್ಕಿದ್ದರು. ಕೊನೆಗೆ ಇದನ್ನೆಲ್ಲ ಇಲ್ಲೇಕೆ ಮಾತನಾಡುತ್ತಿದ್ದೀಯ? ಮನೆಗೆ ಬಂದು ಮಾತನಾಡಬೇಕು ಅಲ್ವಾ? ಎಂದು ಧನರಾಜ್ ಬಾಯಿ ಮುಚ್ಚಿಸಿದ್ದರು. ಸದ್ಯ ಈಗ ಗೋಲ್ಡ್ ಸುರೇಶ್ ಅವರು ಧನರಾಜ್ ಅವರು ಮರೆಯಲಾರದ ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ.












Click it and Unblock the Notifications