Gilli: ಗಿಲ್ಲಿ ವಿರುದ್ಧ ಕೇಸ್, ಬಿಗ್‌ಬಾಸ್ ಮನೆಯಿಂದಲೇ ಬಂಧನ ಸಾಧ್ಯತೆ, ಕಾರಣವೇನು?
ಬಿಗ್‌ಬಾಸ್ ಕನ್ನಡ ಸೀಸನ್-12ರ ಪ್ರಬಲ ಸ್ಪರ್ಧಿ ಎನಿಸಿಕೊಂಡಿರುವ ಗಿಲ್ಲಿ ನಟಗೆ ಕಾನೂನು ಸಂಕಷ್ಟ ಎದುರಾಗಿದೆ. ಗಿಲ್ಲಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವುದಲ್ಲದೆ, ಕೇಸ್ ಕೂಡ ದಾಖಲಾಗಿದೆ ವರದಿಯಾಗಿದೆ. ಬಿಗ್‌ಬಾಸ್ ಮನೆಮಂದಿ ಹಾಗೂ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿರುವ ಗಿಲ್ಲಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಈ ಹಿನ್ನೆಲೆ ಗಿಲ್ಲಿ ಅವರನ್ನು ಬಿಗ್‌ಬಾಸ್ ಮನೆಯಿಂದಲೇ ಬಂಧಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಗಿಲ್ಲಿ ಮೇಲಿನ ಆರೋಪವೇನು ಗೊತ್ತಾ?
ಈ ಸೀಸನ್ ಗೆಲ್ಲೋದು ಗಿಲ್ಲಿ ಎಂದೇ ಪ್ರೇಕ್ಷಕರು ಭವಿಷ್ಯ ನುಡಿಯುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿಯ ಆಟವನ್ನು ಮೆಚ್ಚಿರುವ ಕರುನಾಡಿನ ಮಂದಿ, ಸೋಷಿಯಲ್ ಮೀಡಿಯಾಗಳಲ್ಲಿಯೂ ಸಪೋರ್ಟ್ ಮಾಡುತ್ತಿದ್ದಾರೆ. ಈಗಾಗಲೇ ಗಿಲ್ಲಿಯೇ ಬಿಗ್‌ಬಾಸ್ ಟ್ರೋಫಿ ಗೆಲ್ಲೋದು ಎಂದು ಹೇಳುತ್ತಿದ್ದಾರೆ. ಪ್ರತಿ ವಾರವೂ ಬಿಗ್‌ಬಾಸ್ ಎಲಿಮಿನೇಷನ್‌ನಿಂದ ಪಾರಾಗುತ್ತಿರುವ ಗಿಲ್ಲಿಗೆ ಬಂಧನದ ಭೀತಿ ಎದುರಾಗಿದೆ.

ಗಿಲ್ಲಿ ಮೇಲೆ ಕೇಳಿ ಬಂದ ಆರೋಪವೇನು?
ಕನ್ನಡದ ಕೆಲ ಮಾಧ್ಯಮಗಳು ವರದಿ ಮಾಡಿರುವಂತೆ ಗಿಲ್ಲಿ ವಿರುದ್ಧ ದೂರು ದಾಖಲಾಗಿದೆ. ಇತ್ತೀಚೆಗೆ ರಿಷಾ ಗೌಡ ಜೊತೆಗಿನ ಕಿರಿಕ್ ವಿಚಾರವಾಗಿ ಗಿಲ್ಲಿಗೆ ಕಾನೂನು ಸಂಕಷ್ಟ ಎದುರಾಗಿದೆ. ರಿಷಾ ಗೌಡ ಅವರ ಬಟ್ಟೆಗಳನ್ನ ಗಿಲ್ಲಿ ವಾಶ್‌ರೂಂನಲ್ಲಿ ಇಟ್ಟಿದ್ದರು. ಇದೇ ವಿಚಾರಕ್ಕೆ ರಿಷಾ ಕೂಡ ಗಿಲ್ಲಿ ಮೇಲೆ ಕೈ ಮಾಡಿದ್ದರು. ಇದಕ್ಕೆ ಕಿಚ್ಚ ಸುದೀಪ್ ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಆದರೆ ಇದು ಮಹಿಳಾ ಆಯೋಗದ ಮೆಟ್ಟಿಲೇರಿರುವುದಾಗಿ ತಿಳಿದುಬಂದಿದೆ.
ಬಿಗ್‌ಬಾಸ್ ಮನೆಯಲ್ಲಿ ರಿಷಾ-ಗಿಲ್ಲಿ ನಡುವೆ ನಡೆದ ಕಿರಿಕ್ ವಿಚಾರವಾಗಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆಯಂತೆ. ಈ ಸಂಬಂಧ ಮಹಿಳಾ ಆಯೋಗ ವಿಡಿಯೋಗಳನ್ನು ಪರಿಶೀಲನೆ ಕೂಡ ನಡೆಸಿದ್ದು, ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಕಾರಣ ಈ ಪ್ರಕರಣವನ್ನು ಲೀಗಲ್ ಸೆಲ್‌ಗೆ ವರ್ಗಾಯಿಸಿರುವುದಾಗಿ ಹೇಳಲಾಗುತ್ತಿದೆ. ಅಲ್ಲದೆ ಗಿಲ್ಲಿ ಮಹಿಳೆಯರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿರುವ ಆರೋಪವೂ ಕೇಳಿಬಂದಿದೆ. ಒಂದು ವೇಳೆ ಇದು ಸತ್ಯವೇ ಆದರೆ, ಗಿಲ್ಲಿಗೆ ಕಾನೂನು ಸಂಕಷ್ಟ ಎದುರಾಗುವುದು ಮಾತ್ರವಲ್ಲದೆ, ಬಂಧನ ಕೂಡ ಆಗುವ ಸಾಧ್ಯತೆ ಇದೆಯಂತೆ.
ದೂರು ದಾಖಲಾಗಿರುವ ಕಾರಣ ಮಹಿಳಾ ಆಯೋಗವು ಬಿಗ್‌ಬಾಸ್ ಕಾರ್ಯಕ್ರಮದ ವಿಡಿಯೋಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಕೂಡ ನಡೆಸಿದೆ. ಅಲ್ಲಿ ಗಿಲ್ಲಿ ಮೇಲೆ ಕೇಳಿಬಂದ ಆರೋಪಗಳಿಗೆ ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಹೆಚ್ಚಿನ ಆಯೋಗದ ಲೀಗಲ್ ಟೀಂಗೆ ಈ ಪ್ರಕರಣವನ್ನು ಶಿಫ್ಟ್ ಮಾಡಿ ತಜ್ಞರ ಅಭಿಪ್ರಾಯ ಕೇಳಲಾಗಿದೆ ಎಂದು ವರದಿಯಾಗಿದೆ.
ಹೆಣ್ಣುಮಕ್ಕಳಿಗೆ ಕೀಟಲೆ ಮಾಡ್ತಾನೆ
ಕುಶಲ ಎಂಬುವವರು ಗಿಲ್ಲಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಗಿಲ್ಲಿ ನಟ ಮಹಿಳೆಯರ ಬಟ್ಟೆ ಮುಟ್ಟಿರುವುದು ತಪ್ಪು. ಹೆಣ್ಣುಮಕ್ಕಳಿಗೆ ಕೀಟಲೆ ಮಾಡುವುದು, ಕೆಲವೊಮ್ಮೆ ಅವಮಾನವಾಗುವ ರೀತಿ ಮಾತನಾಡುತ್ತಾರೆ. ಇದು ಸರಿಯಲ್ಲ. ಹೀಗಾಗಿ ಗಿಲ್ಲಿ ನಟನನ್ನ ಬಿಗ್‌ಬಾಸ್ ಮನೆಯಿಂದ ಹೊರಗೆ ಹಾಕಬೇಕು ಅಥವಾ ಬಂಧಿಸಬೇಕು ಎಂದು ನಾನು ಹೇಳಲ್ಲ. ಆದರೆ ಬಿಗ್‌ಬಾಸ್‌ನವರು ಗಿಲ್ಲಿಗೆ ಬುದ್ಧಿ ಹೇಳಬೇಕು. ಗಿಲ್ಲಿ ಬಗ್ಗೆ ನನಗೆ ಏನೂ ವೈಯಕ್ತಿಕ ದ್ವೇಷ ಇಲ್ಲ. ಇದನ್ನು ಪರಿಗಣಿಸಿ ಮಹಿಳಾ ಆಯೋಗದವರು ಪೊಲೀಸ್ ಕಮೀಷನರ್‌ಗೆ ಕೇಸ್ ವರ್ಗಾಯಿಸಿದ್ದಾರೆ. ಇದಕ್ಕೆ ಧನ್ಯವಾದ ಎಂದಿದ್ದಾರೆ.












Click it and Unblock the Notifications