Pratham: ಬದುಕು ಸುಂದರವಾದದ್ದು; ಅಂಧಾಭಿಮಾನಿಗಳೇ... ಎಂದು ಪೊಲೀಸರಿಗೆ ಪ್ರಥಮ್ ದೂರು

ಬೆಂಗಳೂರು, ಜೂನ್. 19: ನಟ ದರ್ಶನ್ ತೂಗುದೀಪ ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದಾರೆ. ಆದರೆ, ಅವರ ಅಭಿಮಾನಿಗಳು ಮಾತ್ರ ತನ್ನ ಬಾಸ್ ಪರವಾಗಿ ನಿಂತಿದ್ದು, ಅವರ ವಿರುದ್ಧ ಮಾತನಾಡುವವರ ಕಿಡಿ ಕಾರುತ್ತಿದ್ದಾರೆ. ಜೊತೆಗೆ ಪ್ರಕರಣದ ಬಗ್ಗೆ ನೆಗೆಟಿವ್ ಆಗಿ ಮಾತನಾಡುವವರಿಗೆ ಬೆದರಿಕೆಯನ್ನು ಹಾಕುತ್ತಿದ್ದಾರೆ.

ನಟ ದರ್ಶನ್ ಬಂಧನದ ಬಳಿಕ ನಟನ ಅಭಿಮಾನಿಗಳಿಗೆ ಬುದ್ಧಿವಾರ ಹೇಳಿದ್ದ ಬಿಗ್ ಬಾಸ್ ಕನ್ನಡ 4 ನೇ ಸೀಸನ್‌ನ ವಿನ್ನರ್ ಮತ್ತು ನಟ ಪ್ರಥಮ್ ಅವರಿಗೆ ಕೆಲ ಕಿಡಿಗೇಡಿಗಳು ಬೆದರಿಕೆ ಕರೆ ಮಾಡಿದ್ದಾರೆ. ಹೀಗಾಗಿ ನಟ ಪ್ರಥಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Bigg Boss Kannada 4 Winner Actor Pratham Files Complaint Against Darshan Fans

ಡಿ ಬಾಸ್ ಫ್ಯಾನ್ಸ್ ವಿರುದ್ಧ ಪ್ರಥಮ್ ದೂರು

ನಟ ಪ್ರಥಮ್ ಇತ್ತೀಚೆಗೆ ವಿಡಿಯೋ ಒಂದರಲ್ಲಿ ದರ್ಶನ್ ಅಭಿಮಾನಿಗಳಿಗೆ ತಿಳಿ ಹೇಳಿದ್ದರು. ಇದಾದ ನಂತರ ದರ್ಶನ್ ಅಭಿಮಾನಿಗಳಿಂದ ಸುಮಾರು 500ಕ್ಕೂ ಅಧಿಕ ಬೆದರಿಕೆ ಹಾಕುವ ಫೋನ್ ಕರೆಗಳು ಬಂದಿದ್ದು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಟ ಪೊಲೀಸರ ಮೊರೆ ಹೋಗಿದ್ದು, ರಕ್ಷಣೆ ಕೋರಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಜೀವನ ದೊಡ್ಡದು; ಯಾರಿಗೋಸ್ಕರವೋ ಹಾಳು ಮಾಡಿಕೊಳ್ಳಬೇಡಿ. ನಾನು ಶಾಂತಿಯಿಂದಲೇ ಇದ್ದೆ; ನೀವು ಅತೀಯಾಗಿ ನಮ್ಮ ಕರ್ನಾಟಕದ ಅಳಿಯ ತಂಡದ ಆಫೀಸ್‌ ನಂಬರ್‌ಗೆ ಬೆದರಿಕೆ ಹಾಕುತಿದ್ದೀರಾ" ಎಂದು ಬರೆದುಕೊಂಡಿದ್ದಾರೆ.

"ಇನ್ಮೇಲೆ ನನಗೆ ಬರೋ ಕಾಲ್ ಮೆಸೇಜ್, ಸೋಶಿಯಲ್ ಮಿಡಿಯಾ ವಾರ್ನಿಂಗ್ ಎಲ್ಲವೂ ಪೋಲೀಸರು ನೋಡಿಕೊಳ್ತಾರೆ. ಬದುಕು ಸುಂದರವಾದದ್ದು; ಅಂಧಾಭಿಮಾನಿಗಳೇ, ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ" ಎಂದು ಮತ್ತೆ ದರ್ಶನ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

ಈ ಹಿಂದೆ ದರ್ಶನ್ ಪ್ರಕರಣಕ್ಕೆ ಟ್ವೀಟ್ ಮಾಡಿದ್ದ ನಟ ಪ್ರಥಮ್, "ನಾನು ಯಾರ ವಿರೋಧಿಯೂ ಅಲ್ಲ.. ನೊಂದಿರೋ ಸಹನಾ ಪರ. ದರ್ಶನ್ ತೂಗುದೀಪ್ ಸರ್ ಕೇಸ್ ತೀರ್ಪು ಬರೋಕೂ ಮುಂಚೆ ನಾನೇನು ಮಾತಾಡಲ್ಲ!. ನನಗಿರೋ ಬೇಸರ ಒಂದೇ ನಮ್ಮ ಆಫೀಸ್ ಹತ್ತಿರದ ಪೊಲೀಸ್ ಸ್ಟೇಷನ್ ಮುಂದೆ ನಿಂತು ಪಬ್ಲಿಕ್ ಓಡಾಟಕ್ಕೆ ತೊಂದರೆ ಕೊಡ್ತಿರೋ ಅಯೋಗ್ಯರಿಗೆ ಅಷ್ಟೇ ಮಂಗಳಾರತಿ ಮಾಡಿದ್ದು. ನಾನು ನೊಂದಿರೋ ಸಹನಾ ಪರ. ದಯವಿಟ್ಟು ಜನ ಅವ್ರಿಗೆ ಸಹಾಯ ಮಾಡಿ" ಎಂದು ಮನವಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+