Gilli: ಕಿಚ್ಚನ ಎದುರೇ ಕಳಚಿತು ಗಿಲ್ಲಿ ವಿರೋಧಿಗಳ ಅಸಲಿ ಮುಖವಾಡ, ಎಲ್ಲರ ಟಾರ್ಗೆಟ್‌ ಆಗಿದ್ದೇಕೆ?

ಬಿಗ್‌ಬಾಸ್‌ ಕನ್ನಡ ಸೀಸನ್‌-12ರ ಪ್ರಬಲ ಸ್ಪರ್ಧಿಗಳಲ್ಲಿ ಗಿಲ್ಲಿ ನಟ ಕೂಡ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಗಿಲ್ಲಿ ಫ್ಯಾನ್ಸ್‌ ಅಬ್ಬರ ಕೂಡ ಜೋರಾಗಿದೆ. ಪ್ರತಿ ವಾರವೂ ಗಿಲ್ಲಿಯ ಕಾಮಿಡಿ ಹಾಗೂ ಆಟಕ್ಕೆ ಮನಸೋತಿರುವ ಪ್ರೇಕ್ಷಕರು ಈ ಬಾರಿ ಕಪ್‌ ಗೆಲ್ಲೋದು ಗಿಲ್ಲಿನೇ ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ ಬಿಗ್‌ಬಾಸ್ ಮನೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಸಹಸ್ಪರ್ಧಿಗಳು ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಹೌದು, ಬಿಗ್‌ಬಾಸ್‌ನಿಂದ ಗಿಲ್ಲಿಯನ್ನು ಹೊರಗೆ ಕಳಿಸಲು ಉಳಿದ ಸ್ಪರ್ಧಿಗಳು ದೊಡ್ಡ ತಂತ್ರ ರೂಪಿಸಿದ್ದಾರೆ. ಇಷ್ಟು ದಿನ ಜೊತೆಯಲ್ಲೇ ಇದ್ದವರು ಗಿಲ್ಲಿ ವಿರುದ್ಧ ಉಲ್ಟಾ ಹೊಡೆಯಲು ಶುರು ಮಾಡಿದ್ದಾರೆ. "ಬೇಕಂತಲೇ ಬೇರೆಯವರ ಮನಸ್ಸನ್ನು ನೋಯಿಸುವುದು ಯಾರು?" ಎಂದು ಕಿಚ್ವ ಸುದೀಪ್ ಕೇಳಿದ್ದಾರೆ. ಇದಕ್ಕೆ ಕಾವ್ಯ, ರಕ್ಷಿತಾ, ಜಾನ್ವಿ, ಅಶ್ವಿನಿ ಗೌಡ, ರಿಷಾ, ಧನುಶ್‌ ಗೌಡ, ಧ್ರುವಂತ್‌ ಸೇರಿ ಬಹುತೇಕ ಸ್ಪರ್ಧಿಗಳು ಗಿಲ್ಲಿ ಹೆಸರನ್ನೇ ಸೂಚಿಸಿದ್ದಾರೆ.

Bigg Boss Kannada 12 Gilli Targeted By Housemates

ಗಿಲ್ಲಿ ಯಾವಾಗಲೂ ಒಬ್ಬರನ್ನ ಕೆಳಗೆ ಹಾಕಿಯೇ ಕಾಮಿಡಿ ಮಾಡೋದು ಎಂದು ಧನುಶ್‌ ಕಾರಣ ನೀಡಿದ್ದಾರೆ. ಇನ್ನು ಅಶ್ವಿನಿ ಗೌಡ ಕೂಡ ಗಿಲ್ಲಿ ನನ್ನನ್ನು ಕುಗ್ಗಿಸಬಹುದು ಎಂದು ತಿಳಿದುಕೊಂಡು, ಆ ತಂತ್ರವನ್ನ ನನ್ನ ಮೇಲೆ ಪ್ರಯೋಗಿಸುತ್ತಾರೆ ಎಂದಿದ್ದಾರೆ. ಕಾವ್ಯ ಕೂಡ ಗಿಲ್ಲಿ ವಿರುದ್ಧ ಉಲ್ಟಾ ಹೊಡೆದಿದ್ದು, ಗಿಲ್ಲಿ ಯಾರ ಹೆಸರು ತಗೊಂಡು ರೇಗಿಸುತ್ತಾನೋ ಅದರಿಂದ ಅವರು ವೈಯಕ್ತಿಕವಾಗಿ ನೊಂದಿರುವುದನ್ನು ನಾನು ನೋಡಿದ್ದೀನಿ ಎಂದು ಕಾವ್ಯ ಹೇಳಿದ್ದಾರೆ.

ಇದ್ದಿದ್ದು ಇದ್ದಂಗೆ ಹೇಳ್ತೀನಿ

ಸ್ಪರ್ಧಿಗಳ ಮಾತಿಗೆ ಕೌಂಟರ್‌ ಕೊಟ್ಟಿರುವ ಗಿಲ್ಲಿ, ನಿಮ್ಮ ಸತ್ಯವನ್ನೇ ನಾನು ಕಾಮಿಡಿ ರೂಪದಲ್ಲಿ ಹೇಳ್ತೀನಿ. ಹಾಗೆಂದ ಮಾತ್ರಕ್ಕೆ ಒಬ್ಬರನ್ನ ಕೆಳಗೆ ಹಾಕಿ ಮಾತನಾಡ್ತೀನಿ ಅಂತಲ್ಲ. ಇರೋ ಸತ್ಯವನ್ನೇ ಯಾರೋ ಒಬ್ಬರು ಮೂಲೆಯಲ್ಲಿ ಕೂತು ಮಾತನಾಡ್ತಾರೆ. ಅದೆಲ್ಲ ನಿಮಗೆ ಗೊತ್ತಿಲ್ಲ, ಆಚೆ ಹೋದ ಮೇಲೆ ನೀವೆ ಅವರ ಮೇಲೆ ಬೇಜಾರು ಮಾಡಿಕೊಳ್ತೀರ. ನಾನು ಇದ್ದಿದ್ದು ಇದ್ದಂಗೆ ಹೇಳ್ತೀನಿ, ಅದಕ್ಕೆ ನಿಮಗೆಲ್ಲ ಹಾಗೆ ಅನಿಸಬಹುದು ಎಂದು ಗಿಲ್ಲಿ ತಿರುಗೇಟು ನೀಡಿದ್ದಾರೆ.

ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ ಎಪಿಸೋಡ್‌ನಲ್ಲಿ ಗಿಲ್ಲಿಗೆ ಸುದೀಪ್‌ ಟಾಸ್ಕ್‌ ಕೊಟ್ಟಿದ್ದಾರೆ. ಅಶ್ವಿನಿ ಗೌಡ ಅವರು ವಾರದ ದಿನಗಳಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಹೇಗಿರುತ್ತಾರೆ? ಹಾಗೂ ವಾರಾಂತ್ಯದಲ್ಲಿ ಹೇಗಿರುತ್ತಾರೆ ಎಂದು ಕೇಳಿದ್ದಾರೆ. ಆಗ ಗಿಲ್ಲಿ ಅಶ್ವಿನಿ ಅವರಂತೆ ಮಿಮಿಕ್ರಿ ಮಾಡಿದ್ದಾರೆ. ಇದನ್ನು ಕೇಳಿ ಸುದೀಪ್‌ ಕೂಡ ನಗೆಗಡಲಲ್ಲಿ ತೇಲಾಡಿದ್ದಾರೆ. ಹೀಗಾಗಿ ಇಂದಿನ ಎಪಿಸೋಡ್‌ ಕುತೂಹಲ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+