Bigg Boss: ಬಿಗ್‌ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗಿದ್ದು ಯಾರು?
ಬಿಗ್‌ಬಾಸ್ ಕನ್ನಡ ಸೀಸನ್-12ರ ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ ಸಂಚಿಕೆಯಲ್ಲಿ ಎಂದಿನಂತೆ ಈ ವಾರವೂ ಎಲಿಮಿನೇಷನ್ ನಡೆದಿದೆ. ಒಬ್ಬರು ಸ್ಪರ್ಧಿ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಬಿಗ್‌ಬಾಸ್‌ನಿಂದ ಹೊರಬರಲು ಹಲವು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಮೊದಲಿಗೆ ರಕ್ಷಿತಾ, ಸ್ಪಂದನಾ ಹಾಗೂ ಅಭಿಷೇಕ್ ಸೇಫ್ ಆದರು. ಮಾಳು ಹಾಗೂ ಸೂರಜ್ ಪಾರಾಗಿದ್ದರು. ಅಂತಿಮವಾಗಿ ರಿಷಾ ಗೌಡ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳಿದರು.
ಬಳಿಕ ಸುದೀಪ್ ನೀಡಿದ ಟಾಸ್ಕ್‌ನ ಕೊನೆಯಲ್ಲಿ ರಿಷಾ ಹಾಗೂ ಧ್ರುವಂತ್ ಡೇಂಜರ್ ಜೋನ್‌ನಲ್ಲಿದ್ದರು. ಧ್ರುವಂತ್ ಪಾರಾಗಿ ರಿಷಾ ಔಟ್ ಆದರು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದ ರಿಷಾ ಆರಂಭದಲ್ಲಿ ಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರು. ಬಳಿಕ ಗಿಲ್ಲಿ ಜೊತೆಗಿನ ಗಲಾಟೆ, ಕೈಮಾಡಿದ್ದು, ಕಿರುಚಾಟ ಎಲ್ಲವೂ ಅವರಿಗೆ ಉಲ್ಟಾ ಹೊಡೆದಿತ್ತು. ಕಳೆದ ವಾರ ಸುದೀಪ್ ಇದಕ್ಕೆ ಖಾರವಾಗಿ ಬೈದಿದ್ದರು.

ಬಿಗ್‌ಬಾಸ್‌ನಲ್ಲಿ ರಿಷಾ ಹಾಗೂ ಗಿಲ್ಲಿ ನಡುವೆ ಬಕೆಟ್ ವಿಷಯಕ್ಕೆ ಗಲಾಟೆ ನಡೆದಿತ್ತು. ಬಕೆಟ್ ಕೊಡದಿದ್ದಕ್ಕೆ ರಿಷಾ ಬಟ್ಟೆಯನ್ನು ಗಿಲ್ಲಿ ಬಾತ್‌ರೂಮ್ ಬಳಿ ತಂದು ಹಾಕಿದ್ದರು. ಇದಕ್ಕೆ ರೊಚ್ಚಿಗೆದ್ದ ರಿಷಾ, ಗಿಲ್ಲಿ ಮೇಲೆ ಕೈಮಾಡಿದ್ದರು. ಇದು ರಿಷಾ ಮೇಲಿನ ಅಭಿಪ್ರಾಯ ಬದಲಾಗುವಂತೆ ಮಾಡಿತ್ತು. ಅಲ್ಲದೆ ಬಿಗ್‌ಬಾಸ್ ಮನೆಯಲ್ಲಿ ಅಲ್ಲೋಲಕಲ್ಲೋಲವೂ ಸೃಷ್ಟಿಸಿತ್ತು. ಬಳಿಕ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಈ ವಿಚಾರವಾಗಿ ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಹೀಗಾಗಿ ಗಿಲ್ಲಿ ಮೇಲೆ ಕೈಮಾಡಿದ್ದು ಕೂಡ ರಿಷಾ ಅವರಿಗೆ ಮುಳುವಾಯಿತು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಜನ ಅಭಿಪ್ರಾಯ ತಿಳಿಸುತ್ತಿದ್ದಾರೆ.
ಬಿಗ್‌ಬಾಸ್ ಮನೆಯಿಂದ ವೇದಿಕೆ ಬಂದ ರಿಷಾ ಗೌಡ ಭಾವುಕರಾಗಿದ್ದರು. ಮಾತನಾಡಿದ್ದಾರೆ. ಇಷ್ಟು ದಿನ ನನ್ನನ್ನು ಮನೆ ಮಗಳಂತೆ ಸ್ವೀಕರಿಸಿದ್ದೀರಿ, ನಿಮ್ಮ ಮನೆ ಮಕ್ಕಳಂತೆ ನನಗೂ ಕೋಪ ಇದೆ. ಇದನ್ನು ದಯವಿಟ್ಟು ಸಹಿಸಿಕೊಳ್ಳಿ. ನಿಮ್ಮ ಪ್ರೀತಿ ಗಳಿಸಬೇಕು ಅಂತಲೇ ನಾನು ಬಿಗ್‌ಬಾಸ್‌ಗೆ ಬಂದೆ. ಪ್ರೀತಿ ಕೊಡುವುದನ್ನ ಯಾವತ್ತು ನಿಲ್ಲಿಸದಿರಿ ಎಂದಿದ್ದರು.
ತಪ್ಪುಗಳಾದಾಗ ಕ್ಷಮಿಸಿದ್ದೀರಿ
ತಪ್ಪುಗಳಾದಾಗ ಕ್ಷಮಿಸಿದ್ದೀರಿ, ಪ್ರತಿ ಬಾರಿ ಬೆನ್ನು ತಟ್ಟಿದ್ದೀರಿ, ವೋಟ್ ನೀಡಿ ಆಶೀರ್ವದಿಸಿದ್ದೀರಿ, ಈ ಪ್ರೀತಿಗೆ ಸದಾ ಋಣಿ ಎಂದು ರಿಷಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿಯೂ ನಿಮ್ಮ ಪ್ರೀತಿ ಹೀಗೇ ಇರಲಿ. ಎಲ್ಲರಿಗೂ ತುಂಬು ಮನಸ್ಸಿನ ಧನ್ಯವಾದಗಳು. ಈ ಅದ್ಭುತ ಅವಕಾಶಕ್ಕಾಗಿ ಕಲರ್ಸ್ ವಾಹಿನಿಗೆ, ಎಲ್ಲಾ ನೈತಿಕ ಬೆಂಬಲಕ್ಕಾಗಿ ಕಿಚ್ಚ ಸುದೀಪ್ ಸರ್ ಅವರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.












Click it and Unblock the Notifications