BBK-12: ಗಿಲ್ಲಿ ಮೇಲೆ ಹಲ್ಲೆ ಮಾಡಿದ್ರಾ ರಿಷಾ ಗೌಡ, ಇಬ್ಬರ ನಡುವೆ ಕಿರಿಕ್‌ ಏಕೆ?

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಹಾಗೂ ರಿಷಾ ಗೌಡ ದೊಡ್ಡ ಕಿರಿಕ್‌ ಆಗಿದೆ. ಈ ವೇಳೆ ಗಿಲ್ಲಿ ಮೇಲೆ ರಿಷಾ ಗೌಡ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಗ್‌ಬಾಸ್‌ ಪ್ರೋಮೋದಲ್ಲಿ ಕೂಡ ರಿಷಾ ಗಿಲ್ಲಿ ಜೊತೆ ಗಲಾಟೆ ಮಾಡಿದ್ದಾರೆ. ತಮಾಷೆಯಾಗಿದ್ದ ಸ್ಪರ್ಧಿಗಳಲು ಗರಂ ಆಗಿದ್ದು, ರಿಷಾ ನೇರವಾಗಿ ಗಿಲ್ಲಿಗೆ ಹೊಡೆದೇ ಬಿಟ್ಟಿದ್ದಾರೆ. ಆ ಒಂದು ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್‌ ಆಗಿದೆ.

ರಿಷಾ ಗೌಡ ಬಾತ್‌ರೂಂನಲ್ಲಿದ್ದಾಗ ಗಿಲ್ಲಿ ಬಕೆಟ್‌ ಕೇಳಿದ್ದಾರೆ. ಇದಕ್ಕೆ ರಿಷಾ ಪ್ರತಿಕ್ರಿಯೆ ನೀಡಲಿಲ್ಲ. ಆಗ ಗಿಲ್ಲಿ, ರಿಷಾ ಬಕೆಟ್‌ ಕೊಡೋದಿಲ್ಲ ಅಂತ ಹೇಳು, ನಾನು ಏನ್‌ ಮಾಡಬೇಕೋ ಮಾಡ್ತೀನಿ ಎಂದಿದ್ದಾರೆ. ಅಲ್ಲದೆ ರಿಷಾ ಗೌಡ ಬಟ್ಟೆಗಳನ್ನ ತಂದು ನೆಲದ ಮೇಲೆ ಇಟ್ಟಿದ್ದಾರೆ. ಬಳಿಕ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ.

Bigg Boss Kannada 12 Did Risha Gowda Attack Gilli Shocking Clash Inside The House

ಬಾತ್‌ರೂಂನಿಂದ ಹೊರಬಂದ ರಿಷಾ ತನ್ನ ಬಟ್ಟೆಗಳು ನೆಲದ ಮೇಲೆ ಇಟ್ಟಿರುವುದನ್ನ ನೋಡಿ ರೊಚ್ಚಿಗೆದ್ದಿದ್ದಾರೆ. ಕೋಪದಿಂದ ಗಿಲ್ಲಿ ಎಂದು ಜೋರಾಗಿ ಕಿರುಚಾಡಿದ್ದಾರೆ. ಏಯ್‌, ಏನ್‌ ಮಾಡಿದ್ದೀಯ ಬಟ್ಟೆನಾ? ಎಂದು ಗಿಲ್ಲಿ ಕೈಗೆ ಹೊಡೆದೇಬಿಟ್ಟಿದ್ದಾರೆ. ಗಿಲ್ಲಿಗೆ ಹೊಡೆದಿದ್ದಕ್ಕೆ ಉಳಿದೆಲ್ಲ ಸ್ಪರ್ಧಿಗಳು ಶಾಕ್‌ ಆಗಿದ್ದಾರೆ. ನಾನು ಸ್ನಾನಕ್ಕೆ ಹೋಗಿದ್ದಕ್ಕೆ ಈ ರಿಯಾಕ್ಷನ್ನಾ? ಬಟ್ಟೆ ತಂದು ಅಲ್ಲಿಡೋದು ತಮಾಷೆನಾ ನಿಂಗೆ? ನೀನು ಮಾಡ್ತಿರೋದು ಚೀಪ್‌ ಚೀಪ್‌ ತಮಾಷೆ ಎಂದು ರಿಷಾ ಗರಂ ಆಗಿದ್ದಾರೆ.

ಅಲ್ಲದೆ ರಿಷಾ ಕೂಡ ಗಿಲ್ಲಿ ಬಟ್ಟೆಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಆಗ ಗಿಲ್ಲಿ ಮಾಡಿದ ಅಂತ ನೀನೂ ಹಾಗೆ ಮಾಡಬೇಡ ಎಂದು ಅಶ್ವಿನಿಗೌಡ ಬುದ್ಧಿವಾದ ಹೇಳಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ರಿಷಾ, ಬಟ್ಟೆಗಳನ್ನ ಕಾಲಲ್ಲೇ ಒದ್ದು ಬಿಸಾಡಿದ್ದಾರೆ. ಅಲ್ಲಿಗೆ ಬಂದ ಗಿಲ್ಲಿ ಜೊತೆ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಸ್ಪರ್ಧಿಗಳು ಇವರ ಗಲಾಟೆ ಬಿಡಿಸಲು ಬಂದಿದ್ದಾರೆ. ನಂತರ ಏನಾಯ್ತು ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ನನ್ನ ಕಾವ್ಯ ಮಧ್ಯೆ ಬರಬೇಡಿ

ನನ್ನ ಹಾಗು ಕಾವ್ಯ ಅವರ ನಡುವಿನ ಸ್ನೇಹ ಆಗಿದೆ. ಅವರಿಗೆ ಇಲ್ಲದ ಸಮಸ್ಯೆ ನಿಮಗೆಲ್ಲ ಏಕೆ ಎಂದು ಗಿಲ್ಲಿ ಉಳಿದ ಸ್ಪರ್ಧಿಗಳಿಗೆ ಕೇಳಿದ್ದಾರೆ. ಅಶ್ವಿನಿ ಗೌಡ ಅವರಿಗೆ ಉತ್ತರಿಸುತ್ತಾ, ನಿಮಗಂತೂ ನಿಮ್ಮ ಸ್ನೇಹ ಉಳಿಸಿಕೊಳ್ಳೋಕೆ ಆಗಲಿಲ್ಲ. ನಾವು ನಮ್ಮ ಸ್ನೇಹ ಉಳಿಸಿಕೊಂಡಿದ್ದೀವಿ ಬಿಡಿ ಎಂದಿದ್ದಾರೆ. ಈಗ ನಮ್ಮಿಬ್ಬರದ್ದು ನಡೆಯುವಾಗ ಮಧ್ಯದಲ್ಲಿ ಯಾರೂ ಬರಬೇಡಿ. ಗುಂಪುಗಾರಿಕೆ ಅಂತೀರಲ್ಲ, ನಾವು ದಾರ ಕಟ್ಟಿ ಜಂಟಿಯಾಗಿ ಬಂದವರು. ಆದರೆ ನೀವೆಲ್ಲ ದಾರ ಇಲ್ಲದೆ ಜಂಟಿಯಾಗಿದ್ದೀರಿ. ಅದು ಎಲ್ಲರಿಗೂ ಗೊತ್ತಿದೆ ಎಂದು ಗಿಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ವೀಕ್ಷಕರು ಗಿಲ್ಲಿಗೆ ಸಪೋರ್ಟ್‌ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+