Hanumantha: ಮನೆಮಂದಿಯಿಂದ ಜೈಲು ಸೇರಿದ ಹನುಮಂತ

ಬಿಗ್‌ಬಾಸ್‌ ಕನ್ನಡ ಸೀಸನ್ 11 ತುಂಬಾ ಅದ್ಬುತವಾಗಿ ಮೂಡಿ ಬರುತ್ತಿದೆ. ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲವನ್ನ ಹುಟ್ಟಿಸುತ್ತಿದ್ದು, ಈ ಬಾರಿ ಯಾರ್ಯಾರು ಗ್ರ್ಯಾಂಡ್ ಫಿನಾಲೆಗೆ ತಲುಪುತ್ತಾರೆನ್ನುವ ಕುತೂಹಲ ಬಿಗ್ ಬಾಸ್ ವೀಕ್ಷಕರಲ್ಲಿ ಹೆಚ್ಚಾಗಿದೆ.

13ನೇ ವಾರ ಕಳಪೆ ಪಟ್ಟವನ್ನ ಬಿಗ್‌ ಬಾಸ್‌ ಮಂದಿ ಹನುಮಂತ ಲಮಾಣಿ ಅವರಿಗೆ ನೀಡಿರುವುದರಿಂದ ಹಾಡುವ ಹಕ್ಕಿ ಹನುಮಂತ ಅವರು ಜೈಲು ಸೇರಿದ್ದಾರೆ. ಸತತವಾಗಿ ಮೂರು ವಾರಗಳಿಂದ ಕಳಪೆ ಪಟ್ಟ ಪಡೆದಿದ್ದವರು ಚೈತ್ರಾ ಕುಂದಾಪುರ. ಈ ವಾರ ಕಳಪೆಯಿಂದ ಚೈತ್ರಾ ಕುಂದಾಪುರ ಜಸ್ಟ್‌ ಮಿಸ್ ಆಗಿದ್ದು, ಇದೇ ಮೊದಲ ಬಾರಿಗೆ ಕಳಪೆ ಪಟ್ಟವನ್ನ ಹನುಮಂತ ಲಮಾಣಿ ಅವರು ಪಡೆದಿದ್ದಾರೆ.

Bigg Boss Kannada 11 Hanumantha named as worst player of this week

ಈ ವಾರ 'ಬಿಬಿ ರೆಸಾರ್ಟ್' ಟಾಸ್ಕ್ ಚಾಲ್ತಿಯಲ್ಲಿತ್ತು. ಈ ಟಾಸ್ಕ್ ವೇಳೆ ಹನುಮಂತ ಲಮಾಣಿ ಅವರ ಪರ್ಫಾಮೆನ್ಸ್ ಅಷ್ಟಕಷ್ಟೆ, ಶುಚಿತ್ವ ಕಾಪಾಡಿಕೊಂಡಿಲ್ಲ ಅಂತ ಇತರೆ ಸ್ಪರ್ಧಿಗಳು ಹಲವು ಕಾರಣಗಳನ್ನ ನೀಡಿ ದೂರಿದ್ದಾರೆ. ಹೀಗಾಗಿ, ಹನುಮಂತ ಲಮಾಣಿ ಅವರಿಗೆ ಕಳಪೆ ವೋಟ್ಸ್ ಹೆಚ್ಚು ಬಿದ್ದಿವೆ.

ಇನ್ನೂ ಕಳಪೆ ಪಟ್ಟ ತೆಗೆದುಕೊಂಡು ಜೈಲಿಗೆ ತೆರಳುವ ಮುನ್ನ ಹನುಮಂತ ಲಮಾಣಿ 'ನಾನ್ ಕುಗ್ಗೋದೂ ಇಲ್ಲ, ಬಗ್ಗೋದೂ ಇಲ್ಲ' ಅಂತ ಸಿಡಿದೆದ್ದಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಈ ವಾರ ರೆಸಾರ್ಟ್ ಟಾಸ್ಕ್ ಆಡಿಸಲಾಗಿದೆ. ಮನೆ ಮಂದಿಯೆಲ್ಲ ಬಹಳ ಕಷ್ಟಪಟ್ಟು ಟಾಸ್ಕ್ ಆಡಿದ್ದಾರೆ. ಭವ್ಯ ಹಾಗೂ ಚೈತ್ರ ಅವರ ಎರಡು ತಂಡಗಳವರು ಟಾಸ್ಕ್​ ಅನ್ನು ಸಾಧ್ಯವಾದಷ್ಟು ಚೆನ್ನಾಗಿಯೇ ಆಡಿದ್ದಾರೆ. ಆದರೆ ವಾರದ ಅಂತ್ಯದಲ್ಲಿ ಕಳಪೆ-ಉತ್ತಮ ನೀಡುವ ಸಮಯ ಬಂದಾಗ ಮನೆ ಮಂದಿಯೆಲ್ಲ ಒಕ್ಕೂರಿಲಿನಿಂದ ಹನುಮಂತ ಲಮಾಣಿ ಅವರಿಗೆ ಕಳಪೆ ಕೊಟ್ಟಿದ್ದಾರೆ.

ಈ ವಾರ ಡಬಲ್​ ಎಲಿಮಿನೇಷನ್​?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ 89ನೇ ದಿನಕ್ಕೆ ಕಾಲಿಟ್ಟಿದೆ. ಬಿಗ್​ಬಾಸ್ ಮನೆಯಲ್ಲಿ ಒಟ್ಟು 10 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 10 ಸ್ಪರ್ಧಿಗಳು ಯಾರು ಈ ವಾರ ಬಿಗ್​ಬಾಸ್​ ಮನೆಯಿಂದ ಹೋರ ಹೋಗಲಿದ್ದಾರೆ ಅಂತ ಕುತೂಹಲ ಮೂಡಿದೆ. ನಿನ್ನೆ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ, ಗೌತಮಿ ಜಾಧವ್​, ಧನರಾಜ್​ ಆಚಾರ್ಯ, ಮೋಕ್ಷಿತಾ ಪೈ, ತ್ರಿವಿಕ್ರಮ್​, ಹನುಮಂತ ಲಂಬಾಣಿ, ಉಗ್ರಂ ಮಂಜು ನಾಮಿನೇಟ್ ಆಗಿದ್ದಾರೆ. ಇನ್ನೂ ಕ್ಯಾಪ್ಟನ್​ ಭವ್ಯಾ ಗೌಡಯಿಂದ ಐಶ್ವರ್ಯಾ ಸಿಂಧೋಗಿ ನೇರ ನಾಮಿನೇಟ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+