Bigg Boss: ಹನುಮಂತನ ಪ್ರೀತಿ ಒಪ್ಪದ ತಾಯಿ- ಕಿಚ್ಚ ಸುದೀಪ್ ಹೇಳಿದ್ದೇನು?
ಬಿಗ್‌ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಅವರದ್ದು ಕಾಣಿಸುವ ಪ್ರೀತಿ ಆದರೆ, ಹನುಮಂತನದ್ದು ಕಾಣದ ಪ್ರೀತಿ. ಕುರಿಗಾಯಿ ಹನುಮಂತನಿಗೆ ಪ್ರೇಯಸಿ ಇದ್ದಾಳೆ. ಆ ಪ್ರೇಯಸಿಯೊಂದಿಗೇ ಹನುಮಂತನ ಮದುವೆ ನಡೆಯಬೇಕು ಅನ್ನೋದು ಎಲ್ಲರ ಆಸೆ. ಈ ಆಸೆ ಕಿಚ್ಚ ಸುದೀಪ್ ಅವರದ್ದೂ ಕೂಡ ಹೌದು. ಆದರೆ ಇದಕ್ಕೆ ಹನುಮಂತನ ತಾಯಿ ಮಾತ್ರ ಒಪ್ಪಲೇ ಇಲ್ಲ. ಒಪ್ಪುವವರೆಗೂ ಸುದೀಪ್ ಬಿಡಲಿಲ್ಲ. ಹಾಗಾದರೆ ಆ ಹುಡುಗಿ ಯಾರು? ಹನುಮಂತ ತಾಯಿ ಯಾಕೆ ಆ ಹುಡುಗಿಯನ್ನ ಒಪ್ಪಲಿಲ್ಲ? ಸುದೀಪ್ ಒಪ್ಪಿಸಿದ್ದು ಹೇಗೆ?
ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಸೈಲೆಂಟ್ ಹುಡುಗ ಅಂದರೆ ಅದು ಹನುಮಂತ. ಮುಗ್ಧತೆಗೆ, ಸರಳತೆಗೆ ಹನುಮಂತ ಲಕ್ಷಾಂತರ ಜನರ ಮನ ಗೆದ್ದಿದ್ದಾರೆ. ಇನ್ನೂ ಹನುಮಂತನ ಹಾಡು ಶುರುವಾಗುವುದು 'ಹುಡುಗಿ'ಯಿಂದಲೇ. ಹೀಗೆ ಹಾಡು ಹಾಡುವಾಗ 'ಹೇ ಹುಡುಗಿ' ಎನ್ನುವ ಹನುಮಂತನಿಗೆ ಹುಡುಗಿ ಇರಬೇಕು ಅನ್ನೋದು ಎಲ್ಲರ ಅನುಮಾನ. ಆದರೆ ಆ ಹುಡುಗಿ ಯಾರು ಅನ್ನೋದು ಯಾರಿಗೂ ಕೂಡ ಗೊತ್ತಿಲ್ಲ. ಎಲ್ಲರೂ ಆ ಹುಡುಗಿಯನ್ನು ಹುಡುಕುವುದರಲ್ಲೇ ಇದ್ದಾರೆ. ಆದರೆ ಆ ಹುಡುಗಿ ಯಾರ ಕಣ್ಣಿಗೂ ಬಿದ್ದಿಲ್ಲ.

ಹನುಮಂತನ ಪ್ರೇಯಸಿಯೊಂದಿಗೆ ಮದುವೆ- ಪೋಷಕರನ್ನು ಒಪ್ಪಿಸಿದ ಕಿಚ್ಚ
ಕಿಚ್ಚ ಸುದೀಪ್ ಅವರಿಗೆ ಹನುಮಂತನನ್ನು ಕಂಡರೆ ಬಲೂ ಪ್ರೀತಿ. ಹನುಮಂತನನನ್ನು ಮಾತನಾಡಿಸಬೇಕು ಅಂದರೆ ಪ್ರೇಯಸಿ ವಿಚಾರ ತೆಗೆಯದೇ ಇದ್ದರೆ ಆ ಎಪಿಸೋಡ್ ಕಂಪ್ಲೀಟ್ ಆಗೋದೇ ಇಲ್ಲ. ಇದರಿಂದ ಕಳೆದ ದಿನ ಗ್ರ್ಯಾಂಡ್ ಫಿನಾಲೆಯಲ್ಲೂ ಹನುಮಂತನ ಪ್ರೇಯಸಿ ಬಗ್ಗೆ ಮಾತು ಬಂತು.
ಈ ವೇಳೆ ಕಿಚ್ಚ ಸುದೀಪ್ ಅವರು 'ವಿನ್ ಆದರೆ ಹುಡುಗಿ ಸಿಗೋದು ಪಕ್ಕಾನಾ ಹನುಮಂತು' ಎಂದು ಹೇಳುತ್ತಾರೆ. ಹನುಮಂತ ಇದಕ್ಕೆ 'ಹೂರಿ ಸರಾ..' ಎನ್ನುತ್ತಾರೆ. ವಿನ್ ಆದರೆ ಮದುವೆ ಫಿಕ್ಸಾ ಎಂದು ಮತ್ತೊಂದು ಪ್ರಶ್ನೆ ಕೇಳುತ್ತಾರೆ. ಇದಕ್ಕೂ ಹನುಮಂತು 'ಹೂ.. ಸರಾ' ಎನ್ನುತ್ತಾರೆ.
ಅಲ್ಲಿಗೆ ಈ ಪ್ರಶ್ನೆ ಹನುಮಂತನ ಪೋಷಕರ ಕಡೆಗೆ ಬರುತ್ತದೆ. ಆಗ ಹನುಮಂತನ ತಾಯಿ ಒಪ್ಪುವುದಿಲ್ಲ. ಹುಡುಗಿ ಯಾರು ಅಂತ ಗೊತ್ತಿಲ್ಲ. ಯಾರು ಅಂತ ನಾವು ನೋಡಿಲ್ಲ. ಅದು ಹೇಗೆ ಒಪ್ಪಿಕೊಳ್ಳೋದು ಸರ್. ಅದು ಆಗಲ್ರಿ ಎಂದು ಹೇಳಿಬಿಡುತ್ತಾರೆ. ಆಗ ಸುದೀಪ್ ಅವರು, ಹುಡುಗಿ ಯಾರು ಅಂತ ನಮಗೂ ಗೊತ್ತಿಲ್ವಾ? ಹನುಮಂತ ಏನೂ ನಿಮಗೆ ಹೇಳಿಲ್ವಾ? ಎಂದು ಕೇಳುತ್ತಾರೆ. ಅದಕ್ಕೆ ಹನುಮಂತನ ತಾಯಿ ಇಲ್ಲ ಸರ್ ನಮಗೇನು ಗೊತ್ತಿಲ್ಲ ಎನ್ನುತ್ತಾರೆ.
ಹನುಮಂತಾ ಯಾರು ಆ ಹುಡುಗಿ? ತಾಯಿ ಪ್ರಶ್ನೆ
ಮನಸ್ಸು ತಡಿಯಲು ಆಗದೆ ತಾಯಿ, ಹನುಮಂತ ಯಾರಪ್ಪ ಆ ಹುಡುಗಿ ಎಂದು ಕೇಳಿದಾಗ ಹನುಮಂತ ನಾಚಿ ನೀರಾಗಿ ಬಿಡುತ್ತಾರೆ. ಆಗ ಸುದೀಪ್, ಹುಡುಗಿ ಯಾರೇ ಆಗ್ಲಿ ಹನುಮಂತ ಇಷ್ಟ ಪಟ್ಟರೆ ನಿಮಗೆ ಇಷ್ಟ ಅಲ್ವಾ ಎಂದು ಮತ್ತೆ ತಾಯಿಗೆ ಕೇಳುತ್ತಾರೆ. ಆಗ ಹನುಮಂತ ತಾಯಿಗೆ ಇದು ಕಾಮಿಡಿ ಎಂದು ಅರ್ಥ ಆಗುತ್ತೆ. ಆಗ ಹೂನ್ ಸರ್. ಹನುಮಂತಗೆ ಇಷ್ಟ ಆಗಿದ್ದರೆ ನಮಗೂ ಓಕೆ ಎಂದು ಹೇಳುತ್ತಾರೆ.
ಅಲ್ಲಿಗೆ ಬಿಗ್‌ಬಾಸ್ ಮನೆಯಲ್ಲಿ ಕಾಣದ ಪ್ರೇಯಸಿಯ ಮಾತು ಕೊನೆಗೊಳ್ಳುತ್ತದೆ. ಇನ್ನೂ ಇಂದಿನ ಗ್ರ್ಯಾಂಡ್ ಫಿನಾಲೆಯಲ್ಲಿ ಹನುಮಂತ ವಿನ್ ಆದರೆ ಸುದೀಪ್ ಹಾಗೂ ಮನೆ ಸ್ಪರ್ಧಿಗಳು ಸೇರಿ ಮದುವೆ ಕೂಡ ಮಾಡಿಸಿಬಿಡ್ತಾರೆನೋ ಎನ್ನುವ ಕುತೂಹಲ ಹೆಚ್ಚಾಗಿದೆ. ಆದರೆ ಇಷ್ಟೆಲ್ಲಾ ಮಾತು ಬಂದರೂ ಕೂಡ ಹನುಮಂತನ ಹುಡುಗಿ ಯಾರು ಎನ್ನುವುದು ಈವರೆಗೂ ಗೊತ್ತಾಗಿಲ್ಲ.
ಹನುಮಂತನಿಗೆ ಪ್ರೇಯಸಿ ಇದಾಳಾ?
ನಿಜವಾಗಲೂ ಹನುಮಂತನಿಗೆ ಪ್ರೇಯಸಿ ಇದಾಳಾ ಎಂದು ಪ್ರಶ್ನೆ ಕೇಳಿದರೆ, ಇಲ್ಲ. ಹನುಮಂತ ಹೇಳುವ ಪ್ರಕಾರ, ಅವರ ಸ್ನೇಹಿತರು ಹಾಗೂ ಪೋಷಕರು ಹೇಳುವ ಪ್ರಕಾರ ಹನುಮಂತನಿಗೆ ಯಾರೂ ಕೂಡ ಪ್ರೇಯಸಿ ಇಲ್ಲ. ಆದರೆ ಹನುಮಂತ ಅವರನ್ನು ಮಾತನಾಡಿಸುವಾಗ ಅವರ ನಾಚಿಕೆ ನೋಡಬೇಕು ಎಂದು ಸುದೀಪ್ ಹಾಗೂ ಮನೆ ಮಂದಿಯೆಲ್ಲಾ ಹನುಮಂತನಿಗೆ ಪ್ರೇಯಸಿ ವಿಚಾರ ತೆಗೆದು ಮಾತನಾಡಿಸುತ್ತಾರೆ. ಇದು ಕಾಮಿಡಿಗಾಗಿ ಮಾತ್ರ ಅನ್ನೋದು ಎಲ್ಲರಿಗೂ ಗೊತ್ತಿದೆ.












Click it and Unblock the Notifications