50,00,000 ರೂಪಾಯಿ ಬಿಗ್‌ಬಾಸ್ ಹಣ ಗೆದ್ದ ಹನುಮಂತನ ಕಣಕಣದಲ್ಲೂ ಆರ್‌ಸಿಬಿ... Virat Kohli

50,00,000 ರೂಪಾಯಿ ಹಣ ಬಂದಿದ್ದರೂ ಬಿಗ್‌ಬಾಸ್ ಸಿಂಗರ್ ಹನುಮಂತ ಬದಲಾಗಿಲ್ಲ. ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಮೂಲಕ ಹನುಮಂತ ಸಿಂಗರ್ ಆಗಿ ಹೆಸರು ಮಾಡಿ ದೊಡ್ಡ ಸೌಂಡ್ ಮಾಡಿದ್ದ. ಆ ನಂತರ ಕಲರ್ಸ್ ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಗೆದ್ದು ಅಬ್ಬರಿಸಿದ್ದ ಬಿಗ್‌ಬಾಸ್ ಹನುಮಂತ. ಹೀಗಿದ್ದಾಗಲೇ, 50,00,000 ರೂಪಾಯಿ ಬಿಗ್‌ಬಾಸ್ ಹಣ ಗೆದ್ದ ಹನುಮಂತನ ಕಣಕಣದಲ್ಲೂ ಆರ್‌ಸಿಬಿ...

ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ವಿನ್ನರ್ ಹನುಮಂತ, ಆರ್‌ಸಿಬಿ ತಂಡದ ಅಭಿಮಾನಿ ಅನ್ನೋದು ಎಲ್ಲರಿಗೂ ಗೊತ್ತು. ಹೀಗಿದ್ದಾಗ ಬೆಂಗಳೂರಿನಲ್ಲಿ ನಡೆದ ಪಂದ್ಯಕ್ಕೆ ಖುದ್ದಾಗಿ, ಹನುಮಂತ ಬಂದು ಕ್ರೀಡಾಂಗಣದಲ್ಲಿ ಸಂಭ್ರಮಿಸಿದ ಫೋಟೋಸ್ ವೈರಲ್ ಆಗುತ್ತಿದೆ. ಈ ಮೂಲಕ ತಮ್ಮ ದೋಸ್ತ್ ಅಂದ್ರೆ ಗೆಳೆಯ ಧನರಾಜ್ ಜೊತೆಗೆ ಚೆನ್ನೈ & ಆರ್‌ಸಿಬಿ ಮ್ಯಾಚ್ ನೋಡಿದ ಹನುಮಂತ ಮತ್ತೆ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಸೋಷಿಯಲ್ ಮೀಡಿಯಾ ತುಂಬಾ ಹನುಮಂತ ಆರ್‌ಸಿಬಿ ಮ್ಯಾಚ್ ನೋಡಿದ ಫೋಟೋಸ್ ಫುಲ್ ವೈರಲ್ ಆಗ್ತಿವೆ.

Bigg Boss Hanumantha Is Supporting The RCB Team

ಭರ್ಜರಿಯಾಗಿ ಗೆಲುವು ಕಂಡ ಆರ್‌ಸಿಬಿ!

ಒಂದು ಕಡೆ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ವಿನ್ನರ್ ಹನುಮಂತ ಹಾಗೂ ಧನರಾಜ್ ಮ್ಯಾಚ್ ನೋಡಲು ಬಂದಿದ್ದು, ಇನ್ನೊಂದು ಕಡೆ ಆರ್‌ಸಿಬಿ ತಂಡ ಭರ್ಜರಿಯಾಗಿ ಗೆಲುವು ಕಂಡಿದ್ದು ಕನ್ನಡಿಗರಿಗೆ ಇದೀಗ ಸಖತ್ ಖುಷಿ ನೀಡಿದೆ. ಹಾಗೇ ಆರ್‌ಸಿಬಿ ತಂಡ ಈ ಸಲ ಕಪ್ ಗೆಲ್ಲೋದು ಗ್ಯಾರಂಟಿ ಅಂತಿದ್ದಾರೆ ಕನ್ನಡಿಗರು.

ಬೆಂಗಳೂರು ತಂಡಕ್ಕೆ ಭರ್ಜರಿ ಬೆಂಬಲ

ಆರ್‌ಸಿಬಿ ತಂಡ ಸಂಕಷ್ಟಕ್ಕೆ ಸಿಲುಕಿ, 170 ರನ್ ಬಾರಿಸುವುದು ಕೂಡ ಕಷ್ಟ ಎನ್ನುವಾಗಲೇ ಎಂಟ್ರಿ ಕೊಟ್ಟಿದ್ದ ರೊಮಾರಿಯೋ ಶೆಫರ್ಡ್ ಇಡೀ ಪಂದ್ಯವನ್ನೇ ಬದಲಿಸಿಬಿಟ್ಟರು. ಕೇವಲ 14 ಬಾಲ್ ಆಡಿದ್ದ ರೊಮಾರಿಯೋ ಶೆಫರ್ಡ್ ಬರೋಬ್ಬರಿ 53 ರನ್ ಚಚ್ಚಿ ಬಿಸಾಡಿಬಿಟ್ಟರು.

ಹೀಗೆ 6 ಸಿಕ್ಸರ್ & 4 ಫೋರ್ ಬಾರಿಸಿ ಆರ್‌ಸಿಬಿ ತಂಡ ಭರ್ಜರಿ ಸ್ಕೋರ್ ಕಲೆಹಾಕಲು ಇದೇ ರೊಮಾರಿಯೋ ಶೆಫರ್ಡ್ ನೆರವಾಗಿ ನಿಂತರು. 213 ರನ್ ಚಚ್ಚಿದ್ದ ಆರ್‌ಸಿಬಿ ತಂಡವು ಚೆನ್ನೈ ತಂಡದ ಬೌಲರ್‌ಗಳ ಎದೆ ನಡುಗುವಂತೆ ಮಾಡಿತ್ತು, ಅಂತಿಮವಾಗಿ ರೋಚಕ ಹೋರಾಟ ತೋರಿಸಿ ಗೆದ್ದು ಬೀಗಿದೆ ಆರ್‌ಸಿಬಿ ತಂಡ!

2 ರನ್ ಅಂತರದ ಗೆಲುವು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ್ದ 214 ರನ್‌ಗಳ ಗುರಿ ಬೆನ್ನುಹತ್ತಿದ್ದ ಇದೇ ಚೆನ್ನೈ ತಂಡ, ಅಂತಿಮವಾಗಿ 211 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲು ಕಂಡಿತು. ಕೊನೆಗೆ ಬೆಂಗಳೂರಿನಲ್ಲಿ ಚೆನ್ನೈ ತಂಡ ಸೋತ ಹಿನ್ನೆಲೆ ಅಭಿಮಾನಿಗಳು ಕೂಡ ಭರ್ಜರಿಯಾಗಿ ಸಂಭ್ರಮಿಸಿದರು. ಅದರಲ್ಲೂ ಆರ್‌ಸಿಬಿ ತಂಡ ಪ್ಲೇಆಫ್‌ಗೆ ಕೂಡ ಭರ್ಜರಿ ಎಂಟ್ರಿ ಕೊಟ್ಟು ಖುಷಿ ಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+