Hanumantha Childhood: ತಂದೆ-ತಾಯಿ ಬೇಡ ಅಂತ ಹೊಡೆದರೂ ಆ ಒಂದು ಜಾಗಕ್ಕೆ ಹೋಗುತ್ತಿದ್ದ ಹನುಮಂತ

ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಹನುಮಂತ ಚಿಕ್ಕವನಿರುವಾಗ ಮಾಡಿದ ಕೆಲಸಗಳು ಒಂದೆರೆಡಲ್ಲ. ಹನುಮಂತನ ಕಾಟಕ್ಕೆ ಪೋಷಕರು ಬೇಸತ್ತು ಹೋಗಿದ್ದರು. ಹನುಮಂತನನ್ನು ಮನೆಯಲ್ಲಿ ಕಟ್ಟಿ ಹಾಕುವುದು ತುಂಬಾನೇ ಕಷ್ಟವಾಗಿತ್ತು. ಹೇಳಿದ ಮಾತು ಕೇಳುತ್ತಿರಲಿಲ್ಲ. ಮಾಡಬಾರದು ಅಂದಿದ್ದನ್ನು ಮಾಡದೆ ಬಿಡುತ್ತಿರಲಿಲ್ಲ. ಹೀಗೆ ಹನುಮಂತನ ಕ್ವಾಟ್ಲೆಯಿಂದ ಪೋಷಕರು ಹೈರಾಣಾಗಿದ್ದರು. ಹಾಗಾದರೆ ಹನುಮಂತನ ಬಾಲ್ಯದ ಬಗ್ಗೆ ಪೋಷಕರು ಹೇಳುವುದೇನು? ಬಾಲ್ಯದಲ್ಲಿ ಹೇಗಿದ್ದ ಹನುಮಂತ?

ಚಿಕ್ಕವನಿದ್ದಾಗ ಹನುಮಂತ ತುಂಬಾ ಉಡಾಳನಾಗಿದ್ದ. ಕೀಟಲೆ ಮಾಡಿ ತಂದೆ ತಾಯಿಯಿಂದ ಹೊಡೆಸಿಕೊಳ್ಳುತ್ತಿದ್ದರಂತೆ. ಚಿಕ್ಕವನಿರುವಾಗ ಕುರಿ ಕಾಯಲು ಹೋಗುತ್ತಿದ್ದ ಹನುಮಂತ ಶನಿವಾರ ಮಾತ್ರ ಕುರಿ ಕಾಯಲು ಯಾರೇ ಹೇಳಲಿ ಹೋಗುತ್ತಿರಲಿಲ್ಲವಂತೆ. ಅಪ್ಪ ಅಮ್ಮನ ಕೈಯಲ್ಲಿ ಹೊಡೆಸಿಕೊಂಡರೂ ಹನುಮಂತ ಕುರಿ ಕಾಯಲು ಆ ಒಂದು ದಿನ ಮಾತ್ರ ಹೋಗುತ್ತಿರಲಿಲ್ಲ. ಹಾಗಾದರೆ ಆ ಒಂದು ದಿನ ಹನುಮಂತ ಹೋಗುತ್ತಿದ್ದದ್ದು ಎಲ್ಲಿಗೆ?

bigg boss hanumantha childhood- how did he learn to sing

ಹನುಮಂತನ ಬಾಲ್ಯ

ಹನುಮಂತ ಬಾಲ್ಯದಿಂದಲೂ ಶಾಲೆಗೆ ಹೋಗಿಲ್ಲ. ಚಿಕ್ಕವನಿರುವಾಗ ಪೋಷಕರೊಂದಿಗೆ ಕುರಿ ಕಾಯಲು ಹೋಗುತ್ತಿದ್ದ ಹನುಮಂತ, ಬಾಲಕನಿರುವಾಗ ಒಬ್ಬೊಂಟಿಯಾಗಿ ಕುರಿ ಮೇಯಿಸಲು ಹೋಗುತ್ತಿದ್ದರು. ನಿತ್ಯ ಕುರಿ ಮೇಯಿಸಿಕೊಂಡು ಬರುವುದೇ ಹನುಮಂತನ ಕೆಲಸ. ಇದು ಹನುಮಂತನಿಗೆ ರೂಢಿ ಆಗಿ ಹೋಗಿತ್ತು. ಬೆಳಗ್ಗೆ ಕುರಿ ಮೇಯಿಸಲು ಹೋದರೆ ಬಿಸಿಲು ಕಳೆದ ಬಳಿಕವಷ್ಟೇ ಮನೆಗೆ ಬರುತ್ತಿದ್ದರು ಹನುಮಂತು.

ಖಡಕ್ ರೊಟ್ಟಿ, ಚಟ್ನಿ ಪುಡಿ, ಮೊಸರು, ಉಪ್ಪಿನಕಾಯಿ ಬುತ್ತಿ ತೆಗೆದುಕೊಂಡು ಹೋಗಿ ಕುರಿ ಕಾಯಲು ಬಿಟ್ಟು ಗಿಡದ ನೆರಳಿಗೆ ಊಟ ಮಾಡಿ ಹಾಯಾಗಿ ಮಲಗಿ ಬಿಸಿಲು ಕಳೆದ ಬಳಿಕ ಸಂಜೆ ತಂಪಲ್ಲಿ ಮನೆಗೆ ಬರುತ್ತಿದ್ದರು. ಶನಿವಾರ ಮಾತ್ರ ಹನುಮಂತ ಕುರಿಕಾಯಲಿಕ್ಕೆ ರಜೆ ತೆಗೆದುಕೊಳ್ಳುತ್ತಿದ್ದರು. ಆ ಒಂದು ದಿನ ಅವರು ಮನೆಯಲ್ಲಿಯೂ ವಿಶ್ರಾಂತಿ ಪಡೆಯುತ್ತಿರಲಿಲ್ಲ. ಹಾಗಾದರೆ ಶನಿವಾರ ಹನುಮಂತ ಹೋಗುತ್ತಿದ್ದಿದ್ದು ಎಲ್ಲಿಗೆ?

bigg boss hanumantha childhood- how did he learn to sing

ಹನುಮಂತನಿಗೆ ಹನುಮಂತನೇ ನೆಚ್ಚಿನ ದೇವರು

ಹನುಮಂತನಿಗೆ ಆಂಜನೇಯ ದೇವರು ಅಂದರೆ ತುಂಬಾ ಇಷ್ಟ. ಆ ದೇವರ ಮೇಲೆ ನಂಬಿಕೆ ಕೂಡ ಹೆಚ್ಚು. ಪ್ರತೀ ಶನಿವಾರ ಹನುಮಂತನ ದೇವಸ್ಥಾನಕ್ಕೆ ಹೋಗುತ್ತಿದ್ದ ಹನುಮಂತ ಅಲ್ಲಿ ಆಂಜನೇಯ ದೇವರ ಹಾಡುಗಳನ್ನು ಹಾಡುತ್ತಿದ್ದರು. ದಿನವಿಡೀ ಹನುಮಂತನ ಹಾಡುಗಳನ್ನು ಹಾಡಿ ದೇವರ ದರ್ಶನ ಪಡೆದು ಮನೆಗೆ ವಾಪಾಸ್ ಆಗುತ್ತಿದ್ದರು.

ಹೌದು... ಶನಿವಾರ ಬಂದರೆ ಸಾಕು ಹನುಮಂತ ಹನುಮಂತನ ದೇವಸ್ಥಾನಕ್ಕೆ ಹೋಗಿ ಹಾಡು ಹಾಡುತ್ತಿದ್ದರಂತೆ. ಹನುಮಂತನಿಗೆ ಹಾಡಿನಲ್ಲಿ ಅದೆಷ್ಟು ಆಸಕ್ತಿ ಅಂದರೆ ಹೋಗಬೇಡ ಎಂದು ಪೋಷಕರು ಹೊಡೆದರೂ ಕೂಡ ಹನುಮಂತ ಕಣ್ಣು ತಪ್ಪಿಸಿ ಹೋಗುತ್ತಿದ್ದರಂತೆ. ಹನುಮಂತ ದೇವರ ಹಾಡುಗಳನ್ನು ದೇವಸ್ಥಾನದಲ್ಲಿ ಕುಳಿತು ಹಾಡುವುದೆಂದರೆ ಹನುಮಂತನಿಗೆ ಬಲೂ ಪ್ರೀತಿ. ಚಿಕ್ಕವನಿರುವಾಗಲೇ ಅಪ್ಪ ಅಮ್ಮನ ಮಾತು ಕೇಳದೇ ಭಜನೆ ಮಾಡಲು ಹೋಗುತ್ತಿದ್ದರು ಹನುಮಂತ.

ಕಾಲ ಕಳೆದಂತೆ ಅದರಿಂದ ಸ್ವಲ್ಪ ಸಂಪಾದನೆ ಆಗಲು ಶುರುವಾದಾಗ ಪೋಷಕರು ಕೂಡ ಸುಮ್ಮನಾಗಿದ್ದರು. ನಂತರ ಹನುಮಂತ ಭಜನೆ, ವೇದಿಕೆ ಮೇಲೆ ಹಾಡು ಹೇಳುವುದರಿಂದ ಫೇಮಸ್ ಆದರು. ಸಾರಿಗಮಪ ಕಾರ್ಯಕ್ರಮದಲ್ಲಿ ಹಾಡು ಹಾಡುವ ಮೂಲಕ ಜನಪ್ರಿಯತೆ ಹಾಗೂ ಖ್ಯಾತಿ ಗಳಿಸಿದರು. ಈಗ ಬಿಗ್‌ಬಾಸ್‌ ಮನೆಗೆ ಹೋಗಿ ವಿಜೇತರಾಗಿದ್ದಾರೆ. ಪೋಷಕರು ಹೇಳಿದ ಮಾತನ್ನು ಮೀರಿ ಹಾಡು ಹೇಳಲು ಹೋಗುತ್ತಿದ್ದ ಹನುಮಂತ ಈಗ ಅದೇ ಹಾಡಿನಿಂದ ಜನಮನ ಗೆದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+