Lawyer Jagadish: 'ಹಂಸ' ನಡೆಯೋಳೆ ಎಂದು ಲಾಯರ್ ಜಗದೀಶ್ ಡ್ಯಾನ್ಸ್; ವಾರ್ನಿಂಗ್ ಕೊಟ್ಟ ಹಂಸ ಗಂಡ

ಬಿಗ್ ಬಾಸ್ ಕನ್ನಡ 11ನೇ ಸೀಸನ್ ಶೋದ ಸ್ಪರ್ಧಿಗಳಾದ ಜಗದೀಶ್ ಮತ್ತು ಹಂಸ ಕೆಲವೇ ದಿನ ಬಿಗ್‌ಬಾಸ್ ಮನೆಯಲ್ಲಿದ್ದರೂ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಲಾಯರ್ ಜಗದೀಶ್‌ಗೆ ಈ ಶೋ ತುಂಬಾ ಜನಪ್ರಿಯತೆ ತಂದುಕೊಟ್ಟಿದೆ. ಬಿಗ್‌ಬಾಸ್ ಮನೆಯಲ್ಲಿದ್ದಾಗ ಜಗದೀಶ್‌ ಹಂಸ ಜೊತೆ ಸಲುಗೆಯಿಂದಲೇ ಇರುತ್ತಿದ್ದರು, ಅವರು ನನ್ನ ಕ್ರಷ್ ಎನ್ನುವ ರೀತಿ ಮಾತನಾಡುತ್ತಿದ್ದರು.

ಹಂಸ ವಿಚಾರಕ್ಕೆ ಶುರುವಾದ ಜಗಳವೊಂದು ಜಗದೀಶ್ ಮತ್ತು ರಂಜಿತ್‌ರನ್ನು ಎಲಿಮಿನೇಟ್ ಮಾಡುವ ಮೂಲಕ ಅಂತ್ಯವಾಗಿತ್ತು. ಅದಾದ ಕೆಲವು ವಾರಗಳ ಬಳಿಕ ಹಂಸ ಕೂಡ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್‌ಬಾಸ್‌ನಿಂದ ಹೊರಬಂದರೂ ಇಬ್ಬರು ಹಲವು ಖಾಸಗಿ ಸುದ್ದಿ ವಾಹಿನಿಗಳಲ್ಲಿ ಜೊತೆಯಾಗಿ ಇಂಟರ್ವ್ಯೂಗಳಲ್ಲಿ ಭಾಗಿಯಾಗಿದ್ದಾರೆ.

Bigg boss Hamsa husband came while she dancing with lawyer jagadhish

ಇದೀಗ ಖಾಸಗಿ ವಾಹಿನಿಯೊಂದರಲ್ಲಿ ಹಂಸ ಮತ್ತು ಜಗದೀಶ್ ಕಾರ್ಯಕ್ರಮದ ನಡುವೆ ಜೊತೆಯಾಗಿ ಕುಣಿದಿದ್ದಾರೆ. ಈ ಸಂದರ್ಭದಲ್ಲೇ ಹಂಸ ಪತಿ ಮಚ್ಚು ಹಿಡಿದು ಪ್ರವೇಶಿಸಿದ್ದಾರೆ. ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ಹಾಡಿಗೆ ಇಬ್ಬರು ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕುತ್ತಿದ್ದರು, ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಹಂಸ ಪತಿ ಜಗದೀಶ್‌ಗೆ ಅವಾಜ್ ಹಾಕಿದ್ದಾರೆ.

ವಿಡಿಯೋ ವೈರಲ್

ಆದರೆ ಅದು ನಿಜವಾದ ಮಚ್ಚಲ್ಲ! ಹಂಸ ಪತಿ ತಮಾಷೆಯಾಗಿಯೇ ಲಾಯರ್ ಜಗದೀಶ್‌ಗೆ ಕ್ಲಾಸ್ ತೆಗೆದುಕೊಂಡರು. ಬಳಿಕ ಇಬ್ಬರು ನಗುತ್ತಾ ಮಾತನಾಡಿದ್ದಾರೆ. ಹಂಸ ಮತ್ತು ಜಗದೀಶ್ ಬಿಗ್‌ ಬಾಸ್‌ನಿಂದ ಹೊರ ಬಂದ ಬಳಿಕ ಉತ್ತಮ ಸ್ನೇಹಿತರಾಗಿದ್ದು, ಹಲವು ಖಾಸಗಿ ವಾಹಿನಿಗಳಲ್ಲಿ ಜೊತೆಯಲ್ಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಬಿಗ್‌ಬಾಸ್ ಕಾರ್ಯಕ್ರಮದ ಸಂದರ್ಭದಲ್ಲಿ ಜಗದೀಶ್ ಹಂಸ ಹಿಂದೆಯೇ ಓಡಾಡಿಕೊಂಡಿದ್ದರು. ಜಗದೀಶ್‌ಗೆ ಹಂಸ ಮೇಲೆ ಲವ್ವಾಗಿದೆ ಎನ್ನುವ ಗುಸುಗುಸು ಕೂಡ ಬಿಗ್‌ಬಾಸ್ ಮನೆಯಲ್ಲಿತ್ತು. ಮುಂಗಾರು ಮಳೆ ಹಾಡಿನ ದೃಶ್ಯವನ್ನು ಇಬ್ಬರು ಅನುಕರಣೆ ಮಾಡಿದ್ದರು. ಜಗದೀಶ್ ಮಲಗಿದ್ದರೆ ಹಂಸ ಅವರ ಎದೆ ಮೇಲೆ ಕಾಲಿಟ್ಟು ನಡೆದಿದ್ದರು. ಆದರೆ ಅದೆ ಹಂಸ ಅವರ ಬಗ್ಗೆ ಜಗದೀಶ್ ಹಗುರವಾಗಿ ಮಾತನಾಡಿದರು ಎನ್ನುವ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೇರಿತ್ತು. ಜಗದೀಶ್ ಮತ್ತು ರಂಜಿತ್ ಇಬ್ಬರನ್ನು ಬಿಗ್ ಬಾಸ್ ಮನೆಯಿಂದ ಆಚೆ ಹಾಕಲಾಗಿತ್ತು.

ಬಿಗ್‌ ಬಾಸ್‌ನಿಂದ ಹೊರಬಂದ ಬಳಿಕ ಜಗದೀಶ್ ಇದೀಗ ದರ್ಶನ್ ಅಭಿಮಾನಿಗಳಿಗೆ ಬುದ್ದಿ ಹೇಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇದೀಗ ಜಗದೀಶ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಆನ್‌ಲೈನ್ ಜಗಳ ಶುರುವಾಗಿದೆ. ಬಿಗ್‌ಬಾಸ್‌ನಲ್ಲಿ ನಿಮಗೆ ಸಪೋರ್ಟ್ ಮಾಡಿದ್ದೇ ನಾವು ಈಗ ನಮ್ಮ ಬಗ್ಗೆಯೇ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಹಲವು ದರ್ಶನ್‌ ಅಭಿಮಾನಿಗಳು ಜಗದೀಶ್ ವಿರುದ್ಧ ಸಿಟ್ಟಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+