Bigg Boss: ಬಿಗ್‌ಬಾಸ್‌ ಮನೆಯಲ್ಲಿ ಪವಾಡ: ಗೌತಮಿಯನ್ನು ಕಾಪಾಡಿದಂತೆ ಚೈತ್ರಾರನ್ನು ಕಾಪಾಡುವಳಾ ಅಮ್ಮಾ?

ಕನ್ನಡ ಬಿಗ್‌ಬಾಸ್‌ ಮನೆಯ ಪ್ರೋಮೋವೊಂದನ್ನು ಬಿಡುಗಡೆ ಮಾಡಲಾಗಿದೆ. ಈ ವೀಡಿಯೋದಲ್ಲಿ ಚೈತ್ರಾ ಕುಂದಾಪುರ ಅವರು ದೊಡ್ಮನೆಯಲ್ಲಿರುವ ದೇವರ ಮುಂದೆ ಕೈಮುಗಿದು ಕುಳಿತುಕೊಂಡಿದ್ದಾರೆ. ಜೊತೆಗೆ ದೇವರ ವಿಗ್ರಹದ ಎರಡೂ ಕೈಗಳ ಮೇಲೆ ಟಿಶ್ಯೂ ಪೇಪರ್‌ಗಳನ್ನು ಇಟ್ಟಿದ್ದಾರೆ.

ದೇವರ ಕೈ ಮೇಲೆ ಇಟ್ಟ ಒಂದು ಬದಿಯ ಟಿಶ್ಯೂ ಕೆಳಗೆ ಬೀಳುತ್ತದೆ. ಈ ವೀಡಿಯೋ ಬಿಗ್ ಬಾಸ್ ವೀಕ್ಷಕರಲ್ಲಿ ಭಾರೀ ಕೂತೂಹಲವನ್ನು ಮೂಡಿಸಿದೆ. ಅಷ್ಟಕ್ಕೂ ಚೈತ್ರಾ ಅವರು ದೇವರ ಮುಂದೆ ಕುಳಿತುಕೊಳ್ಳಲು ಕಾರಣ ಏನು? ಈ ಹಿಂದೆ ಮನೆಯ ಸ್ಪರ್ಧಿಯೊಬ್ಬರು ದೇವರನ್ನು ಬೇಡಿಕೊಂಡಾಗ ಆದ ಪವಾಡ ಏನು?

bigg boss goddess lakshmi answered to the chaitra kundapura question

ಹೌದು... ಬಿಗ್‌ಬಾಸ್‌ ಮನೆಯ ಇತರ ಸ್ಪರ್ಧಿಗಳಿಗೆ ಹೋಲಿಸಿದರೆ ಚೈತ್ರಾ ಕುಂದಾಪುರ ಅವರು ಆಗಾಗ ಉಪವಾಸ ಮಾಡುವುದು, ಪೂಜೆ ಮಾಡುವುದು, ಹರಕೆ ಹೊತ್ತುಕೊಳ್ಳುವುದು ತುಂಬಾನೇ ಜಾಸ್ತಿ. ಹೀಗೆ ಹೆಚ್ಚು ದೈವ ಭಕ್ತೆಯಾಗಿರುವ ಚೈತ್ರಾ ಅವರು ವಿಚಾರವೊಂದಕ್ಕೆ ತುಂಬಾನೇ ಬೇಜಾರಾಗಿದ್ದಾರೆ.

ಇದರಿಂದ ದೇವರ ಮೊರೆ ಹೋಗಿದ್ದಾರೆ ಚೈತ್ರಾ. ತಮ್ಮ ಪ್ರಶ್ನೆಗೆ ಆ ದೇವರೇ ಉತ್ತರ ನೀಡಬೇಕು ಎಂದು ಚೈತ್ರಾ ಕೈಮುಗಿದು ದೇವರ ಮುಂದೆ ಕುಳಿತಿದ್ದಾರೆ. ತಮ್ಮ ಪ್ರಶ್ನೆಗೆ ದೇವರೇ ಉತ್ತರ ನೀಡಲೆ ಎಂದು ದೇವರ ಎರಡೂ ಕೈಗಳ ಮೇಲೆ ಟಿಶ್ಯೂವನ್ನು ಇಟ್ಟು ಬೇಡಿಕೊಂಡಿದ್ದಾರೆ. ಹಾಗಾದರೆ ಚೈತ್ರಾ ಬೇಡಿಕೊಂಡಿದ್ದು ಏನು? ದೇವರು ಹೇಳಿದ್ದೇನು?

ಚೈತ್ರಾ ಹಾಗೂ ರಜತ್ ಮನೆಯ ಅಡುಗೆ ಮನೆಯನ್ನು ಸ್ವಚ್ಚಗೊಳಿಸುತ್ತಿರುತ್ತಾರೆ. ಆಗ ರಜತ್ ಅವರು ನಾನು ಅಡುಗೆ ಮನೆ ಕ್ಲೀನ್ ಮಾಡ್ತಾಯಿದ್ದರೆ ಚೈತ್ರಾ ಅವರು ಅದನ್ನು ಗಲೀಜು ಮಾಡುತ್ತಿದ್ದಾರೆ ಎಂದು ಕಾಮಿಡಿ ಮಾಡುತ್ತಾ ಅವರ ಮೇಲೆ ಕ್ಲೀನ್ ಮಾಡುತ್ತಿದ್ದ್ ಗಲೀಜನ್ನು ಎಸೆಯುತ್ತಾರೆ. ಆದರೆ ಈ ವಿಚಾರವನ್ನು ಚೈತ್ರಾ ಕಾಮಿಡಿಯಾಗಿ ತೆಗೆದುಕೊಳ್ಳುವುದಿಲ್ಲ. ಬದಲಿಗೆ ಟ್ರ್ಯಾಜಿಡಿ ಆಗಿ ಮಾಡಿಕೊಂಡಿದ್ದಾರೆ.

ಭವ್ಯಾ ಗೌಡ ಬಳಿ ಚೈತ್ರಾ ಕಣ್ಣೀರು ಹಾಕುತ್ತಾ 'ಯಾವ ಆರೋಪಕ್ಕೆ ನನಗೆ ಈ ರೀತಿ ಮಾಡುತ್ತಿದ್ದಾರೆ. ಬಂದ ಆರೋಪಗಳನ್ನು ನಾನು ಸಾಬೀತು ಪಾಡಿಕೊಳ್ಳದೇ ಹೋದರೆ ಬಳಿಕ ಬಕರಾ ತರ ಎಲ್ಲಾ ಮಾಡಿದ ಆರೋಪಗಳನ್ನು ತಲೆಯ ಮೇಲೆ ಹಾಕಿಕೊಂಡು ಕುಳಿತುಕೊಳ್ಳಬೇಕಾಗುತ್ತದೆ. ನಾನು ಸರಿ ಇದಿನಾ? ನಾಟಕಾ ಮಾಡ್ತಾಯಿದಿನಾ? ಇದಕ್ಕೆಲ್ಲಾ ಸಮಯ ಬರುತ್ತೆ. ಸಮಯನೇ ಉತ್ತರ ಕೊಡುತ್ತೆ' ಎಂದು ಚೈತ್ರಾ ಅವರು ಅಳುತ್ತಾ ಹೇಳುತ್ತಾರೆ.

ರಜತ್‌ ಮೇಲೆ ಚೈತ್ರಾಗೆ ಯಾಕೆ ಕೋಪ?

ರಜತ್‌ ಅವರಿಗೆ ಕಳೆದ ವಾರ ಸುದೀಪ್ ಅವರು ಒಂದು ಟಾಸ್ಕ್‌ ಅನ್ನು ನೀಡಿದ್ದಾರೆ. ಚೈತ್ರಾ ಅವರನ್ನು ನಗಿಸಬೇಕು ಎಂದು ರಜತ್ ಅವರಿಗೆ ಸುದಿಪ್ ಟಾಸ್ಕ್ ಕೊಟ್ಟಿದ್ದಾರೆ. ಆಪ್ರಯತ್ನವನ್ನು ರಜತ್ ಮಾಡುತ್ತಾರೆ. ಇದರಲ್ಲಿ ಯಾವುದೇ ಉದ್ದೇಶ ಇರುವುದಿಲ್ಲ. ಆದರೆ ಚೈತ್ರಾ ಅವರು ಅದನ್ನು ತಪ್ಪಾಗಿ ಅರ್ಥೈಸಿಕೊಂಡಿರುವಂತೆ ಕಾಣಿಸುತ್ತಿದೆ.

ದೇವರ ಕೈಗಳ ಮೇಲೆ ಟಿಶ್ಯೂ ಇಟ್ಟ ಚೈತ್ರಾ

ಕಣ್ಣೀರು ಹಾಕುತ್ತಾ ಚೈತ್ರಾ ತಡರಾತ್ರಿಯಲ್ಲಿ ಎದ್ದು ಎರಡು ಟಿಶ್ಯೂಗಳಲ್ಲಿ ಏನೋ ಬರೆಯುತ್ತಾರೆ. ನಾ ಸರಿಯಾಗಿದಿನಾ? ಅಥವಾ ನಾಟಕಾ ಮಾಡ್ತಾ ಇದಿನಾ ಎಂದು ಬರೆದುಕೊಂಡಿರಬಹುದು. ಈ ಟಿಶ್ಯೂಗಳನ್ನು ದೇವರ ಬಲ ಹಾಗೂ ಎಡ ಭಾಗಕ್ಕೆ ಇಟ್ಟಾಗ ಎಡಗಡೆಯಿಂದ ಟಿಶ್ಯೂ ಬೀಳುತ್ತದೆ. ದೇವರ ಎಡ ಭಾಗದ ಕೈಯಿಂದ ಬಿದ್ದ ಟಿಶ್ಯೂ ಪೇಪರ್‌ನಲ್ಲಿ ಏನು ಬರೆಯಲಾಗಿತ್ತು ಎಂದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಚೈತ್ರಾ ಅವರಿಗೆ ಅಮ್ಮಾ ಕೊಟ್ಟ ಉತ್ತರ ಏನು ಎಂದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಗೌತಮಿ ವಿಚಾರದಲ್ಲಿ ಅಮ್ಮಾ ಪವಾಡ

ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಟಾಸ್ಕ್ ಆಡುವಾಗ ಗೌತಮಿ ಜಾಧವ್ ಅವರ ವಿಚಾರದಲ್ಲಿ ಅಮ್ಮಾನ ಪವಾಡ ನಡೆದಿತ್ತು. ಅವರು ಟಾಸ್ಕ್ ಆಡುವಾಗ ಪಠಿಸುತ್ತಿದ್ದ ಮಂತ್ರದ ಪವರ್‌ ಹಾಗೂ ಅವರು ಬೇಡಿಕೊಳ್ಳುವ ತಾಯಿ ದೇವಿಯ ಆಶೀರ್ವಾದದಿಂದಾಗಿ ಅವರು ಟಾಸ್ಕ್‌ ವಿನ್ ಆಗಿ ಕ್ಯಾಪ್ಟನ್ ಆದರು. ಇದರಿಂದ ಗೌತಮಿ ಅವರು ಅಮ್ಮನ ಆಶೀರ್ವಾದಿಂದ ಉತ್ತಮ ಪ್ರಯತ್ನ ಪಟ್ಟು ಕ್ಯಾಪ್ಟನ್ ಆದರು.

ಆದರೀಗ ಅದೇ ಹಾದಿಯನ್ನು ಚೈತ್ರಾ ಕೂಡ ಹಿಡಿದಿದ್ದಾರೆ. ಚೈತ್ರಾ ಅವರಿಗೆ ಅಮ್ಮಾ ಕೊಟ್ಟ ಉತ್ತರ ಏನು ಎನ್ನುವುದು ಮಾತ್ರ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಇಂದು ಕಲರ್ಸ್ ಕನ್ನಡ ಹಂಚಿಕೊಂಡ ಈ ವೀಡಿಯೋ ಮಾತ್ರ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+