Bigg Boss: ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಬಿಗ್ ಶಾಕ್; ಬಿತ್ತು ₹2,00,00,000 ದಂಡ!
ಬಿಗ್‌ಬಾಸ್ ಕನ್ನಡ ಸೀಸನ್-12 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಒಂದು ವರ್ಷದಿಂದ ಕಾಯುತ್ತಿದ್ದ ಕುತೂಹಲಕ್ಕೆ ಇನ್ನೆರಡೇ ದಿನಗಳಲ್ಲಿ ತೆರೆ ಬೀಳಲಿದೆ. ಎಲ್ಲ ಚಿತ್ತ ಸ್ಪರ್ಧಿಗಳು ಯಾರು? ಎನ್ನುವುದರ ಮೇಲೆ ಇದೆ. ಬೇರೆ ಭಾಷೆಗಳಲ್ಲಿ ಈಗಾಗಲೇ ಬಿಗ್‌ಬಾಸ್ ಕಾರ್ಯಕ್ರಮ ಆರಂಭವಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಆದರೆ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಬಿಗ್ ಶಾಕ್ ಎದುರಾಗಿದ್ದು, ಬರೋಬ್ಬರಿ 2 ಕೋಟಿ ರೂಪಾಯಿ ದಂಡ ಹಾಕಲಾಗಿದೆ ಎಂದು ವರದಿಯಾಗಿದೆ. ದಂಡ ಹಾಕಲು ಕಾರಣವೇನು? ಎಂಬ ಮಾಹಿತಿ ಇಲ್ಲಿದೆ ನೋಡಿ.
ಬಿಗ್‌ಬಾಸ್ ಕಾರ್ಯಕ್ರಮ ನಡೆಸುವುದು ತಮಾಷೆಯ ಮಾತಲ್ಲ. ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ಕೋರ್ಟು ಕೇಸು ಅಂತೆಲ್ಲ ಸಂಕಷ್ಟಗಳು ಎದುರಾಗುತ್ತವೆ. ಈ ಹಿಂದೆ ಕನ್ನಡ ಬಿಗ್‌ಬಾಸ್ ಸ್ಪರ್ಧಿಗಳು ಕೂಡ ಕಾರ್ಯಕ್ರಮ ನಡೆಯುವಾಗಲೇ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಿದರ್ಶನಗಳೂ ಇವೆ. ಆದರೆ ಇದೀಗ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಕಾನೂನಿನ ಸಂಕಷ್ಟ ಎದುರಾಗಿದ್ದು, 2 ಕೋಟಿ ರೂಪಾಯಿ ಪರಿಹಾರ ಕೇಳಿ ಕೇಸ್ ಹಾಕಲಾಗಿದೆಯಂತೆ. ಎಷ್ಟೇ ಎಚ್ಚರ ವಹಿಸಿದರೂ ಬಿಗ್‌ಬಾಸ್ ಇಕ್ಕಟ್ಟಿನಲ್ಲಿ ಸಿಲುಕಿದೆ.

ಬಿಗ್‌ಬಾಸ್-19 ಕಾರ್ಯಕ್ರಮದ ನಿರ್ಮಾಪಕರ ವಿರುದ್ಧ 2 ಕೋಟಿ ರೂಪಾಯಿ ಪರಿಹಾರ ಕೋರಿ ಮೊಕದ್ದಮೆ ಹೂಡಲಾಗಿದೆ. ಅನಧಿಕೃತವಾಗಿ ಸಂಗೀತ ಬಳಸಿದ ಆರೋಪದ ಮೇಲೆ ಈ ಕೇಸ್ ದಾಖಲಾಗಿದೆ. ಬಿಗ್‌ಬಾಸ್ ನಿರ್ಮಾಪಕರಿಗೆ ಹೆಚ್ಚುವರಿ ಪರವಾನಗಿ ಶುಲ್ಕದೊಂದಿಗೆ ಬರೋಬ್ಬರಿ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕಾನೂನು ನೋಟಿಸ್ ನೀಡಲಾಗಿದೆ. ಬಾಲಿವುಡ್ ನಟ ನಡೆಸಿಕೊಡುವ ಈ ಜನಪ್ರಿಯ ರಿಯಾಲಿಟಿ ಶೋನಲ್ಲಿ ಬಾಲಿವುಡ್‌ನ ಎರಡು ಫೇಮಸ್ ಹಾಡುಗಳನ್ನು ಅನಧಿಕೃತವಾಗಿ ಬಳಸಿದ್ದ ಆರೋಪದ ಮೇರೆಗೆ ಫೋನೋಗ್ರಾಫಿಕ್ ಪರ್ಫಾರ್ಮೆನ್ಸ್ ಲಿಮಿಟೆಡ್ (ಪಿಪಿಎಲ್) ನೋಟಿಸ್ ನೀಡಿದೆ.
ಯಾವುದು ಆ ಹಾಡುಗಳು?
ಪಿಪಿಎಲ್ ಎಂಬ ಸಂಸ್ಥೆಯು ಇತ್ತೀಚೆಗೆ ಬಿಗ್‌ಬಾಸ್-19 ನಿರ್ಮಾಪಕರಿಗೆ ಲೀಗಲ್ ನೋಟಿಸ್ ನೀಡಿದೆ. ಬಿಗ್‌ಬಾಸ್-19ರಲ್ಲಿ "ಅಗ್ನಿಪಥ್" ಚಿತ್ರದ 'ಚಿಕ್ನಿ ಚಮೇಲಿ' ಮತ್ತು 'ಗೋರಿ ತೆರೀ ಪ್ಯಾರ್ ಮೇನ್' ಚಿತ್ರದ 'ಧತ್ ತೆರೀ ಕೀ' ಎಂಬ ಎರಡು ಪ್ರಸಿದ್ಧ ಬಾಲಿವುಡ್ ಹಾಡುಗಳನ್ನು ಅನುಮತಿ ಇಲ್ಲದೆ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಡುಗಳನ್ನು ಬಳಸುವ ಮುನ್ನ ಅಗತ್ಯವಾದ ಲೈಸೆನ್ಸ್ ಪಡೆಯಬೇಕಿತ್ತು. ಆದರೆ ಇದನ್ನ ಪಡೆದುಕೊಳ್ಳದೆ ಬಳಸಿರುವುದರಿಂದ ಕಾಪಿರೈಟ್ ಉಲ್ಲಂಘನೆಯಾಗಿದೆ ಎಂದು ಪಿಪಿಎಲ್ ಆರೋಪಿಸಿದೆ. ಅಲ್ಲದೆ ₹2 ಕೋಟಿ ಪರಿಹಾರ ಮತ್ತು ಲೈಸೆನ್ಸ್ ಫೀ ರೂಪದಲ್ಲಿ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಬಿಗ್‌ಬಾಸ್ ಕಾರ್ಯಕ್ರಮದ 11ನೇ ಸಂಚಿಕೆಯಲ್ಲಿ ಅಗ್ನಿಪಥ್ ಸಿನಿಮಾದ "ಚಿಕ್ನಿ ಚಮೇಲಿ" ಮತ್ತು "ಧಾತ್ ತೇರಿ ಕಿ ಮೈ" ಹಾಡುಗಳನ್ನು ಬಳಸಿಕೊಂಡಿದ್ದಾರೆ ಎಂದು ಆರೋಪ ಹೊರಿಸಲಾಗಿದೆ. ಹಾಡುಗಳನ್ನು ಬಳಸಲು ಕಡ್ಡಾಯ ಪರವಾನಗಿಯನ್ನು ಪಡೆಯದೆ ಬಳಸಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈಗಾಗಲೇ ನೋಟಿಸ್ ತಲುಪಿದ್ದು, ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಎರಡು ಹಾಡಿನಿಂದಾಗಿ ಬಿಗ್‌ಬಾಸ್‌ಗೆ ಸಂಕಷ್ಟ ಎದುರಾಗಿದೆ.












Click it and Unblock the Notifications