Chaitra Kundapura: ಮದುವೆ ಹಿಂದಿನ ದಿನ ಬಾಯ್‌ಫ್ರೆಂಡ್‌ ಪರಿಚಯಿಸಿದ ಚೈತ್ರಾ ಕುಂದಾಪುರ

ಕನ್ನಡ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಹಾಗೂ ಫೈರ್‌ ಬ್ರ್ಯಾಂಡ್‌ ಖ್ಯಾತಿಯ ಚೈತ್ರಾ ಕುಂದಾಪುರ ಕೊನೆಗೂ ತಮ್ಮ ಮದುವೆ ಗುಟ್ಟೊಂದನ್ನು ರಟ್ಟು ಮಾಡಿದ್ದಾರೆ. ಮದುವೆ ಯಾವಾಗ? ಹುಡುಗ ಯಾರು? ಎನ್ನುವ ಪ್ರಶ್ನೆಗೆ ವಿಡಿಯೋ ಮೂಲಕ ಉತ್ತರ ಕೊಟ್ಟಿರುವ ಚೈತ್ರಾ ಕುಂದಾಪುರ ಅವರು ತಾವು ಮದುವೆಯಾಗಲಿರುವ ಮಧುಮಗನನ್ನು ಕರ್ನಾಟಕಕ್ಕೆ ಪರಿಚಯಿಸಿದ್ದಾರೆ.

ಹೌದು ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಚೈತ್ರಾ ಕುಂದಾಪುರ ಅವರ ಮದುವೆ ವಿಚಾರ ತುಂಬಾ ಚರ್ಚೆಯಾಗಿತ್ತು. ಶೋ ಮುಗಿದ ಮೇಲೆ ಮದುವೆ ಆಗುವುದಾಗಿ ಅಷ್ಟೇ ಹೇಳಿದ್ದ ಅವರು ತಮ್ಮ ಹುಡುಗ ಯಾರು? ಎಂಬ ಪ್ರಶ್ನೆಗೆ ನಗುವಿನಲ್ಲೇ ಉತ್ತರ ನೀಡಿ ಸೈಲೆಂಟಾಗುತ್ತಿದ್ದರು. ಅಂತೂ ಇಂತೂ ಚೈತ್ರಾ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಇವರ ಪ್ರೀವೆಡ್ಡಿಂಗ್‌ ವಿಡಿಯೋ ಮೂಲಕ ತಮ್ಮ ಭಾವಿ ಪತಿಯ ಮುಖವನ್ನು ರಿವೀಲ್‌ ಮಾಡಿದ್ದಾರೆ.

Bigg Boss Fame Chaitra Kundapura To Marry On May 9 Introduces Groom Via Video

ಈಗಾಗಲೇ ಮದುವೆ ಶಾಸ್ತ್ರಗಳು ನೆರವೇರುತ್ತಿದ್ದು, ಬದುಕಿನ ಸಂಕಷ್ಟದಿಂದ ಸಂಭ್ರಮದವರೆಗೂ ಜೊತೆ ನಿಂತ ಜೀವದೊಂದಿಗೆ ಸಪ್ತಪದಿ ಇಡುವ ಸಮಯ ಬಂದಿದೆ. ನಿಮ್ಮೆಲ್ಲರ ಹಾರೈಕೆ ನಮ್ಮನ್ನು ಕಾಯಲಿ ಎಂದು ಮದುವೆ ವಿಚಾರವನ್ನು ಚೈತ್ರಾ ಹಂಚಿಕೊಂಡಿದ್ದಾರೆ.

ಚೈತ್ರಾ ಕುಂದಾಪುರ ಅವರ ಹುಡುಗನ ಹೆಸರು ಶ್ರೀಕಾಂತ್ ಕಶ್ಯಪ್ ಎಂದು ತಿಳಿದುಬಂದಿದೆ. ಉಡುಪಿಯ ಹಿರಿಯಡ್ಕದವರಾದ ಶ್ರೀಕಾಂತ್ ಅವರನ್ನು ಚೈತ್ರಾ ಮದುವೆಯಾಗುತ್ತಿದ್ದಾರೆ. ಈಗಾಗಲೇ ಮದುವೆಗೆ ಸಕಲ ತಯಾರಿ ನಡೆದಿದ್ದು, ಇಂದು (ಮೇ 9) ಕುಂದಾಪುರದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಶ್ರೀಕಾಂತ್‌ ಅವರು ಕಾಲೇಜಿನಿಂದಲೇ ಚೈತ್ರಾಗೆ ಪರಿಚಯವಿದ್ದು, ಮೊದಲಿಗೆ ಜಗಳದಿಂದ ಇವರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ವರ್ಷಗಳು ಉರುಳಿದಂತೆ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆ್ಯನಿಮೇಷನ್ ಕೋರ್ಸ್ ಮಾಡಿದ್ದ ಶ್ರೀಕಾಂತ್ ಕಶ್ಯಪ್ ಅವರು ಸುದ್ದಿವಾಹಿನಿವೊಂದರಲ್ಲಿ ಕೆಲಸ ಮಾಡಿದ್ದರು. ಇದೀಗ ಜ್ಯೋತಿಷ್ಯ, ವಾಸ್ತು, ಪೌರೋಹಿತ್ಯದ ಕೆಲಸಗಳಲ್ಲಿ ಶ್ರೀಕಾಂತ್ ತೊಡಗಿದ್ದಾರೆ. ಇವರಿಬ್ಬರ ಪ್ರೇಮ್‌ ಕಹಾನಿಗೆ 12 ವರ್ಷ ಪೂರೈಸಿದ್ದು, ಇಂದು ಮೂರು ಗಂಟು ಬೀಳಲಿದೆ.

ಈಗಾಗಲೇ ಮೆಹಂದಿ ಸೇರಿದಂತೆ ಮದುವೆ ಶಾಸ್ತ್ರಗಳು ನೆರವೇರಿದ್ದು, ಕುಟುಂಬಕ್ಕೆ ಹತ್ತಿರವಾದ 100 ಮಂದಿಗಷ್ಟೇ ಮದುವೆ ಆಹ್ವಾನಿಸಲಾಗಿದೆ. ನಮ್ಮ ಮದುವೆ ಯಾವುದೇ ಅದ್ಧೂರಿಯಾಗಿ ನಡೆಯುತ್ತಿಲ್ಲ, ದೇವಸ್ಥಾನವೊಂದರಲ್ಲಿ ಸಿಂಪಲ್‌ ಆಗಿ ವೈದಿಕ ಶಾಸ್ತ್ರದಂತೆ ಮದುವೆ ನಡೆಯಲಿದೆ ಎಂದು ಚೈತ್ರಾ ಹೇಳಿದ್ದಾರೆ. ನಮ್ಮದು ಸುಮಾರು 12 ವರ್ಷಗಳ ಲವ್‌, ಇದೀಗ ಅರೇಂಜ್ ಮ್ಯಾರೇಜ್ ಆಗುತ್ತಿದ್ದೇವೆ. ಎರಡೂ ಕುಟುಂಬಗಳನ್ನು ಒಪ್ಪಿಸಿ ಮದುವೆ ಆಗುತ್ತಿದ್ದೇವೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್‌ಗೆ ಹೋದ ಸಂದರ್ಭದಲ್ಲೇ ಈಗಾಗಲೇ ನನ್ನ ಮದುವೆ ಫಿಕ್ಸ್‌ ಆಗಿದೆ. ಇಲ್ಲಿಂದ ಹೊರ ಹೋದ ಮೇಲೆ ಗಟ್ಟಿಮೇಳ ಗ್ಯಾರಂಟಿ ಎಂದಿದ್ದರು. ಹಾಗಾಗಿ ಚೈತ್ರಾ ಅವರನ್ನು ಮದುವೆಯಾಗುವ ಹುಡುಗ ಯಾರು ಎನ್ನುವ ಕುತೂಹಲ ಎಲ್ಲರಲ್ಲಿ ಮನೆಮಾಡಿತ್ತು. ಆದರೆ ಮದುವೆ ಬಗ್ಗೆ ಚೈತ್ರಾ ಹೆಚ್ಚಿನ ಅಪ್ಡೇಟ್‌ ನೀಡಿರಲಿಲ್ಲ. ಬಳಿಕ ಬಾಯ್ಸ್‌ ವರ್ಸಸ್‌ ಶೋನಲ್ಲಿ ಬ್ಯುಸಿಯಾಗಿದ್ದ ಅವರು ಕಾರ್ಯಕ್ರಮ ಮುಗಿದ ಕೂಡಲೇ ಮದುವೆ ಊಟ ಹಾಕಿಸಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+