Bigg Boss: ಎಳ್ಳು ಬೆಲ್ಲ ತಿಂದು ಒಳ್ಳೆ ಒಳ್ಳೆ ಮಾತನಾಡಿದ ಬಿಗ್‌ಬಾಸ್ ಸ್ಪರ್ಧಿಗಳು
ಬಿಗ್‌ಬಾಸ್ ಮನೆಯಲ್ಲಿ ಎಂಟು ಜನ ಸ್ಪರ್ಧಿಗಳು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ಈ ಆಚರಣೆಯನ್ನು ಇನ್ನಷ್ಟು ಸುಂದರವಾಗಿಸಲು ಹಿರಿಯ ನಟಿ ತಾರಾ ಅವರು ಬಿಗ್‌ಬಾಸ್ ಮನೆಗೆ ಆಗಮಿಸಿದ್ದರು. ಮನೆಯ ಎಲ್ಲಾ ಸ್ಪರ್ಧಿಗಳೊಂದಿಗೆ ನಟಿ ತಾರಾ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಆಚರಿಸಿದ್ದಾರೆ. ಪರಸ್ಪರ ಎಳ್ಳು ಬೆಲ್ಲ ಹಂಚಿಕೊಂಡು ಶುಭ ಹಾರೈಸಿ ಒಳ್ಳೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಹಾಗಾದರೆ ಯಾರು ಏನಂದರು? ತಾರಮ್ಮ ಹೇಳಿದ್ದೇನು? ಎಲ್ಲವನ್ನೂ ಕಂಪ್ಲೀಟ್ ಆಗಿ ತಿಳಿಯೋಣ.
ಕಳೆದ ದಿನ ಬಿಗ್‌ಬಾಸ್ ಮನೆಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಈ ಸಂಕ್ರಾಂತಿ ಹಬ್ಬಕ್ಕೆ ಸ್ಪೆಷಲ್ ಗೆಸ್ಟ್ ಆಗಿ ಹಿರಿಯ ನಟಿ ತಾರಾ ಅವರು ಆಗಮಿಸಿದ್ದರು. ತಾರಾ ಅವರು ಮನೆಯ ಎಲ್ಲಾ ಸ್ಪರ್ಧಿಗಳಿಗೆ ಎಳ್ಳು ಬೆಲ್ಲವನ್ನು ನೀಡಿ ಶುಭ ಹಾರೈಸಿದರು. ಬಳಿಕ ತಾರಾ ಅವರಿಂದ 'ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ' ಎನ್ನುವ ಟಾಸ್ಕ್ ಆಡಿಸಲಾಯಿತು. ಈ ವೇಳೆ ಮನೆಯ ಸ್ಪರ್ಧಿಗಳು ದೊಡ್ಮನೆಯಲ್ಲಿ ಆದ ಕೆಟ್ಟ ಕಹಿ ಘಟನೆಗಳನ್ನು ಹಂಚಿಕೊಂಡು ಪರಸ್ಪರ ಕ್ಷಮೆ ಕೇಳುವ ಮೂಲಕ ಒಂದಾಗಿ ಹಬ್ಬವನ್ನು ಆಚರಿಸಿದ್ದಾರೆ.

ಈ ಟಾಸ್ಕ್‌ನಲ್ಲಿ ಎಳ್ಳು ಬೆಲ್ಲಾ ತಿಂದು ಒಬ್ಬರ ಬಗ್ಗೆ ಒಳ್ಳೆಯದನ್ನು ಮಾತನಾಡಬೇಕು. ಈ ಟಾಸ್ಕ್‌ನಲ್ಲಿ ಮೊದಲಿಗೆ ರಜತ್ ಅವರು ಮಾತನಾಡುತ್ತಾರೆ. ಧನ್‌ರಾಜ್ ಜೊತೆಗೆ ಆಡಿದ ಜಗಳದ ಬಗ್ಗೆ ರಜತ್ ಅವರು ಮಾತನಾಡುತ್ತಾರೆ. ತಾವು ಮೊದಲು ಮನೆಗೆ ಆಗಮಿಸಿದಾಗ ಧನ್‌ರಾಜ್ ಜೊತೆಗೆ ತುಂಬಾ ಜಗಳ ಆಡಿದ್ದು ನಾನು ಎಂದು ರಜತ್ ಹೇಳುತ್ತಾರೆ.
ಅವರು ಮಕ್ಕಳಂತೆ ಕೆನ್ನೆ ಸವರಿದರು. ಬಿಗ್‌ಬಾಸ್ ಮನೆಯಿಂದ ಹೊರ ಹೋದ ಬಳಿಕವೂ ನಾವಿಬ್ಬರೂ ಕೆನ್ನೆ ಸವರಿಕೊಂಡು ಇರುತ್ತೇವೆ ಎಂದು ರಜತ್ ಕಾಮಿಡಿ ಮಾಡಿದ್ದಾರೆ. ಇದಕ್ಕೆ ತಾರಾಮ್ಮ ಸಿಕ್ಕಾಪಟ್ಟೆ ನಗಾಡಿದ್ದಾರೆ. ಬಳಿಕ ಧನ್‌ರಾಜ್ ಹಾಗೂ ರಜತ್ ಇಬ್ಬರೂ ಪರಸ್ಪರ ಎಳ್ಳು ಬೆಲ್ಲ ಹಂಚಿಕೊಂಡಿರುವುದು ಕಂಡು ಬಂದಿದೆ.
ನಂತರ ಮೋಕ್ಷಿತಾ ಅವರು ಮಾತನಾಡಿ ಈ ಮನೆಯಲ್ಲಿ ಜಾಸ್ತಿ ಜಗಳ ಆಡಿದ್ದು ಮಂಜಣ್ಣನ ಜೊತೆಗೆ ಎಂದು ಹೇಳುತ್ತಾರೆ. ಆದರೆ ತಾವು ಎಷ್ಟೇ ಜಗಳ ಆಡಿದರೂ ಕೂಡ ಮಂಜಣ್ಣನ ಮೇಲೆ ಅಣ್ಣನ ಪ್ರೀತಿ ಯಾವಾಗಲೂ ಇದ್ದೇ ಇರುತ್ತದೆ. ಅದು ಬದಲಾಗುವುದಿಲ್ಲ. ನಾನು ಅವರೊಂದಿಗೆ ಜಗಳ ಆಡಿದ್ದಕ್ಕೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ಇನ್ನೂ ಮಂಜು ಕೂಡ ತುಂಬಾ ಬಾವುಕರಾಗಿ ಮೋಕ್ಷಿತಾ ಬಗ್ಗೆ ಮಾತನಾಡುತ್ತಾರೆ. ಮೋಕ್ಷಿತಾ ತುಂಬಾ ಪ್ರೀತಿಯಿಂದ ಅಣ್ಣ ಎಂದು ಕರೆಯುತ್ತಾರೆ. ಒಂದು ಕಡೆ ನಾನು ಮೋಕ್ಷಿತಾಗೆ ಸಿಕ್ಕಾಪಟ್ಟೆ ನೋವು ಕೊಟ್ಟೆ ಎಂದು ಬೇಸರ ವ್ಯಕ್ತಪಡಿಸಿ ಕಣ್ಣೀರು ಹಾಕುತ್ತಾರೆ. ಇದಕ್ಕೆ ಕ್ಷಮೆಯನ್ನು ಮಂಜಣ್ಣ ಮೋಕ್ಷಿತಾ ಬಳಿ ಕೇಳುತ್ತಾರೆ. ಇವರಿಬ್ಬರೂ ಕೂಡ ಪರಸ್ಪರ ಅಪ್ಪಿಕೊಂಡು ಕ್ಷಮೆ ಕೇಳುತ್ತಾರೆ. ಮುಂದೆ ಚೆನ್ನಾಗಿರುವುದಾಗಿ ಹೇಳುತ್ತಾರೆ.
ಹೀಗೆ ಮನೆ ಮಂದಿಯೆಲ್ಲಾ ತಾವು ದುಡಿಕೆ ಗೊತ್ತಿದ್ದೋ ಗೊತ್ತಿಲ್ಲದೆನೋ ಮಾಡಿದ ತಪ್ಪನ್ನು ಹೇಳಿಕೊಂಡು ತಮ್ಮಿಂದ ಬೇಜಾರಾದವರಿಗೆ ಕ್ಷಮೆಯನ್ನು ಕೇಳಿದ್ದಾರೆ. ಇದರಿಂದ ಮನೆಯ ಸ್ಪರ್ಧಿಗಳ ನಡುವೆ ಇದ್ದ ಮನಸ್ತಾಪಗಳು ದೂರವಾಗಿವೆ. ಪರಸ್ಪರ ಒಳ್ಳೆಯ ಮಾತುಗಳನ್ನು ಆಡುವ ಮೂಲಕ ಮನೆಯ ಎಲ್ಲಾ ಸ್ಪರ್ಧಿಗಳು ಒಳ್ಳೆಯ ಮಾತುಗಳನ್ನು ಆಡಿದ್ದಾರೆ.
ಒಟ್ಟಿನಲ್ಲಿ ಬಿಗ್‌ಭಾಸ್ ಮನೆಯಲ್ಲಿ ಮಕರ ಸಂಕ್ರಾಂತಿ ಹೊಸ ಬದಲಾವಣೆಯನ್ನು ತಂದಿದೆ. ಇನ್ನೇನು ಎರಡೇ ವಾರಗಳಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾಗಲಿದ್ದು ಮನೆಯಲ್ಲಿ ಸ್ಪರ್ಧಿಗಳ ನಡುವೆ ಪರಸ್ಪರ ಪ್ರೀತಿ ಹೆಚ್ಚಾಗಿದೆ. ಈ ಪ್ರೀತಿ ಎರಡು ವಾರಗಳವರೆಗೆ ಹೀಗೆ ಮುಂದುವರೆಯುತ್ತಾ ಅಥವಾ ಬದಲಾಗುತ್ತಾ ಕಾದು ನೋಡಬೇಕಿದೆ.












Click it and Unblock the Notifications