Bigg Boss: ಬಿಗ್‌ಬಾಸ್ ಮನೆಯಿಂದ ಜೈಲಿಗೆ ಹೋದ ಚೈತ್ರಾ ಕುಂದಾಪುರ!
ಬಿಗ್‌ಬಾಸ್ ಮನೆಯಲ್ಲಿ ಬಿಗ್‌ಬಾಸ್ ಬಿಟ್ಟರೆ ಜೋರಾಗಿ ಮಾತನಾಡುವವರು ಅಂದರೆ ಅದು ಚೈತ್ರಾ ಕುಂದಾಪುರ. ತಮ್ಮ ಖಡಕ್ ಮಾತು, ಜೋರು ಧ್ವನಿಗೆ ಚೈತ್ರಾ ಬಿಗ್‌ಬಾಸ್ ಮನೆಯಲ್ಲಿ ಭಾರೀ ಫೇಮಸ್ ಆಗಿದ್ದಾರೆ. ಇತ್ತೀಚಿಗೆ ಚೈತ್ರಾ ಮನೆಯ ಎಲ್ಲಾ ಸದಸ್ಯರೊಂದಿಗೆ ಜಗಳವಾಡುತ್ತಾ ಟಾರ್ಗೇಟ್ ಆಗಿದ್ದಾರೆ. ಸಣ್ಣಪುಟ್ಟ ವಿಚಾರಕ್ಕೂ ಏರು ಧ್ವನಿಯಲ್ಲಿ ಕೂಗಾಡಿ ಮನೆಯ ಇತರ ಸದಸ್ಯರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ಚೈತ್ರಾ ಸದ್ಯ ಜೈಲಿಗೆ ಹೋಗಿದ್ದಾರೆ. ಹಾಗಾದರೆ ಆಗಿದ್ದೇನು? ಚೈತ್ರಾ ಜೈಲಿಗೆ ಯಾಕೆ ಹೋದರು?
ಬಿಗ್‌ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಮಾತಿಗೆ ಬ್ರೇಕ್ ಬಿದ್ದಿದೆ. ಮನೆಯ ಬಹುತೇಕ ಸದಸ್ಯರು ಚೈತ್ರಾ ಅವರಿಗೆ ಕಳಪೆ ಪ್ರದರ್ಶನ ಪಟ್ಟ ನೀಡಿ ಜೈಲಿಗೆ ಕಳುಹಿಸಿದ್ದಾರೆ. ಆದರೆ ಚೈತ್ರಾ ಮನೆಯ ಸದಸ್ಯರು ಕೊಟ್ಟ ಕಳಪೆ ಕಾರಣದ ವಿರುದ್ಧವೂ ಕೂಗಾಡಿದ್ದಾರೆ. ಚೆನ್ನಾಗಿ ಆಡಿದರೂ ಕೂಡ ನನಗೆ ಕಳಪೆ ನೀಡಿದ್ದಾರೆ, ಈ ಮನೆಯಲ್ಲಿ ವ್ಯಕ್ತಿಗೇ ಬೆಲೆ ಇಲ್ಲ ಮಾತಿಗೆಲ್ಲಿಂದ ಬೆಲೆ ಎಂದು ಬೈದಾಡಿಕೊಳ್ಳುತ್ತಾ ಜೈಲು ಸೇರಿದ್ದಾರೆ ಚೈತ್ರಾ. ಇಂದಿನ ಸಂಚಿಕೆಯಲ್ಲಿ ಚೈತ್ರಾ ಜೈಲಿಗೆ ಹೋಗಲು ಮನೆಯ ಸದಸ್ಯರು ಕೊಟ್ಟ ಕಾರಣದ ಸಂಪೂರ್ಣ ವಿವರ ಸಿಗಲಿದೆ.

ಕಲರ್ಸ್ ಕನ್ನಡ ವಾಹಿನಿ ಇಂದಿನ ಸಂಚಿಕೆಯ ಸಣ್ಣ ಕ್ಲಿಪ್‌ವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ಭವ್ಯ, ಗೋಲ್ಡ್ ಸುರೇಶ್, ಉಗ್ರಂ ಮಂಜು ಹಾಗೂ ಕ್ಯಾಪ್ಟನ್ ಗೌತಮಿ ಕೂಡ ಚೈತ್ರಾ ಕುಂದಾಪುರ ಅವರಿಗೆ ಕಳಪೆ ಪಟ್ಟ ಕೊಟ್ಟಿದ್ದಾರೆ. ಮಂಜು ಅವರು ಕೊಟ್ಟ ಕಾರಣವನ್ನು ಒಪ್ಪದ ಚೈತ್ರಾ ಅವರು ಮಂಜು ಜೊತೆಗೆ ಏರು ಧ್ವನಿಯಲ್ಲಿ ಮಾತನಾಡುವುದು ವೀಡಿಯೋದಲ್ಲಿ ಕಂಡು ಬಂದಿದೆ. ಇದರಿಂದಾಗಿ ಚೈತ್ರಾ ಜೈಲಿಗೆ ಹೋಗುವ ಮುನ್ನ ತಮಗೆ ಕಳಪೆ ಕೊಟ್ಟ ಸದಸ್ಯರೊಂದಿಗೆ ಜಗಳವಾಡಿದಂತೆ ಕಾಣಿಸುತ್ತಿದೆ.
ಚೈತ್ರಾ ಎರಡು ಬಾರಿ ಬಿಗ್‌ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ. ಒಂದು ಆರೋಗ್ಯ ಸಮಸ್ಯೆ ಇದ್ದಾಗ. ಮತ್ತೊಂದು ಕೋರ್ಟ್‌ಗೆ ಹಾಜರಾಗಿದ್ದಾಗ. ಬಿಗ್‌ಬಾಸ್ ಮನೆಯಲ್ಲಿ ಇದ್ದ ಚೈತ್ರಾ ಏಕಾಏಕಿ ಕೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ಅನಾರೋಗ್ಯ ಸಮಸ್ಯೆಯಿಂದ ಚಿಕಿತ್ಸೆಗಾಗಿ ಹೊರಬಂದಿದ್ದ ಚೈತ್ರಾ ಯಾರು ಚೆನ್ನಾಗಿ ಆಡುತ್ತಿದ್ದಾರೆ? ಯಾರು ಹಿಂದೆ ಉಳಿದಿದ್ದಾರೆ? ಎಲ್ಲದರ ಮಾಹಿತಿ ಪಡೆದುಕೊಂಡು ಬಿಗ್‌ಬಾಸ್ ಮನೆಗೆ ವಾಪಸ್ ಆದಾಗ ಈ ಬಗ್ಗೆ ಮನೆಯ ಸದಸ್ಯರಿಗೂ ಮಾಹಿತಿ ಹಂಚಿಕೊಂಡಿದ್ದರು. ಇದರಿಂದ ಬಿಗ್‌ಬಾಸ್ ಮನೆಯಲ್ಲಿ ದೊಡ್ಡ ಗೊಂದಲವೇ ಸೃಷ್ಟಿಯಾಗಿತ್ತು. ಈ ವಿಚಾರದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಚೈತ್ರಾ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಆದರೆ ಈ ಬಾರಿ ಕೋರ್ಟ್‌ಗೆ ಹೋಗಿ ಬಂದಿದ್ದ ಚೈತ್ರಾ ಹೊರಗಿನ ಯಾವುದೇ ವಿಚಾರವನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ. ಆದರೆ ಕಳಪೆ ಪ್ರದರ್ಶನಕ್ಕಾಗಿ ಜೈಲು ಸೇರಿದ್ದಾರೆ. ಇದರಿಂದ ಈ ವಾರ ಬಿಗ್‌ಬಾಸ್ ಮನೆಯಿಂದ ಚೈತ್ರಾ ಹೊರ ಹೋಗುತ್ತಾರಾ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಒಟ್ಟಿನಲ್ಲಿ ಚೈತ್ರಾ ತಮ್ಮ ಮಾತಿನಿಂದಲೇ ಮನೆ ಮಂದಿಗೆಲ್ಲಾ ಬೇಸರವಾಗಿದ್ದು ಈ ವಾರ ಹೊರ ಬರುವ ಲಕ್ಷಣಗಳು ಇದೆ.
ಚೈತ್ರಾ ಮೇಲೆ ವಂಚನೆ ಪ್ರಕರಣ
ಈ ಹಿಂದೆ ಚೈತ್ರಾ ಕುಂದಾಪುರ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ, ಕೋಟಿ ವಂಚಿಸಿದ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಚೈತ್ರಾ ಕುಂದಾಪುರ ಅವರು ವಿಚಾರಣೆ ಎದುರಿಸುತ್ತಿದ್ದಾರೆ.
ಕೈದಿ ಉಡುಪನ್ನ ಧರಿಸಿ ದುಪ್ಪಟ್ಟದಿಂದ ಮುಚ್ಚಿಕೊಂಡ ಚೈತ್ರಾ
10ನೇ ವಾರ 11ನೇ ಬಿಗ್‌ಬಾಸ್ ಸೀಸನ್‌ನಲ್ಲಿ ಪ್ರಸ್ತುತ 12 ಜನ ಮಾತ್ರ ಉಳಿದುಕೊಂಡಿದ್ದಾರೆ. ಗೌತಮಿ ಕ್ಯಾಪ್ಟನ್ ಆಗಿದ್ದಕ್ಕೆ ಮೋಕ್ಷಿತಾ ಸಿಕ್ಕಾಪಟ್ಟೆ ಉರಿದುಕೊಳ್ಳುತ್ತಿದ್ದಾರೆ. ಈ ನಡುವೆ ಮನೆಯ ಸದಸ್ಯರು ಒಮ್ಮತದಿಂದ ಚೈತ್ರಾ ಕುಂದಾಪುರ ಅವರಿಗೆ ಕಳಪೆ ಪಟ್ಟ ಕೊಟ್ಟು ಜೈಲಿಗೆ ಕಳುಹಿಸಿದ್ದಾರೆ. ಇಲ್ಲಿ ಚೈತ್ರಾ ಜೈಲಿಗೆ ಹೋಗಬೇಕಾದರೆ ಕೈದಿ ಬಟ್ಟೆ ಹಾಕಿಕೊಳ್ಳಬೇಕು. ಆದರೆ ಚೈತ್ರಾ ತಮ್ಮ ಉಡುಪಿನ ಮೇಲೆ ಕೈದಿ ಬಟ್ಟೆ ಹಾಕಿಕೊಂಡು ಜೈಲಿಗೆ ಹೋಗಿದ್ದಾರೆ.
ಬಿಗ್‌ಬಾಸ್ ಮನೆಯ ನಿಯಮದ ಪ್ರಕಾರ ಸ್ಪರ್ಧಿಗಳು ಜೈಲಿಗೆ ಹೋಗುವ ಮುನ್ನ ಕೈದಿ ಉಡುಪು ಧರಿಸಬೇಕು. ಆದರೆ ಚೈತ್ರಾ ತಮ್ಮ ಉಡುಪಿನ ಮೇಲೆ ಕೈದಿ ಬಟ್ಟೆ ಧರಿಸಿ, ಅದನ್ನು ದುಪ್ಪಟ್ಟದಿಂದ ಮುಚ್ಚಿಕೊಂಡಿರುವುದು ಕಂಡು ಬಂದಿದೆ. ಇಲ್ಲಿ ಚೈತ್ರಾ ಅವರಿಗೆ ಒಂದು ರೀತಿ ನ್ಯಾಯ ಉಳಿದ ಸ್ಪರ್ಧಿಗಳಿಗೆ ಒಂದು ರೀತಿ ನ್ಯಾಯಾನಾ ಎಂದು ಬಿಗ್‌ಬಾಸ್ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.
ಜೈಲಿನಿಂದ ಹೊರ ಬಂದ ಚೈತ್ರಾ
ಚೈತ್ರಾ ಅವರ ಜೈಲು ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ಕಳೆದ ದಿನ ಬಿಗ್‌ಬಾಸ್ ಅವರನ್ನು ಜೈಲಿನಿಂದ ಹೊರ ಬರುವಂತೆ ಸೂಚನೆ ನೀಡುತ್ತಾರೆ. ಹೀಗಾಗಿ ಚೈತ್ರಾ ಕುಂದಪುರ ಜೈಲಿನಿಂದ ಹೊರ ಬಂದಿದ್ದಾರೆ. ಹೊರ ಬಂದ ಬಳಿಕ ಚೈತ್ರಾ ತಮಗೆ ಜ್ವರ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಸ್ನಾನಕ್ಕೆ ಬಿಸಿ ನೀರು ಕೊಡಿ ಎಂದು ಬಿಗ್‌ಬಾಸ್‌ಗೆ ಕೇಳಿಕೊಳ್ಳುತ್ತಾರೆ. ಜೈಲಿನಿಂದ ಹೊರ ಬಂದ ಬಳಿಕ ಸ್ವಲ್ಪ ಸುಸ್ತಾಗಿದ್ದ ಚೈತ್ರಾ ಕೊಂಚ ಆರೋಗ್ಯ ಸಮಸ್ಯೆ ಎದುರಿಸುವಂತೆಯೇ ಕಾಣಿಸುತ್ತಾರೆ.
ಇನ್ನೂ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಚೈತ್ರಾ ಅವರ ಧ್ವನಿ ಅಷ್ಟು ಜೋರಾಗಿ ಬರಲು ಹೇಗೆ ಸಾಧ್ಯ ಎಂದು ಕಾಲೆಳೆಯುತ್ತಾರೆ. ಅವರ ದೇಹಕ್ಕಿಂತ ಅವರ ಧ್ವನಿ ನೂರು ಪಟ್ಟು ದೊಡ್ಡದು ಎಂದು ಸುದೀಪ್ ಕಾಮಿಡಿ ಮಾಡುತ್ತಾರೆ. ಇನ್ನೂ ರಜತ್ ಚೈತ್ರಾ ಅವರಿಗೆ ಹೇಳಿದ ಆ ಒಂದು ಮಾತನ್ನೂ ಸುದೀಪ್ ನೆನಪಿಸಿಕೊಳ್ಳುತ್ತಾರೆ. ಚೈತ್ರಾ ಜೋರಾಗಿ ಮಾತನಾಡುವಾಗ ರಜತ್ ನಾನು ನಿಮ್ಮ ಮುಂದೆ ನಿಂತಿದಿನಿ ಅಷ್ಟೊಂದು ಜೋರಾಗಿ ಯಾಕ್ ಮಾತನಾಡ್ತೀರಾ, ನಿಧಾನಕ್ಕೆ ಹೇಳಿದರೆ ಸಾಕು ನನಗೆ ಕೇಳಿಸುತ್ತೆ ಎಂದು ಹೇಳುತ್ತಾರೆ. ಈ ಮಾತನ್ನು ನೆನಪಿಸಿಕೊಂಡು ಸುದೀಪ್ ನಗಾಡಿದ್ದಾರೆ.












Click it and Unblock the Notifications