Bigg Boss: ವಿನ್ನರ್ ಲಿಸ್ಟ್‌ನಿಂದ ಭವ್ಯಾ-ತ್ರಿವಿಕ್ರಮ್ ಹೆಸರು ಸ್ಕಿಪ್ ಮಾಡಿದ ಐಶ್ವರ್ಯ
ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಐಶ್ವರ್ಯ ಸಿಂಧೋಗಿ ಅವರು ಸಖತ್ ಖುಷಿಯಾಗಿದ್ದಾರೆ. ಐಶ್ ಅವರ ಅಭಿಮಾನಿಗಳು ಅವರನ್ನು ತುಂಬು ಹೃದಯದಿಂದ ಸ್ವಾಗತಿಸಿದ ರೀತಿ ಕಂಡು ಐಶ್ವರ್ಯ ತುಂಬಾನೇ ಸಂತೋಷಗೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಅವರು ಆಡಿದ ರೀತಿಗೆ ಮೆಚ್ಚುಗೆ ವ್ಯಕ್ತವಾಗಿದ್ದು ಐಶ್ವರ್ಯ ಅವರಿಗೆ ಗೆದ್ದಷ್ಟೇ ಆನಂದವಾಗಿದೆ. ಹೀಗೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಐಶ್ವರ್ಯ ಈ ಬಾರಿ ಗೆಲ್ಲುವ ಕುದುರೆ ಯಾರು ಎನ್ನುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೌದು.. ಬಿಗ್‌ಬಾಸ್ ಇತಿಹಾಸದಲ್ಲೇ ಒಬ್ಬ ಸ್ಪರ್ಧಿಯನ್ನು ಅತ್ಯಂತ ಪ್ರೀತಿಯಿಂದ ಕಳುಹಿಸಲಾಗಿದೆ ಅಂದರೆ ಅದು ಐಶ್ವರ್ಯ ಸಿಂಧೋಗಿ ಅವರನ್ನು. ಬಿಗ್‌ಬಾಸ್ 'ಹೋಗಿ ಬಾ ಮಗಳೆ' ಎಂದು ಐಶ್ವರ್ಯ ಅವರನ್ನು ಕಳುಹಿಸಿಕೊಟ್ಟಿದ್ದಾರೆ. ಇದು ಐಶ್‌ಗೆ ಗೆಲುವು ಸಾಧಿಸಿ ಕಪ್ ಹಿಡಿದಷ್ಟೇ ಖುಷಿ ತಂದಿದೆ. ಇನ್ನೂ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಹಲವಾರು ಖಾಸಗಿ ವಾಹಿನಿಗಳೊಂದಿಗೆ ಮಾತನಾಡಿದ ಅವರು ದೊಡ್ಮನೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಬಾರಿ ಬಿಗ್‌ಬಾಸ್ ವಿನ್ನರ್ ಯಾರು ಎಂದು ರಿವೀಲ್ ಮಾಡಿದ್ದಾರೆ.

ಟಾಪ್ 4 ಲಿಸ್ಟ್‌ನಿಂದ ಭವ್ಯಾ-ತ್ರಿವಿಕ್ರಮ್ ಹೆಸರು ಸ್ಕಿಪ್ ಮಾಡಿದ ಐಶ್
ಐಶ್ವರ್ಯ ಅವರ ಪ್ರಕಾರ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಟಾಪ್ 4 ಸ್ಪರ್ಧಿಗಳು ಅಂದರೆ ಮೋಕ್ಷಿತಾ, ಹನುಮಂತ, ಮಂಜು, ಧನ್‌ರಾಜ್. ಇವರೆಲ್ಲರೂ ತುಂಬಾ ಚೆನ್ನಾಗಿ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ ಎಂದು ಐಶ್ವರ್ಯ ಹೇಳಿಕೊಂಡಿದ್ದಾರೆ. ಆದರೆ ಟಾಪ್ 4 ಲಿಸ್ಟ್‌ನಿಂದ ಭವ್ಯಾ-ತ್ರಿವಿಕ್ರಮ್ ಹೆಸರನ್ನು ಐಶ್ವರ್ಯ ಸ್ಕಿಪ್ ಮಾಡಿದ್ದಾರೆ.
ಐಶ್ವರ್ಯ ಅವರು ಬಿಗ್‌ಬಾಸ್ ಮನೆಯಲ್ಲಿ ಇರುವಾಗ ಭವ್ಯಾ ಹಾಗೂ ತ್ರಿವಿಕ್ರಮ್ ಅವರನ್ನು ಕಂಡರೆ ಆಗುತ್ತಿರಲಿಲ್ಲ. ಹೀಗಾಗಿ ಇವರಿಬ್ಬರ ಹೆಸರಲ್ಲಿ ಒಬ್ಬರ ಹೆಸರನ್ನೂ ಟಾಪ್ 4 ಲಿಸ್ಟ್‌ನಲ್ಲಿ ಐಶ್ವರ್ಯ ತೆಗೆದುಕೊಂಡಿಲ್ಲ. ಹೀಗಾಗಿ ಐಶ್ವರ್ಯ ಅವರಿಗೆ ಇನ್ನೂ ಕೂಡ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಅವರ ಮೇಲೆ ಕೋಪ ಇರುವುದು ಸ್ಪಷ್ಟವಾಗಿದೆ.
ಈ ಬಾರಿ ಬಿಗ್‌ಬಾಸ್ ವಿನ್ನರ್ ಯಾರು?
ಐಶ್ವರ್ಯ ಅವರ ಪ್ರಕಾರ ಈ ಬಾರಿ ಬಿಗ್‌ಬಾಸ್ ಗೆಲ್ಲುವ ಕುದುರೆ ಧನ್‌ರಾಜ್. ಇನ್ನೂ ರನ್ನರ್ ಅಪ್ ಆಗಿ ಹನುಮಂತ ಇರಲಿದ್ದಾರೆ ಎಂದು ಐಶ್ವರ್ಯ ಹೇಳಿದ್ದಾರೆ. ಐಶ್ವರ್ಯ ಅವರು ಅಲ್ಲದೆ ತುಂಬಾ ಜನ ಬಿಗ್‌ಬಾಸ್ ವೀಕ್ಷಕರು ಕೂಡ ಇದೇ ವಿಚಾರವನ್ನು ಹೇಳಿಕೊಳ್ಳುತ್ತಿದ್ದಾರೆ.
ಹನುಮಂತ ಬಿಗ್‌ಬಾಸ್ ಮನೆಯಲ್ಲಿ ತುಂಬಾ ಸಿಂಪಲ್ ಆಗಿರುವ ಹಳ್ಳಿ ಗಾಯಕ. ಇವರ ಮುಗ್ಧತೆ ಹಾಗೂ ಸರಳತೆಗೆ ಜನ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹನುಮಂತನೇ ಈ ಬಾರಿಯ ಬಿಗ್‌ಬಾಸ್ ವಿನ್ನರ್ ಎಂದು ಜನ ಈಗಾಗಲೇ ನಿರ್ಧಾರ ಮಾಡಿ ಆಗಿದೆ. ಆದರೆ ಬಿಗ್‌ಬಾಸ್ ಜನರ ಮತಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಬಿಗ್‌ಬಾಸ್ ತಂಡದ ಅಭಿಪ್ರಾಯವೂ ಕೂಡ ಇಲ್ಲಿ ಮುಖ್ಯವಾಗಿರುವುದರಿಂದ ತ್ರಿವಿಕ್ರಮ್, ಮಂಜು, ಹನುಮಂತ, ಧನ್‌ರಾಜ್ ಹಾಗೂ ರಜತ್ ಈ ಐವರ ಪೈಕಿ ಯಾರು ಬೇಕಾದರೂ ಬಿಗ್‌ಬಾಸ್ ವಿನ್ನರ್ ಆಗಬಹುದು. ಇದು ಗೊತ್ತಾಗಬೇಕು ಅಂದರೆ ಕೊಂಚ ದಿನಗಳವರೆಗೆ ನಾವು ಕಾಯಲೇಬೇಕು.












Click it and Unblock the Notifications