Bigg Boss: ಬಿಗ್‌ಬಾಸ್ ಮನೆಗೆ ಮರಳಿದ ವರ್ತೂರ್ ಸಂತೋಷ್!

ಕನ್ನಡ ಬಿಗ್‌ಬಾಸ್ ಸೀಸನ್ 10 ಕುತೂಹಲ ಕೆರಳಿಸಿದ್ದು, ಅದ್ರಲ್ಲೂ ವರ್ತೂರ್ ಸಂತೋಷ್ ಅವರ ವಿಚಾರವಾಗಿ ದೇಶಾದ್ಯಂತ ಸದ್ದು ಮಾಡಿದೆ. ಹುಲಿ ಉಗುರಿನ ಪೆಂಡೆಂಟ್‌ನ ತಮ್ಮ ಕುತ್ತಿಗೆಗೆ ಧರಿಸಿದ್ದಾರೆ ಎಂಬ ಆರೋಪದ ಮೇಲೆ 'ಬಿಗ್ ಬಾಸ್‌' ಸ್ಪರ್ಧಿ ವರ್ತೂರು ಸಂತೋಷ್ ಅವರನ್ನ ಬಂಧಿಸಲಾಗಿತ್ತು. ಆದರೆ ಈಗ ಮತ್ತೊಂದು ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ!

ಬಿಗ್ ಬಾಸ್ ರಿಯಾಲಿಟಿ ಶೋಗೆ ದೇಶದಲ್ಲಿ ಒಂದು ಗತ್ತಿದೆ. ಹಿಂದಿ ಬಿಗ್ ಬಾಸ್ ಬಿಟ್ಟರೆ ಕನ್ನಡದ ಬಿಗ್ ಬಾಸ್ ಸಾಕಷ್ಟು ಹೆಸರನ್ನೂ ಮಾಡುತ್ತಿದೆ. ನಟ ಕಿಚ್ಚ ಸುದೀಪ್ ನಿರೂಪಣೆ ಎಲ್ಲರ ಗಮನ ಸೆಳೆಯುತ್ತದೆ. ಇದೀಗ ಬಿಗ್ ಬಾಸ್ ಸೀಸನ್ 10 ಶುರುವಾಗಿದ್ದು, ಮೊದಲ ದಿನದಿಂದಲೇ ಈ ಶೋ ಸಾಕಷ್ಟು ಸದ್ದು ಮಾಡುತ್ತಿತ್ತು. ಆದರೆ ಮಧ್ಯದಲ್ಲಿ ವರ್ತೂರ್ ಸಂತೋಷ್ ಅವರ ವಿಚಾರದಲ್ಲಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಹೀಗೆ ಹುಲಿ ಉಗುರಿನ ಬಲೆಗೆ ಬಿದ್ದಿದ್ದ ವರ್ತೂರ್ ಸಂತೋಷ್ ಈಗ ಮತ್ತೆ ಬಿಗ್‌ಬಾಸ್ ಮನೆ ಸೇರಿದ್ದಾರೆ.

Big Update About Kannada Bigg Boss Contestant Varthur Santhosh

ವರ್ತೂರ್ ಸಂತೋಷ್ ಫ್ಯಾನ್ಸ್ ಖುಷ್!

ಅಂದಹಾಗೆ ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದ ಆರೋಪದ ಹಿನ್ನೆಲೆ, 'ಬಿಗ್ ಬಾಸ್‌' ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಬಿಗ್ ಬಾಸ್‌ ಮನೆ ಒಳಗೆ ಎಂಟ್ರಿ ಕೊಟ್ಟಿದ್ದ ಅರಣ್ಯಾಧಿಕಾರಿಗಳು ಅಲ್ಲಿಂದಲೆ ವರ್ತೂರ್ ಸಂತೋಷ್ ಅವರನ್ನ ಬಂಧಿಸಿ ಕರೆದೊಯ್ದಿದ್ದರು. ಆದ್ರೆ ಕಾನೂನು ಹೋರಾಟದ ಮೂಲಕ ಇದೀಗ ಜಾಮೀನು ಪಡೆದಿದ್ದ ವರ್ತೂರು ಸಂತೋಷ್‌ ಅವರು, ಮತ್ತೆ ಮರಳಿ 'ಬಿಗ್ ಬಾಸ್‌' ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ವರ್ತೂರ್ ಸಂತೋಷ್ ಅವರ ಅಭಿಮಾನಿಗಳು ಕೂಡ ಖುಷ್ ಆಗಿದ್ದಾರೆ.

ಘಟನೆಯ ಹಿನ್ನೆಲೆ ಏನು?

ಹುಲಿ ಉಗುರು ಮಾತ್ರವಲ್ಲ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ವನ್ಯ ಮೃಗಗಳ ಉತ್ಪನ್ನ ಬಳಕೆ ಕಾನೂನು ಬಾಹೀರ. ಆದ್ರೆ ಈ ವಿಚಾರದಲ್ಲಿ ವರ್ತೂರ್ ಸಂತೋಷ್ ತಪ್ಪು ಮಾಡಿ ಹುಲಿ ಉಗುರು ಧರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. 'ಬಿಗ್ ಬಾಸ್‌' ಮನೆಯೊಳಗೆ ಇದ್ದ 'ಹಳ್ಳಿಕಾರ್ ಒಡೆಯ' ಖ್ಯಾತಿಯ ವರ್ತೂರು ಸಂತೋಷ್ ಹುಲಿ ಉಗುರು ಇರುವ ಚಿನ್ನದ ಪೆಂಡೆಂಟ್ ಧರಿಸಿದ್ದಾರೆ ಎಂಬ ಆರೋಪ ಮುಳುವಾಗಿತ್ತು. ಹೀಗೆ, ಮನೆಯೊಳಗೆ ಸಂತೋಷ್ ಧರಿಸಿದ್ದ ಚಿನ್ನದ ಸರದಲ್ಲಿ ಹುಲಿ ಉಗುರಿನ ಪೆಂಡೆಂಟ್ ಇತ್ತೆಂಬ ಆರೋಪವು ಕೇಳಿಬಂದಿತ್ತು. ಇದೇ ಹಿನ್ನೆಲೆ ಸಂತೋಷ್ ವಿರುದ್ಧ ದೂರು ದಾಖಲಾಗಿತ್ತು. ಅರಣ್ಯಾಧಿಕಾರಿಗಳು ಸೀದಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು, ಅಕ್ಟೋಬರ್ 22ರಂದು ಸಂತೋಷ್ ಅವರನ್ನು ಬಂಧಿಸಿದ್ದರು.

ಒಟ್ನಲ್ಲಿ ಈಗ ಮತ್ತೆ ವರ್ತೂರ್ ಸಂತೋಷ್ ಬಿಗ್‌ ಬಾಸ್ ಮನೆಗೆ ವಾಪಸ್ ಬಂದಿದ್ದು, ಈ ಸಮಯದಲ್ಲಿ ವರ್ತೂರ್ ಸಂತೋಷ್ ಅಭಿಮಾನಿಗಳ ಸಂಭ್ರಮವೂ ಮತ್ತಷ್ಟು ಹೆಚ್ಚಾಗಿದೆ. ಇನ್ನೂ ಆಟ ಬಾಕಿ ಇದ್ದು, ಈ ಬಾರಿಯ ಬಿಗ್ ಬಾಸ್ ಸೀಸನ್‌ನ ಚಾಂಪಿಯನ್ ವರ್ತೂರ್ ಸಂತೋಷ್ ಅವರೇ ಆಗ್ತಾರಾ? ಎಂಬ ಕುತೂಹಲ ಕೂಡ ಡಬಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+