Bigg Boss: ಹನುಮಂತನಿಗೆ ಹೊಡೆದ ಭವ್ಯಾ ಜೈಲುಪಾಲು; ಈ ವಾರ ಮನೆಯಿಂದ ಹೊರಬಂದಿದ್ದು ಇವರೇ?

ಬಿಗ್ ಬಾಸ್ ಫಿನಾಲೆಗೆ ಇನ್ನು ಎರಡು ವಾರಗಳು ಬಾಕಿಯಿದ್ದು ಸ್ಪರ್ಧಿಗ ನಡುವೆ ಕಪ್ ಗೆಲ್ಲಲು ಸ್ಪರ್ಧೆ ಜೋರಾಗಿದೆ. ಟಿಕೆಟ್ ಟು ಫಿನಾಲೆ ಆಟಗಳಲ್ಲಿ ಅತ್ಯುತ್ತಮ ಆಟವಾಡಿದ ಹನುಮಂತ ತ್ರಿವಿಕ್ರಮ್ ವಿರುದ್ಧ 2 ಸೆಕೆಂಡ್‌ ಕಡಿಮೆ ಸಮಯದಲ್ಲಿ ಆಟ ಮುಗಿಸಿ, ಫೈನಲ್ ಪ್ರವೇಶಿಸಿದ್ದಾರೆ. ಅಲ್ಲದೆ ಕೊನೆಯ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಶನಿವಾರ ವಾರದ ಕತೆ ಕಿಚ್ಚನ ಜೊತೆಯಲ್ಲಿ ಭವ್ಯಾ ಮತ್ತು ರಜತ್‌ಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದು ವಿಶೇಷ.

ಕ್ಯಾಪ್ಟನ್ ಮತ್ತು ಆಟದ ಉಸ್ತುವಾರಿಯಾಗಿದ್ದ ರಜತ್ ಹಲವು ಆಟಗಳಲ್ಲಿ ಸರಿಯಾಗಿ ಉಸ್ತುವಾರಿ ಮಾಡಿಲ್ಲ ಎಂದ ಸುದೀಪ್, ವಿಡಿಯೋ ಕ್ಲಿಪ್‌ಗಳನ್ನು ತೋರಿಸುವ ಮೂಲಕ ರಜತ್‌ನಿಂದ ಆದ ತಪ್ಪುಗಳನ್ನು ಎತ್ತಿ ತೋರಿಸಿದರು. ವಿಡಿಯೋಗಳನ್ನ ನೋಡಿದ ರಜತ್‌ಗೆ ತಪ್ಪಿನ ಅರಿವಾದರೂ, ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು.

bhavya went to jail in bigg boss for hitting hanumantha

ಬೇರೆಯವರು ಉಸ್ತುವಾರಿ ವಹಿಸಿಕೊಂಡಾಗ ತಪ್ಪು ನಡೆದ ಸಂದರ್ಭದಲ್ಲಿ ಹೇಗೆ ನಡೆದುಕೊಂಡಿದ್ದರು ಎನ್ನುವುದನ್ನು ರಜತ್‌ಗೆ ನೆನಪು ಮಾಡಿದರು. ಚೈತ್ರಾ ಕುಂದಾಪುರ ಪಕ್ಷಪಾತಿ ಎಂದು ಜರಿಯುತ್ತಿದ್ದ ರಜತ್‌ಗೆ ಮಾತಿನಲ್ಲೇ ಚಾಟಿಯೇಟು ಕೊಟ್ಟರು.

ಭವ್ಯಾ ಜೈಲುಪಾಲು

ಇನ್ನು ಭವ್ಯಾಗೆಸ ಕೂಡ ಸುದೀಪ್ ಕ್ಲಾಸ್ ತೆಗೆದುಕೊಂಡರು. ಆಟವಾಡುವ ಸಂದರ್ಭದಲ್ಲಿ ಹನುಮಂತನ ಮೇಲೆ ಭವ್ಯ ಕೈ ಮಾಡಿದ್ದ ವಿಡಿಯೋ ತೋರಿಸಿ ಬುದ್ದಿ ಹೇಳಿದರು. ಸ್ಪರ್ಧಿಯ ಮೇಲೆ ಕೈ ಮಾಡಿದರೆ ತಕ್ಷಣವೇ ಬಿಗ್ ಬಾಸ್ ಮನೆಯಿಂದ ಆಚೆ ಹಾಕುತ್ತಾರೆ ನಿಮ್ಮ ಅದೃಷ್ಟ ಚನ್ನಾಗಿದ್ದು ನೀವು ಉಳಿದಿಕೊಂಡಿದ್ದೀರಾ ಎಂದರು.

ಹನುಮಂತ ಆಗಿದ್ದಕ್ಕೆ ವಿಷಯ ದೊಡ್ಡದು ಮಾಡದೆ ಸುಮ್ಮನಾಗಿದ್ದಾನೆ, ಅದೇ ಜಾಗದಲ್ಲಿ ಮಂಜ ಅಥವಾ ರಜತ್ ಇದ್ದಿದ್ದರೆ ನಿಮ್ಮನ್ನು ಬಿಗ್‌ ಬಾಸ್‌ನಿಂದ ಹೊರಗೆ ಹೋಗುವವರೆಗೆ ಬಿಡುತ್ತಿರಲಿಲ್ಲ ಎಂದರು. ಕಿಚ್ಚನ ಮಾತುಗಳಿಂದ ಭವ್ಯ ಕಣ್ಣೀರು ಹಾಕಿದರು. ಬಳಿಕ ಹನುಮಂತನ ಕ್ಷಮೆ ಕೇಳಿದರು. ಕ್ಷಮೆ ಕೇಳಿದರೆ ಸಾಲದು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿ ಎಂದ ಸುದೀಪ್, ಭವ್ಯಾರನ್ನು ಜೈಲಿಗೆ ಕಳಿಸಲು ಸೂಚನೆ ಕೊಟ್ಟರು. ಬಿಗ್ ಬಾಸ್ ಹೇಳುವವರೆಗೂ ಅಲ್ಲೇ ಇರಬೇಕು ಎಂದು ಹೇಳಿದರು.

ಭವ್ಯಾ ಜೈಲು ಪಾಲಾದರೂ ಎಲಿಮಿನೇಷನ್ ತೂಗುಕತ್ತಿಯಿಂದ ತಪ್ಪಿಸಿಕೊಂಡರು. ಈ ವಾರ ಸೇಫ್ ಆಗುವ ಮೊದಲ ಸ್ಪರ್ಧಿ ನೀವೇ ಎಂದು ಸುದೀಪ್ ಹೇಳಿದರು. ಭವ್ಯ ಇನ್ನೊಂದು ವಾರ ಮನೆಯಲ್ಲಿ ಉಳಿಯುವುದು ಖಚಿತವಾಗಿದೆ.

ಚೈತ್ರಾ ಕುಂದಾಪುರ ಹೊರಗೆ?

ಈ ವಾರ ಒಬ್ಬರು ಮನೆಯಿಂದ ಹೊರಬರುವುದು ಖಚಿತವಾಗಿದೆ. ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವುದು ಭಾನುವಾರದ ಸಂಚಿಕೆಯಲ್ಲಿ ತಿಳಿಯಲಿದೆ. ಆದರೆ ಮಾಹಿತಿ ಪ್ರಕಾರ ಈ ವಾರ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಹೊರಬರುವುದು ಖಚಿತ ಎನ್ನಲಾಗಿದೆ. ಉಳಿದ ಸ್ಪರ್ಧಿಗಳು ಸೇಫ್‌ ಆಗಲಿದ್ದು ಇನ್ನೊಂದು ವಾರ ಮನೆಯಲ್ಲಿ ಉಳಿಯಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+