Bhavya Gowda: ಮೊದಲ ಬಾರಿಗೆ ತಂದೆ ಬಗ್ಗೆ ಮೌನ ಮುರಿದ ಭವ್ಯ ಗೌಡ: ಕಣ್ಣೀರಿಟ್ಟಿದ್ದೇಕೆ?
ಬಿಗ್ ಬಾಸ್ ಕನ್ನಡ ಸೀಜನ್ 11 ಕೊನೆಯ ವಾರಕ್ಕೆ ಕಾಲಿಟ್ಟಿದೆ. ಮನೆಯೊಳಗೆ ಕಾಲಿಟ್ಟ ಇಪ್ಪತ್ತು ಜನರ ಪೈಕಿ ಕೇವಲ ಆರು ಸ್ಪರ್ಧಿಗಳು ಮೂರು ತಿಂಗಳ ಪಯಣವನ್ನು ಯಶಸ್ವಿಯಾಗಿ ಮುಗಿಸಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ರಜತ್, ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಬಿಗ್ ಬಾಸ್ ಕನ್ನಡ ಸೀಜನ್ 11ರ ಫಿನಾಲೆ ವಾರಕ್ಕೆ ತಲುಪಿದ ಖುಷಿಯಲ್ಲಿದ್ದಾರೆ.
ಕಪ್ ಗೆಲ್ಲುವ ಆಸೆ, ಆಕಾಂಕ್ಷೆ, ನಿರೀಕ್ಷೆ ಹಾಗೂ ಲೆಕ್ಕಾಚಾರದಲ್ಲಿರುವ ಬಿಗ್ ಬಾಸ್ ಕನ್ನಡ ಸೀಜನ್ 11ರ ಫಿನಾಲೆ ಸ್ಪರ್ಧಿಗಳಿಗೆ ಬಿಗ್ ಬಾಸ್ ನಿನ್ನೆ ಒಂದು ವಿಶೇಷವಾದ ಅವಕಾಶವೊಂದನ್ನು ನೀಡಿದರು. ಬಿಗ್ ಬಾಸ್ ಮನೆಯಲ್ಲಿ ಈಡೇರಬೇಕು ಎನ್ನುವ ಕೋರಿಕೆಯನ್ನು ಪತ್ರದಲ್ಲಿ ಬರೆದು ಬಿಗ್ ಬಾಸ್‌ಗೆ ನೀಡುವಂತೆ ಹೇಳಿದರು. ಈಡೇರಿಸಬಹುದಾದ ಆಸೆಗಳನ್ನು ಖಂಡಿತಾ ಈಡೇರಿಸುವುದಾಗಿ ಬಿಗ್ ಬಾಸ್ ಭರವಸೆ ಕೂಡ ನೀಡಿದರು.

ಈ ವೇಳೆ ಸ್ಪರ್ಧಿಗಳು ವಿಧವಿಧವಾದ ಕೋರಿಕೆಗಳನ್ನು ಬಿಗ್ ಬಾಸ್ ಮುಂದೆ ತೆರೆದಿಟ್ಟಿದ್ದು, ಈ ಸಂದರ್ಭದಲ್ಲಿ ಭವ್ಯ ಗೌಡ ಕೇಳಿಕೊಂದ ಕೋರಿಕೆ ಎಲ್ಲರ ಗಮನ ಸೆಳೆದಿದೆ. ಮೊಟ್ಟ ಮೊದಲ ಬಾರಿಗೆ ಭವ್ಯ ಗೌಡ ತಮ್ಮ ತಂದೆಯ ಬಗ್ಗೆ ತುಟಿಬಿಚ್ಚಿದ್ದಾರೆ. ಸಸಫ್ಯಾಮಿಲಿ ರೌಂಡ್‌ನಲ್ಲಿ ತಾಯಿ-ಅಕ್ಕ ಬಂದಿದ್ದು ತಂದೆ ಯಾಕೆ ಬರಲಿಲ್ಲ. ಈವರೆಗೂ ಅವರು ಯಾಕೆ ಎಲ್ಲಿಯೂ ಕಾಣಿಸಿಕೊಂಡಿಲ್ಲ ಎನ್ನುವುದರ ಬಗ್ಗೆ ಮಾತನಾಡಿದರು.
'ನನ್ನ ಮೊದಲ ಕೋರಿಕೆ ನನ್ನ ತಂದೆ ಬಿಗ್ ಬಾಸ್ ವೇದಿಕೆ ಅಥವಾ ಮನೆಗೆ ಬರಬೇಕು ಎನ್ನುವುದು. ಫ್ಯಾಮಿಲಿ ರೌಂಡ್‌ನಲ್ಲಿ ಅಪ್ಪಂಗೆ ಹುಷಾರಿಲ್ಲದೆ ಇರುವ ಕಾರಣ ಬರಲಿಲ್ಲ ಅಂತಾ ಅವರು ಕೊಟ್ಟಿದ್ದಾರೆ. ನನ್ನ ನೋಡಿದರೆ ನಿನ್ನ ತಂದೆ ಅಂತಾ ಯಾರೂ ಹೇಳುವುದಿಲ್ಲ. ನಾನು ಬಂದರೆ ನಿನ್ನ ಘನತೆಗೆ ಧಕ್ಕೆ ಆಗುತ್ತದೆ ಅಂತಾ ಅವರೇ ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆ'.

'ನಾನೆಲ್ಲಿಗೂ ಬರಲ್ಲ ಅಂತಾ ಅವರೇ ಮರೆಮಾಚಿಕೊಂಡಿರುವುದು ಇದೆ. ಹಾಗಾಗಿ ಈ ವೇದಿಕೆ ಮುಖಾಂತರ ನನ್ನ ತಂದೆ ಯಾರು ಅಂತಾ ನಾನು ಎಲ್ಲರಿಗೂ ಪರಿಚಯ ಮಾಡಿಸಬೇಕು' ಎಂದು ಭವ್ಯ ಗೌಡ ಬಹಳ ಭಾವುಕತೆಯಿಂದ ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಬಿಗ್ ಬಾಸ್ ಟ್ರೋಫಿ ಮುಂದೆ ಮನದಾಳದ ಮಾತುಗಳನ್ನು ಹಂಚಿಕೊಂಡ ಭವ್ಯ ಗೌಡ, 'ಈ ಟ್ರೋಫಿ ಜೊತೆಗೆ ಅದರ ಜೊತೆಗೆ ಬರುವ ಹಣದಿಂದಲೂ ಉಪಯೋಗ ಇದೆ. ಒಂದು ಸಮಯದಲ್ಲಿ ನನ್ನ ತಂದೆ ವಾಶ್‌ರೂಮ್ ಅಲ್ಲಿ ಬಿದ್ದು, ಧ್ವನಿ ಪೆಟ್ಟಿಗೆಗೆ ಪೆಟ್ಟಾಗಿರುತ್ತದೆ. ನನ್ನ ಕೈಯಲ್ಲಿ ಅವರ ಧ್ವನಿಯನ್ನು ಮತ್ತೆ ಸರಿ ಮಾಡಲು ಆಗಲಿಲ್ಲ ಎನ್ನುವ ಕೊರಗು ಇವತ್ತಿಗೂ ಕಾಡುತ್ತಿದೆ. ಅವತ್ತು ನನ್ನ ಬಳಿ ದುಡ್ಡಿದ್ದರೆ ಅಪ್ಪ ಮೊದಲಿನಂತೆ ಮಾತನಾಡಬಹುದಿತ್ತೇನೋ' ಎಂದು ಭವ್ಯ ಜೋರಾಗಿ ಕಣ್ಣೀರಿಟ್ಟಿದ್ದಾರೆ.











Click it and Unblock the Notifications