Vickypedia: ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ ವಿಕಾಸ್‌ಗೆ ಪೊಲೀಸರ ಡ್ರಿಲ್: ಕಾರಣವೇನು?

ಬೆಂಗಳೂರು, ಜುಲೈ 11: ಸೋಶಿಯಲ್‌ ಮೀಡಿಯಾದಲ್ಲಿ ತಮ್ಮದೇ ಆದ ಡಿಫರೆಂಟ್‌ ಶೈಲಿಯ ವಿಡಿಯೋ ಮಾಡುತ್ತಿದ್ದ ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ ವಿಕಾಸ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ವಿಡಿಯೋವೊಂದರಲ್ಲಿ ಮಾದಕ ವಸ್ತು ವ್ಯಸನದ ಬಗ್ಗೆ ಮಾತನಾಡಿದ ಆರೋಪದ ಮೇಲೆ ವಿಕಾಸ್‌ ಅವರನ್ನು ಬೈಯಪ್ಪನಹಳ್ಳಿ ಪೊಲೀಸರು, ಠಾಣೆಗೆ ಕರೆದು ವಿಚಾರಣೆ ನಡೆಸಿ ಬಳಿಕ ಎಚ್ಚರಿಕೆಯನ್ನು ನೀಡಿ ವಾಪಸ್‌ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ವಿಡಿಯೋ ಮಾಡುವಾಗ ಅನುಸರಿಸಬೇಕಾದ ಕೆಲವು ಸೂಚನೆಗಳನ್ನು ಪೊಲೀಸರು ವಿಕಾಸ್‌ಗೆ ನೀಡಿದ್ದಾರೆ ಎನ್ನಲಾಗಿದೆ.

Bengaluru Police warns Social Media Star Vickypedia Vikas

ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಖ್ಯಾತಿ ಪಡೆದಿರುವ ವಿಕಾಸ್‌, ವಿಕ್ಕಿಪೀಡಿಯಾ ಅಂತಾಲೇ ಫುಲ್ ಫೇಮಸ್‌ ಆಗಿದ್ದಾರೆ. ಕಾಮಿಡಿ ವಿಡಿಯೋಗಳು, ಹಾಡುಗಳು ಹಾಗೂ ಸಾಮಾಜಿಕ ಕಳಕಳಿ ಇರುವಂತಹ ವಿಡಿಯೋಗಳನ್ನು ಮಾಡುವ ಇವರು ನಾನು ನಂದಿನಿ ಬೆಂಗಳೂರಿಗೆ ಬಂದಿನಿ ಎನ್ನುವ ಹಾಡಿನ ಮೂಲಕ ಸಖತ್‌ ವೈರಲ್‌ ಆಗಿದ್ದರು. ಜೊತೆಗೆ ಕರಿಮಣಿ ಮಾಲೀಕ ರಾಹುಲ್ಲಾ ಎನ್ನುವ ಇವರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ನಿರೀಕ್ಷೆಗೂ ಮೀರಿ ಹಿಟ್‌ ಆಗಿತ್ತು.

ಸಿನಿಮಾ ಹಾಗೂ ಕೆಲವು ಪ್ರಾಡೆಕ್ಟ್‌ಗಳ ಪ್ರಮೋಷನ್‌ ಅನ್ನು ಬಹಳ ಡಿಫರೆಂಟ್‌ ಆಗಿ ಮಾಡುವ ವಿಕ್ಕಿಪೀಡಿಯಾ ಹಾಗೂ ಅವರ ತಂಡ ಸಾಮಾಜಿಕ ಜಾಲತಾಣ ಬಳಸುವವರ ಫೇವರೇಟ್‌ ಕಟೆಂಟ್‌ ಟೀಂ ಆಗಿದ್ದರು. ಇವರ ಕಾಮಿಡಿ ಕಟೆಂಟ್‌ಗಳನ್ನು ನೋಡದವರಿಲ್ಲ, ನೋಡಿ ನಗದವರಿಲ್ಲ ಎನ್ನುವಷ್ಟರ ಮಟ್ಟಿಗೆ ಇವರ ವಿಡಿಯೋಗಳು ವೈರಲ್‌ ಆಗಿ ಟ್ರೆಂಡಿಂಗ್ ಆಗುತ್ತದೆ.

ಇದೀಗ ಅದೇ ರೀತಿ ಜನರನ್ನು ನಗಿಸಲು ಹೋಗಿ ವಿಕ್ಕಿಪೀಡಿಯಾ ವಿಕಾಸ್‌ ಪೊಲೀಸ್‌ ಠಾಣೆ ಮೆಟ್ಟಿಲೇರುವಂತೆ ಆಗಿದೆ. ಅಮಿತ್ ಜೊತೆಗೆ ವಿಕಾಸ್‌ ಮಾಡಿದ್ದ ಹೊಸ ವಿಡಿಯೋವನ್ನು ಎರಡು ಮೂರು ದಿನಗಳ ಹಿಂದೆ ಅಪ್ಲೋಡ್‌ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಖುಷಿಗಾಗಿ ಡ್ರಗ್ಸ್‌ ಎನ್ನುವ ವಾಕ್ಯವೊಂದನ್ನು ಬಳಸಲಾಗಿತ್ತು. ಸದ್ಯ ಆ ವಿಡಿಯೋವನ್ನು ಡಿಲೀಟ್‌ ಮಾಡಲಾಗಿದ್ದು, ಪೊಲೀಸರು ವಿಕಾಸ್‌ಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ರೀಲ್ಸ್‌ ಸ್ಟಾರ್‌ ಅರುಣ್ ಕಟಾರೆ ಬಂಧನ: ಕಾರಣ ಇಲ್ಲಿದೆ

ಬೆಂಗಳೂರು: ಸಾಮಾಜಿಕ ಜಾಲತಾಣಗಳನ್ನು ಬಳಸುವವರಿಗೆ ಅರುಣ್ ಕಟಾರೆ ಚಿರಪರಿಚಿತ. ಪಾಶ್ ಕಾರುಗಳು, ಮೈತುಂಬಾ ಚಿನ್ನ..ಕೈ ತುಂಬಾ ಹಣ..ದುಬಾರಿ ಜೀವನ..ಗನ್ ಮ್ಯಾನ್..ಬಾಡಿ ಗಾರ್ಡ್ಸ್.. ಜೊತೆಗೆ ಸುತ್ತ ಮುತ್ತ ಹುಡುಗಿಯರು. ರೀಲ್ಸ್‌ ಮಾಡುತ್ತಾ ಜೀವನದ ಬಗ್ಗೆ ಮಸ್ತ್‌ ಡೈಲಾಗ್‌ ಹೊಡೆಯುತ್ತಿದ್ದ ಅರುಣ್ ಕಟಾರೆಗೆ ಈಗ ರೀಲ್ಸ್‌ಯೇ ಕಂಟಕವಾಗಿದೆ.

ರೀಲ್ಸ್‌ಗಾಗಿ ಮಾಡಿದ ಶೋಕಿ ಈಗ ಜೈಲುಪಾಲಾಗುವಂತೆ ಮಾಡಿದೆ. ಅರುಣ್ ಕಟಾರೆ ಬೆಂಗಳೂರಿನಲ್ಲಿ ಶೋ ಕೊಡಲು ಹೋಗಿ ಜೈಲು ಸೇರುವಂತಾಗಿದೆ. ಅರುಣ್ ಕಟಾರೆ ಬಾಡಿ ಗಾರ್ಡ್‌ ಕೈಯಲ್ಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋ ಆಫ್‌ ಮಾಡುತ್ತಿದ್ದ. ಈತನ ಶೋನಿಂದ ಅನೇಕರಿಗೆ ಗಾಬರಿಯಾಗಿದೆ ಎನ್ನಲಾಗಿದೆ.

ಅರುಣ್ ಕಟಾರೆ ಶೋಗೆ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರ ಮಾಹಿತಿ ಮೇರೆಗೆ ಕೊತ್ತನೂರು ಪೊಲೀಸರು ಅರುಣ್ ಕಟಾರೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ವಿಚಾರಣೆ ವೇಳೆ ಈತ ಹಿಡಿದುಕೊಂಡು ಓಡಾಡಿರುವುದು ನಕಲಿ ಗನ್​ ಎನ್ನುವುದು ತಿಳಿದು ಬಂದಿದೆ.

ಆದರೆ ಸಾರ್ವಜನಿಕವಾಗಿ ನಕಲಿ ಗನ್ ಹಿಡಿದು ಏರಿಯಾದಲ್ಲಿ ಆತಂಕ ಸೃಷ್ಟಿಸಿದಕ್ಕೆ ಕೇಸ್ ದಾಖಲು ಮಾಡಿಕೊಂಡಿರುವ ಕೊತ್ತನೂರು ಪೊಲೀಸರು, ಆರ್ಮ್ಸ್ ಆಕ್ಟ್, ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+