ಬಿಗ್‌ಬಾಸ್‌ ವಿನ್ನರ್ ಗಿಲ್ಲಿ ನಟ ಫಸ್ಟ್ ರಿಯಾಕ್ಷನ್: ಚಡ್ಡಿ ಬನಿಯನ್, ಮದುವೆ, ಮುಂದಿನ ಪ್ಲ್ಯಾನ್‌ ಬಗ್ಗೆ ಹೇಳಿದ್ದೇನು ಗೊತ್ತಾ?

BBK 12 Winner Gilli Nata: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಂತ್ಯಂತ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್‌ಬಾಸ್‌ ಕೂಡ ಒಂದಾಗಿದೆ. ಇದೀಗ ಬಿಗ್‌ ಬಾಸ್‌ ಸೀಸನ್‌ 12 ಟ್ರೋಫಿ ಗೆದ್ದಿರುವ ಬಗ್ಗೆ ಗಿಲ್ಲಿ ನಟ ಫಸ್ಟ್‌ ರಿಯಾಕ್ಷನ್ ಕೊಟ್ಟಿದ್ದಾರೆ. ಈ ವೇಳೆ ಫಿನಾಲೆಯಲ್ಲಿ ಬಂದ ಹಣ, ಚಡ್ಡಿ ಬನಿಯನ್ ಹಾಗೂ ಕಾವ್ಯ ಜೊತೆಗಿನ ಮದುವೆ ಬಗ್ಗೆ ಮತನಾಡಿದ್ದಾರೆ. ಹಾಗಾದ್ರೆ ಅವರು ಏನೆಲ್ಲಾ ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಕಾವ್ಯ ಹಾಗೂ ಗಿಲ್ಲಿ ನಡುವೆ ಉತ್ತಮ ಸ್ನೇಹ ಇತ್ತು. ಯಾವಾಗಲೂ ಜೊತೆಗಿರೋದನ್ನ ಕಂಡು ಉಳಿದ ಸ್ಪರ್ಧಿಗಳು ಇವರನ್ನು ಕಾಡಿಸುತ್ತಿದ್ದರು. ಅಷ್ಟೇ ಅಲ್ಲದೆ, ಹೊರಗಡೆ ಇವರಿಬ್ಬರ ಜೋಡಿ ಚೆನ್ನಾಗಿದೆ ಅಂತಲೂ ಬಹುತೇಕ ಮಂದಿ ಹೇಳಿದ್ದರು. ಇದೀಗ ಈ ಬಗ್ಗೆ ಸ್ವತಃ ಗಿಲ್ಲಿಯವರೇ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

BBK 12 Winner Gilli Nata Opens Up on Trophy Win Prize Money Kavya Relationship and His Dressing

ಮದುವೆ ಬಗ್ಗೆ ಗಿಲ್ಲಿ ಹೇಳಿದ್ದೇನು?: ಕಾವ್ಯ ಜೊತೆ ಮದುವೆ ಆಗುವುವ ಬಗ್ಗೆ ಪ್ಲ್ಯಾನ್‌ ಏನಾದ್ರೂ ಇದ್ಯಾ ಅಂತಾ ಮಾಧ್ಯಮದವರು ಕೇಳಿದ ಪ್ರಶ್ನಗೆ ಅವರು ಉತ್ತರಿಸಿದ್ದಾರೆ. "ಕಾವ್ಯ ಜೊತೆ ಮದುವೆ ಏನೂ ಇಲ್ಲ. ಬಿಗ್‌ಬಾಸ್‌ ಮನೆಗೆ ಜಂಟಿಯಾಗಿ ನಾನು ಮತ್ತು ಕಾವ್ಯ ಹೋಗಿದ್ದೆವು. ಆಗ ಸುಮ್ನೆ ಹೇಳಿದ್ದು, ಅದೇ ಈ ರೀತಿ ಸಿಂಕ್‌ ಆಗಿಬಿಟ್ಟಿತು. ನಾವು ಉತ್ತಮ ಸ್ನೇಹಿತರು ಅಷ್ಟೇ," ಎಂದು ಹೇಳುವ ಮೂಲಕ ತಮ್ಮ ನಡುವಿನ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿದರು.

ಬಿಗ್‌ಬಾಸ್ ಟ್ರೋಫಿ ಗೆದ್ದು ಮನೆಯಿಂದ ಹೊರಬಂದ ಬಳಿಕ ಗಿಲ್ಲಿ ಅಭಿಮಾನಿಗಳು ಕಾವ್ಯ ಜೊತೆ ಮದುವೆ ಮಾಡಿಸುತ್ತೇವೆ ಎಂದು ಕೂಗಾಡಿದ್ದಾರೆ. ಆದರೆ, ಮದುವೆ ಚರ್ಚೆ ಬಗ್ಗೆ ಗಿಲ್ಲಿ ಮೌನ ಮುರಿದಿದ್ದಾರೆ. "ಕಂಕಣ ಭಾಗ್ಯ ಕೂಡಿ ಬರಬೇಕು. ಕಾವ್ಯ ನಾನು ಉತ್ತಮ ಸ್ನೇಹಿತರು. ಮನೆಯೊಳಗೆ ಬಂದಾಗಿಂದ ಇಲ್ಲಿಯವರೆಗೂ ಹಾಗೆಯೇ ಉತ್ತಮ ಸ್ನೇಹಿತರಾಗಿದ್ದೇವೆ," ಎಂದು ಹೇಳಿದರು.

ಟ್ರೋಫಿ ಗೆದ್ದ ಬಗ್ಗೆ ಗಿಲ್ಲಿ ಹೇಳಿದ್ದೇನು?: "ಬಿಗ್‌ಬಾಸ್‌ ಟ್ರೋಫಿ ಗೆದ್ದುರುವುದು ನನಗೆ ತುಂಬಾ ಸಂತೋಷವಾಯ್ತು. ನಾನು ಇಲ್ಲಿಯವರೆಗೂ ಬರುತ್ತೇನೆ ಅಂತಲೇ ಅಂದುಕೊಂಡಿರಲ್ಲಿ, ನಂಬೋಕೆ ಆಗುತ್ತಿಲ್ಲ. ಹೊರಗಡೆ ಬಂದಮೇಲೆ ಇದೆಲ್ಲ ನಿಜನಾ ಅನ್ನಿಸುತ್ತಿದೆ. ಇನ್ನೂ ಬಂದಿರುವ 50,00,000 ರೂಪಾಯಿ ನಗದು ಬಹುಮಾನದಲ್ಲಿ ಜಮೀನು ತೆಗೆದುಕೊಂಡು ವ್ಯವಸಾಯ ಏನಾದ್ರೂ ಮಾಡಬೇಕು," ಎಂದು ಹೇಳಿದ್ದಾರೆ.

ಚಡ್ಡಿ, ಬನಿಯನ್‌ ಯಾಕೆ ಹಾಕುತ್ತಿದ್ದರು?: ಇನ್ನೂ ಬಿಗ್‌ಬಾಸ್‌ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಒಳ್ಳೊಳ್ಳೆ ಬಟ್ಟೆಗಳನ್ನು ಧರಿಸುತ್ತಿದ್ದರು. ಆದರೆ, ಗಿಲ್ಲಿ ನಟ ಮಾತ್ರ ಒಳ್ಳೊಳ್ಳೆ ಬಟ್ಟೆಗಳಿದ್ದರೂ ಸಹ ಯಾವಾಗಲೂ ಚಡ್ಡಿ, ಬನಿಯನ್‌ನಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ಅವರು "ಚಡ್ಡಿ, ಬನಿಯನ್‌ ಅಂದ್ರೆ ನನಗೆ ಇಷ್ಟ. ಬಿಗ್ ಬಾಸ್ ಮನೆಯಲ್ಲಿ ಮೊದಲು ನಾನು ಶರ್ಟು, ಪ್ಯಾಂಟು ಹಾಕಿಕೊಳ್ಳುತ್ತಿದ್ದೆ. ಇದು ತುಂಬಾ ಕಷ್ಟ ಆಗುತ್ತಿತ್ತು. ಆದ್ದರಿಂದ, ಬಳಿಕ ಚಡ್ಡಿ, ಬನಿಯನ್‌ ಹಾಕುತ್ತಿದ್ದೆ," ಎಂದು ಹೇಳಿದ್ದಾರೆ.

ಚಡ್ಡಿ, ಬನಿಯನ್‌ ವಿಚಾರ ಇಟ್ಟುಕೊಂಡು ಗಿಲ್ಲಿಯನ್ನು ಬಿಗ್‌ಬಾಸ್‌ ಮನೆಯಲ್ಲಿ ರೇಗಿಸುತ್ತಿದ್ದರು. ಆದರೆ, ಗಿಲ್ಲಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಟಕ್ಕರ್ ಕೊಡುತ್ತಿದ್ದರು. ನಾಮಿನೇಶನ್ ಪ್ರಕ್ರಿಯೆ ವೇಳೆ ಬನಿಯನ್‌ ಬಗ್ಗೆ ಎತ್ತಿದಾಗ ಅವರು ಎದುರಾಳಿ ಸ್ಪರ್ಧಿಗಳಿಗೆ ಟಕ್ಕರ್ ಕೊಡುತ್ತಿದ್ದರು. ಆದ್ದರಿಂದ ಈ ವಿಚಾರವಾಗಿ ಗಿಲ್ಲಿನ ಕೆಣಕಲು ಭಯಪಡುತ್ತಿದ್ದರು. ಹೀಗೆ ಕೊನೆವರೆಗೂ ಕಾಮಿಡಿ ಮಾಡುತ್ತಾ ಕನ್ನಡ ಜನರ ಮನಸು ಗೆಲ್ಲುವ ಮೂಲಕ ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅತೀ ಹೆಚ್ಚು ವೋಟ್‌ ಗಳಿಸಿದ ಸ್ಪರ್ಧಿ ಎನಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+